44 ವರ್ಷದ ಥಾಯ್ಲೆಂಡ್ ರಾಣಿ ಬಜ್ರಕಿಟಿಯಾಬಾ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮುದ್ದಿನ ನಾಯಿ ಜೊತೆ ಜಾಗಿಂಗ್ ಮಾಡುತ್ತಿದ್ದ ವೇಳೆ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದಾರೆ. ತಕ್ಷಣವೇ ಆಸ್ಪತ್ರೆ ದಾಖಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.
ಬ್ಯಾಂಕಾಕ್(ಡಿ.15): ಥಾಯ್ಲೆಂಡ್ ದೇಶ ಆಘಾತಕ್ಕೊಳಗಾಗಿದೆ. ಫಿಟ್ನೆಸ್, ಆಹಾರ ಕುರಿತು ಕಾಳಜಿ ಹೊಂದಿದ್ದ ಥಾಯ್ಲೆಂಡ್ ರಾಣಿ ಬಜ್ರಕಿಟಿಯಾಬಾ ಹೃದಯಾಘಾತದಿಂದ ನಿಧನರಾಗಿದ್ದಾರೆ. 44 ವರ್ಷದ ಬಜ್ರಕಿಟಿಯಾಬಾ ಕಿಟಿಯಾಬಾ ನಿನ್ನೆ(ಡಿ.14) ಸಾಕು ನಾಯಿ ಜೊತೆ ಬೆಳಗ್ಗೆ ಜಾಗಿಂಗ್ ಹೋದ ವೇಳೆ ಘಟನೆ ನಡೆದಿದೆ. ನಾಯಿ ಜೊತೆ ಓಡುತ್ತಿದ್ದ ರಾಣಿ ಬಜ್ರಕಿಟಿಯಾಬಾ ತೀವ್ರ ಅಸ್ವಸ್ಥರಾಗಿ ಕುಸಿದು ಬಿದಿದ್ದಾರೆ. ಈ ವೇಳೆ ಸಹಾಯಕರು ನೆರವಿಗೆ ಆಗಮಿಸಿದ್ದಾರೆ. ಆದರೆ ಪ್ರಜ್ಞೆ ತಪ್ಪಿದ ರಾಣಿ ಬಜ್ರಕಿಟಿಯಾಬಾರನ್ನು ತಕ್ಷಣವೇ ಹೆಲಿಕಾಪ್ಟರ್ ಮೂಲಕ ಆಸ್ಪತ್ರೆ ದಾಖಲಿಸಲಾಗಿದೆ. ಆಸ್ಪತ್ರೆಯಲ್ಲಿ ಸಿಪಿಆರ್ ಪ್ರಥಮ ಚಿಕಿತ್ಸೆ ಸೇರಿದಂತೆ ತೀವ್ರ ನಿಘಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ರಾಣಿ ಬಜ್ರಕಿಟಿಯಾಬಾ ನಿಧನ ಸುದ್ದಿಯನ್ನು ಥಾಯ್ಲೆಂಟ್ ಅಧಿಕೃತವಾಗಿ ಘೋಷಿಸಿಲ್ಲ.
ರಾಣಿ ಬಜ್ರಕಿಟಿಯಾಬಾ ತಂದೆ ವಾಜಿರಲಾಂಗ್‌ಕೊರ್ನ್ ನಿನ್ನೆ ತಡರಾತ್ರಿ ಆಸ್ಪತ್ರೆಗೆ ಧಾವಿಸಿದ್ದಾರೆ. ಬಜ್ರಕಿಟಿಯಾಬಾ ಪ್ರಾಣ ಉಳಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗಿದೆ. ಥಾಯ್ಲೆಂಡ್ ಸರ್ಕಾರ ರಾಣಿ ಕುರಿತು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ. ಆದರೆ ರಾಣಿ ಬಜ್ರಕಿಟಿಯಾಬಾ ನಿಧರಾಗಿರುವುದಾಗಿ ಡೈಲ್ ಮಿರರ್ ವರದಿ ಮಾಡಿದೆ.
undefined
6 ಪತ್ನಿ 54 ಮಕ್ಕಳ ತಂದೆ ಅಬ್ದುಲ್ಲಾಗೆ ಹೃದಯಾಘಾತ, ಗಂಡುಗಲಿಗೆ 150 ಕುಟುಂಬ ಸದಸ್ಯರ ಸಂತಾಪ!
ರಾಣಿ ಬಜ್ರಕಿಟಿಯಾಬಾ ಆರೋಗ್ಯದ ಕುರಿತು ಕಾಳಜಿ ಹೊಂದ್ದರು. ಇಷ್ಟೇ ಅಲ್ಲ ವ್ಯಾಯಾಮ, ಜಾಗಿಂಗ್, ವಾಕಿಂಗ್ ಮೂಲಕ ಉತ್ತಮ ಆರೋಗ್ಯ ಕಾಪಾಡಿಕೊಂಡಿದ್ದರು. ಏಕಾಏಕಿ ಕುಸಿದು ಬಿದ್ದ ರಾಣಿ ತೀವ್ರ ಹೃದಯಾಘಾತಕ್ಕೆ ಒಳಗಾಗಿದ್ದರು. ಇತ್ತೀಚೆಗೆ ಅತ್ಯುತ್ತಮ ಆರೋಗ್ಯ ಕಾಪಾಡಿಕೊಂಡ ಹಲವರು ದಿಢೀರ್ ಕುಸಿದು ಬಿದ್ದು ನಿಧನರಾಗಿದ್ದಾರೆ. ಇದೀಗ ಈ ಸಾಲಿಗೆ ರಾಣಿ ಬಜ್ರಕಿಟಿಯಾಬಾ ಕೂಡ ಸೇರಿದ್ದಾರೆ.
ಪಾರ್ಕ್‌ನಲ್ಲಿ ಜಾಗಿಂಗ್ ಮಾಡುತ್ತಿದ್ದ ವೇಳ ಕುಸಿದು ಬಿದ್ದ ರಾಣಿ ಬಜ್ರಕಿಟಿಯಾಬಾಗೂ ಸಿಪಿಆರ್ ನೀಡಲಾಗಿತ್ತು. ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ. ರಾಣಿ ಸಹಾಯಕರು ಹಾಗೂ ರಾಣಿಯ ವೈದ್ಯರು ತಕ್ಷಣ ಸಿಪಿಆರ್ ನೀಡಿದ್ದಾರೆ. ಸಿಪಿಆರ್ ಬಳಿಕವೂ ಚೇತರಿಸಿಕೊಳ್ಳದ ಕಾರಣ ತಕ್ಷಣವೇ ಹೆಲಿಕಾಪ್ಟರ್ ಮೂಲಕ ಆಸ್ಪತ್ರೆ ದಾಖಲಿಸಲಾಗಿತ್ತು.
ಸಿಪಿಆರ್ ಚಿಕಿತ್ಸೆ
ವ್ಯಕ್ತಿಯು ಮೂರ್ಛೆ ಹೋದರೆ, ಹೃದಯ ಬಡಿತವು ನಿಂತುಹೋದರೆ ಅಥವಾ ನಾಡಿ ಮಿಡಿತ ನಿಂತಿದ್ದರೆ ಅಂತಹ ಪರಿಸ್ಥಿತಿಯಲ್ಲಿ ಸಿಪಿಆರ್ ನೀಡಲಾಗುತ್ತದೆ. ಇದು ರೋಗಿಗೆ ಉಸಿರಾಡಲು ನೆರವಾಗುತ್ತದೆ. ಸಿಪಿಆರ್ ನೀಡುವಾಗ, ಇದು ಹೃದಯ ಮತ್ತು ಮೆದುಳಿನಲ್ಲಿ ರಕ್ತ ಪರಿಚಲನೆಗೆ ಸಹಾಯ ಮಾಡುತ್ತದೆ. ಸಿಪಿಆರ್ ಸಹಾಯದಿಂದ, ಒಬ್ಬ ವ್ಯಕ್ತಿಗೆ ಹೊಸ ಜೀವ ಸಿಗಬಹುದು. ತುರ್ತು ಪರಿಸ್ಥಿತಿಗಳಲ್ಲಿ ನಿಂತು ಹೋಗುವ ಹೃದಯ ಬಡಿತ, ನಾಡಿ ಮಿಡಿತ, ಉಸಿರಾಟದಂತಹ ಪ್ರಕ್ರಿಯೆ ಪುನಃ ಆರಂಭಿಸಲು, ತಕ್ಷಣಕ್ಕೆ ಪ್ರಾಣ ರಕ್ಷಣೆ ಮಾಡಬಲ್ಲ ಹೃದಯ ಮತ್ತು ಶ್ವಾಸಕೋಶ ಪ್ರಚೋದಕ ರೂಪದಲ್ಲಿ ಕಾರ್ಡಿಯೋ ಪಲ್ಮನರಿ ರಿಸಸಿಟೇಶನ್ (ಸಿಪಿಆರ್) ನೀಡಲಾಗುತ್ತದೆ.
Shivamogga: ಫೋಟೋ ಕ್ಲಿಕ್ ಮಾಡುವಾಗಲೇ ಹೃದಯಾಘಾತದಿಂದ ಫೋಟೋಗ್ರಾಫರ್ ಸಾವು
ಆಸ್ಪತ್ರೆ ಹೊರಗಡೆಯೇ ಹೃದಯ ಬಡಿತ ನಿಂತುಹೋಗಿ ಶೇ. 9 ರಷ್ಟುಸಾವನ್ನಪ್ಪುತ್ತಿದ್ದಾರಂಬ ಸಮೀಕ್ಷೆ ಇದೆ. ಹೃದಯ ಬಡಿತ ನಿಂತ ಮದಲ ಐದು ನಿಮಿಷದಲ್ಲಿ ಸಿಪಿಆರ್ ಪ್ರಾಥಮಿಕ ಚಿಕಿತ್ಸೆ ಸಿಕ್ಕಲ್ಲಿ ಬದುಕುವ ಸಾಧ್ಯತೆ ಇರುತ್ತದೆ. ಕಾರ್ಡಿಯೋ ಅರೆಸ್ಟ… ಆದ ವ್ಯಕ್ತಿಯನ್ನು ಮನೆಯಿಂದ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಸಿಪಿಆರ್ ಜೀವ ರಕ್ಷಕವಾಗಿ ಕಾರ್ಯನಿರ್ವಹಿಸುತ್ತದೆ. ಕಾರ್ಡಿಯೋ ಅರೆಸ್ಟ… ಆದಾಗ ನೀಡುವ ಸಿಪಿಆರ್ ಚಿಕಿತ್ಸೆಗೆ ಸರ್ಟಿಫಿಕೆಟ್ ಆಗ್ಲಿ ವಿಶೇಷ ತರಬೇತಿ ಅಗತ್ಯವಿಲ್ಲ. ಆದರೆ ಅದ್ರ ಬಗ್ಗೆ ಶಿಕ್ಷಣ ಅಗತ್ಯವಿದೆ.