
ಹೊಸದಿಲ್ಲಿ (ಜನವರಿ 21, 2024): ಜೀವವನ್ನು ಉಳಿಸಬಹುದಾದ ಭಾರತೀಯ ಡೋರ್ನಿಯರ್ ವಿಮಾನದ ಬಳಕೆಗೆ ಅಧ್ಯಕ್ಷ ಮೊಹಮ್ಮದ್ ಮುಯಿಝು ಅನುಮತಿ ನಿರಾಕರಿಸಿದ ಆರೋಪದ ನಡುವೆಯೇ 14 ವರ್ಷದ ಮಾಲ್ಡೀವ್ಸ್ ಬಾಲಕ ಶನಿವಾರ ಮೃತಪಟ್ಟಿದ್ದಾನೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ನಿರ್ಮಿಸಿದ ಮತ್ತು ಭಾರತದಿಂದ ಒದಗಿಸಲಾದ ಡೋರ್ನಿಯರ್ ವಿಮಾನವನ್ನು ಮಾನವೀಯ ಉದ್ದೇಶಗಳಿಗಾಗಿ ದ್ವೀಪ ರಾಷ್ಟ್ರದಲ್ಲಿ ವ್ಯಾಪಕವಾಗಿ ಬಳಸಲಾಗಿದೆ.
ಬ್ರೈನ್ ಟ್ಯೂಮರ್ ಮತ್ತು ಪಾರ್ಶ್ವವಾಯುವಿನೊಂದಿಗೆ ಹೋರಾಡುತ್ತಿರುವ ಹದಿಹರೆಯದ ಬಾಲಕ ಗಾಫ್ ಅಲಿಫ್ ವಿಲ್ಲಿಂಗಿಲಿಯ ವಿಲ್ಮಿಂಗ್ಟನ್ ದ್ವೀಪದಿಂದ ಮಾಲ್ಡೀವ್‌ನ ರಾಜಧಾನಿ ಮಾಲೆಯಲ್ಲಿ ಹೆಚ್ಚಿನ ಚಿಕಿತ್ಸೆ ನೀಡಲು ಏರ್‌ಲಿಫ್ಟ್ ಮಾಡಲು ಏರ್ ಆಂಬ್ಯುಲೆನ್ಸ್ ಹುಡುಕುತ್ತಿದ್ದರು.
ಮಾಲ್ಡೀವ್ಸ್ ಬುಕ್ಕಿಂಗ್ ಕ್ಯಾನ್ಸಲ್ ಬಳಿಕ ‘ದೇಶ ಮೊದಲು ವ್ಯಾಪಾರ ನಂತರ’ ಎಂಬ ಸಂದೇಶ ಕಳಿಸಿದ Ease My Trip
ಬುಧವಾರ ರಾತ್ರಿ ಮಗು ಪಾರ್ಶ್ವವಾಯುವಿಗೆ ಒಳಗಾದಾಗ ಅತನ ಕುಟುಂಬವು ಮಾಲೆಗೆ ವೈಮಾನಿಕ ವರ್ಗಾವಣೆಯನ್ನು ಕೋರಲು ಪ್ರೇರೇಪಿಸಿತು. ಆದರೆ ಗುರುವಾರ ಬೆಳಗ್ಗೆಯವರೆಗೆ ಸಂಕಷ್ಟದ ಕರೆಗೆ ಉತ್ತರಿಸಲಾಗಿಲ್ಲ. ಈ 16 ನಿರ್ಣಾಯಕ ಗಂಟೆಗಳ ವಿಳಂಬವು ಗಾಫ್ ಅಲಿಫ್ ವಿಲ್ಲಿಂಗಿಲಿಯ ಆಸ್ಪತ್ರೆಯ ಬಳಿ ಪ್ರತಿಭಟನೆಯನ್ನು ಹುಟ್ಟುಹಾಕಿದೆ. ಏಕೆಂದರೆ ವಿಳಂಬದ ಬಗ್ಗೆ ಕುಟುಂಬಸ್ಥರು ಹಾಗೂ ಜನ ಸಮುದಾಯ ತಮ್ಮ ಆಕ್ರೋಶ ವ್ಯಕ್ತಪಡಿಸಿದೆ.
ಈ ಬಗ್ಗೆ ಸ್ಥಳೀಯ ಮಾಧ್ಯಮದೊಂದಿಗೆ ಮಾತನಾಡಿದ ತಂದೆ, ಸ್ಟ್ರೋಕ್ ಆದ ತಕ್ಷಣ ಮಾಲೆಗೆ ಕರೆದೊಯ್ಯಲು ನಾವು ಐಲ್ಯಾಂಡ್ ಏವಿಯೇಷನ್‌ಗೆ ಕರೆ ಮಾಡಿದರೂ, ಅವರು ನಮ್ಮ ಕರೆಗಳಿಗೆ ಉತ್ತರಿಸಲಿಲ್ಲ. ಗುರುವಾರ ಬೆಳಗ್ಗೆ 8:30 ಕ್ಕೆ ಅವರು ಫೋನ್‌ಗೆ ಉತ್ತರಿಸಿದರು.
ಮಾಲ್ಡೀವ್ಸ್‌ಗೆ ಭಾರತೀಯರ ಸಂಖ್ಯೆ ಇಳಿಕೆ: ಮುಂದೆ ಇನ್ನಷ್ಟು ಕಡಿತ; ಭಾರತದ ಬಗ್ಗೆ ಸುಳ್ಳು ಹೇಳಿದ್ದ ಮುಯಿಜ್
ನಂತರ ಮಾಲೆಗೆ ಕರೆದುಕೊಂಡು ಹೋಗಿ, ಐಸಿಯುಗೆ ಕರೆದೊಯ್ದರೂ ಆತನ ಅರೋಗ್ಯ ಆ ವೇಳಗೆ ತೀವ್ರ ಹದಗೆಟ್ಟಿತ್ತು ಎಂದರು. ಇನ್ನು, ತಾಂತ್ರಿಕ ದೋಷದಿಂದ ವಿಳಂಬವಾಯಿತು ಎಂದು ಹೇಳಿಕೊಂಡಿದ್ದಾರೆ. ಹಾಗೂ, ತುರ್ತು ವೈದ್ಯಕೀಯ ಸ್ಥಳಾಂತರಿಸುವ ಘಟನೆಯಲ್ಲಿ ಭಾಗಿಯಾಗಿರುವ ರೋಗಿಯ ದುರದೃಷ್ಟಕರವಾದ ಮರಣವನ್ನು ನಾವು ತೀವ್ರ ವಿಷಾದದಿಂದ ಅಂಗೀಕರಿಸುತ್ತೇವೆ. ದುಃಖಿತ ಕುಟುಂಬಕ್ಕೆ ನಮ್ಮ ಹೃತ್ಪೂರ್ವಕ ಸಂತಾಪವನ್ನು ವ್ಯಕ್ತಪಡಿಸುತ್ತೇವೆ ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ.
ಸ್ಥಳೀಯ ಮಾಲ್ಡೀವಿಯನ್ ಮಾಧ್ಯಮವು ಮಗು ಮೃತಪಟ್ಟ ಆಸ್ಪತ್ರೆಯ ಹೊರಗೆ ಪ್ರತಿಭಟನೆಗಳನ್ನು ವರದಿ ಮಾಡಿದೆ. "ಭಾರತದ ವಿರುದ್ಧ ಅಧ್ಯಕ್ಷರ ದ್ವೇಷವನ್ನು ಪೂರೈಸಲು ಜನರು ತಮ್ಮ ಪ್ರಾಣವನ್ನು ನೀಡಬೆಕಿಲ್ಲ" ಎಂದು ಮಾಲ್ಡೀವ್ಸ್ ಸಂಸದ ಮೀಕೈಲ್ ನಸೀಮ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಭಾರತ ಮತ್ತು ಮಾಲ್ಡೀವ್ಸ್ ನಡುವಿನ ರಾಜತಾಂತ್ರಿಕ ಸಂಬಂಧಗಳು ಹದಗೆಟ್ಟಿರುವ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ.
ಮಾಲ್ಡೀವ್ಸ್ ಟ್ರಿಪ್ ಕ್ಯಾನ್ಸಲ್ ಮಾಡಿದ ಭಾರತೀಯರು: ಹೆಚ್ಚು ಪ್ರವಾಸಿಗರ ಕಳಿಸುವಂತೆ ಚೀನಾಗೆ ಮುಯಿಝು ಮನವಿ
ಭಾರತ ಮತ್ತು ಮಾಲ್ಡೀವ್ಸ್ ನಡುವಿನ ರಾಜತಾಂತ್ರಿಕ ಉದ್ವಿಗ್ನತೆಯು ಇತ್ತೀಚಿನ ತಿಂಗಳುಗಳಲ್ಲಿ ಹೆಚ್ಚಾಗಿದೆ. ವಿಶೇಷವಾಗಿ ಕಳೆದ ವರ್ಷ ನವೆಂಬರ್‌ನಲ್ಲಿ ಅಧ್ಯಕ್ಷ ಮೊಹಮ್ಮದ್ ಮುಯಿಝು ಅಧಿಕಾರ ವಹಿಸಿಕೊಂಡ ನಂತರ. ಹೊಸ ಅಧ್ಯಕ್ಷರು ವಿದೇಶಾಂಗ ನೀತಿಯಲ್ಲಿ ಬದಲಾವಣೆಯಾಗಿದ್ದು, ಚೀನಾದೊಂದಿಗೆ ನಿಕಟ ಸಂಬಂಧಗಳನ್ನು ಸೂಚಿಸಿದ್ದು, ಈ ಹಿಂದಿನ ಭಾರತ ಮೊದಲು ವಿಧಾನದಿಂದ ಹೊರ ಬಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ