
ಲಂಡನ್: ಬ್ರಿಟನ್ ರಾಜ ಚಾರ್ಲ್ಸ್-3 ಅವರ ಪತ್ನಿ ಕ್ಯಾಮಿಲ್ಲಾ ತಮ್ಮ ಪಟ್ಟಾಭಿಷೇಕದ ದಿನ ಧರಿಸಲು ವಸಹಾತುಶಾಹಿ ಕಾಲದ, ವಿವಾದಿತ ಕೊಹಿನೂರ್ ವಜ್ರ ಇಲ್ಲದ ಕಿರೀಟವನ್ನು ಧರಿಸಲು ಆಯ್ಕೆ ಮಾಡಿಕೊಂಡಿದ್ದಾರೆ. ನೂತನ ರಾಣಿಯ ಪಟ್ಟಾಭಿಷೇಕ ಮೇ ತಿಂಗಳಿನಲ್ಲಿ ವೆಸ್ಟ್‌ಮಿನಿಸ್ಟರ್ ಅಬೇಯಲ್ಲಿ (Westminster Abbey) ನಡೆಯಲಿದೆ ಎಂದು ಬಕಿಂಗ್‌ಹ್ಯಾಮ್ (Buckingham Palace) ಅರಮನೆ ತಿಳಿಸಿದೆ.
ಕೊಹಿನೂರ್ ವಜ್ರ (Kohinoor diamond) ಭಾರತದಿಂದ ಲಂಡನ್ ತಲುಪಿದ್ದು, ಇದು ಕೆಲವು ರಾಜತಾಂತ್ರಿಕ ಸಮಸ್ಯೆಗಳನ್ನು ಹೊಂದಿರುವುದರಿಂದ ಈ ಕಿರೀಟವನ್ನು ಧರಿಸದಿರಲು ಕ್ಯಾಮಿಲ್ಲಾ ನಿರ್ಧರಿಸಿದ್ದಾರೆ. ಕ್ಯಾಮಿಲಾ ಧರಿಸಲು ಆಯ್ಕೆ ಮಾಡಿಕೊಂಡಿರುವ ಕ್ವೀನ್ ಮೇರಿ ಕಿರೀಟದಲ್ಲಿ ಕೊಹಿನೂರ್ ವಜ್ರದ ನಕಲನ್ನು ಅಳವಡಿಸಲಾಗಿದ್ದು, ಬೇಡವೆಂದರೆ ಅದನ್ನು ತೆಗೆದಿಡುವಂತೆ ವಿನ್ಯಾಸ ಮಾಡಲಾಗಿದೆ. ಮೂಲ ಕೊಹಿನೂರ್ ವಜ್ರವನ್ನು ರಾಣಿ ಎಲೆಜಬೆತ್-2 ಅವರ ತಾಯಿಯ (Queen Elizabeth II's mother) ಕಿರೀಟದಲ್ಲಿ ಅಳವಡಿಸಲಾಗಿದೆ.
ಬ್ರಿಟನ್ ರಾಜಕುಮಾರ ಹ್ಯಾರಿ ಆತ್ಮಕತೆ 'ಸ್ಪೇರ್' ಮೊದಲ ದಿನವೇ ದಾಖಲೆಯ ಮಾರಾಟ
ಎಲಿಜಬೆತ್ ಸಾವು : ಡಯಾನಗಾಗಿ ಮಿಡಿಯುತ್ತಿರುವ ಬ್ರಿಟನ್ ಜನ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ