
ತೆಹ್ರನ್(ಫೆ.21): ತರಭೇತಿ ಯುದ್ಧ ವಿಮಾನ ಅಪಘಾತಕ್ಕೀಡಾಗಿ(Military fighter jet) ನೇರವಾಗಿ ಶಾಲೆ ಮೇಲೆ ಬಿದ್ದ ಘಟನೆ ಇರಾನ್(Iran) ರಾಜಧಾನಿ ತೆಹ್ರನ್‌ನಲ್ಲಿ ನಡೆದಿದೆ. ಇರಾನ್‌ನ F-5 ಫೈಟರ್ ಜೆಟ್ ವಿಮಾನದಲ್ಲಿ ಯೋಧರಿಗೆ ತರಬೇತಿ ನೀಡಲಾಗುತ್ತಿತ್ತು. ಈ ವೇಳೆ ಸಂಭವಿಸಿದ ಕೆಲ ದೋಷಗಳಿಂದ ವಿಮಾನ ಅಪಘಾತಕ್ಕೆ ಈಡಾಗಿದೆ. ಅಪಘಾತಕ್ಕೀಡಾದ ವಿಮಾನ ನೇರವಾಗಿ ತಬ್ರಿಜ್‌ನಲ್ಲಿರುವ ಶಾಲೆಯ(School) ಮೇಲೆ ಬಿದ್ದಿದೆ. ಪರಿಣಾಮ ಇಬ್ಬರು ಯೋಧರು ಸಾವನ್ನಪ್ಪಿದ್ದಾರೆ.
ತೆಹ್ರಾನ್ ನಗದರ ಉತ್ತರ ಭಾಗದಲ್ಲಿರುವ ತಬ್ರಿಜ್‌ನಲ್ಲಿ ಈ ಘಟನೆ ಸಂಭವಿಸಿದೆ. ಇರಾನ್ ಮಿಲಿಟರಿ ಸೈನ್ಯದ ತರಬೇತಿ ಯುದ್ಧವಿಮಾನ F-5 ಫೈಟರ್ ಜೆಟ್ ಇಬ್ಬರು ಪೈಲೆಟ್‌ಗೆ ತರಭೇತಿ ನೀಡುತ್ತಿದ್ದ ವೇಳೆ ಯುದ್ಧ ವಿಮಾನದಲ್ಲಿ ಕೆಲ ದೋಷಗಳು ಕಾಣಿಸಿಕೊಂಡಿದೆ. ಇದರಿಂದ ಅವಘಡ ಸಂಭವಿಸಿದೆ. ನಿಯಂತ್ರಣ ಕಳೆದುಕೊಂಡ ಯುದ್ಧ ವಿಮಾನ ಶಾಲೆ ಮೇಲೆ ಬಿದ್ದಿದೆ. ಆದರೆ ಕೊರೋನಾ ವೈರಸ್ ಹೆಚ್ಚಾಗಿರುವ ಕಾರಣ ಶಾಲೆಗೆ ರಜೆ ಘೋಷಿಸಲಾಗಿತ್ತು. ಹೀಗಾಗಿ ಶಾಲೆಯಲ್ಲಿ ಮಕ್ಕಳು, ಸಿಬ್ಬಂದಿಗಳು ಸೇರಿದಂತೆ ಯಾರು ಇರಲಿಲ್ಲ. ಹೀಗಾಗಿ ಅಪಾಯದ ತೀವ್ರತೆ ಕಡಿಮೆಯಾಗಿದೆ.
CDS Gen Rawat's helicopter crash: ಸಿಒಐ ತನಿಖೆಯಲ್ಲಿ ಬಹಿರಂಗವಾಯ್ತು ಅಪಘಾತದ ಕಾರಣ!
ಶಾಲೆ ಮೇಲೆ ವಿಮಾನ ಬಿದ್ದ ಕಾರಣ ಇಬ್ಬರು ಪೈಲೆಟ್ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಇನ್ನು ಶಾಲೆಯ ಕಟ್ಟಡಕ್ಕೆ ಬಡಿದ ಹೊತ್ತಿ ಉರಿದ ವಿಮಾನದಿಂದ ಪಕ್ಕದಲ್ಲಿದ್ದ ಸ್ಥಳೀಯರೊಬ್ಬರಿಗೆ ತೀವ್ರವಾಗಿ ಗಾಯಗಳಾಗಿದೆ. ತಕ್ಷಣ ಆಸ್ಪತ್ರೆ ದಾಖಲಿಸಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ಘಟನೆಯಲ್ಲಿ ಇಬ್ಬರು ಯೋಧರು ಹಾಗೂ ಓರ್ವ ಸ್ಥಳೀಯ ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ.
ಶಾಹಿದ್ ಫಕೌರಿ ಏರ್‌ಬೇಸ್‌ನಿಂದ ಈ ಯುದ್ಧ ವಿಮಾನ ಹಾರಾಟ ನಡೆಸಿತ್ತು. ಹಾರಾಟ ನಡೆಸಿದ ಕೆಲ ಹೊತ್ತಲ್ಲೇ ಯುದ್ಧ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಈ ವೇಳೆ ಇಬ್ಬರು ಪೈಲೆಟ್ ವಿಮಾನವನ್ನು ಮತ್ತೆ ಏರ್‌ಬೇಸ್‌ನಲ್ಲಿ ಲ್ಯಾಂಡ್ ಮಾಡಲು ಮುಂದಾಗಿದ್ದಾರೆ. ಆದರೆ ದೋಷ ದಿಢೀರ್ ಹೆಚ್ಚಾಗಿದೆ. ವಿಮಾನ ನಿಯಂತ್ರಣ ಕಳೆದುಕೊಳ್ಳಲು ಆರಂಭಿಸಿದೆ. ಹೀಗಾಗಿ ತುರ್ತು ಭೂಸ್ಪರ್ಶ ಮಾಡಲು ಮುಂದಾಗಿದ್ದಾರೆ. ಆದರೆ ನಗರದಲ್ಲಿ ಸೂಕ್ತ ಲ್ಯಾಂಡಿಂಗ್ ಕಾಣದಾಗಿದೆ. ಅಷ್ಟರಲ್ಲೇ ವಿಮಾನ ಶಾಲಾ ಕಟ್ಟಡಕ್ಕೆ ಡಿಕ್ಕಿ ಹೊಡೆದಿದೆ.
MiG-21 Crash in Rajasthan : ಪೈಲಟ್ ದುರ್ಮರಣ, ವರ್ಷದ ಐದನೇ ಘಟನೆ!
ಇರಾನ್‌ನಲ್ಲಿ ಮಿಲಿಟರಿ ಯುದ್ಧ ವಿಮಾನ ಅಪಘಾತ ಇದೀಗ ಹಲವು ಚರ್ಚೆಗಳಿಗೆ ಆಸ್ಪದ ನೀಡಿದೆ. 2019ರ ಜನವರಿಯಲ್ಲಿ ಇರಾನ್ ಮಿಲಿಟರಿ ಕಾರ್ಗೋ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡು ಅಪಘಾತಕ್ಕೀಡಾಗಿತ್ತು. ಈ ಘಟನೆಯಲ್ಲಿ 15 ಮಂದಿ ಸಾವನ್ನಪ್ಪಿದ್ದರು. ಈ ಘಟನೆ ಬಳಿಕ ಇದೀಗ ಮತ್ತೊಂದು ಕಹಿ ಘಟನೆ ಇರಾನ್‌ನಲ್ಲಿ ನಡೆದಿದೆ.
ಇರಾನ್ ಮಿಲಿಟರಿ ಸೈನ್ಯದಲ್ಲಿ ರಷ್ಯಾದ MiG-29, ಅಮೆರಿಕದ F-4 ಹಾಗೂ F-5 ಫೈಟರ್ ಜೆಟ್, ಫ್ರಾನ್ಸ್ ಸೇರಿದಂತೆ ಪ್ರಮುಖ ಯುದ್ಧವಿಮಾನಗಳು ಇರಾನ್ ಸೈನ್ಯದಲ್ಲಿದೆ. ಇನ್ನು 2006ರಲ್ಲಿ ಇರಾನ್ ಸ್ವದೇಶಿ ನಿರ್ಮಿತ ಲೈಟರ್ ಫೈಟರ್ ಜೆಟ್ ಅಭಿವೃದ್ಧಿ ಮಾಡಿತು. ಇದಾದ ಬಳಿಕ ಇರಾನ್ ಹಲವು ಯುದ್ಧ ವಿಮಾನ ಹಾಗೂ ಹೆಲಿಕಾಪ್ಟರ್ ಅಭಿವೃದ್ಧಿ ಮಾಡಿದೆ.
ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಯುದ್ಧ ವಿಮಾನ, ಮಿಲಿಟರಿ ಹೆಲಿಕಾಪ್ಟರ್ ಅಪಘಾತ ಸಂಭವಿಸುತ್ತಿದೆ. ಇತ್ತೀಚೆಗೆ ಭಾರತದಲ್ಲಿ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಪ್ರಯಾಣಿಸುತ್ತಿದ್ದ ಸೇನಾ ಹೆಲಿಕಾಪ್ಟರ್ ನಿಲಿಗಿರಿಯಲ್ಲಿ ಅಪಘಾತಕ್ಕೀಡಾಗಿತ್ತು. ಈ ಘಟನೆ ವಿಶ್ವ ಮಟ್ಟದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ