ಮೊದಲ ಬಾರಿ ಹಿಮದ ರಾಶಿ ನೋಡಿ ಕುಣಿದಾಡಿದ ಒಂಟೆ... ವೈರಲ್ ವಿಡಿಯೋ

By Anusha KbFirst Published Dec 16, 2022, 5:55 PM IST
Highlights

ಇಲ್ಲೊಂದು ಕಡೆ ಮೊದಲ ಬಾರಿ ಹಿಮವನ್ನು ಕಂಡ ಒಂಟೆಯೊಂದು ಖುಷಿಯಿಂದ ಕುಣಿದಾಡುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪ್ರಾಣಿ ಪಕ್ಷಿಗಳು ಮೋಜಿ ಮಾಡುವ ಪರಸ್ಪರ ಆಟವಾಡುವ ಸಾಕಷ್ಟು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ನೋಡಿದ್ದೇವೆ. ಅದೇ ರೀತಿ ಇಲ್ಲೊಂದು ಕಡೆ ಮೊದಲ ಬಾರಿ ಹಿಮವನ್ನು ಕಂಡ ಒಂಟೆಯೊಂದು ಖುಷಿಯಿಂದ ಕುಣಿದಾಡುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಾಮಾನ್ಯವಾಗಿ ಒಂಟೆಗಳು ಮರುಭೂಮಿಯಲ್ಲಿ ವಾಸ ಮಾಡುತ್ತವೆ. ಸದಾ ಬಿಸಿಲಿನಿಂದ ಬಿಸಿಯಾಗಿರುವ ಮರುಭೂಮಿಯಲ್ಲಿ ಹಿಮ ಬೀಳುವುದು ತೀರಾ ವಿರಳ. ಹೀಗಾಗಿ ಒಂಟೆಗಳು ಹಿಮಪಾತವನ್ನು ನೋಡಿರುವುದು ಕೂಡ ವಿರಳವೇ ಇರಬಹುದು. ಹಾಗೆಯೇ ಈ ಒಂಟೆಯೂ ಕೂಡ ತನ್ನ ಜೀವನದಲ್ಲೇ ಮೊದಲ ಬಾರಿಗೆ ಹಿಮ ನೋಡಿದ್ದು ಕುಣಿದು ಕುಪ್ಪಳಿಸಿದೆ.

ಈ ವಿಡಿಯೋವನ್ನು ಇನ್ಸ್ಟಾಗ್ರಾಮ್‌ನಲ್ಲಿ(Instagram) ರಾಂಚೋ ಗ್ರಾಂಡೆ ಎಂಬ ಜೀವ ವೈವಿಧ್ಯವಿರುವ ಪಾರ್ಕ್‌ನ ಅಧಿಕೃತ ಪೇಜ್‌ನಿಂದ ಪೋಸ್ಟ್ ಮಾಡಲಾಗಿದೆ. ರಾಂಚೋ ಗ್ರಾಂಡೆ ಇಲ್ಲಿನ ರಕ್ಷಿತಾರಣ್ಯದಂತಿರುವ ಪ್ರದೇಶವಾಗಿದೆ. ವಿಡಿಯೋದಲ್ಲಿ ಆಲ್ಬರ್ಟ್ ಹೆಸರಿನ ಒಂಟೆ (camel) ಮೊದಲ ಬಾರಿ ಹಿಮ ಆವರಿಸಿದ ಸ್ಥಳವನ್ನು ನೋಡಿ ಫುಲ್ ಖುಷಿಯಾಗಿದ್ದು, ಖುಷಿಯಿಂದ ಹಿಮದಲ್ಲೆಲ್ಲಾ ಜಿಗಿದುಕೊಂಡು ಓಡಾಡುತ್ತಾ ಸಂತಸ ವ್ಯಕ್ತಪಡಿಸುತ್ತಿದೆ. ಈ ವಿಡಿಯೋದಲ್ಲಿ ಕುರಿಗಳ ಹಿಂಡು ಕೂಡ ಇದ್ದು, ಈ ಒಂಟೆ ಹೋದಲ್ಲೇ ಕುರಿಗಳು ಹೋಗುತ್ತಿವೆ. ಕುರಿಗಳ ಹಿಂಡಿಗೆ ಈ ಒಂಟೆ ಆಲ್ಬರ್ಟ್ (Albert) ಹಿಮಚ್ಚಾದಿತ ಸ್ಥಳಗಳನ್ನು ತೋರಿಸುತ್ತಿದೆ. ವಿಡಿಯೋದಲ್ಲಿರುವ ಹಿನ್ನೆಲೆ ಧ್ವನಿಯ ಪ್ರಕಾರ ಈ ಒಂಟೆ ಹಿಮ ಒಂಟೆಯಂತೆ.  

ಇದೆಂಥಾ ಸಿಂಹ : ಎಮ್ಮೆಗಳ ಹಿಂಡು ನೋಡಿ ಮರ ಏರಿದ ಕಾಡಿನ ರಾಜ!

ಈ ವಿಡಿಯೋವನ್ನು 71 ಸಾವಿರಕ್ಕೂ ಹೆಚ್ಚು ಜನ ವೀಕ್ಷಿಸಿದ್ದು, ಸಾವಿರಾರು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅನೇಕರು ಕುಣಿದಾಡುವ ಒಂಟೆಯ ನೋಡಿ ಖುಷಿಯಿಂದ ಕಾಮೆಂಟ್ ಮಾಡಿದ್ದಾರೆ. ಇದೊಂದು ಅಮೂಲ್ಯವಾದ ಕ್ಷಣ, ಸಂಪೂರ್ಣವಾದ ಸಂತಸ ಈ ವಿಡಿಯೋ ನೋಡಿ ತುಂಬಾ ಖುಷಿಯಾಯ್ತು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಅನೇಕರು ಈ ಕುಣಿದಾಡುವ ಒಂಟೆಯ ಉತ್ಸಾಹಕ್ಕೆ ಮಾರು ಹೋಗಿದ್ದು, ಅದನ್ನು ಮುದ್ದಾಡಬೇಕೆನಿಸುತ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ.  ನಾವು ಮನುಷ್ಯರು ಕೂಡ ಹಿಮಚ್ಚಾದಿತ ಪ್ರದೇಶಗಳನ್ನು ನೋಡಿ ಕುಣಿದು ಕುಪ್ಪಳಿಸುತ್ತೇವೆ. ಇದೇ ಕಾರಣಕ್ಕೆ ನಾವು ವಿಶೇಷವಾಗಿ ಭಾರತೀಯರು ದುಡ್ಡಿದ್ದವರು, ವಿಶೇಷವಾಗಿ ಹಿಮ ಬೀಳುವ ಪ್ರದೇಶಗಳಾದ ಕಾಶ್ಮೀರ (Kashmira) , ಲಡಾಕ್ (Ladakh)ಮುಂತಾದ ಸ್ಥಳಗಳಿಗೆ ರಜಾ ಸಮಯದಲ್ಲಿ ಭೇಟಿ ನೀಡಿ ಹಿಮದಲ್ಲಿ ಆಟವಾಡಿ, ಒಬ್ಬರ ಮೇಲೊಬ್ಬರು ಹಿಮವನ್ನು ಎಸೆಯುತ್ತಾ ಆಟವಾಡುತ್ತಾರೆ. ಆದರೆ ಪ್ರಾಣಿಗಳು ಮನುಷ್ಯರಂತೆ ಹಿಮ ನೋಡಿ ಖುಷಿ ಪಡುತ್ತವೆ ಎಂಬುದು ಈ ವಿಡಿಯೋದಲ್ಲಿ ಸೆರೆ ಆಗಿದೆ. 

ಸೌದಿ ಅರೇಬಿಯಾದಲ್ಲಿದೆ ಒಂಟೆಗಳಿಗೆಂದೇ 5ಸ್ಟಾರ್ ಹೋಟೆಲ್!

ಬಿಸಿಯಾದ ಮರುಭೂಮಿಯಲ್ಲಿ (desert) ಹಿಮಪಾತವು ವ್ಯತಿರಿಕ್ತವೇ ಆದರೆ ಕಳೆದ ದಶಕಗಳಲ್ಲಿ ಸಹಾರಾ ಮರುಭೂಮಿಯಲ್ಲಿ  ಹಲವಾರು ಬಾರಿ ಹಿಮಪಾತವಾದ ದಾಖಲೆಗಳಿವೆ. ತೀರಾ ಇತ್ತೀಚೆಗೆ ಜನವರಿ 2022ರಲ್ಲಿಯೂ ಸಹಾರಾ ಮರುಭೂಮಿಯಲ್ಲಿ ಹಿಮಪಾತವಾಗಿತ್ತು. ಹಿಮವು ರೂಪುಗೊಳ್ಳಲು, ಎರಡು ವಿಶಿಷ್ಟ ಹವಾಮಾನ ಗುಣಲಕ್ಷಣಗಳು ಬೇಕಾಗುತ್ತವೆ. ಮೊದಲನೆಯದಾಗಿ ಶೀತ ತಾಪಮಾನ ಮತ್ತು ತೇವಾಂಶವುಳ್ಳ ಗಾಳಿ. ಹಿಮದ ಉಪಸ್ಥಿತಿಯು ವಾತಾವರಣದಲ್ಲಿರುವ ವಾಯು ಪರಿಚಲನೆಯ ವಿಶೇಷ ಸಂಯೋಜನೆ ಮತ್ತು ಹಿಮವು ಬೀಳುವ ಭೂ ಮೇಲ್ಮೈಯ ಸ್ವರೂಪವನ್ನು ಪ್ರತಿಬಿಂಬಿಸುತ್ತದೆ. ಸಹಾರಾ ಮರುಭೂಮಿಯಲ್ಲಿ ಸಾಮಾನ್ಯವಾಗಿ ಅತಿ ಹೆಚ್ಚಿನ ತಾಪಮಾನ ಅಂದರೆ 50°C ಗಿಂತ ಹೆಚ್ಚು ಇದ್ದು ಬರಿಯ ಭೂ ಮೇಲ್ಮೈ ಮತ್ತು ಮೋಡರಹಿತ ಆಕಾಶದಿಂದಾಗಿ ಕಡಿಮೆ ತಾಪಮಾನಗಳು ನಿರ್ದಿಷ್ಟವಾಗಿ ರಾತ್ರಿಯಲ್ಲಿ ದಾಖಲಾಗುತ್ತವೆ. 


 

click me!