ಕಚೇರಿ ಟಾಯ್ಲೆಟ್‌ನಲ್ಲಿ ಕ್ಯಾಮೆರಾ ಇಟ್ಟ ಬಾಸ್, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಲೀಕ್!

By Suvarna NewsFirst Published Sep 23, 2022, 9:34 PM IST
Highlights

ಬಟ್ಟೆ ಶಾಪ್‌ ಚೇಜಿಂಗ್ ರೂಂನಲ್ಲಿ,  ಹೊಟೆಲ್ ರೂಂನಲ್ಲಿ ರಹಸ್ಯ ಕ್ಯಾಮರ ಇಟ್ಟ ಘಟನೆಗಳು ಹಲವು ನಡೆದಿದೆ. ಆದರೆ ಇಲ್ಲೊಬ್ಬ ಬಾಸ್ ತಮ್ಮ ಕಂಪನಿಯ ಟಾಯ್ಲೆಟ್‌ನಲ್ಲಿ ಕ್ಯಾಮರಾ ಇಟ್ಟ ಘಟನೆ ನಡೆದಿದೆ. ಇದೀಗ ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಚೀನಾ(ಸೆ.23):  ಕಚೇರಿ, ಸಾರ್ವಜನಿಕ ಪ್ರದೇಶ, ರಸ್ತೆ, ಜಂಕ್ಷನಗಳಲ್ಲಿ ಸಿಸಿಟಿವಿ ಅಳವಡಿಸುವುದು ಸಾಮಾನ್ಯ. ಭದ್ರತಾ ದೃಷ್ಟಿಯಿಂದ ಇದ ಅತ್ಯವಶ್ಯಕ. ಆದರೆ ಇಲ್ಲೊಬ್ಬ ಬಾಸ್ ತನ್ನ ಕಚೇರಿಯ ಟಾಯ್ಲೆಟ್‌ನಲ್ಲೇ ರಹಸ್ಯ ಕ್ಯಾಮರಾ ಅಳವಡಿಸಿದ್ದಾನೆ. ಇಷ್ಟು ಮಾತ್ರವಲ್ಲ, ಈ ವಿಡಿಯೋಗಳ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ಕಂಪನಿ ಬಾಸ್, ಯಾವುದೇ ರಹಸ್ಯ ಕ್ಯಾಮರಾ ಇಟ್ಟಿಲ್ಲ ಎಂದು ಸ್ಪಷ್ಟನೆ ನೀಡಿದೆ. ಈ ಘಟನೆ ನಡೆದಿರುವುದು ಚೀನಾದಲ್ಲಿ. ಚೀನಾದ ಟೆಕ್ ಕಂಪನಿಯಲ್ಲಿ ಡೇಟಾ ಸೋರಿಕೆ ಹೆಚ್ಚಾಗುತ್ತಿತ್ತು. ಜೊತೆಗೆ ಉದ್ಯೋಗಿಗಳು ವಿಶ್ರಾಂತಿ ಸಮಯವನ್ನು ಹೆಚ್ಚಾಗಿ ಬಳಸಿಕೊಳ್ಳುತ್ತಿದ್ದರು. ಇದೆಲ್ಲವನ್ನು ಪತ್ತೆ ಹಚ್ಚಲು ಬಾಸ್, ನೇರವಾಗಿ ಟಾಯ್ಲೆಟ್‌ನಲ್ಲಿ ರಹಸ್ಯ ಕ್ಯಾಮಾರ ಇಟ್ಟಿದ್ದಾನೆ. ಈ ರಹಸ್ಯ ಕ್ಯಾಮಾರದಲ್ಲಿ ಸೆರೆಯಾದ ಮೂರು ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಟಾಯ್ಲೆಟ್‌ನಲ್ಲಿ ಮೊಬೈಲ್ ಹಿಡಿದು ಕುಳಿತಿರುವ ಮೂವರು ಉದ್ಯೋಗಿಗಳ ಈ ಚಿತ್ರಗಳು ಭಾರಿ ಸದ್ದು ಮಾಡಿದೆ.

ಇದೀಗ ಚೀನಾ ಕಂಪನಿ ವಿರುದ್ದ ಆಕ್ರೋಶಗಳು ವ್ಯಕ್ತವಾಗುತ್ತಿದೆ. ಖಾಸಗಿ ವಿಡಿಯೋಗಳನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು ಎಷ್ಟು ಸರಿ? ಉದ್ಯೋಗಿಗಳನ್ನು ಪ್ರಾಣಿಗಳಂತೆ ನೋಡಲಾಗುತ್ತಿದೆ ಅನ್ನೋ ಆರೋಪವೂ ಕೇಳಿಬಂದಿದೆ.  ಇದೀಗ ಈ ರಹಸ್ಯ ಕಾಮ್ಯಾರ ಘಟನೆ ವಿರುದ್ಧ ದೂರು ದಾಖಲಾಗಿದೆ.

ಹೋಟೆಲ್ ರೂಂಗಳಲ್ಲಿ ರಹಸ್ಯ ಕ್ಯಾಮೆರಾ ಇಟ್ಟು ಖಾಸಗಿ ದೃಶ್ಯ ಸೆರೆ : ನಾಲ್ವರು ಅರೆಸ್ಟ್

ಕಚೇರಿಯಲ್ಲಿ ಉದ್ಯೋಗಿಗಳು ವಿಶ್ರಾಂತಿ ಸಮಯವನ್ನು ಹೆಚ್ಚಾಗಿ ಕಳೆಯುತ್ತಿದ್ದಾರೆ. ಇಷ್ಟೇ ಅಲ್ಲ ಈ ವಿಶ್ರಾಂತಿ ಸಮಯದಲ್ಲೇ ಡೇಟಾ ಸೋರಿಕೆ ಸೇರಿದಂತೆ ಹಲವು ಘಟನೆಗಳು ನಡೆದಿದೆ. ಹೀಗಾಗಿ ಟಾಯ್ಲೆಟ್‌ನಲ್ಲಿ ಉದ್ಯೋಗಿಗಳು ಕಚೇರಿ ಕುರಿತು ಯಾವ ವಿಚಾರ ಚರ್ಚೆ ಮಾಡುತ್ತಾರೆ. ಮೊಬೈಲ್ ಮೂಲಕ ಯಾವೆಲ್ಲಾ ಮಾಹಿತಿ ಸೋರಿಕೆ ಮಾಡುತ್ತಿದ್ದಾರೆ ಅನ್ನೋದನ್ನು ತಿಳಿಯಲು ಈ ಕ್ಯಾಮಾರ ಅಳವಡಿಸಿದ್ದಾರೆ ಆನ್ನೋ ಆರೋಪ ಕೇಳಿಬಂದಿದೆ.

ಚಂಡೀಘಡ ವಿಶ್ವವಿದ್ಯಾಲಯದಲ್ಲಿ ಬಾತ್ ರೂಂನಲ್ಲಿ ಕ್ಯಾಮಾರ ಪ್ರಕರಣ
ಇತ್ತೀಚಗೆ ಭಾರತದ ಪಂಜಾಬ್‌ನ ಚಂಡೀಘಡ ವಿಶ್ವಿವಿದ್ಯಾಲಯದಲ್ಲಿನ ಘಟನೆ ಭಾರಿ ಸದ್ದು ಮಾಡಿತ್ತು. ಹಾಸ್ಟೆಲ್ ವಿದ್ಯಾರ್ಥಿನಿಯರ ಬಾತ್‌ರೂಂ ದೃಶ್ಯಗಳನ್ನು ರಹಸ್ಯವಾಗಿ ಚಿತ್ರೀಕರಿಸಿ ಲೀಕ್ ಮಾಡಿದ ಪ್ರಕರಣ ಭಾರಿ ಪ್ರತಿಭಟನೆ ಹಾಗೂ ಕೋಲಾಹಲಕ್ಕೆ ಕಾರಣವಾಗಿತ್ತು. ಪಂಜಾಬ್‌ನ ಚಂಡೀಗಢ ಖಾಸಗಿ ವಿಶ್ವವಿದ್ಯಾಲಯದ ಲೇಡೀಸ್‌ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿಯೊಬ್ಬಳು ಇತರ ವಿದ್ಯಾರ್ಥಿನಿಯರ ಬಾತ್‌ರೂಂ ದೃಶ್ಯಗಳನ್ನು ಚಿತ್ರೀಕರಿಸಿ ಸೋರಿಕೆ ಮಾಡಿದ್ದಾಳೆನ್ನಲಾದ ಪ್ರಕರಣದ ತನಿಖೆಗೆ ಪಂಜಾಬ್‌ ಪೊಲೀಸರು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚನೆ ಮಾಡಿದ್ದಾರೆ. ಹಿರಿಯ ಮಹಿಳಾ ಐಪಿಎಸ್‌ ಅಧಿಕಾರಿ ಗುರ್‌ಪ್ರೀತ್‌ ಕೌರ್‌ ದಿಯೋ ನೇತೃತ್ವದ ಮಹಿಳಾ ಎಸ್‌ಐಟಿ ಇದಾಗಿದ್ದು, ಪೊಲೀಸ್‌ ಇಲಾಖೆ ಮುಖ್ಯಸ್ಥರು ಕಠಿಣ ಕ್ರಮದ ಭರವಸೆ ನೀಡಿದ್ದಾರೆ.

ಸ್ಪೈ ಕ್ಯಾಮರಾ ಬಳಸಿ ಮಹಿಳೆಯರ ವಿಡಿಯೋ ಚಿತ್ರೀಕರಿಸ್ತಿದ್ದ ಕಾಮುಕ ಅರೆಸ್ಟ್‌

ವಿಡಿಯೋ ಚಿತ್ರೀಕರಿಸಿದ ಯುವತಿಯನ್ನು ಈಗಾಗಲೇ ಬಂಧಿಸಲಾಗಿದೆ. ಆಕೆಯ 23 ವರ್ಷದ ಬಾಯ್‌ಫ್ರೆಂಡ್‌ ಹಾಗೂ ಅವನ 31 ವರ್ಷದ ಸ್ನೇಹಿತನನ್ನು ಹಿಮಾಚಲ ಪ್ರದೇಶದ ಪೊಲೀಸರು ಬಂಧಿಸಿ ಪಂಜಾಬ್‌ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಪೊಲೀಸರು ಕಠಿಣ ಕ್ರಮದ ಭರವಸೆ ನೀಡಿದ ನಂತರ ಶನಿವಾರ ಮಧ್ಯರಾತ್ರಿಯಿಂದ ವಿದ್ಯಾರ್ಥಿನಿಯರು ಚಂಡೀಗಢ ವಿವಿಯಲ್ಲಿ ನಡೆಸುತ್ತಿದ್ದ ಪ್ರತಿಭಟನೆಯನ್ನು ಸೋಮವಾರ ಬೆಳಿಗ್ಗೆ ಹಿಂಪಡೆದಿದ್ದಾರೆ.

click me!