ಮಾಲ್ಡೀವ್ಸ್ ಕಟ್ಟಿ ಬೆಳೆಸಲು ನೆರವಾದ ಬಾಲಿವುಡ್ ಇದೀಗ ತಿರುಗಿಬಿದ್ದಿದೆ, ಮಾಜಿ ಅಧ್ಯಕ್ಷ ಬೇಸರ!

By Suvarna News  |  First Published Jan 7, 2024, 10:12 PM IST

ಮಾಲ್ಡೀವ್ಸ್ ಕಟ್ಟಿ ಬೆಳೆಸಲು, ಪ್ರವಾಸೋದ್ಯಮ ಈ ಮಟ್ಟಿಗೆ ಬೆಳೆಯಲು ಬಾಲಿವುಡ್ ನಟ ನಟಿಯರ ಕೊಡುಗೆ ಇದೆ. ಆದರೆ ಇದೇ ಬಾಲಿವುಡ್ ಸೆಲೆಬ್ರೆಟಿಗಳು ಇದೀಗ ಮಾಲ್ಡೀವ್ಸ್ ವಿರುದ್ಧ ಕಮೆಂಟ್ ಮಾಡುತ್ತಿರುವುದನ್ನು ನೋಡಿ ಬೇಸರವಾಗಿದೆ. ಮಾಲ್ಡೀವ್ಸ್ ಪರಿಸ್ಥಿತಿ ಎಲ್ಲಿಗೆ ಬಂದಿದೆ ಎಂದು ಮಾಲ್ಡೀವ್ಸ್ ಮಾಜಿ ಅಧ್ಯಕ್ಷ ಅಹಮ್ಮದ್ ನೋವು ತೋಡಿಕೊಂಡಿದ್ದಾರೆ.


ಮಾಲ್ಡೀವ್ಸ್(ಜ.07) ಹೇಳಿದ್ದನ್ನು ಕೇಳಿಸಿಕೊಂಡು, ಉಗುಳಿದ್ದನ್ನು ಒರೆಸಿಕೊಂಡು, ಜರೆದ ಮಾತುಗಳಿಂದ ಕೊರಗಿಕೊಂಡು ಕೂರುವ ಭಾರತ ಈಗಿಲ್ಲ. ಭಾರತ ವಿರುದ್ಧ ಒಂದು ಪದ ಬಂದರೂ ಅದನ್ನು ಖಂಡಿಸುವುದು ಮಾತ್ರವಲ್ಲ, ತಕ್ಕ ತಿರುಗೇಟು ನೀಡುವ ಸಾಮರ್ಥ್ಯ ಭಾರತಕ್ಕಿದೆ. ಇದೀಗ ಮತ್ತೊಮ್ಮೆ ಸಾಬೀತಾಗಿದೆ. ಪ್ರಧಾನಿ ಮೋದಿ ಲಕ್ಷದ್ವೀಪ ಪ್ರವಾಸೋದ್ಯಮ ಉತ್ತೇಜಿಸಿದ ಬೆನ್ನಲ್ಲೇ ಮಾಲ್ಡೀವ್ಸ್ ಭಾರತ ಹಾಗೂ ಮೋದಿ ವಿರುದ್ಧ ಅವಹೇಳನ ಕಾರಿ ಹೇಳಿಕೆ ನೀಡಿತ್ತು. ಈ ಹೇಳಿಕೆ ಕೋಲಾಹಲವನ್ನೇ ಎಬ್ಬಿಸಿತ್ತು. ಕೊನೆಗೆ ಭಾರತದ ಆಕ್ರೋಶಕ್ಕೆ ಮಾಲ್ಡೀವ್ಸ್ ಮೂವರು ಸಚಿವರು ಅಮಾನತ್ತಾಗಿದ್ದಾರೆ. ಈ ಎಲ್ಲಾ ಬೆಳವಣಿಗೆಯಿಂದ ಮಾಲ್ಡೀವ್ಸ್ ಮಾಜಿ ಅಧ್ಯಕ್ಷ ಅಹಮ್ಮದ್ ಅದೀಬ್ ಬೇಸರಗೊಂಡಿದ್ದಾರೆ. ಮಾಲ್ಡೀವ್ಸ್ ಸಚಿವರ ಹೇಳಿಕೆ ಖಂಡಿಸಿದ ಅಹಮ್ಮದ್, ಮಾಲ್ಡೀವ್ಸ್ ಪರಿಸ್ಥಿತಿ ಇಲ್ಲಿಗೆ ತಲುಪಿರುವುದು ತೀವ್ರ ಬೇಸರವಾಗಿದೆ ಎಂದಿದ್ದಾರೆ.

ಮಾಲ್ಡೀವ್ಸ್ ಕಟ್ಟುವಲ್ಲಿ ಬಾಲಿವುಡ್ ನಟ ನಟಿಯರ ಕೊಡುಗೆ ಇದೆ. ಮಾಲ್ಡೀವ್ಸ್ ಪ್ರವಾಸೋದ್ಯಮ ಈ ಮಟ್ಟಿಗೆ ಬೆಳೆಯಲು ಬಾಲಿವುಡ್ ನಟ ನಟಿಯರು ನೆರವಾಗಿದ್ದಾರೆ. ಇದೀಗ ಅದೇ ಬಾಲಿವುಡ್ ಸೆಲೆಬ್ರೆಟಿಗಳು ಮಾಲ್ಡೀವ್ಸ್ ವಿರುದ್ಧ ಕಮೆಂಟ್ ಮಾಡುತ್ತಿರುವುದು ನೋಡಿದರೆ ಬೇಸರವಾಗುತ್ತಿದೆ. ಪರಿಸ್ಥಿತಿ ಎಲ್ಲಿಗೆ ತಲುಪಿದೆ ಎಂದು ಅಹಮ್ಮದ್ ಪ್ರಶ್ನಿಸಿದ್ದಾರೆ.

Tap to resize

Latest Videos

ಆಕ್ರೋಶಕ್ಕೆ ಬೆಚ್ಚಿದ ಮಾಲ್ಡೀವ್ಸ್ ಸರ್ಕಾರ, ಭಾರತ-ಪ್ರಧಾನಿ ಮೋದಿ ನಿಂದಿಸಿದ ಸಚಿವರು ವಜಾ!

ಭಾರತ ಹಾಗೂ ಮೋದಿ ವಿರುದ್ಧ ಮಾಲ್ಡೀವ್ಸ್ ಸಚಿವರು ನಿಂದನೆ, ಅವಹೇಳನ ಮಾತುಗಳನ್ನಾಡಿದ ಬೆನ್ನಲ್ಲೇ ಅಹಮ್ಮದ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಈ ಹೇಳಿಕೆಗಳನ್ನು ಖಂಡಿಸಿದ್ದರು. ಇಷ್ಟೇ ಅಲ್ಲ ಸರ್ಕಾರ ಈ ಹೇಳಿಕೆಯಿಂದ ದೂರ ಇರಬೇಕು. ಇದು ಸಚಿವರ ವೈಯುಕ್ತಿಕ ಅಭಿಪ್ರಾಯ, ಸರ್ಕಾರದ ಅಭಿಪ್ರಾಯವಲ್ಲ ಅನ್ನೋದು ಸ್ಪಷ್ಟಪಡಿಸಬೇಕು. ಇಷ್ಟೇ ಅಲ್ಲ, ಸಚಿವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದರು.

ಮಾಲ್ಡೀವ್ಸ್ ಪ್ರವಾಸೋದ್ಯಮ ಹಲವು ತತ್ವಗಳ ಆಧಾರ ಮೇಲೆ ನಿಂತಿದೆ. ಅತ್ಯುತ್ತಮ ಆತಿಥ್ಯ, ಶಾಂತಿ ಸಾಮರಸ್ಯ ಇಲ್ಲಿ ನೆಲೆಸಿದೆ. ಮಾಲ್ಡೀವ್ಸ್ ಬೆಳವಣಿಗೆಯಲ್ಲಿ ಭಾರತ ಸೇರಿದಂತೆ ಹಲವು ದೇಶಗಳ ಕೊಡುಗೆ ಇದೆ. ಜಾಗತಿಕ ಬ್ರ್ಯಾಂಡ್ ಇಲ್ಲಿ ಹೂಡಿಕೆ ಮಾಡಿದೆ. ಐಷಾರಾಮಿ ರೆಸಾರ್ಟ್ ಇಲ್ಲಿವೆ. ನೆರೆಯ ದೇಶಗಳೊಂದಿಗೆ ಅತ್ಯುತ್ತಮ ಸಂಬಂಧ ಉಳಿಸಿಕೊಳ್ಳುವುದು ಅತೀ ಮುಖ್ಯ ಎಂದು ಅಹಮ್ಮದ ಅದೀಬ್ ಹೇಳಿದ್ದಾರೆ.

 

Boycott Maldives ಅಭಿಯಾನಕ್ಕೆ ಕೈಜೋಡಿಸಿದ ಸಚಿನ್, ಅಕ್ಷಯ್; ಕಂಗಾಲಾದ ವಿದೇಶಿ ಪ್ರವಾಸೋದ್ಯಮ!

ಮೋದಿ ಲಕ್ಷದ್ವೀಪ ಪ್ರವಾಸೋದ್ಯಮ ಉತ್ತೇಜಿಸಿದ ಬೆನ್ನಲ್ಲೇ ಮಾಲ್ಡೀವ್ಸ್ ಸಚಿವರು ನಿಂದಿಸಿದ್ದಾರೆ. ಇದರಿಂದ ಭಾರತದಲ್ಲಿ ಬಹುತೇಕ ಬಾಲಿವುಡ್ ಸೆಲೆಬ್ರೆಟಿಗಳು ಲಕ್ಷದ್ವೀಪ ಸೇರಿದಂತೆ ಭಾರತೀಯ ಪ್ರವಾಸೋದ್ಯಮ ಉತ್ತೇಜಿಸಲು ಕರೆ ನೀಡಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಬಾಯ್ಕಾಟ್ ಮಾಲ್ಡೀವ್ಸ್ ಅಭಿಯಾನಕ್ಕೆ ಬಾರಿ ಬೆಂಬಲ ಸಿಕ್ಕಿತ್ತು. ಹಲವು ಭಾರತೀಯರು ಮಾಲ್ಡೀವ್ಸ್ ಪ್ರವಾಸ ರದ್ದು ಮಾಡಿ ತಮ್ಮ ಆಕ್ರೋಶ ಹೊರಹಾಕಿದ್ದರು. ಇವೆಲ್ಲಾ ಬೆಳವಣಿಗೆಯಿಂದ ಮಾಲ್ಡೀವ್ಸ್ ಬೆಚ್ಚಿ ಬಿದ್ದಿತ್ತು. ತಕ್ಷಣವೇ ಮೂವರು ಸಚಿವರನ್ನು ಅಮಾನತು ಮಾಡಿದೆ.  

click me!