: ಒಬ್ಬ ಕುಡುಕ 24 ಗಂಟೆಯಲ್ಲಿ ಎಷ್ಟು ಪಬ್‌ಗಳಿಗೆ ಭೇಟಿ ನೀಡಬಹುದು ಎಷ್ಟು ಕುಡಿಯಬಹುದು ಎಂದು ಕೇಳಿದರೆ, ಎರಡು ಮೂರು ಐದು ಅಥವಾ ಇದು ಡಿಪೆಂಡ್ಸ್ ಆನ್ ಕುಡುಕನ ಕೆಪಾಸಿಟಿ ಅಂತ ಬಹುತೇಕ ಕುಡುಕರು ಹೇಳಬಹುದು. ಆದರೆ ಇಲ್ಲೊಂದು ಕಡೆ ಕುಡುಕನೋರ್ವ 24 ಗಂಟೆಯಲ್ಲಿ ಬರೋಬ್ಬರಿ 78 ಪಬ್‌ಗಳಿಗೆ ಹೋಗಿ ಕುಡಿಯುವ ಮೂಲಕ ಗಿನ್ನೆಸ್ ವಿಶ್ವದಾಖಲೆಯನ್ನು ನಿರ್ಮಿಸಿದ್ದಾನೆ.
ಮೆಲ್ಬೋರ್ನ್: ಒಬ್ಬ ಕುಡುಕ 24 ಗಂಟೆಯಲ್ಲಿ ಎಷ್ಟು ಪಬ್‌ಗಳಿಗೆ ಭೇಟಿ ನೀಡಬಹುದು ಎಷ್ಟು ಕುಡಿಯಬಹುದು ಎಂದು ಕೇಳಿದರೆ, ಎರಡು ಮೂರು ಐದು ಅಥವಾ ಇದು ಡಿಪೆಂಡ್ಸ್ ಆನ್ ಕುಡುಕನ ಕೆಪಾಸಿಟಿ ಅಂತ ಬಹುತೇಕ ಕುಡುಕರು ಹೇಳಬಹುದು. ಆದರೆ ಇಲ್ಲೊಂದು ಕಡೆ ಕುಡುಕನೋರ್ವ 24 ಗಂಟೆಯಲ್ಲಿ ಬರೋಬ್ಬರಿ 78 ಪಬ್‌ಗಳಿಗೆ ಹೋಗಿ ಕುಡಿಯುವ ಮೂಲಕ ಗಿನ್ನೆಸ್ ವಿಶ್ವದಾಖಲೆಯನ್ನು ನಿರ್ಮಿಸಿದ್ದಾನೆ.
ಇತ್ತೀಚೆಗೆ ಚಿತ್ರ ವಿಚಿತ್ರ ಕಾರಣಕ್ಕೆ ಗಿನ್ನೆಸ್ ದಾಖಲೆ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ಕೆಲ ದಿನಗಳ ಹಿಂದಷ್ಟೇ ವ್ಯಕ್ತಿಯೊಬ್ಬ ಖಾರವಾದ ಮೆಣಸು ತಿಂದು ಗಿನ್ನೆಸ್ ದಾಖಲೆ ನಿರ್ಮಿಸಿದ್ದ. ಅದೇ ರೀತಿ ಈಗ ಆಸ್ಟ್ರೇಲಿಯಾದ ವ್ಯಕ್ತಿಯೊಬ್ಬ 24 ಗಂಟೆಯಲ್ಲಿ ಮೆಲ್ಬೋರ್ನ್‌ನ 78 ಪಬ್‌ಗಳಿಗೆ ಭೇಟಿ ನೀಡಿ ಅಲ್ಲಿ ಕುಡಿದು ವಿಶ್ವ ದಾಖಲೆ ನಿರ್ಮಿಸಿದ್ದಾರೆ. ದಕ್ಷಿಣ ಆಫ್ರಿಕಾ ಮೂಲದ ಸ್ಥಳೀಯ ಹೆನ್ರಿಚ್ ಡಿ ವಿಲಿಯರ್ಸ್ ಈ ಸಾಧನೆ ಮಾಡಿದವರು. ಕೆಲ ದಿನಗಳ ಹಿಂದೆ ಇಂಗ್ಲೆಂಡ್‌ನ ಬ್ರೈಟನ್‌ನಲ್ಲಿ ನಾಥನ್ ಕ್ರಿಂಪ್ ಅವರು 24 ಗಂಟೆಯಲ್ಲಿ 67 ವಿವಿಧ ಪಬ್‌ಗಳಿಗೆ ಭೇಟಿ ನೀಡಿ ಮದ್ಯ ಸೇವಿಸಿ ಮಾಡಿದ ಸಾಧನೆಯನ್ನು ಹೆನ್ರಿಚ್ ಡಿ ವಿಲಿಯರ್ಸ್ ಮುರಿಯುವ ಮೂಲಕ ಹೊಸ ವಿಶ್ವದಾಖಲೆ ನಿರ್ಮಿಸಿದ್ದಾರೆ.
ಕೋಲಾರ: ಪಾರಿವಾಳಕ್ಕಾಗಿ ನಡೆದ ಕಾಳಗ, ಸಿಕ್ಕ ಸಿಕ್ಕವರ ಮೇಲೆ ಕುಡುಕನಿಂದ ಹಲ್ಲೆ..!
ವಿಶ್ವದಾಖಲೆ ನಿರ್ಮಿಸುವ ಸಲುವಾಗಿ 24 ಗಂಟೆಯ ಅವಧಿಯಲ್ಲಿ ಹೆನ್ರಿಚ್ ಡಿ ವಿಲಿಯರ್ಸ್ ಮೆಲ್ಬೋರ್ನ್‌ನಾದ್ಯಂತ 78 ಪಬ್‌ಗಳಲ್ಲಿ ಪಾನೀಯ ಸೇವಿಸಿದ್ದಾರೆ. ಪಬ್ ಕ್ರಾಲ್ (A pub crawl) ಅಥವಾ ಪಬ್ ಓಟ ಎನ್ನುವುದು ಒಂದು ಅವಧಿಯಲ್ಲಿ ಮದ್ಯವನ್ನು ಮಾರಾಟ ಪರವಾನಗಿ ಪಡೆದಿರುವ ಹಲವು ಪಬ್‌ಗಳು ಅಥವಾ ಇತರ ಸಂಸ್ಥೆಗಳಿಗೆ ಒಂದೇ ದಿನ ಭೇಟಿ ನೀಡುವ ಪ್ರಕ್ರಿಯೆಯಾಗಿದೆ. ಈ ವೇಳೆ ಎಲ್ಲಾ ಪಬ್‌ನಲ್ಲೂ ನೀವು ಅಲ್ಕೋಹಾಲ್ ಸೇವಿಸಬೇಕು ಹಾಗೂ ಮದ್ಯದ ಮತ್ತಿನಲ್ಲಿ ಎಲ್ಲೂ ಅತ್ತಿತ್ತ ವಾಲದೇ ಸಾಧನೆಯನ್ನು ಗಮನದಲ್ಲಿಟ್ಟುಕೊಂಡು ಮತ್ತೊಂದು ಪಬ್‌ಗೆ ಭೇಟಿ ನೀಡಬೇಕು. ಅಲ್ಲೂ ಕುಡಿಯಬೇಕು.
ಕುಡುಕಿಯ ಅವಾಂತರ : ವಿಮಾನ ತುರ್ತು ಭೂಸ್ಪರ್ಶ
ಹೊಸದಾಗಿ ಈ ಸಾಧನೆ ಮಾಡಿದ ಹೆನ್ರಿಚ್ ಡಿ ವಿಲಿಯರ್ಸ್ ಅವರು ಈ ವೇಳೆ ತಮ್ಮ ನೆರವಿಗಾಗಿ ಅವರ ಕಿರಿಯ ಸಹೋದರ ರುವಾಲ್ಡ್ ಡಿ ವಿಲಿಯರ್ಸ್ (Ruald de Villiers) ಮತ್ತು ಸ್ನೇಹಿತ ವೆಸೆಲ್ ಬರ್ಗರ್ (Wessel Burger) ಅವರನ್ನು ಜೊತೆಗೆ ಕರೆದೊಯ್ದಿದ್ದರು. ಗಿನ್ನಿಸ್ ವರ್ಲ್ಡ್ ರೆಕಾರ್ಡ್ ನಿಯಮಗಳ ಪ್ರಕಾರ, ನಾವು ಭೇಟಿ ನೀಡಿದ ಪ್ರತಿ ಸ್ಥಳದಲ್ಲಿ ನಾವು ಯಾವುದೇ ಪಾನೀಯವನ್ನು 125 ಮಿಲಿಲೀಟರ್ [4.2 ಔನ್ಸ್] ಮಾತ್ರ ಸೇವಿಸಬೇಕಾಗಿತ್ತು ಎಂದು ಡಿವಿಲಿಯರ್ಸ್ ಅವರು ತಮ್ಮ ಬಹಳ ಪರಿಶ್ರಮದ ಈ ಸಾಧನೆ ಬಗ್ಗೆ ಹೇಳಿಕೊಂಡರು. ಮೆಲ್ಬೋರ್ನ್‌ನಲ್ಲಿ ಫೆಬ್ರವರಿ 10 ರಿಂದ 11 ರಂದು ಈ ಸಾಧನೆ ಮಾಡಲಾಗಿದೆ ಎಂದು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ (Guinness World Record) ಸಂಸ್ಥೆ ಹೇಳಿದೆ. ಇದಕ್ಕೂ ಮೊದಲು ಯುನೈಟೆಡ್ ಕಿಂಗ್‌ಡಮ್‌ನ ಕಾರ್ಡಿಫ್‌ನ ವ್ಯಕ್ತಿಯೊಬ್ಬರು 17 ಗಂಟೆಗಳಲ್ಲಿ 56 ಪಬ್‌ಗಳಲ್ಲಿ ಮದ್ಯ ಸೇವಿಸಿದ್ದರು.
17 ಗಂಟೆಗಳಲ್ಲಿ 67 ಪಬ್‌ಗಳಲ್ಲಿ ಕುಡಿದು Guinness Record..!