ಅಮೆರಿಕ ಅಧ್ಯಕ್ಷ ಚುನಾವಣೆ: ಟ್ರಂಪ್‌ ವಿರುದ್ಧ ಭಾರತೀಯ ಮೂಲದ ನಿಕ್ಕಿ ಹ್ಯಾಲೆ ಸ್ಪರ್ಧೆ

By Kannadaprabha News  |  First Published Feb 15, 2023, 6:47 AM IST

2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವುದಾಗಿ ಭಾರತೀಯ ಮೂಲದ ರಾಜಕಾರಣಿ, ರಿಪಬ್ಲಿಕನ್‌ ಪಾರ್ಟಿ ನಾಯಕಿ ನಿಕ್ಕಿ ಹ್ಯಾಲೆ ಮಂಗಳವಾರ ಅಧಿಕೃತವಾಗಿ ಘೋಷಿಸಿದ್ದಾರೆ.


ವಾಷಿಂಗ್ಟನ್‌: 2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವುದಾಗಿ ಭಾರತೀಯ ಮೂಲದ ರಾಜಕಾರಣಿ, ರಿಪಬ್ಲಿಕನ್‌ ಪಾರ್ಟಿ ನಾಯಕಿ ನಿಕ್ಕಿ ಹ್ಯಾಲೆ ಮಂಗಳವಾರ ಅಧಿಕೃತವಾಗಿ ಘೋಷಿಸಿದ್ದಾರೆ. ಅಲ್ಲದೆ, ಪ್ರಚಾರವನ್ನೂ ಆರಂಭಿಸಿದ್ದಾರೆ. ನಿಕ್ಕಿ ಹ್ಯಾಲೆ ಅಧ್ಯಕ್ಷೀಯ ಚುನಾವಣೆಗೆ 3ನೇ ಬಾರಿ ಸ್ಪರ್ಧಿಸಲಿರುವ ಮಾಜಿ ಅಧ್ಯಕ್ಷ ಹಗೂ ರಿಪಬ್ಲಿಕನ್‌ ಪಾರ್ಟಿ(Republican Party) ಮುಖಂಡ 76 ವರ್ಷದ ಡೊನಾಲ್ಡ್‌ ಟ್ರಂಪ್‌ (Donald Trump) ವಿರುದ್ಧ, ಅಧಿಕೃತವಾಗಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಗೂ ಮುನ್ನ, ಪಕ್ಷದಲ್ಲಿನ ಆಂತರಿಕ ಚುನಾವಣೆಯಲ್ಲಿ ಸೆಣಸಲಿದ್ದಾರೆ. ಆಂತರಿಕ ಚುನಾವಣೆಯಲ್ಲಿ ಟ್ರಂಪ್‌ ಅವರನ್ನು ಮಣಿಸಿದರೆ ನಿಕ್ಕಿ, ರಿಪಬ್ಲಿಕನ್‌ ಪಕ್ಷದ ಅಧಿಕೃತ ಅಧ್ಯಕ್ಷೀಯ ಅಭ್ಯರ್ಥಿ ಆಗಲಿದ್ದಾರೆ.

51 ವರ್ಷದ ನಿಕ್ಕಿ, ಎರಡು ಬಾರಿ ಅಮೆರಿಕದ ಸೌತ್‌ ಕೆರೊಲಿನಾ (South Carolina)ರಾಜ್ಯದ ಗವರ್ನರ್‌ (governor) ಆಗಿಯೂ ಹಾಗೂ ಟ್ರಂಪ್‌ ಅವಧಿಯಲ್ಲಿ ವಿಶ್ವಸಂಸ್ಥೆಯಲ್ಲಿ ಅಮೆರಿಕದ ರಾಯಭಾರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ವೀಡಿಯೋ ಮೂಲಕ ನಿಕ್ಕಿ, ದೇಶದ ಹಿತಕ್ಕಾಗಿ ತಾನು ಸ್ಪರ್ಧಿಸುತ್ತಿದ್ದು ಬೆಂಬಲ ನೀಡುವಂತೆ ಕೇಳಿಕೊಂಡಿದ್ದಾರೆ ಹಾಗೂ ತನ್ನನ್ನು ತಾನು ಟ್ರಂಪ್‌ಗಿಂತ ಕಿರಿಯ, ಹೊಸ ಹಾಗೂ ಪರ್ಯಾಯವೆಂದು ಬಿಂಬಿಸಿಕೊಂಡಿದ್ದಾರೆ.

Tap to resize

Latest Videos

ಅಮೆರಿಕ ಅಧ್ಯಕ್ಷ ಚುನಾವಣೆಗೆ: ಭಾರತ ಮೂಲದ ರೋ ಖನ್ನಾ ಸ್ಪರ್ಧೆ?

3ನೇ ಭಾರತೀಯ ಮೂಲದ ವ್ಯಕ್ತಿ:

ಪಂಜಾಬ್‌ (Punjab) ಮೂಲದ ನಿಕ್ಕಿಯ ಮೂಲ ನಾಮ ನಿಮ್ರತಾ ನಿಕ್ಕಿ ರಂಧಾವಾ (Nimrata Nikki Randhawa). ಅಮೆರಿಕಕ್ಕೆ ವಲಸೆ ಹೋದ ಪಂಜಾಬಿ ಸಿಖ್‌ ದಂಪತಿಯ (Punjabi Sikh couple) ಮಗಳು. ನಿಕ್ಕಿಗೂ ಮುನ್ನ 2016ರಲ್ಲಿ ಬಾಬ್ಬಿ ಜಿಂದಾಲ್‌ ಹಾಗೂ 2020ರಲ್ಲಿ ಕಮಲಾ ಹ್ಯಾರಿಸ್‌ ಅವರು ತಮ್ಮ ತಮ್ಮ ಪಕ್ಷಗಳಲ್ಲೇ ನಡೆದ ಆಂತರಿಕ ಚುನಾವಣೆಯ ಅಧ್ಯಕ್ಷೀಯ ರೇಸ್‌ನಲ್ಲಿದ್ದ ಭಾರತೀಯ ಮೂಲದವರು. ಇದರಿಂದಾಗಿ ಅಧ್ಯಕ್ಷೀಯ ಅಖಾಡಕ್ಕಿಳಿಯಲಿರುವ 3ನೇ ಬಾರತೀಯ ಮೂಲದ ವ್ಯಕ್ತಿ ಎನ್ನಿಸಿಕೊಳ್ಳಲಿದ್ದಾರೆ.

Mikey Hothi: ಕ್ಯಾಲಿರ್ಫೋನಿಯಾ ಮೊದಲ ಸಿಖ್ ಮೇಯರ್‌ ಆಗಿ ಭಾರತೀಯ ಮಿಕಿ ಹೋಥಿ ನೇಮಕ

click me!