ಅಮೆರಿಕ ಸೂಚನೆ ಮೇರೆಗೆ ಇರಾನ್‌ ಮೇಲೆ ಪಾಕ್‌ ದಾಳಿ: ಮಾಧ್ಯಮ ವರದಿಗಳ ಬಗ್ಗೆ ಅಮೆರಿಕಾ ಮೌನ

By Kannadaprabha News  |  First Published Jan 20, 2024, 8:55 AM IST

ಇರಾನ್‌ ಮೇಲೆ ಪಾಕಿಸ್ತಾನ ಮಾಡಿದ ಮಿಸೈಲ್‌ ದಾಳಿಗೆ ಅಮೆರಿಕದ ಮಾರ್ಗದರ್ಶನ ಹಾಗೂ ಬೆಂಬಲವಿದ್ದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಕೆಲವು ಮಾಧ್ಯಮಗಳು ಕೂಡ ವರದಿ ಮಾಡಿವೆ.


ವಾಷಿಂಗ್ಟನ್‌: ಇರಾನ್‌ ಮೇಲೆ ಪಾಕಿಸ್ತಾನ ಮಾಡಿದ ಮಿಸೈಲ್‌ ದಾಳಿಗೆ ಅಮೆರಿಕದ ಮಾರ್ಗದರ್ಶನ ಹಾಗೂ ಬೆಂಬಲವಿದ್ದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಕೆಲವು ಮಾಧ್ಯಮಗಳು ಕೂಡ ವರದಿ ಮಾಡಿವೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ತಿಳಿಸಿದ ಅಮೆರಿಕದ ವಿದೇಶಾಂಗ ಇಲಾಖೆ ವಕ್ತಾರ ಮ್ಯಾಥ್ಯೂ ಮಿಲ್ಲರ್‌, ಈ ಕುರಿತು ಹೆಚ್ಚಿನ ವಿಷಯಗಳನ್ನು ತಿಳಿಸಲು ಬಯಸುವುದಿಲ್ಲ. ಆದರೆ ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಸಂಘರ್ಷವನ್ನು ಶಮನಗೊಳಿಸುವುದಕ್ಕೆ ಮೊದಲ ಆದ್ಯತೆ ನೀಡುತ್ತಿದ್ದೇವೆ. ಇರಾನ್‌ ದಾಳಿಗೆ ತುತ್ತಾಗಿರುವುದು ಅದು ದೀರ್ಘಕಾಲ ಭಯೋತ್ಪಾದನೆಯ ಪೋಷಿಸಿದ್ದರ ಫಲವಾಗಿ ಎಂದು ಮಾರ್ಮಿಕವಾಗಿ ಪ್ರಶ್ನೆಯೊಂದಕ್ಕೆ ತಿಳಿಸಿದರು.

ಅಲ್ಲದೆ ಪಾಕಿಸ್ತಾನದ ಕುರಿತು ಮೃದುವಾಗಿ ಮಾತನಾಡುತ್ತಾ, ಪಾಕಿಸ್ತಾನವು ತನ್ನ ನೆರೆಯ ರಾಷ್ಟ್ರಗಳೊಂದಿಗೆ ಸೌಹಾರ್ದ ಸಂಬಂಧ ಬಯಸುವುದಾಗಿ ತಿಳಿಸಿದ್ದು, ಅದನ್ನು ಅಮೆರಿಕ ಗಣನೆಗೆ ತೆಗೆದುಕೊಂಡಿದೆ ಎಂದು ತಿಳಿಸಿದರು. ಪಾಕಿಸ್ತಾನವು ಇರಾನ್‌ ಮೇಲೆ ಮಾರ್ಗ್‌ ಬಾರ್‌ ಸಮಾಚಾರ್‌ ಎಂಬ ಹೆಸರಿನ ಆಪರೇಷನ್‌ ಅಡಿಯಲ್ಲಿ ಮಿಸೈಲ್‌ ದಾಳಿ ನಡೆಸಿತ್ತು.

Tap to resize

Latest Videos

ಗಾಜಾ ವಿಶ್ವವಿದ್ಯಾಲಯ ಕ್ಯಾಂಪಸ್‌ ಮೇಲೆ ಬಾಂಬ್ ದಾಳಿ ಮಾಡಿದ ಇಸ್ರೇಲ್? ಸ್ಪಷ್ಟೀಕರಣ ಕೇಳಿದ ಅಮೆರಿಕ

ಸರ್ಕಾರಿ ಬಂಗಲೆ ಖಾಲಿ ಮಾಡಿದ ಮಾಜಿ ಸಂಸದೆ ಮಹುವಾ

ನವದೆಹಲಿ: ಲೋಕಸಭೆಯಲ್ಲಿ ಪ್ರಶ್ನೆ ಕೇಳಲು ಲಂಚ ಪಡೆದ ಆರೋಪದಡಿ ಸಂಸದ ಸ್ಥಾನದಿಂದ ವಜಾಡಿರುವ ಮಾಜಿ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ, ಸಂಸದರಾಗಿದ್ದಕ್ಕೆ ಸರ್ಕಾರದಿಂದ ತಮಗೆ ನೀಡಲಾಗಿದ್ದ ಬಂಗಲೆಯನ್ನು ಶುಕ್ರವಾರ ಖಾಲಿ ಮಾಡಿದ್ದಾರೆ. ಬಂಗಲೆ ತೆರವಿಗೆ ಶುಕ್ರವಾರ ಮುಂಜಾನೆ 10 ಗಂಟೆಗೆ ಡೈರೆಕಸ್ರೇಟ್ ಆಫ್‌ ಎಸ್ಟೇಟ್ಸ್‌ (ಡಿಒಇ) ಅಧಿಕಾರಿಗಳು ಬರುವ ಹೊತ್ತಿಗಾಗಲೇ ದೆಹಲಿಯ ಟೆಲಿಗ್ರಾಫ್‌ ಲೇನ್‌ನಲ್ಲಿರುವ 9ಬಿ ಸಂಖ್ಯೆಯ ಮನೆಯನ್ನು ಮಹುವಾ ಖಾಲಿ ಮಾಡಿಸಿದ್ದಾರೆ. ಬಳಿಕ ಮನೆಯನ್ನು ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ. ತಮ್ಮ ಸರ್ಕಾರಿ ಬಂಗಲೆ ಖಾಲಿ ಮಾಡುವಂತೆ ಡಿಒಇ ನೋಟಿಸ್‌ಗೆ ತಡೆಯಾಜ್ಞೆ ಕೋರಿ ಮಹುವಾ ಅರ್ಜಿ ಸಲ್ಲಿಸಿದ್ದರು. ಆದರೆ ಗುರುವಾರ ಕೋರ್ಟ್ ತಡೆ ನೀಡಿರಲಿಲ್ಲ.

 ಗ್ಯಾನವಾಪಿ ಶಿವಲಿಂಗ ಕೊಳದಲ್ಲಿ ಇಂದು ಸ್ವಚ್ಛತಾ ಕಾರ್ಯ

ವಾರಾಣಸಿ: ಗ್ಯಾನವಾಪಿ ಮಸೀದಿಯಲ್ಲಿ ಶಿವಲಿಂಗ ಆಕೃತಿಯ ಶಿಲೆ ಪತ್ತೆಯಾದ ವಜು಼ಖಾನಾ (ಕೊಳ) ಸ್ವಚ್ಛತಾ ಕಾರ್ಯವನ್ನು ಶನಿವಾರ ವಾರಾಣಸಿಯ ಜಿಲ್ಲಾ ನ್ಯಾಯಾಧೀಶರ ನೇತೃತ್ವದಲ್ಲಿ ನಡೆಸಲಾಗುತ್ತದೆ. ಇಲ್ಲಿ ಮೀನುಗಳು ಸತ್ತಿವೆ ಎಂಬ ಹಿಂದೂ ಅರ್ಜಿದಾರರ ಮನವಿ ಪರಿಗಣಿಸಿ ಸುಪ್ರೀಂ ಕೋರ್ಟ್, ಇದರ ಸ್ವಚ್ಛತೆಗೆ ಇತ್ತೀಚೆಗೆ ಆದೇಶಿಸಿತ್ತು. ಹೀಗಾಗಿ ಸ್ವಚ್ಛತಾ ಕಾರ್ಯ ನಡೆಸಲಾಗುತ್ತದೆ.

ಮತ್ತೆ ತೀವ್ರಗೊಂಡ ಮಧ್ಯಪ್ರಾಚ್ಯ ಬಿಕ್ಕಟ್ಟು: ಜಗತ್ತಿಗೆ ಮತ್ತೆ ಆರ್ಥಿಕ ಸಂಕಷ್ಟದ ಭೀತಿ?

ಈ ಕುರಿತು ಮಾಹಿತಿ ನೀಡಿದ ಅರ್ಜಿದಾರರ ಪರ ವಕೀಲ ಮದನ್‌ ಮೋಹನ್‌ ಯಾದವ್‌, ‘ಜ.16ರಂದು ಸುಪ್ರೀಂ ಕೋರ್ಟ್‌ ನೀಡಿದ ಆದೇಶದನ್ವಯ ಗ್ಯಾನವಾಪಿ ಮಸೀದಿಯಲ್ಲಿರುವ ಕೊಳವನ್ನು ಸ್ವಚ್ಛಗೊಳಿಸುವ ಕುರಿತು ವಾರಾಣಸಿ ಜಿಲ್ಲಾ ನ್ಯಾಯಾಧೀಶರು ಹಿಂದು ಅರ್ಜಿದಾರರು ಮತ್ತು ಮಸೀದಿ ಸಮಿತಿಯ ಕುರಿತು ಚರ್ಚಿಸಿದ್ದಾರೆ. ಕೊಳದ ಸ್ವಚ್ಛತಾ ಕಾರ್ಯವು ಎಲ್ಲರ ಸಮ್ಮುಖದಲ್ಲಿ ಶನಿವಾರ ಬೆಳಗ್ಗೆ 9 ಗಂಟೆಗೆ ಪ್ರಾರಂಭವಾಗಿ 11 ಗಂಟೆಯ ಸುಮಾರಿಗೆ ಅಂತ್ಯಗೊಳ್ಳಲಿದೆ’ ಎಂದು ತಿಳಿಸಿದರು.

ಆಂಧ್ರದಲ್ಲಿ ಜಾತಿಗಣತಿ ಆರಂಭ: ಜಾತಿಗಣತಿ ಕೈಗೊಂಡ ದೇಶದ 3ನೇ ರಾಜ್ಯ

ಅಮರಾವತಿ: ರಾಜ್ಯದ ಎಲ್ಲ ಸಮುದಾಯಗಳನ್ನು ಒಳಗೊಳ್ಳುವ ಸಮಗ್ರ ಜಾತಿ ಗಣತಿಯನ್ನು ಆಂಧ್ರ ಪ್ರದೇಶ ಸರ್ಕಾರ ಶುಕ್ರವಾರ ಪ್ರಾರಂಭಿಸಿದೆ. ಬಿಹಾರದ ನಂತರ ಜಾತಿ ಗಣತಿಯನ್ನು ನಡೆಸುತ್ತಿರುವ ಎರಡನೇ ರಾಜ್ಯ ಆಂಧ್ರ ಪ್ರದೇಶ ಆಗಿದೆ. ಈ ಬಗ್ಗೆ ಮಾತನಾಡಿದ ಆಂಧ್ರ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಚಿವ ಸಿ.ಶ್ರೀನಿವಾಸ ವೇಣುಗೋಪಾಲ ಕೃಷ್ಣ, ‘ಸಮಗ್ರ ಜಾತಿ ಗಣತಿಯನ್ನು ಮೊದಲ ಹಂತದಲ್ಲಿ 10 ದಿನ ನಡೆಸಲಾಗುವುದು. ಅಗತ್ಯ ಎನಿಸಿದರೆ ಇನ್ನೂ ನಾಲ್ಕು ಅಥವಾ ಐದು ದಿನ ನಡೆಸಲಾಗುವುದು’ ಎಂದು ಹೇಳಿದರು. ರಾಜ್ಯದ ಪ್ರತಿ ನಿವಾಸಕ್ಕೂ ಸ್ವಯಂಸೇವಕರು ಭೇಟಿ ನೀಡಿ ಜಾತಿ ಬಗ್ಗೆ ಮಾಹಿತಿ ಕಲೆ ಹಾಕಿ ಗ್ರಾಮದ ಕಾರ್ಯದರ್ಶಿಗೆ ರವಾನಿಸಲಾಗುತ್ತದೆ ಎಂದು ಸಚಿವ ಕೃಷ್ಣ ಉಲ್ಲೇಖಿಸಿದರು.

ಇರಾನ್‌ ಮೇಲೆ ಪಾಕ್‌ ಸೇಡಿನ ದಾಳಿ, 9 ಬಲಿ: ಸಂಧಾನಕ್ಕೆ ಸಿದ್ಧ ಎಂದ ಚೀನಾ

click me!