1939ರ ಮರಣ ದಾಖಲೆ ಮುರಿದ ಟರ್ಕಿ ಭೂಕಂಪ: 35 ಸಾವಿರ ಗಡಿ ದಾಟಿದ ಮೃತರ ಸಂಖ್ಯೆ

By Kannadaprabha News  |  First Published Feb 15, 2023, 6:59 AM IST

ಕಳೆದ ಸೋಮವಾರ ಟರ್ಕಿ ಮತ್ತು ಸಿರಿಯಾ (Syria)ದೇಶಗಳಲ್ಲಿ ಸಂಭವಿಸಿದ 7.8 ತೀವ್ರತೆಯ ಭೀಕರ ಭೂಕಂಪಕ್ಕೆ ಸಾವನ್ನಪ್ಪಿದವರ ಸಂಖ್ಯೆ ಮಂಗಳವಾರ 41,000 ಕ್ಕೆ ಏರಿಕೆಯಾಗಿದೆ.


ಇಸ್ತಾಂಬುಲ್‌/ಅಂಕಾರ: ಕಳೆದ ಸೋಮವಾರ ಟರ್ಕಿ ಮತ್ತು ಸಿರಿಯಾ (Syria)ದೇಶಗಳಲ್ಲಿ ಸಂಭವಿಸಿದ 7.8 ತೀವ್ರತೆಯ ಭೀಕರ ಭೂಕಂಪಕ್ಕೆ ಸಾವನ್ನಪ್ಪಿದವರ ಸಂಖ್ಯೆ ಮಂಗಳವಾರ 41,000 ಕ್ಕೆ ಏರಿಕೆಯಾಗಿದೆ. ಈ ಪೈಕಿ ಟರ್ಕಿಯಲ್ಲಿ(Turkey) ದಾಖಲೆಯ 35,418 ಮಂದಿ ಸಾವನ್ನಪ್ಪಿದ್ದಾರೆ. ಇದು 1939ರಲ್ಲಿ ಸಂಭವಿಸಿದ ಭೂಕಂಪದಿಂದಾದ 33 ಸಾವಿರ ಸಂಖ್ಯೆಯನ್ನು ಮೀರಿಸಿದೆ. ಹಾಗೆಯೇ ಸಿರಿಯಾದಲ್ಲಿ 5,714 ಜನರು ಸಾವನ್ನಪ್ಪಿದ್ದಾರೆ.

ಅವಶೇಷಗಳಡಿಯಲ್ಲಿ ಸಿಲುಕಿದ್ದ ಸಂತ್ರಸ್ತರನ್ನು ರಕ್ಷಿಸುವ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದ್ದು, ಇದಕ್ಕಾಗಿ ಸ್ನಿಪ್ಪರ್‌ ಡಾಗ್‌ (Martin Griffiths,) ಹಾಗೂ ಥರ್ಮಲ್‌ ಕ್ಯಾಮರಾಗಳನ್ನು ಬಳಸಲಾಗುತ್ತಿದೆ. ಸಿರಿಯಾದ ಅಲೆಪ್ಪೊ (Aleppo) ನಗರದಲ್ಲಿ ಅಮೆರಿಕದ ರಕ್ಷಣಾ ತಂಡದ ಮುಖ್ಯಸ್ಥ ಮಾರ್ಟಿನ್‌ ಗ್ರಿಫ್ಪಿಥ್ಸ್ ಅವರು, ಶೋಧ ಕಾರ್ಯವೂ ಮುಕ್ತಾಯ ಹಂತ ತಲುಪಿದೆ. ಇನ್ನು ಸಂತ್ರಸ್ತರಿಗೆ ಆಹಾರ, ಆಶ್ರಯದಂತಹ ನೆರವು ಒದಗಿಸಬೇಕು’ ಎಂದಿದ್ದಾರೆ. ಅಲ್ಲದೇ ಸ್ಥಳದಲ್ಲಿ ತಾಪಮಾನವು -6 ಡಿಗ್ರಿಗೆ ಕುಸಿತಗೊಂಡಿದ್ದು, ಕಾರ್ಯಾಚರಣೆಯನ್ನು ಕಷ್ಟಕರಗೊಳಿಸಿವೆ ಎಂದು ಹೇಳಿದ್ದಾರೆ. ಭೂಕಂಪದಿಂದ ಟರ್ಕಿಯಲ್ಲಿ ಅಂದಾಜು .6.88 ಲಕ್ಷ ಕೋಟಿ ನಷ್ಟ ಸಂಭವಿಸಿದೆ.

Tap to resize

Latest Videos

Turkey: 128 ಗಂಟೆ ಕಾಲ ಅವಶೇಷದಡಿ ಸಿಲುಕಿದ್ದ 2 ತಿಂಗಳ ಮಗು ಜೀವಂತವಾಗಿ ಪತ್ತೆ: ಪವಾಡ ಅಂದ್ರೆ ಇದು..!

Turkey Earthquake: ಮೂತ್ರ ಕುಡಿದು ಬದುಕಿ ಬಂದ 17 ವರ್ಷದ ಯುವಕ!

click me!