ಸ್ಪಿರೀಟ್ ಗೇಮ್ ಆಡಲು ಹೋಗಿ ಆಸ್ಪತ್ರೆ ಸೇರಿದ ಮಕ್ಕಳು

By Anusha Kb  |  First Published Nov 13, 2022, 9:00 PM IST

ಆತ್ಮದ ಜೊತೆ ಸಂಭಾಷಣೆಯೇ? ಅದೂ ಮಕ್ಕಳಿಂದ ಇದೇನು ಎಂಬ ಗೊಂದಲ ನಿಮ್ಮಲ್ಲಿ ಮೂಡಬಹುದು. ಆದರೆ ಹಾಸ್ಟೆಲ್‌ನಲ್ಲಿ ಬೆಳೆದ ಮಕ್ಕಳು ಈ ಗೇಮ್ ಹೆಸರು ಕೇಳಿ ನಗುವಿನೊಂದಿಗೆ ನೆನಪಿನಾಳಕ್ಕೆ ಜಾರುವುದುಂಟು. ಈ ಸ್ಪಿರಿಟ್ ಗೇಮ್ ನಿಜವೋ ಸುಳ್ಳೋ ಎಂಬುದು ಗೊತ್ತಿಲ್ಲ. ಆದರೆ ಮಾನಸಿಕವಾಗಿ ದುರ್ಬಲವಾಗಿರುವವರು ಈ ಮಕ್ಕಳಾಟಕ್ಕೆ ಬಲಿಯಾಗುವುದುಂಟು. 


ಆತ್ಮದ ಜೊತೆ ಸಂಭಾಷಣೆಯೇ? ಅದೂ ಮಕ್ಕಳಿಂದ ಇದೇನು ಎಂಬ ಗೊಂದಲ ನಿಮ್ಮಲ್ಲಿ ಮೂಡಬಹುದು. ಆದರೆ ಹಾಸ್ಟೆಲ್‌ನಲ್ಲಿ ಬೆಳೆದ ಮಕ್ಕಳು ಈ ಗೇಮ್ ಹೆಸರು ಕೇಳಿ ನಗುವಿನೊಂದಿಗೆ ನೆನಪಿನಾಳಕ್ಕೆ ಜಾರುವುದುಂಟು. ಈ ಸ್ಪಿರಿಟ್ ಗೇಮ್ ನಿಜವೋ ಸುಳ್ಳೋ ಎಂಬುದು ಗೊತ್ತಿಲ್ಲ. ಆದರೆ ಮಾನಸಿಕವಾಗಿ ದುರ್ಬಲವಾಗಿರುವವರು ಈ ಮಕ್ಕಳಾಟಕ್ಕೆ ಬಲಿಯಾಗುವುದುಂಟು. 

ವಸತಿ ನಿಲಯದಲ್ಲಿ ಓದುತ್ತಿರುವ ಮಕ್ಕಳು ಓದುವುದನ್ನು ಬಿಟ್ಟು ಹಾಸ್ಟೆಲ್ ವಾರ್ಡನ್‌ಗೆ ತಿಳಿಯದಂತೆ ಸ್ನೇಹಿತರೆಲ್ಲರೂ ಸೇರಿಕೊಂಡು ಹಾಸ್ಟೆಲ್‌ನ ಕೋಣೆಯಲ್ಲಿ ಕುಳಿತು ಬಾಗಿಲು ಹಾಕಿ ದೀಪವನ್ನು ಆರಿಸಿ ಮಧ್ಯದಲ್ಲಿ ಕಾಯಿನ್ ಒಂದನ್ನು ಇರಿಸಿ ಸುತ್ತಲೂ ಐವರು ಕುಳಿತು ಸ್ಪಿರಿಟ್ ಕಮ್ ಅಥವಾ ಡೆವಿಲ್ ಕಮ್ ಎಂದು ಕಣ್ಣು ಮುಚ್ಚಿ ಕೂಗುವುದು. ಅಷ್ಟೊತ್ತಿಗೆ ಕಾಯಿನ್ ಒಳಗೆ ಆವಾಹಿಸಿಕೊಂಡ ಆತ್ಮವೊಂದು ಸುತ್ತಲೂ ಕುಳಿತ ಐವರ ಬಳಿ ಯಾರಾದರು ಒಬ್ಬರ ಬಳಿ ಬಂದು ಅವರು ಹೇಳಿದಂತೆ ಮಾಡುತ್ತದೆ ಎಂಬುದು ಮಕ್ಕಳ ನಂಬಿಕೆ.(ಇದು ನಿಜವಲ್ಲ ಆಟವಷ್ಟೇ) ಇಂತಹ ಸ್ಪಿರಿಟ್ ಗೇಮ್ ಒಂದು ಹಾಸ್ಟೆಲ್‌ನಲ್ಲಿ ಅಥವಾ ವಸತಿನಿಲಯದಲ್ಲಿ ಓದಿರುವ ಮಕ್ಕಳಿಗೆ ತಿಳಿದಿರಬಹುದು. ಟ್ರುತ್ ಆರ್ ಡೇರ್ ಗೇಮ್ ಸವಾಲು ಹಾಕಿಯೂ ಇಂತಹ ಸ್ಪೀರಿಟ್ ಗೇಮ್‌ಗೆ (Spirit Game) ತನ್ನ ಸಹಪಾಠಿಗಳನ್ನು ಎಳೆಯುವ ಮಕ್ಕಳಿದ್ದಾರೆ. ಈ ವಿಚಾರ ಈಗ್ಯಾಕೆ ಅಂತೀರಾ ಕೊಲಂಬಿಯಾದ ಶಾಲೆಯೊಂದರಲ್ಲಿ ಹೀಗೆ ಈ ಆತ್ಮದ(Soul) ಜೊತೆ ಸಂಭಾಷಣೆ ಮಾಡಲು ಮುಂದಾದ ಮಕ್ಕಳು ಪ್ರಜ್ಞೆ ತಪ್ಪಿ ಆಸ್ಪತ್ರೆ (Hospital) ಸೇರಿದ ವಿಚಿತ್ರ ಘಟನೆ ನಡೆದಿದೆ. 

Tap to resize

Latest Videos

Pitru Paksha: ನಿಮ್ಮ ಮುಂದೆ ಈ ರೂಪದಲ್ಲಿ ಕಾಣಿಸಿಕೊಳ್ತಾರೆ ಪೂರ್ವಜರು 

13 ರಿಂದ 17 ವರ್ಷ ವಯಸ್ಸಿನ ಪ್ರಾಯದ ಹನ್ನೊಂದು ಮಕ್ಕಳು ಹೀಗೆ ಓಯಿಜಾ ಬೋರ್ಡ್ ಬಳಸಿ ಸ್ಪಿರಿಟ್ ಗೇಮ್ (Spirit Game) ಆಡಲು ಹೋಗಿ ಆಸ್ಪತ್ರೆ ಸೇರಿದ್ದಾರೆ. ಓಯಿಜಾ ಬೋರ್ಡ್ ಬಳಸಿ ಆಟವಾಡಲು ಆರಂಭಿಸಿದ ಈ ಮಕ್ಕಳು ತಮ್ಮ ಕೊಲಂಬಿಯದಲ್ಲಿರುವ ಶಾಲೆಯ ಆವರಣದಿಂದ ಹೊರ ಹೋಗಿದ್ದಾರೆ. ನಂತರ ಈ ಮಕ್ಕಳು ಹ್ಯಾಟೊದಲ್ಲಿನ ಕೃಷಿ ತಾಂತ್ರಿಕ ಸಂಸ್ಥೆಯ ಆವರಣದಲ್ಲಿ ಪ್ರಜ್ಞೆ ತಪ್ಪಿದ ಸ್ಥಿತಿಯಲ್ಲಿ ಕಾಣಿಸಿಕೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಕ್ಕಳು ಹೊಟ್ಟೆ ನೋವು, ಸ್ನಾಯು ಸೆಳೆತ ಮತ್ತು ವಿಪರೀತ ವಾಂತಿಯಿಂದ ಬಳಲುತ್ತಿದ್ದರು. ಅವರು ವಿಷಾಹಾರ ಸೇವನೆಯಿಂದ  ಬಳಲುತ್ತಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.

ಈ ಬಗ್ಗೆ ಅಧಿಕೃತವಾಗಿ ಹೇಳಿಕೆ ನೀಡುವ ಮೊದಲು ಶಾಲೆಯ ಮುಖ್ಯಸ್ಥರು ಹೆಚ್ಚಿನ ವಿವರಗಳಿಗಾಗಿ ಕಾಯುತ್ತಿದ್ದಾರೆ ಎಂದು ತಿಳಿದು ಬಂದಿದೆ. ಈ ವಿದ್ಯಾರ್ಥಿಗಳು ಪತ್ತೆಯಾದ ಸಂದರ್ಭದಲ್ಲಿ  ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಜೊತೆಗೆ ಅವರ ಬಾಯಿಯಿಂದ ಜೊಲ್ಲು ಸುರಿಯುತ್ತಿತ್ತು ಎಂದು ಹ್ಯಾಟೋದ ಮೇಯರ್ ಹೇಳಿದ್ದಾರೆ. ಇದು ಈ ಆಟದ ಆವಾಂತರದಿಂದ ಆಗಿದೆ ಅಥವಾ ಆಗಿಲ್ಲ ಎಂಬುದನ್ನು ಅವರು ಸ್ಪಷ್ಟಪಡಿಸಿಲ್ಲ. ಈ ವೇಳೆ ಮಕ್ಕಳು ತಾವು ತಮ್ಮ ಬಳಿ ಇದ್ದ ನೀರು ಕುಡಿದೆವು ಎಂದು ಹೇಳಿದ್ದರೆ ಮತ್ತೆ ಕೆಲವರು ನಮಗೇ ದಾರಿಯಲ್ಲಿ ನೀರಿನ ಮೂಲವೊಂದು ಸಿಕ್ಕಿದ್ದು, ಅಲ್ಲಿ ನೀರು ಕುಡಿದೆವು ಎಂದು ಹೇಳಿದ್ದಾರೆ. ಮತ್ತೆ ಕೆಲವರು ಇನ್ಯಾರೋ ಆಹಾರ ನೀಡಿದರು ಎಂದು ಹೇಳಿದ್ದಾರೆ. 

Life after death: ಸತ್ತ ಮೇಲೆ ಆತ್ಮದ ಜೊತೆ ಏನೆಲ್ಲಾ ಹೋಗುತ್ತೆ ಗೊತ್ತಾ?

ಇನ್ನು ವಿಚಾರಣೆ ವೇಳೆ ವಿದ್ಯಾರ್ಥಿಗಳು ತಾವು ಎಲ್ಲರೂ ಒಂದೇ ಗ್ಲಾಸ್‌ನಿಂದ ನೀರು ಕುಡಿದೆವು ಎಂದು ಹೇಳಿದ್ದಾರೆ. ಅಲ್ಲದೇ ತಾವು ಒಯಿಜಾ ಬೋರ್ಡ್ ಮೂಲಕ ಆಟವಾಡುತ್ತಿದ್ದೆವು ಎಂದು ಹೇಳಿದ್ದಾರೆ. ಒಯಿಜಾ ಬೋರ್ಡ್ ಎಂಬುದು ಜನಪ್ರಿಯವಾಗಿರುವ ಸ್ಪಿರಿಟ್ ಗೇಮ್ ಆಗಿದ್ದು, ಇದು ಸತ್ತವರ ಆತ್ಮದೊಂದಿಗೆ ಸಂಭಾಷಣೆ ನಡೆಸಲು ಇರುವ ಉಪಕರಣ ಎಂದು ನಂಬಲಾಗಿದೆ. ಸತ್ತವರ ಆತ್ಮವನ್ನು ಈ ಬೋರ್ಡ್‌ಗೆ ಕರೆದಾಗ ಅದು ಬಂದು ತಾವು ಕರೆದವರು ಕೇಳುವ ಪ್ರಶ್ನೆಗೆ ಉತ್ತರಿಸುತ್ತದೆಯಂತೆ. 

ಅದೇನೆ ಇರಲಿ ಆತ್ಮ ಪರಮಾತ್ಮ, ಆಧ್ಮಾತ್ಮ ಎಂಬುದರ ಬಗ್ಗೆ ಇದೂ ಹೀಗೆಯೇ ಎಂಬುದನ್ನು ಯಾರಿಗೂ ಹೇಳಲಾಗದು. ಸಮುದ್ರಕ್ಕಿಂತಲೂ ಆಗಾಧವಾದ ಅಧ್ಯಯನ ಬಯಸುವ ಕ್ಷೇತ್ರ ಇದಾಗಿದ್ದು, ನಮ್ಮ ನಿಮ್ಮಂತಹ ಸಾಮಾನ್ಯ ಹುಲು ಮಾನವರು ಈ ಬಗ್ಗೆ ಏನು ಹೇಳಲಾಗದು. 
 

click me!