Nuclear War ಆದಲ್ಲಿ ತಲೆಗೆ ಕಂಡೀಷನರ್‌ ಹಾಕಬೇಡಿ: ವಿಚಿತ್ರ ವಾರ್ನಿಂಗ್‌ ನೀಡಿದ ಅಮೆರಿಕಾ ಸರ್ಕಾರ

By Sharath Sharma KalagaruFirst Published Sep 23, 2022, 11:30 AM IST
Highlights

US Advises citizens not to use Conditioners: ಸಾಮಾನ್ಯವಾಗಿ ಶಾಂಪೂ ಬಳಸಿ ಕೂದಲು ಸ್ವಚ್ಚಗೊಳಿಸಿದ ನಂತರ ಕಂಡೀಷನರ್‌ ಬಳಸಲಾಗುತ್ತದೆ. ಆದರೆ ಅಮೆರಿಕಾ ಸರ್ಕಾರ ಜನರಿಗೆ ಕಂಡೀಷನರ್‌ ಬಳಸಬೇಡಿ ಎಂದು ಆದೇಶಿಸಿದೆ. ಇದಕ್ಕೆ ಕಾರಣ ರಷ್ಯಾ ಉಕ್ರೇನ್‌ ಯುದ್ಧ. ಅಷ್ಟಕ್ಕೂ ಕಂಡೀಷನರ್‌ ಬಳಕೆಗೂ ಅಣ್ವಸ್ತ್ರಕ್ಕೂ ಏನು ಸಂಬಂಧ? ಇಲ್ಲಿದೆ ಮಾಹಿತಿ.

ನ್ಯೂಯಾರ್ಕ್‌: ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ (Russian President Vladimir Putin) ಉಕ್ರೇನ್ ವಿರುದ್ಧದ ಯುದ್ಧವನ್ನು ಇನ್ನಷ್ಟು ಹೆಚ್ಚಿಸುವಂತೆ ಆದೇಶ ನೀಡಿದ್ದಾರೆ. ಜತೆಗೆ ಅಣ್ವಸ್ತ್ರ ಪ್ರಯೋಗಕೂ ರಷ್ಯಾ ಹಿಂಜರಿಯುವುದಿಲ್ಲ ಎಂದು ಪಾಶ್ಚಿಮಾತ್ಯ ದೇಶಗಳಿಗೆ ಪುಟಿನ್‌ ಎಚ್ಚರಿಕೆ ನೀಡಿದ್ದಾರೆ. ಈ ಬೆನ್ನಲ್ಲೇ ನಾಗರಿಕ ಸುರಕ್ಷತಾ ದೃಷ್ಟಿಯಿಂದ ಅಮೆರಿಕಾ ಸರ್ಕಾರ ಸಲಹೆಗಳನ್ನು ನೀಡಿದ್ದು, ತಲೆಗೆ ಕಂಡೀಷನರ್‌ ಬಳಸದಂತೆ ಎಚ್ಚರಿಕೆ ನೀಡಿದ್ದಾರೆ. ಇಷ್ಟಕ್ಕೂ ಅಣ್ವಸ್ತ್ರಕ್ಕೂ ಕೂದಲಿಗೆ ಹಾಕುವ ಕಂಡೀನರ್‌ಗೂ ಎತ್ತಣಿಂದೆತ್ತಣ ಸಂಬಂಧ ಎಂದು ಪ್ರಶ್ನೆ ಮೂಡುತ್ತದೆ. ಆದರೆ ಎರಡಕ್ಕೂ ಸಂಬಂಧವಿದೆ ಎನ್ನುತ್ತದೆ ಅಮೆರಿಕಾದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ (Centre for Disease Control and Prevention United States of America). ಇದೇ ಕಾರಣಕ್ಕಾಗಿ ಈ ಸಲಹೆಯನ್ನು ಎಲ್ಲಾ ನಾಗರಿಕರಿಗೂ ನೀಡಲಾಗಿದೆ. 

ಅಣ್ವಸ್ತ್ರ ಪ್ರಯೋಗವಾದರೆ ಆ ದಿನ ಯಾವುದೇ ಕಾರಣಕ್ಕೂ ಕಂಡೀಷನರ್‌ ಬಳಸಬೇಡಿ ಎಂದು ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ ತಿಳಿಸಿದೆ. ಹಲವಾರು ಸಲಹೆಗಳಿದ್ದರೂ ಈ ಸಲಹೆಯನ್ನು ಗಂಭೀರವಾಗಿ ಪರಿಗಣಿಸುವಂತೆ ಸರ್ಕಾರ ಮನವಿ ಮಾಡಿದೆ. ಅಣ್ವಸ್ತ್ರ ಪ್ರಯೋಗಿಸಿದ ದಿನ ಕೂದಲಿನ ಸುರಕ್ಷತೆ ಅಥವಾ ಸೌಂದರ್ಯದ ಬಗ್ಗೆ ಚಿಂತಿಸಬೇಡಿ. ಅದು ನಿಮ್ಮ ಜೀವಕ್ಕೇ ಅಪಾಯ ತರಬಹುದು ಎಂದು ತಿಳಿಸಲಾಗಿದೆ. ನ್ಯೂಕ್ಲಿಯಾರ್‌ ಬಾಂಬ್‌ ಸ್ಫೋಟವಾದಾಗ cloud radioactive dust ಗಾಳಿಯಲ್ಲಿ ಮಿಶ್ರಿತವಾಗುತ್ತದೆ. ಇಂತಾ ಸಂದರ್ಭದಲ್ಲಿ ಮೊದಲು ಸ್ನಾನ ಮಾಡಿ. ಬಳಸಿದ ಬಟ್ಟೆಗಳನ್ನು ದೂರ ಎಲ್ಲಾದರೂ ಕಟ್ಟಿಡಿ. ಅದನ್ನು ಮುಟ್ಟಬೇಡಿ ಅದರಲ್ಲಿ ನ್ಯೂಕ್ಲಿಯಾರ್‌ ರಿಯಾಕ್ಟರ್‌ಗಳು ಶೇಖರಣೆಯಾಗಿರುತ್ತವೆ. ಆದ್ದರಿಂದ ಎಲ್ಲ ಬಟ್ಟೆಗಳನ್ನೂ ಮೂಟೆ ಕಟ್ಟು ಕೈಗೆಟುಕದಂತಿಡಿ ಮತ್ತು ಶೀಘ್ರ ಸ್ನಾನ ಮಾಡಿ ಎನ್ನುತ್ತದೆ ಸುರಕ್ಷತಾ ಸಲಹೆ. 

ಇದನ್ನೂ ಓದಿ: Russia ತಂಟೆಗೆ ಬಂದರೆ ಅಣುಬಾಂಬ್‌ ಹಾಕಲೂ ಸಿದ್ಧ ಎಂದ Putin: Ukraine ಬೆಂಬಲಕ್ಕೆ ನಿಂತ ದೇಶಗಳಿಗೆ ಬೆದರಿಕೆ 

ಶಾಂಪೂ ಬಳಸಿ ಕೂದಲನ್ನು ತೊಳೆದುಕೊಳ್ಳಿ. ಕೂದಲಲ್ಲಿನ ಎಣ್ಣೆಯ ಅಂಶ ಮತ್ತು ಧೂಳನ್ನು ತೊಳೆದುಹಾಕುವಲ್ಲಿ ಶಾಂಪೂ ಸಹಕಾರಿಯಾಗಲಿದೆ. ಆದರೆ ಕಂಡೀಷನರ್‌ ಒಂದೆಡೆಯಲ್ಲಿ ನೀರನ್ನು ಮತ್ತೊಂದೆಡೆ ಎಣ್ಣೆಯ ಅಂಶವನ್ನು ಸೆಳೆಯುವ ಪದಾರ್ಥಗಳನ್ನು ಹೊಂದಿದೆ. ಆದ್ದರಿಂದ ಅದರ ಬಳಕೆಯಿಂದ ನ್ಯೂಕ್ಲಿಯಾರ್‌ ರಿಯಾಕ್ಟರ್‌ ಕೂದಲಿಗೆ ಸೇರಿಕೊಳ್ಳಬಹುದು. ಇದರಿಂದ ಮಾರಕ ಖಾಯಿಲೆಗೆ ನೀವು ತುತ್ತಾಗಬಹುದು ಎನ್ನಲಾಗಿದೆ. "ಶಾಂಪೂ ನಿಮ್ಮ ಜೀವವನ್ನು ಉಳಿಸುತ್ತದೆ. ಆದರೆ ಕಂಡೀಷನರ್‌ ನಿಮ್ಮ ಜೀವವನ್ನೇ ತೆಗೆಯುತ್ತದೆ," ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಕಂಡೀಷನರ್ ನಿಮ್ಮ ಕೂದಲು ಮತ್ತು ರೇಡಿಯೋ ಆಕ್ಟಿವ್‌ ಪದಾರ್ಥದ ನಡುವೆ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ. ಹೆಚ್ಚಿನ ಕಂಡೀಷನರ್‌ಗಳು ಕ್ಯಾಟಿಯಾನಿಕ್‌ ಎಂಬ ಪದಾರ್ಥವನ್ನು ಹೊಂದಿದ್ದು ಇದು ಗುಣಾತ್ಮಕವಾದ ಅಂಶ ಹೊಂದಿದೆ. ತಲೆಗೂದಲಿನಲ್ಲಿ ಋಣಾತ್ಮಕ ಫೈಬರ್‌ ಅಂಶವಿದ್ದು ಎರಡೂ ಸೇರಿದಾಗ ರೇಡಿಯೋ ಆಕ್ಟಿವ್‌ ಧೂಳಿನ ಕಣಗಳನ್ನು ಆಕರ್ಷಿಸುತ್ತವೆ. ರೇಡಿಯೋ ಆಕ್ಟಿವ್‌ ಕಣಗಳು ಜೀವಕೋಶಗಳನ್ನು ಹಾನಿ ಮಾಡುತ್ತವೆ ಮತ್ತು ಇದರಿಂದ ಸಾವು ಸಂಭವಿಸಬಹುದು. ಅಮೆರಿಕಾ ಸರ್ಕಾರ ನಾಗರಿಕರಿಗೆ ಕಣ್ಣು, ಮೂಗು, ಬಾಯಿಯನ್ನು ಮುಟ್ಟಿಕೊಳ್ಳಬೇಡಿ ಎಂದೂ ಸಲಹೆ ನೀಡಿದೆ. 

Vladimir Putin ಬೆದರಿಕೆ ಬಳಿಕ ರಷ್ಯಾದಿಂದ ಜಾಗ ಖಾಲಿಮಾಡುತ್ತಿರುವ ಜನತೆ: Flight ಟಿಕೆಟ್‌ ಬೆಲೆ ಗಗನಕ್ಕೆ

ರಷ್ಯಾದ ಜನರಲ್ಲಿ ಆತಂಕ:

ರಷ್ಯಾವನ್ನು ಮುಗಿಸಲು ಪಾಶ್ಚಿಮಾತ್ಯ ದೇಶಗಳು (Western Nations) ಯತ್ನಿಸುತ್ತಿವೆ. ಈ ಹಿನ್ನೆಲೆ . ಉಕ್ರೇನ್‌ ಪರ ಆ ದೇಶಗಳು ಸಹಾಯಕ್ಕೆ ನಿಂತಿವೆ. ರಕ್ಷಣಾ (Defence) ಸೌಲಭ್ಯದ ಜೊತೆಗೆ ರಷ್ಯಾ ವಿರುದ್ಧ ಯುದ್ಧಕ್ಕೆ ನಿಂತಿದೆ. ರಷ್ಯಾ ಸಾರ್ವಭೌಮತ್ವಕ್ಕೆ ಧಕ್ಕೆಯಾದರೆ ಎಲ್ಲಾ ಅಸ್ತ್ರಗಳನ್ನೂ ಬಳಸಲು ನಾವು ಸಿದ್ಧರಿದ್ದೇವೆ, ನಾನು ತಮಾಷೆ ಮಾಡುತ್ತಿಲ್ಲ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಿನ್ನೆಯಷ್ಟೇ ಎಚ್ಚರಿಸಿದ್ದರು. ವಿಶ್ವದ ಎರಡನೇ ಮಹಾಯುದ್ಧದ (World War II) ನಂತರ ಈಗ ಮತ್ತೊಮ್ಮೆ ಅಣ್ವಸ್ತ್ರ ದಾಳಿಯಾಗಬಹುದೆಂಬ (Nuclear Attack) ಭೀತಿಯಿಂದ ರಷ್ಯಾದ ಜನರು ಅಲ್ಲಿಂದ ಬೇರೆ ದೇಶಗಳಿಗೆ ಹೋಗುತ್ತಿದ್ದಾರೆ ಎಂದು ತಿಳಿದುಬಂದಿದ್ದು, ವಿಮಾನದ ಟಿಕೆಟ್ ಬೆಲೆ ತೀವ್ರ ಏರಿಕೆಯಾಗಿದೆ.

ರಷ್ಯಾ ಅಧ್ಯಕ್ಷರ ಭಾಷಣದ ಬಳಿಕ ಮಾರ್ಷಿಯಲ್‌ ಕಾನೂನು (Martial Law) ಜಾರಿಯಾಗಬಹುದೆಂದು ಜನರಿಗೆ ಭೀತಿ ಎದುರಾಗಿದ್ದು, ಹಾಗೂ ಯುದ್ಧದಲ್ಲಿ ಹೋರಾಡುವ ವಯಸ್ಸುಳ್ಳ ಪುರುಷರನ್ನು ರಷ್ಯಾದಿಂದ ಹೊರಗೆ ಹೋಗದಂತೆ ಮಾಡಬಹುದು ಎಂದು ಕೆಲ ಮಾಧ್ಯಮ ವರದಿಗಳು ಹೇಳಿದ್ದು, ಈ ಹಿನ್ನೆಲೆ ರಷ್ಯಾದಿಂದ ಒನ್‌ವೇ ವಿಮಾನ ಟಿಕೆಟ್‌ಗೆ (One Way Flight Ticket) ಸಿಕ್ಕಾಪಟ್ಟೆ ಡಿಮ್ಯಾಂಡ್‌ ಬಂದಿದೆ. ಇನ್ನು, ಜಾಗತಿಕ ಟ್ರ್ಯಾಕಿಂಗ್ ಸೇವೆ FlightRadar24 ಪ್ರಕಾರ ರಷ್ಯಾದಿಂದ ಬೇರೆ ದೇಶಗಳಿಗೆ ಹೋಗುವ ಒನ್‌ ವೇ ಫ್ಲೈಟ್‌ ಟಿಕೆಟ್‌ಗಳ ಮಾರಾಟ ಹೆಚ್ಚಾಗಿದೆ. 

ಇದನ್ನು ಓದಿ: Russia ತಂಟೆಗೆ ಬಂದರೆ ಅಣುಬಾಂಬ್‌ ಹಾಕಲೂ ಸಿದ್ಧ ಎಂದ Putin: Ukraine ಬೆಂಬಲಕ್ಕೆ ನಿಂತ ದೇಶಗಳಿಗೆ ಬೆದರಿಕೆ 

ಈ ಹಿನ್ನೆಲೆ ಈ ವಾರದ ವಿಮಾನದ ಟಿಕೆಟ್‌ಗಳು ಫುಲ್‌ ಬುಕ್‌ ಆಗಿದೆ ಎಂದು ಏರ್‌ಲೈನ್ ಹಾಗೂ ಟ್ರಾವೆಲ್‌ ಏಜೆಂಟರು ಬುಧವಾರ ಅಂತಾರಾಷ್ಟೀಯ ಸುದ್ದಿಸಂಸ್ಥೆಗೆ ಮಾಹಿತಿ ನೀಡಿದೆ. ಈ ನಡುವೆ ಉಕ್ರೇನ್‌ ವಿರುದ್ಧ ವಿಶೇಷ ಮಿಲಿಟರಿ ಕಾರ್ಯಾಚರಣೆ ಘೋಷಿಸಿದಾಗಿನಿಂದ ಯುರೋಪ್‌ ಒಕ್ಕೂಟಕ್ಕೆ ವಿಮಾನಗಳು ಬಂದ್‌ ಆಗಿವೆ. 

click me!