ಮನೆಯ ಹತ್ತಿರದ ಕೆರೆಯ ಬಳಿ ಆಟವಾಡುತ್ತಿದ್ದ 2 ವರ್ಷದ ಬಾಲಕನನ್ನು ಹಿಪ್ಪೋ ನುಂಗಿದ ಭೀಕರ ಘಟನೆ ನಡೆದಿದೆ. ಮನೆಯವರ ಮುಂದೆ ಈ ಘಟನೆ ನಡೆದಿದೆ. ಆದರೆ ಮಗುವಿನ ಪ್ರಾಣ ಉಳಿಸಲು ಸ್ಥಳೀಯನೊಬ್ಬ ನಡೆಸಿದ ಪ್ರಯತ್ನ ಯಶಸ್ವಿಯಾಗಿದೆ.
ಉಗಾಂಡ(ಡಿ.16): ಮನೆಯಿಂದ ಕೆಲವೇ ದೂರದ ಅಂತರ. ಪೋಷಕರು ತಮ್ಮ ಕೆಲಸದಲ್ಲಿ ಮಗ್ನಿರಾಗಿದ್ದರೆ, 2 ವರ್ಷದ ಪುಟ್ಟ ಬಾಲಕ ಕೂಗಳತೆ ದೂರದಲ್ಲಿರುವ ಕೆರೆಯ ಪಕ್ಕದಲ್ಲಿ ಕುಳಿತು ಆಟವಾಡುತ್ತಿದ್ದ. ನೋಡ ನೋಡುತ್ತಿದ್ದಂತೆ ಕೆರೆಯೊಳಗಿಂದ ದೈತ್ಯ ಗಾತ್ರದ ಹಿಪ್ಪೋ ನೇರವಾಗಿ ಬಾಲಕನ ಬಳಿ ಬಂದು ಎಳೆದೊಯ್ದಿದೆ. ಇಷ್ಟೇ ಅಲ್ಲ ಬಾಲಕನ ತಲೆಗೆ ಬಾಯಿ ಹಾಕಿ ನೇರವಾಗಿ ನುಂಗಿದೆ. ಇತ್ತ ಪೋಷಕರು ಚೀರಾಡುತ್ತಾ ಕೆರೆಯ ಬಳಿ ಬಂದಿದ್ದಾರೆ. ಆದರೆ ಅಲ್ಲೆ ಇದ್ದ ಸ್ಥಳೀಯನೋರ್ವನ ಸಾಹಸದಿಂದ ನೀರಾನ ಬಾಲಕನನ್ನು ಜೀವಂತವಾಗಿ ಹೊರಕ್ಕೆ ಉಗುಳಿದೆ. ಮೈ ಜುಮ್ಮೆನಿಸುವ ಘಟನೆ ಉಗಾಂಡದಲ್ಲಿ ನಡೆದಿದೆ.
ಪೌಲ್ ಇಗಾ ಅನ್ನೋ 2 ವರ್ಷದ ಬಾಲಕ ಉಗಾಂಡದ ಎಡ್ವರ್ಡ್ ಲೇಕ್ ಪಕ್ಕದಲ್ಲೇ ತನ್ನ ಮನೆಯ ಸಮೀಪದಲ್ಲಿ ಆಟವಾಡುತ್ತಿದ್ದ. ಎಡ್ವರ್ಡ್ ಲೇಕ್ ಅತೀ ದೊಡ್ಡ ಕೆರೆ. ವಿಶಾಲವಾಗಿ ಹರಡಿಕೊಂಡಿರುವ ಈ ಕೆರೆಗೆ ಯಾರು ಇಳಿಯುವುದಿಲ್ಲ. ಪುಟ್ಟ ಬಾಲಕ ಆಟವಾಡುತ್ತಾ ಕೆರೆಯ ಸಮೀಪಕ್ಕೆ ಬಂದಿದ್ದಾನೆ. ಇದೇ ವೇಳೆ ಕೆರೆಯಲ್ಲಿದ್ದ ಹಿಪ್ಪೋ ಮೆಲ್ಲನೇ ಬಾಲಕನ ಗುರಿಯಿಟ್ಟು ಕೆಲ ಹೊತ್ತು ಹಾಗೇ ನಿಂತಿದೆ.
ದಾಳಿ ಮಾಡುವಂತೆ ಬಂದ ನೀರು ಕುದುರೆಗೆ ಹೊಡೆದು ಓಡಿಸಿದ ಗಾರ್ಡ್: ವಿಡಿಯೋ
ಕೆರೆಯ ಪಕ್ಕದಲ್ಲಿ ಯಾವುದೇ ಸದ್ದು ಗದ್ದಲ ಇರಲಿಲ್ಲ. ಹೀಗಾಗಿ ಏಕಾಏಕಿ ಕೆರೆಯಿಂದ ಮೇಲೆ ಬಂದ ಹಿಪ್ಪೋ, ನೇರವಾಗಿ ಬಾಲಕನ ಬಳಿಗೆ ಬಂದಿದೆ. ಬಾಲಕನ ಎಳೆದು ನೇರವಾಗಿ ದೊಡ್ಡ ಬಾಯಿ ಮೂಲಕ ಬಾಲಕನ ನುಂಗಿದೆ. ಬಾಲಕನ ತಲೆಯ ಭಾಗದಿಂದ ನುಂಗಿದೆ. ಬೃಹತ್ ಗಾತ್ರದ ಹಿಪ್ಪೋ ಬಾಲಕನನ್ನು ಬಾಗಶಃ ನುಂಗಿದೆ. ಇನ್ನೇನು ಕಾಲು ಮಾತ್ರ ಹೊರಗಿತ್ತು. ಅಷ್ಟರಲ್ಲೇ ಬಾಲಕನ ತಾಯಿ ಕಿರುಚಾಡುತ್ತಾ ಕೆರೆ ಬಳಿ ಬಂದಿದ್ದಾರೆ.
ದೂರದಲ್ಲಿದ್ದ ಸ್ಥಳೀಯ ಕ್ರಿಸ್‌ಪಸ್ ಬಗೋಂಜಾ ಸದ್ದು ಮಾಡುತ್ತಾ, ಕಲ್ಲುಗಳನ್ನು ಹಿಪ್ಪೋಗೆ ಎಸೆದಿದ್ದಾನೆ. ಕೈಗೆ ಸಿಕ್ಕ ಕಲ್ಲು, ಬಡಿಗೆಗಳನ್ನು ಹಿಪ್ಪೋ ಗುರಿಯಾಗಿಸಿ ಎಸೆದಿದ್ದಾನೆ. ಕಿರುಚಾಟ, ಕಲ್ಲು ತೂರಾಟದಿಂದ ಗಾಬರಿಗೊಂಡ ಹಿಪ್ಪೋ, ಬಾಲಕನನ್ನು ಹಾಗೇ ಜೀವಂತವಾಗಿ ಹೊರಕ್ಕೆ ಉಗುಳಿದೆ. 3ನಿಮಿಷಕ್ಕೂ ಹೆಚ್ಚು ಕಾಲ ಹಿಪ್ಪೋ ಬಾಯಿಯೊಳಗಿದ್ದ ಬಾಲಕ ಮರಳಿ ಜೀವಂತವಾಗಿ ಹೊರಬಂದಿದ್ದಾನೆ. ಹಿಪ್ಪೋ ಒಂದು ಬಾರಿ ಗುರಿ ಇಟ್ಟರೆ ಬಳಿಕ ಉಗುಳುವ ಪ್ರಶ್ನೆ ಇಲ್ಲ. ಆದರೆ ಇಲ್ಲೇ ಬಾಲಕನ ಅದೃಷ್ಠ ಚೆನ್ನಾಗಿತ್ತು. ಜೀವಂತವಾಗಿ ಹೊರಬಂದಿದ್ದಾನೆ. ಬಳಿಕ ಹಿಪ್ಪೋ ನೇರಾಗಿ ಕೆರೆಯೊಳಕ್ಕೆ ಹೋಗಿದೆ. ಇತ್ತ ಬಗೋಂಜಾ ಹಾಗೂ ಬಾಲನಕ ತಾಯಿ ಮಗುವನ್ನು ಹತ್ತಿರದ ಕ್ಲೀನಿಕ್‌ಗೆ ತೆಗೆದುಕೊಂಡು ಹೋಗಿದ್ದಾರೆ.
ಬನ್ನೇರುಘಟ್ಟದಲ್ಲಿ ಹೊಸ ಅತಿಥಿ: ಗಂಡು ಮರಿಗೆ ಜನ್ಮ ಕೊಟ್ಟ ನೀರಾನೆ..!
ಬಾಲಕ ಆರೋಗ್ಯವಾಗಿರುವುದನ್ನು ವೈದ್ಯರು ದೃಢಪಡಿಸಿದ್ದಾರೆ. ಆದರೆ ಹಿಪ್ಪೋ ಹಲ್ಲಿನ ಗಾಯದಿಂದ ರೇಬಿಸ್ ಸೇರಿದಂತೆ ಇತರ ಮಾರಕ ರೋಗಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಹತ್ತಿದರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ದಾಖಲಿಸಿ ಲಸಿಕೆ ನೀಡಲಾಗಿದೆ. ಮರು ದಿನ ಬಾಲಕ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾನೆ.
ಇದಿಗೀ ಎಡ್ವರ್ಡ್ ಕೆರೆಗೆ ತಂತಿ ಬೇಲಿ ಹಾಕುವ ಕಾರ್ಯ ನಡೆಯುತ್ತಿದೆ. ಈ ಕೆರೆ ಸುತ್ತ ಹಲವು ಮಕ್ಕಳು ಆಟವಾಡುತ್ತಾರೆ. ಕೆರೆ ಪಕ್ಕದಲ್ಲೇ ಮಕ್ಕಳ ಪಾರ್ಕ್ ಕೂಡ ಇದೆ. ಹೀಗಾಗಿ ಕೆರೆಯಿಂದ ಮತ್ತೆ ಈ ರೀತಿಯ ದಾಳಿ ತಡೆಯಲು ತಂತಿ ಬೇಲಿ ಹಾಲಾಗುತ್ತಿದೆ.