ಆಸ್ಟ್ರೇಲಿಯಾದ ಕ್ರೂಸ್ ಹಡಗಿನಲ್ಲಿ ಪ್ರಯಾಣಿಸುತ್ತಿದ್ದ ಬರೋಬ್ಬರಿ 800 ಮಂದಿ ಕೋವಿಡ್ ನಿಂದ ಬಳಲುತ್ತಿದ್ದಾರೆ. ಸದ್ಯ ಈ ವಿಹಾರ ನೌಕೆಯು ಸಿಡ್ನಿ ಬಂದರಿನಲ್ಲಿ ಲಂಗರು ಹಾಕಿದ್ದು , ಇದು ಅತ್ಯಂತ ಅಪಾಯಕಾರಿ ಪರಿಸ್ಥಿತಿಯಾಗಿದೆ ಎಂದು ಆಸ್ಟ್ರೇಲಿಯಾ ಅಧಿಕಾರಿಗಳು ಹೇಳಿದ್ದಾರೆ.
ಸಿಡ್ನಿ (ನ.13): ಆಸ್ಟ್ರೇಲಿಯಾದ ಕ್ರೂಸ್ ಹಡಗಿನಲ್ಲಿ ಪ್ರಯಾಣಿಸುತ್ತಿದ್ದ ಬರೋಬ್ಬರಿ 800 ಮಂದಿ ಕೋವಿಡ್ ನಿಂದ ಬಳಲುತ್ತಿದ್ದಾರೆ. ಸದ್ಯ ಈ ವಿಹಾರ ನೌಕೆಯು ಸಿಡ್ನಿ ಬಂದರಿನಲ್ಲಿ ಲಂಗರು ಹಾಕಿದ್ದು , ಇದು ಅತ್ಯಂತ ಅಪಾಯಕಾರಿ ಪರಿಸ್ಥಿತಿಯಾಗಿದೆ ಎಂದು ಆಸ್ಟ್ರೇಲಿಯಾ ಅಧಿಕಾರಿಗಳು ಹೇಳಿದ್ದಾರೆ. ಆ ಹಡಗಿನಲ್ಲಿ ಒಟ್ಟು 4,200 ಮಂದಿ ಪ್ರಯಾಣಿಸುತ್ತಿದ್ದಾರೆಂದು ಕ್ರೂಸ್ ಆಪರೇಟರ್ ಕಾರ್ನಿವಲ್ ಅವರು ಆಸ್ಟ್ರೇಲಿಯಾದ ಅಧ್ಯಕ್ಷ ಮಾರ್ಗರೇಟ್ ಫಿಟ್ಜ್‌ಗೆರಾಲ್ಡ್ ಅವರಿಗೆ ಮಾಹಿತಿ ನೀಡಿದ್ದಾರೆ. ಕೋವಿಡ್ ಬಂದಿರುವ ಪರಿಣಾಮ 12 ದಿನಗಳ ಪ್ರಯಾಣವು ಅರ್ಧದಾರಿಯಲ್ಲೇ ಮುಗಿದಿದೆ. ಸೋಂಕು ನಿಯಂತ್ರಣಕ್ಕೆ ಬಾಕಾಗಿರುವ ಎಲ್ಲಾ ಕ್ರಮಗಳು ಸಮರ್ಪಕವಾಗಿ ಮಾಡಲಾಗಿದೆ. ಆದರೆ `ಟೈರ್-3' ಮಟ್ಟದ ಅಪಾಯ ಇದಾಗಿದ್ದು ಅತ್ಯಂತ ಹೆಚ್ಚಿನ ಮಟ್ಟದಲ್ಲಿ ಸೋಂಕು ಪ್ರಸರಣಗೊಳ್ಳುವ ಅಪಾಯವಿದೆ ಎಂದು ಆಸ್ಟ್ರೇಲಿಯಾದ ಗೃಹ ವ್ಯವಹಾರಗಳ ಸಚಿವಾಲಯ ವರದಿ ಹೇಳಿದೆ. ಪರೀಕ್ಷೆಗಳು ಪಾಸಿಟಿವ್ ಆಗಿದೆ. ಸೋಂಕು ತಗಲಿರುವ ಎಲ್ಲರನ್ನೂ ಕ್ವಾರಂಟೈನ್ ಮಾಡಲಾಗಿದ್ದು, ಹಡಗಿನಲ್ಲಿ ಸೂಕ್ತ ವ್ಯವಸ್ಥೆ ಮಾಡಲಾಗಿದೆ ಎಂದು ವೈದ್ಯಕೀಯ ತಂಡ ತಿಳಿಸಿದೆ.
2020ರಲ್ಲಿ ಇದೇ ರೀತಿ ನ್ಯೂ ಸೌತ್‌ವೇಲ್ಸ್ ಬಂದರಿನಲ್ಲಿ ಲಂಗರು ಹಾಕಿದ್ದ ರೂಬಿ ಪ್ರಿನ್ಸೆಸ್ ನೌಕೆಯಲ್ಲಿದ್ದ ಪ್ರವಾಸಿಗರಲ್ಲಿ ಕೊರೋನ ಸೋಂಕಿನ ಪ್ರಕರಣ ದೃಢಪಟ್ಟಿತ್ತು. ಸಮಯದಲ್ಲಿ ಹಡಗಿನಲ್ಲಿದ್ದ 914 ಮಂದಿಗೆ ಕೋವಿಡ್ ಸೋಂಕು ತಗುಲಿತ್ತು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ಅದರಲ್ಲಿ 28 ಮಂದಿ ಸಾವನ್ನಪ್ಪಿದ್ದರು. ಮತ್ತೆ, ಇದೀಗ ಹಡಗಿನಲ್ಲಿ ಇಷ್ಟು ದೊಡ್ಡ ಸಂಖ್ಯೆಯ ಕೋವಿಡ್ ಪ್ರಕರಣಗಳು ಬೆಳಕಿಗೆ ಬಂದಿವೆ.
ಆಸ್ಟ್ರೇಲಿಯಾದಾದ್ಯಂತ COVID-19 ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ , ಒಮಿಕ್ರೋನ್‌ನ ಎಕ್ಸ್‌ಬಿಬಿ ರೂಪಾಂತರಿ ಸಮುದಾಯ ಪ್ರಸರಣದ ಹಂತದಲ್ಲಿದ್ದು, ದಿನೇ ದಿನೇ ಕೋವಿಡ್ ಕೇಸುಗಳಲ್ಲಿ ಏರಿಕೆಯಾಗುತ್ತಿದೆ. ಇದರ ಬೆನ್ನಲ್ಲೇ ಕ್ರೂಸ್‌ನಲ್ಲಿದ್ದವರಿಗೂ ಸೋಂಕು ತಗುಲಿದ ಹಿನ್ನೆಲೆಯಲ್ಲಿ ಆಸ್ಪ್ರೇಲಿಯಾದ ಗೃಹ ಸಚಿವರು ಶನಿವಾರ ಜನರಿಗೆ ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಲು ಕರೆ ನೀಡಿದ್ದಾರೆ.
ಯುದ್ಧ ನಿಲ್ಲಿಸುವ ಮಾರ್ಗೋಪಾಯ: ಉಕ್ರೇನ್ ಸಚಿವರ ಜತೆ ಜೈಶಂಕರ್ ಚರ್ಚೆ
ಫ್ನೋಮ್ ಪೆಮ್ (ಕಾಂಬೋಡಿಯಾ): ಭಾರತೀಯ ವಿದೇಶಾಂಗ ಸಚಿವ ಎಸ್.ಜೈಶಂಕರ್ ಉಕ್ರೇನ್ ವಿದೇಶಾಂಗ ಸಚಿವ ಡಿಮಿಟ್ರೋ ಕುಲೇಬಾರನ್ನು ಭೇಟಿ ಮಾಡಿ ರಷ್ಯಾ-ಉಕ್ರೇನ್ ಯುದ್ಧ ನಿಲ್ಲಿಸುವ ಮಾರ್ಗೋಪಾಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಇಲ್ಲಿ ನಡೆದ 17ನೇ ಪೂರ್ವ ಆಸಿಯಾನ್-ಭಾರತ ಶೃಂಗ ಸಭೆಯಲ್ಲಿ ಜೈಶಂಕರ್ ಕುಲೇಬಾರನ್ನು ಭೇಟಿಯಾಗಿದ್ದಾರೆ.
ದ್ವಿ ಪಕ್ಷೀಯ ಸಹಕಾರ, ಅಣ್ವಸ್ತ್ರ ಭೀತಿ ಹಾಗೂ ಜಾಗತಿಕ ಆಹಾರ ಭದ್ರತೆಯ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಸಿದೆವು ಎಂದು ಜೈಶಂಕರ್ ಟ್ವೀಟ್ ಮಾಡಿದ್ದಾರೆ.
ಆರೋಗ್ಯ ಬಿಕ್ಕಟ್ಟು ಎದುರಿಸಲು ರಾಜ್ಯ ಸಮರ್ಥ: ಸಚಿವ ಸುಧಾಕರ್
ಇನ್ನು ‘ರಷ್ಯಾ ತಕ್ಷಣವೇ ಉಕ್ರೇನ್ ಮೇಲಿನ ಮಾರಣಾಂತಿಕ ದಾಳಿಗಳನ್ನು ನಿಲ್ಲಿಸಬೇಕು ಎಂದು ಸಭೆಯಲ್ಲಿ ನಾವು ಒತ್ತಿ ಹೇಳಿದೆವು ಹಾಗೂ ರಷ್ಯಾ ಶೀಘ್ರ ಸೇನೆಯನ್ನು ಹಿಂತೆಗೆದುಕೊಳ್ಳುವ ಬಗ್ಗೆ ಚರ್ಚೆ ನಡೆಸಿದೆವು’ ಎಂದು ಡಿಮಿಟ್ರೋ ಹೇಳಿದ್ದಾರೆ.
ಕುಸಿದ ಬೇಡಿಕೆ, 50 ಮಿಲಿಯನ್ ಕೋವಾಕ್ಸಿನ್ ಲಸಿಕೆ ನಿಷ್ಕ್ರೀಯಕ್ಕೆ ಭಾರತ್ ಬಯೋಟೆಕ್ ಸಿದ್ಧತೆ
ಈ ಮುಂಚೆಯೂ ಫೆಬ್ರವರಿಯಲ್ಲಿ ರಷ್ಯಾ-ಉಕ್ರೇನ್ ಯುದ್ಧ ಪ್ರಾರಂಭವಾದಗಲೂ ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹಾಗೂ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಜೆಲೆನ್ಸ್‌ಕಿ ಜೊತೆ ಸಾಕಷ್ಟುಬಾರಿ ಕರೆ ಮಾಡಿ ಮಾತುಕತೆಯಿಂದ ಬಗೆಹರಿಸಿಕೊಳ್ಳಲು ಒತ್ತಾಯಿಸಿದ್ದರು.