ಸುಮ್ನೆ ಅಲ್ಲ ಹಿಟ್ಲರ್‌ ಯಹೂದಿಗಳ ಮರಣಹೋಮ ಮಾಡಿದ್ದು ಎಂದ ಬ್ಯಾಂಕ್ ಉದ್ಯೋಗಿ ಮನೆಗೆ

By Anusha Kb  |  First Published Oct 20, 2023, 5:04 PM IST

ಸುಮ್ಮನೇ ಅಲ್ಲ ಯಹೂದಿಗಳನ್ನು ಹಿಟ್ಲರ್‌ ಮಾರಣಹೋಮ ಮಾಡಿದ್ದು, ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಬ್ಯಾಂಕ್ ಉದ್ಯೋಗಿಯೋರ್ವಳನ್ನು ನ್ಯೂಯಾರ್ಕ್‌ ಮೂಲದ ಸಿಟಿ ಬ್ಯಾಂಕ್ ಕೆಲಸದಿಂದ ವಜಾ ಮಾಡಿ ಮನೆಗೆ ಕಳುಹಿಸಿದೆ. 


ನ್ಯೂಯಾರ್ಕ್‌: ಸುಮ್ಮನೇ ಅಲ್ಲ ಯಹೂದಿಗಳನ್ನು ಹಿಟ್ಲರ್‌ ಮಾರಣಹೋಮ ಮಾಡಿದ್ದು, ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಬ್ಯಾಂಕ್ ಉದ್ಯೋಗಿಯೋರ್ವಳನ್ನು ನ್ಯೂಯಾರ್ಕ್‌ ಮೂಲದ ಸಿಟಿ ಬ್ಯಾಂಕ್ ಕೆಲಸದಿಂದ ವಜಾ ಮಾಡಿ ಮನೆಗೆ ಕಳುಹಿಸಿದೆ. 

ಸಿಟಿ ಪರ್ಸನಲ್ ಬ್ಯಾಂಕರ್ ನೊಜಿಮಾ ಹುಸೈನೊವಾ (Nozima Husainova) ಎಂಬುವವರೇ ಇಸ್ರೇಲ್ ವಿರುದ್ಧ ಪೋಸ್ಟ್‌ ಮಾಡಿ ಕೆಲಸದಿಂದ ವಜಾ ಆದ ಸಿಟಿಗ್ರೂಪ್‌ ಉದ್ಯೋಗಿ. ಇಸ್ರೇಲ್‌ ಹಮಾಸ್ ನಡುವಣ ಯುದ್ಧವನ್ನು ಹಿಟ್ಲರ್‌ ನಡೆಸಿದ ಯಹೂದಿಗಳ ಹತ್ಯಾಕಾಂಡಕ್ಕೆ (Jewis Holocaust) ಹೋಲಿಸಿ ಅದನ್ನು ಬೆಂಬಲಿಸಿದ್ದಾರೆ ಎಂದು ಅವರನ್ನು ಕೆಲಸದಿಂದ ತೆಗೆದು ಹಾಕಲಾಗಿದೆ.  ಇವರೆಲ್ಲರಿಗೂ ಮುಕ್ತಿ ನೀಡಲು ಹಿಟ್ಲರ್ ಬಯಸಿದ್ದರಲ್ಲಿ ಅಚ್ಚರಿ ಏನು ಇಲ್ಲ ಎಂದು ಬ್ಯಾಂಕರ್ ನೊಜಿಮಾ ತನ್ನ ಸೋಶಿಯಲ್ ಮೀಡಿಯಾ (Social Media) ಪೋಸ್ಟ್‌ನಲ್ಲಿ ಬರೆದುಕೊಂಡಿದ್ದರು.  ಗಾಜಾಪಟ್ಟಿಯಲ್ಲಿದ್ದ ಆಲ್ ಅಹ್ಲಿ ಆಸ್ಪತ್ರೆ ಮೇಲೆ ಬಾಂಬ್ ದಾಳಿಯನ್ನು ಖಂಡಿಸಿ ಈ ಪೋಸ್ಟ್ ಮಾಡಿದ್ದರು. ಈ ಮೂಲಕ ಯಹೂದಿಯರ ಬಗ್ಗೆ ಅವಹೇಳನ ಮಾಡಿದ್ದಾರೆ. ಹಿಟ್ಲರ್ ನಡೆಸಿದ ಯಹೂದಿಗಳ ಹತ್ಯಾಕಾಂಡವನ್ನು ಬೆಂಬಲಿಸಿದ್ದಾರೆ ಎಂಬ ಕಾರಣ ನೀಡಿ ಸಿಟಿಗ್ರೂಪ್‌ ತನ್ನ ಉದ್ಯೋಗಿಯನ್ನು ಕೆಲಸದಿಂದ ವಜಾಗೊಳಿಸಿದೆ. 

Tap to resize

Latest Videos

ಸ್ತ್ರೀಯರ ಬಗ್ಗೆ ಪತಿ ಚೆಲ್ಲು ಚೆಲ್ಲು ಮಾತು: ಸಂಗಾತಿಯಿಂದ ದೂರವಾದ ಇಟಲಿ ಪ್ರಧಾನಿ

Stop AntiSemitism ಎಂಬ ಟ್ವಿಟ್ಟರ್‌ ಪೇಜೊಂದು ಈಕೆಯ ಈ ಪೋಸ್ಟ್‌ನ ಸ್ಕ್ರಿನ್‌ ಶಾಟ್‌ ತೆಗೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಬಳಿಕ ಈಕೆಯ ಈ ಹೋಲಿಕೆ ಹಾಗೂ ಹಿಟ್ಲರ್‌ ನಡೆಸಿದ ಹತ್ಯಾಕಾಂಡವನ್ನು ಸಮರ್ಥನೆ ವ್ಯಾಪಕ ಟೀಕೆಗೆ ಗುರಿಯಾಗಿತ್ತು.  ಇದು ನಿಮ್ಮ ಉದ್ಯೋಗಿಯ ಕೆಟ್ಟ ಯಹೂದಿ ವಿರೋಧಿ ನೀತಿಯೇ ಎಂದು ಬರೆದು ಸಿಟಿಗ್ರೂಪ್‌ಗೆ ಈ ಆಕೆ ಮಾಡಿದ್ದ ಟ್ವಿಟ್‌ನ್ನ ಸ್ಕ್ರೀನ್ ಶಾಟ್‌ಗಳನ್ನು ಹಂಚಿಕೊಳ್ಳಲಾಗಿತ್ತು. (ಆಂಟಿಸೆಮಿಟಿಸಮ್ ಎಂದರೆ ಯಾವುದೇ ಕಾರಣವಿಲ್ಲದೇ ಯಹೂದಿಗಳನ್ನು ನಿರಂತರವಾಗಿ ದ್ವೇಷಿಸುವುದಾಗಿದೆ. ) 

ಈ ಟ್ವಿಟ್‌ಗೆ ಪ್ರತಿಕ್ರಿಯಿಸಿದ ಸಿಟಿಗ್ರೂಪ್ ಈ ಬಗ್ಗೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಪ್ರತಿಕ್ರಿಯಿಸಿತ್ತು.  ನಾವು ಈ ದ್ವೇಷ ಭಾಷಣ ಹಾಗೂ ಯಹೂದಿಗಳ ಬಗ್ಗೆ ದ್ವೇಷ ನೀತಿಯನ್ನು ತುಂಬಾ ತೀವ್ರವಾಗಿ ಖಂಡಿಸುತ್ತಿದ್ದೇವೆ ಎಂದು ಸಿಟಿಗ್ರೂಪ್ ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿ ಬರೆದುಕೊಂಡಿತ್ತು.  ಸಾಮಾಜಿಕ ಜಾಲತಾಣದಲ್ಲಿ ಯಹೂದಿ ವಿರೋಧಿ ದ್ವೇಷದ ಭಾವವನ್ನು ಹಂಚಿಕೊಂಡ ಹಿನ್ನೆಲೆಯಲ್ಲಿ ತಮ್ಮ ಉದ್ಯೋಗಿಯನ್ನು ಕೆಲಸದಿಂದ ವಜಾಗೊಳಿಸಿರುವುದಾಗಿ ನಂತರ ಸಿಟಿ ಬ್ಯಾಂಕ್ (Citi Bank) ಹೇಳಿದ್ದು, ಈ ಘಟನೆಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಇಂತಹವನ್ನೆಲ್ಲಾ ನಮ್ಮ ಬ್ಯಾಂಕ್‌ನಲ್ಲಿ ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಬ್ಯಾಂಕ್ ಹೇಳಿಕೊಂಡಿದೆ. ಉದ್ಯೋಗಿಯ ವಜಾದ ನಂತರ StopAntisemitism ಟ್ವಿಟ್ಟರ್‌ನಲ್ಲಿ ಸಿಟಿಗ್ರೂಪ್‌ಗೆ ಧನ್ಯವಾದ ಹೇಳಿದೆ. ಯಹೂದಿ ದ್ವೇಷ ನೀತಿಗೆ ನೋ ಎಂದಿದ್ದಕ್ಕೆ ನಿಮಗೆ ಧನ್ಯವಾದ ಎಂದು StopAntisemitism ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದೆ. 

ನ್ಯೂಸ್‌ ನಿರೂಪಕಿಯ ಸೀರೆ ನೋಡಿ ಸಿಡಿಸಿಡಿಯಾದ ಇಸ್ರೇಲ್ ಅಧಿಕಾರಿ: ವೀಡಿಯೋ

ನೋಡುಗರು ಕೂಡ ಈ ಪೋಸ್ಟ್‌ಗೆ ಕಾಮೆಂಟ್ ಮಾಡಿದ್ದು, ತಕ್ಷಣವೇ ಕ್ರಮ ಕೈಗೊಂಡಿದ್ದಕ್ಕೆ ಸಿಟಿಗ್ರೂಪ್‌ಗೆ ಧನ್ಯವಾದ ಎಂದು ಒಬ್ಬರು ಹೇಳಿದ್ದಾರೆ. ಇದೊಂದು ಒಳ್ಳೆ ನ್ಯೂಸ್ ಸಂಸ್ಥೆಗಳು ಕೂಡ  ಪೋಸ್ಟ್‌ಗೆ ಇಷ್ಟು ವೇಗವಾಗಿ ಪ್ರತಿಕ್ರಿಯಿಸಿರುವುದನ್ನು ನೋಡಲು ಖುಷಿಯಾಗುತ್ತಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು, ನೊಜಿಮಾ ಹುಸೈನೊವಾ ಅವರ ಈ ಅಭಿಪ್ರಾಯಕ್ಕೆ ತೀವ್ರ ಟೀಕೆ ವ್ಯಕ್ತಪಡಿಸಿದ್ದಾರೆ. ಆಕೆ ಏನು ಯೋಚನೆ ಮಾಡುತ್ತಿದ್ದಾಳೆ. ಇಂತದ್ದನ್ನೆಲ್ಲಾ ಒಪ್ಪಲು ಸಾಧ್ಯವಿಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. 

ಇನ್ನೊಂದೆಡೆ ಇಸ್ರೇಲ್ ಮೇಲೆ ಮೊದಲಿಗೆ ದಾಳಿ ನಡೆಸಿದ ಹಮಾಸನ್ನು ದೂಷಿಸದೇ ಇಸ್ರೇಲ್‌ ಕ್ರೌರ್ಯ ಮೆರೆದಿದೆ ಎಂದು ದೂಷಿಸುವ ಪತ್ರಕ್ಕೆ ಸಹಿ ಹಾಕಿದ ಹಾರ್ವರ್ಡ್ ವಿದ್ಯಾರ್ಥಿಗಳನ್ನು ಕೆಲಸಕ್ಕೆ ನೇಮಿಸಿಕೊಳ್ಳದಂತೆ ಹಲವರು ಜಾಗತಿಕ ಉದ್ಯಮಿಗಳಿಗೆ ಬೆದರಿಕೆ ಕರೆಗಳು ಬಂದ ನಂತರ ಈ ಬೆಳವಣಿಗೆ ನಡೆದಿದೆ. ಇಸ್ರೇಲ್‌ ಮೇಲಿನ ದಾಳಿ ಹಮಾಸ್ (Hamas Terrorist) ತನ್ನಷ್ಟಕ್ಕೆ ತಾನು ಆರಂಭಿಸಿದ್ದಲ್ಲ, ಎರಡು ದಶಕಗಳಿಂದಲೂ ಹೆಚ್ಚು ಕಾಲ ಇಸ್ರೇಲಿ ಸರ್ಕಾರ ಪ್ಯಾಲೇಸ್ತೀನಿಯರನ್ನು ತೆರೆದ ಗಾಳಿಯ ಜೈಲು ಎಂದು ಕರೆಯಲ್ಪಡುವ ಬಂಧನದಲ್ಲಿ  ಇರಿಸಿದ ನಂತರ ಈ ದಾಳಿ ನಡೆದಿದೆ ಎಂದು ಹಾರ್ವರ್ಡ್‌  ವಿವಿಯಲ್ಲಿ ವಿದ್ಯಾರ್ಥಿಗಳು ಪತ್ರ ಬರೆದು ಸಹಿ ಸಂಗ್ರಹ ಮಾಡಿದ್ದರು ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ. 

“No wonder why Hitler wanted to get rid of all of them”. - Nozima Husainova

Unbridled antisemitism. pic.twitter.com/GFdEMMdrI6

— StopAntisemitism (@StopAntisemites)

 

click me!