ಕ್ಯಾಬ್ ಡ್ರೈವರ್ ಆ ಮಹಿಳೆಗೆ "ನೀವು ಭಾರತೀಯರು, ನೀವು ಮೂರ್ಖರು" ಎಂದು ಹೇಳಿದ್ದಾಗಿ ಆಕೆ ಆರೋಪಿಸಿದ್ದಾರೆ. ಆದರೆ, ಆಕೆ ತಾನು ಭಾರತೀಯ ಮಹಿಳೆ ಅಲ್ಲ.. ಯುರೇಷಿಯನ್ ಮಹಿಳೆ ಎಂದಿದ್ದಾರೆ.
ಹೊಸದೆಹಲಿ (ಸೆಪ್ಟೆಂಬರ್ 25, 2023): ಚೀನಾ ಮೂಲದ ಸಿಂಗಾಪುರದ ಕ್ಯಾಬ್ ಚಾಲಕನೊಬ್ಬ ಮಹಿಳೆ ಮತ್ತು ಆಕೆಯ ಮಗಳನ್ನು ಭಾರತೀಯರೆಂದು ಭಾವಿಸಿ ನಿಂದಿಸುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ಕ್ಯಾಬ್ ಡ್ರೈವರ್ ಆ ಮಹಿಳೆಗೆ "ನೀವು ಭಾರತೀಯರು, ನೀವು ಮೂರ್ಖರು" ಎಂದು ಹೇಳಿದ್ದಾಗಿ ಆಕೆ ಆರೋಪಿಸಿದ್ದಾರೆ. ಆದರೆ, ಆಕೆ ತಾನು ಭಾರತೀಯ ಮಹಿಳೆ ಅಲ್ಲ.. ಯುರೇಷಿಯನ್ ಮಹಿಳೆ ಎಂದಿದ್ದಾರೆ.
ಮಹಿಳೆಯು ಟಾಡಾ ಎಂಬ ಕ್ಯಾಬ್ ಬುಕ್ಕಿಂಗ್ ಅಪ್ಲಿಕೇಷನ್‌ನಲ್ಲಿ ರೈಡ್ ಬುಕ್ ಮಾಡಿದ ನಂತರ ಶನಿವಾರ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಇನ್ನು, 46 ವರ್ಷದ ಮಹಿಳೆ ಜಾನೆಲ್ಲೆ ಹೋಡೆನ್ ಕ್ಯಾಬ್‌ನಲ್ಲಿ ತನ್ನ 9 ರ್ಷದ ಮಗಳೊಂದಿಗೆ ಇದ್ದಳು ಎಂದೂ ಸ್ಥಳೀಯ ದೈನಿಕ ದಿ ಸ್ಟ್ರೈಟ್ಸ್ ಟೈಮ್ಸ್ ವರದಿ ಮಾಡಿದೆ.
ಇದನ್ನು ಓದಿ: ವಿಮಾನದಲ್ಲಿ ಕ್ಯಾಬಿನ್ ಸಿಬ್ಬಂದಿಯಾಗಿ ಕೆಲಸ ಮಾಡಿದ ಪ್ರಖ್ಯಾತ ಏರ್‌ಲೈನ್ಸ್ ಸಿಇಒ!
ಪ್ರಯಾಣದ ವೇಳೆ ಮೆಟ್ರೋ ನಿರ್ಮಾಣ ಕಾಮಗಾರಿ ಕಾರಣದಿಂದ ರಸ್ತೆಯ ಭಾಗವು ನಿರ್ಬಂಧಿಸಲ್ಪಟ್ಟಿದೆ ಎಂದು ಕ್ಯಾಬ್ ಡ್ರೈವರ್ ಇದ್ದಕ್ಕಿದ್ದಂತೆ ಅಸಮಾಧಾನಗೊಂಡರು. ಹಾಗೂ, ಮಹಿಳೆ ಆತನಿಗೆ ತಪ್ಪು ವಿಳಾಸ ಮತ್ತು ನಿರ್ದೇಶನಗಳನ್ನು ನೀಡಿದ್ದಾರೆ ಎಂದು ಕೂಗಾಡಲು ಪ್ರಾರಂಭಿಸಿದ್ದಾರೆ. ನಂತರ, ಕ್ಯಾಬ್ ಡ್ರೈವರ್ ಮಹಿಳೆಗೆ, ನೀವು ಭಾರತೀಯರು, ನೀವು ಮೂರ್ಖರು’’ ಎಂದು ಹೇಳಿದ್ದಾರೆ. ಈ ಹಿನ್ನೆಲೆ ಆ ಹೇಳಿಕೆಯನ್ನು ಮಹಿಳೆ ರೆಕಾರ್ಡ್ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಅಲ್ಲದೆ, ನಿಮ್ಮ ಮಗಳು 135 ಸೆಂ.ಮೀ ಗಿಂತ ಕಡಿಮೆ ಎತ್ತರ ಇದ್ದಾಳೆ ಎಂದೂ ಕ್ಯಾಬ್ ಡ್ರೈವರ್ ಹೇಳಿದ್ದಾನೆ. ಇದಕ್ಕೆ ಉತ್ತರಿಸಿದ ಮಹಿಳೆ, 9 ವರ್ಷದವಳು 137 ಸೆಂ.ಮೀ ಎತ್ತರವಿದ್ದಾಳೆ ಎಂದಿದ್ದಾರೆ. ಸಿಂಗಾಪುರದಲ್ಲಿನ ವಾಹನಗಳು 135 ಸೆಂ.ಮೀ ಎತ್ತರದೊಳಗಿನ ಪ್ರಯಾಣಿಕರಿಗೆ ಬೂಸ್ಟರ್ ಸೀಟ್ ಅಥವಾ ಮಕ್ಕಳ ನಿರ್ಬಂಧಗಳನ್ನು ಹೊಂದಿರಬೇಕು.
ಇದನ್ನೂ ಓದಿ: ಟ್ರಾಫಿಕ್‌ನಲ್ಲಿ ಸಿಲುಕಿದ ಬೆಂಗಳೂರು ವ್ಯಕ್ತಿಗೆ 'ಸಹಾಯ ಬೇಕೇ...?' ಎಂದು ಉಬರ್ ನೋಟಿಫಿಕೇಷನ್: ಪೋಸ್ಟ್ ವೈರಲ್
ನಂತರ ಚಾಲಕನು ಮಹಿಳೆಯ ಮೇಲೆ ಕೂಗಲು ಪ್ರಾರಂಭಿಸಿದ್ದು, "ನೀವು ಭಾರತೀಯರು, ನಾನು ಚೀನಾದವನು ... ನೀವು ಅತ್ಯಂತ ಕೆಟ್ಟ ರೀತಿಯವರು’’ ಎಂದೂ ಹೇಳಿದ್ದಾರೆ. ನಂತರ, ಆ ಮಹಿಳೆ, ತಾನು ಭಾರತೀಯಳಲ್ಲ, ಆದರೆ ಸಿಂಗಾಪುರದ ಯುರೇಷಿಯನ್ ಮೂಲ ಎಂದು ಸ್ಪಷ್ಟನೆ ನೀಡಿದ್ದಾರೆ. ಆದರೂ, ಕ್ಯಾಬ್ ಡ್ರೈವರ್‌ನ ನಡವಳಿಕೆಯು "ಸ್ವೀಕಾರಾರ್ಹವಲ್ಲ" ಎಂದು ಜಾನೆಲ್ ಹೋಡೆನ್ ತಿಳಿಸಿದ್ದಾರೆ. ತಾನು "ಟ್ಯಾನ್ ಆದ ಚರ್ಮವನ್ನು ಹೊಂದಿದ್ದರೂ ಅಥವಾ ಭಾರತೀಯರಾಗಿದ್ದರೂ ಅಥವಾ ಬೇರೆ ರೀತಿಯದಾದರೂ ಕ್ಯಾಬ್ ಚಾಲಕನ ಹೇಳಿಕೆ ಸರಿಯಲ್ಲ’’ ಎಂದೂ ಹೇಳಿದ್ದಾರೆ.
ಘಟನೆಯ ಕುರಿತು ಇನ್‌ಸ್ಟಾಗ್ರಾಮ್ ಪೋಸ್ಟ್‌ಗೆ ಕ್ಯಾಬ್ ಕಂಪನಿ ಪ್ರತಿಕ್ರಿಯಿಸಿದ್ದು, ಈ ಕುರಿತು ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದರು. ಅಲ್ಲದೆ, "ಸಂದರ್ಭಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಆಂತರಿಕ ತನಿಖೆಯನ್ನು" ಪ್ರಾರಂಭಿಸಿದ್ದಾಗಿ ಕಂಪನಿಯ ವಕ್ತಾರರು ದಿ ಸ್ಟ್ರೈಟ್ಸ್ ಟೈಮ್ಸ್‌ಗೆ ಹೇಳಿದರು. ಯಾವುದೇ ಸಂದರ್ಭಗಳಲ್ಲಿ ಟಾಡಾ ಜನಾಂಗೀಯ ಕಾಮೆಂಟ್‌ಗಳನ್ನು ಅಥವಾ ಟೀಕೆಗಳನ್ನು ಕ್ಷಮಿಸುವುದಿಲ್ಲ ಎಂದೂ ಅವರು ಹೇಳಿದರು.
ಇದನ್ನೂ ಓದಿ: ಕಾರ್ಪೊರೇಟ್ ಲೈಫ್ ಬೇಕಾ ಗುರು? ಐಟಿ ಉದ್ಯೋಗಕ್ಕಿಂತ ಕ್ಯಾಬ್ ಚಾಲಕನಾಗೇ ಹೆಚ್ಚು ದುಡೀತಾರೆ ಈ ಟೆಕ್ಕಿ!