ರಷ್ಯಾ ಬಿಟ್ಟು ತೆರಳುವುದು ಹೇಗೆ?, ಕೈ ಮುರಿದುಕೊಳ್ಳುವುದು ಹೇಗೆ? ಪ್ರಶ್ನೆಗಳು ರಷ್ಯಾ ಗೂಗಲ್‌ನಲ್ಲಿ ಟ್ರೆಂಡಿಂಗ್‌!

By Kannadaprabha NewsFirst Published Sep 23, 2022, 8:12 AM IST
Highlights

ಉಕ್ರೇನ್‌ನೊಂದಿಗಿನ ಯುದ್ಧದಲ್ಲಿ ಮಿಲಿಟರಿ ಶಕ್ತಿಯನ್ನು ಹೆಚ್ಚಿಸುವ ಪ್ರಯತ್ನದಲ್ಲಿ, ರಷ್ಯಾದ ಅಧ್ಯಕ್ಷ ಪುಟಿನ್ ಬುಧವಾರ ಎರಡನೇ ಮಹಾಯುದ್ಧದ ನಂತರ ದೇಶದ ಮೊದಲ ಯುದ್ಧ ಸಜ್ಜುಗೊಳಿಸುವಿಕೆಗೆ ಆದೇಶಿಸಿದರು, ರಷ್ಯಾವನ್ನು ರಕ್ಷಿಸಲು ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸಲು ತಾನು ಸಿದ್ಧ ಎಂದು ಹೇಳಿದ್ದಾರೆ.

ಮಾಸ್ಕೋ (ಸೆ. 23): ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಕಡ್ಡಾಯ ಸೇನಾ ಸೇರ್ಪಡೆ ನೀತಿಯನ್ನು ಜಾರಿಗೊಳಿಸುವ ಭೀತಿ ಹಿನ್ನೆಲೆಯಲ್ಲಿ ‘ರಷ್ಯಾ ಬಿಟ್ಟು ತೆರಳುವುದು ಹೇಗೆ?’ ‘ಮನೆಯಲ್ಲೇ ಕೈ ಮುರಿದುಕೊಳ್ಳುವುದು ಹೇಗೆ?’ ಎಂಬ ಬಗ್ಗೆ ಭಾರೀ ಪ್ರಮಾಣದಲ್ಲಿ ಜನರು ಗೂಗಲ್‌ ಮಾಡುತ್ತಿದ್ದಾರೆ. ಪುಟಿನ್‌ ಉಕ್ರೇನ್‌ ವಿರುದ್ಧ ಸೇನಾ ಮರುಸಂಘಟನೆ ಬಗ್ಗೆ ಟೀವಿಯಲ್ಲಿ ಘೋಷಣೆ ಮಾಡಿದ ಬೆನ್ನಲ್ಲೇ ರಷ್ಯಾ ಬಿಟ್ಟು ತೆರಳುವ ಮಾರ್ಗಗಳ ಬಗ್ಗೆ ಜನರು ಹುಡುಕಾಟ ಆರಂಭಿಸಿದ್ದು, ಇದು ರಷ್ಯಾದ ಗೂಗಲ್‌ ಟ್ರೆಂಡಿಂಗ್‌ನಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ಇದಲ್ಲದೇ ಸ್ವತಃ ಗಾಯಗೊಂಡಾದರೂ ಯುದ್ಧದಿಂದ ತಪ್ಪಿಸಿಕೊಳ್ಳಬೇಕು ಎಂದು ಬಯಸಿದ ಜನರು ‘ಮನೆಯಲ್ಲೇ ತೋಳು ಮುರಿದುಕೊಳ್ಳುವುದು ಹೇಗೆ?’ ಎಂಬ ಬಗ್ಗೆಯೂ ಹುಡುಕಾಟ ನಡೆಸಿದ್ದಾರೆ ಎಂದು ವಾಷಿಂಗ್ಟನ್‌ ಪೋಸ್ಟ್‌ ವರದಿ ಮಾಡಿದೆ. ಇನ್ನೊಂದೆಡೆ ರಷ್ಯಾದಿಂದ ವಯಸ್ಕರ ಪರಾರಿ ಯತ್ನಗಳಿಗೂ ಸರ್ಕಾರ ಬ್ರೇಕ್‌ ಹಾಕಿದೆ. 18 ರಿಂದ 65 ವಯೋಮಿತಿ ಪುರುಷರಿಗೆ ವಿಮಾನ ಟಿಕೆಟ್‌ ಅನ್ನು ರಷ್ಯಾದಲ್ಲಿ ನೀಡಲಾಗುತ್ತಿಲ್ಲ. ವಿದೇಶಕ್ಕೆ ತೆರಳುವ ಎಲ್ಲಾ ವಿಮಾನಗಳ ಟಿಕೆಟ್‌ ಖಾಲಿಯಾಗಿವೆ ಎಂದು ಹೇಳಲಾಗಿದೆ. ಉಕ್ರೇನ್‌ ವಿರುದ್ಧ ಯುದ್ಧವನ್ನು ಇನ್ನಷ್ಟುತೀವ್ರಗೊಳಿಸುವುದಾಗಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಹೇಳಿಕೆ ನೀಡಿದ ಬೆನ್ನಲ್ಲೇ ವಯಸ್ಕ ರಷ್ಯನ್ನರು ಜೀವ ಉಳಿಸಿಕೊಳ್ಳಲು ಭಾರೀ ಪ್ರಮಾನದಲ್ಲಿ ವಿದೇಶಕ್ಕೆ ಪರಾರಿಯಾಗುವ ಯತ್ನ ಆರಂಭಿಸಿದ್ದಾರೆ. ಪರಿಣಾಮ ವಿದೇಶಕ್ಕೆ ತೆರಳುವ ಎಲ್ಲಾ ವಿಮಾನಗಳ ಟಿಕೆಟ್‌ ಪೂರ್ಣ ಖಾಲಿಯಾಗಿದೆ.

ಇದರಿಂದ ಎಚ್ಚೆತ್ತುಕೊಂಡಿರುವ ಸರ್ಕಾರ, 18-65ರ ವಯೋಮಾನದ ಪುರುಷರಿಗೆ ವಿಮಾನದ ಟಿಕೆಟ್‌ ವಿತರಣೆ ಮಾಡದಂತೆ ವಿಮಾಯಾನ ಕಂಪನಿಗಳಿಗೆ ಸೂಚಿಸಿದೆ ಎನ್ನಲಾಗಿದೆ. ಹೀಗಾಗಿ ಈ ವಯೋಮಾನದವರಿಗೆ ಟಿಕೆಟ್‌ ಲಭ್ಯವಾಗುತ್ತಿಲ್ಲ. ರಷ್ಯಾದ ರಕ್ಷಣಾ ಇಲಾಖೆ (Russia) ಅನುಮತಿ ಬಳಿಕವೇ ದೇಶದಿಂದ ಯುದ್ಧದಲ್ಲಿ ಪಾಲ್ಗೊಳ್ಳಬಹುದಾದ ವಯಸ್ಸಿನ ಪುರುಷರು ವಿದೇಶಗಳಿಗೆ ತೆರಳಬಹುದಾಗಿದೆ. ದೇಶದಲ್ಲಿ ಸಮರ ಕಾನೂನು ಜಾರಿಗೆ ಬಂದರೆ ಎಲ್ಲ ನಾಗರಿಕರು ಕಡ್ಡಾಯವಾಗಿ ಯುದ್ಧಕ್ಕೆ ತೆರಳಬೇಕಾಬಹುದೆಂಬ ಭೀತಿಯಲ್ಲಿ ಜನರು ದೇಶವನ್ನು ಬಿಟ್ಟು ಅರ್ಮೇನಿಯಾ, ಜಾರ್ಜಿಯಾ, ಅಜರ್‌ಬೈಜಾನ್‌, ಕಜಕಸ್ತಾನ್‌ ಹಾಗೂ ಇಸ್ತಾಂಬುಲ್‌ಗೆ ತೆರಳುತ್ತಿದ್ದಾರೆ. ಈ ದೇಶಗಳಿಗೆ ತೆರಳುವ ವಿಮಾನಗಳ ಸೀಟುಗಳನ್ನು ಕಾಯ್ದಿರಿಸಲಾಗಿದೆ ಎಂದು ರಷ್ಯಾದ ವಿಮಾನಯಾನ ಸಂಸ್ಥೆ ಏವಿಯಾಸೇಲ್ಸ್‌ ಹೇಳಿದೆ.

ಯುದ್ಧ ಅಂತ್ಯಕ್ಕೆ ಪುಟಿನ್‌ ಮನವೊಲಿಸಲು ಮೋದಿಗೆ ಮನವಿ
ನ್ಯೂಯಾರ್ಕ್/ಲಂಡನ್‌: ಉಕ್ರೇನ್‌ ಯುದ್ಧವನ್ನು ಕೊನೆಗೊಳಿಸಿ ಶಾಂತಿಯನ್ನು ಕಾಪಾಡುವಂತೆ ಪ್ರಧಾನಿ ನರೇಂದ್ರ ಮೋದಿ (Narendra Modi) ರಷ್ಯಾದ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ (Vladimir Putin) ಸಲಹೆ ನೀಡಿದ್ದನ್ನು ಅಮೆರಿಕ (USA) ಹಾಗೂ ಬ್ರಿಟನ್‌ (UK) ಸ್ವಾಗತಿಸಿವೆ. ಉಜ್ಬೇಕಿಸ್ತಾನದ ಸಮರಖಂಡದಲ್ಲಿ ನಡೆದ 22ನೇ ಶಾಂಘೈ ಸಹಕಾರ ಸಂಘದಲ್ಲಿ ಮೋದಿ ಪುಟಿನ್‌ ಅವರಿಗೆ ‘ಇದು ಯುದ್ಧದ ಕಾಲವಲ್ಲ’ ಎಂದು ಸಲಹೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಅಮೆರಿಕದ ಅಧ್ಯಕ್ಷರ ಕಚೇರಿ ಶ್ವೇತಭವನ ಪುಟಿನ್‌ ಅವರಿಗೆ ತಮ್ಮ ಸಲಹೆಯನ್ನು ಅನುಸರಿಸಿ ಯುದ್ಧಕ್ಕೆ ಅಂತ್ಯ ಹಾಡುವಂತೆ ಪ್ರಧಾನಿ ಮೋದಿಯವರು ಕೇಳಿಕೊಳ್ಳಬೇಕು ಎಂದು ಒತ್ತಾಯಿಸಿದೆ.

Russia ತಂಟೆಗೆ ಬಂದರೆ ಅಣುಬಾಂಬ್‌ ಹಾಕಲೂ ಸಿದ್ಧ ಎಂದ Putin: Ukraine ಬೆಂಬಲಕ್ಕೆ ನಿಂತ ದೇಶಗಳಿಗೆ ಬೆದರಿಕೆ 

ಉಕ್ರೇನ್‌ ವಿರುದ್ಧ ಪುಟಿನ್‌ ಯುದ್ಧವನ್ನು ಇನ್ನಷ್ಟುತೀವ್ರಗೊಳಿಸುವ ಘೋಷಣೆ ಮಾಡಿದ ಬೆನ್ನಲ್ಲೇ,‘ಭಾರತ ಹಾಗೂ ಮಾಸ್ಕೋ ದೀರ್ಘಕಾಲದಿಂದಲೂ ಸ್ನೇಹ ಸಂಬಂಧ ಕಾಪಾಡಿಕೊಂಡು ಬಂದಿದ್ದು, ಯುದ್ಧವನ್ನು ಕೊನೆಗೊಳಿಸಲು ಇದು ಸಕಾಲ ಎಂಬ ಸಂದೇಶವನ್ನು ನೀಡುವುದನ್ನು ಮುಂದುವರೆಸಬೇಕು. ಈ ವಿಚಾರದಲ್ಲಿ ಮೋದಿಯವರ ರಾಜತಾಂತ್ರಿಕ ಮಧ್ಯಸ್ಥಿಕೆಯನ್ನು ಸ್ವಾಗತಿಸುತ್ತವೆ ಎಂದು ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್‌ ಸುಲ್ಲಿವಾನ್‌ ಹೇಳಿದ್ದಾರೆ.

ಉಕ್ರೇನ್ - ರಷ್ಯಾ ಯುದ್ಧಕ್ಕೆ Narendra Modi ವಿರೋಧಿಸಿದ್ದು ಸರಿ: ವಿಶ್ವದ ನಾಯಕರಿಂದ ಶ್ಲಾಘನೆ

‘ಜಾಗತಿಕವಾಗಿ ಪ್ರಧಾನಿ ನರೇಂದ್ರ ಮೋದಿಯವರು ಶಕ್ತಿಯುತ ಹಾಗೂ ಪ್ರಭಾವಶಾಲಿ ಧ್ವನಿ ಹೊಂದಿದ್ದು, ರಷ್ಯಾದ ನಾಯಕತ್ವವೂ ಭಾರತವನ್ನು ಗೌರವಿಸುತ್ತದೆ. ಈ ಹಿನ್ನೆಲೆಯಲ್ಲಿ ಮೋದಿ ಉಕ್ರೇನ್‌ ಯುದ್ಧದ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಿ ಯುದ್ಧವನ್ನು ನಿಲ್ಲಿಸಲು ಮುಂದಾಗಬೇಕು ಎಂದು ಬ್ರಿಟನ್‌ ವಿದೇಶಾಂಗ ಕಾರ್ಯದರ್ಶಿ ಜೇಮ್ಸ್‌ ಕ್ಲೆವರ್ಲಿ ಹೇಳಿದ್ದಾರೆ. ಶಾಂತಿ ಸ್ಥಾಪನೆ ವಿಚಾರದಲ್ಲಿ ಪ್ರಧಾನಿ ಮೋದಿಯವರ ಮಧ್ಯಸ್ಥಿಕೆಯನ್ನು ಸ್ವಾಗತಿಸುತ್ತೇನೆ ಎಂದಿದ್ದಾರೆ.

click me!