900 ವರ್ಷಗಳ ಇತಿಹಾಸ ಚರ್ಚ್‌ಗೆ ಬಾಂಬ್‌ ಎಸೆದ ಇಸ್ರೇಲ್‌, ಗಾಜಾದಲ್ಲಿ 4 ಸಾವಿರದ ಗಡಿ ಮುಟ್ಟಿದ ಸಾವು!

By Santosh NaikFirst Published Oct 20, 2023, 4:41 PM IST
Highlights

ಇಸ್ರೇಲ್‌ ಶುಕ್ರವಾರ 900 ವರ್ಷಗಳ ಇತಿಹಾಸದ ಗಾಜಾ ಚರ್ಚ್‌ ಮೇಲೆ ಬಾಂಬ್‌ ದಾಳಿ ನಡೆಸಿದೆ. ಇದರ ಬೆನ್ನಲ್ಲಿಯೇ ಗಾಜಾದಲ್ಲಿ ಈವರೆಗೂ ಸಾವು ಕಂಡವರ ಸಂಖ್ಯೆ 4 ಸಾವಿರಕ್ಕೇರಿದೆ.

ನವದೆಹಲಿ (ಅ.20): ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧಕ್ಕೆ ಇಂದು 14ನೇ ದಿನ. ಗಾಜಾ ಮೇಲೆ ಇಸ್ರೇಲ್ ನಿರಂತರವಾಗಿ ವೈಮಾನಿಕ ದಾಳಿ ನಡೆಸುತ್ತಿದೆ. ಈ ಸಮಯದಲ್ಲಿ, ಇಸ್ರೇಲ್ ಗಾಜಾದಲ್ಲಿರುವ ಅತ್ಯಂತ ಹಳೆಯ ಗ್ರೀಕ್ ಆರ್ಥೊಡಾಕ್ಸ್ ಸೇಂಟ್ ಪೋರ್ಫಿರಿಯಸ್ ಚರ್ಚ್ ಮೇಲೆ ದಾಳಿ ಮಾಡಿದೆ. ಇದುವರೆಗೆ ಸುಮಾರು 8 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಇನ್ನೂ ಹಲವು ಮೃತದೇಹಗಳು ಅವಶೇಷಗಳಡಿ ಸಿಲುಕಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಗಾಜಾದ ಈ ಚರ್ಚ್ ಸುಮಾರು 900 ವರ್ಷಗಳಷ್ಟು ಹಳೆಯದು. ಇದನ್ನು 1150 ರಲ್ಲಿ ನಿರ್ಮಾಣ ಮಾಡಲಾಗಿತ್ತು. ಯುದ್ಧದ ಮಧ್ಯೆ, ಅನೇಕ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ಈ ಚರ್ಚ್‌ನಲ್ಲಿ ಆಶ್ರಯ ಪಡೆದಿದ್ದರು. ಇನ್ನೊಂದೆಡ ಗಾಜಾದಲ್ಲಿ ಈವರೆಗೂ ಸಾವು ಕಂಡಿರುವವರ ಸಂಖ್ಯೆ 4 ಸಾವಿರ ಗಡಿ ದಾಟಿದೆ. ಶುಕ್ರವಾರ ಗಾಜಾದ ಆರೋಗ್ಯ ಇಲಾಖೆಯ ವಕ್ತಾ ಅಶ್ರಫ್‌ ಅಲ್‌ ಖ್ವದ್ರಾ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು. ಈವರೆಗೂ ಗಾಜಾದ ಮೇಲೆ ಇಸ್ರೇಲ್‌ನ ದಾಳಿಯಲ್ಲಿ 4137 ಮಂದಿ ಸಾವು ಕಂಡಿದ್ದಾರೆ. ಇದರಲ್ಲಿ 1661 ಮಂದಿ ಮಕ್ಕಳಾಗಿದ್ದಾರೆ ಎಂದು ತಿಳಿಸಿದ್ದಾರೆ.

ಗಾಜಾದಲ್ಲಿ ನಡೆದಿರುವ ದಾಳಿಯಲ್ಲಿ 13, 260 ಮಂದಿ ಸಾವು ಕಂಡಿದ್ದಾರೆ. ಗಾಜಾದಲ್ಲಿ ಯಾವ ರೀತಿಯ ಪರಿಸ್ಥಿತಿಗಳು ನಿರ್ಮಾಣವಾಗಿದೆಯೆಂದರೆ, ನಡೆದಾಡುವ ದಾರಿಗಳಲ್ಲಿ ಮೈದಾನಗಳಲ್ಲಿ ಆಸ್ಪತ್ರೆಯ ಸಣ್ಣ ಸಣ್ಣ ಕಾರಿಡಾರ್‌ಗಳಲ್ಲಿ ವೈದ್ಯರು ಶಸ್ತ್ರಚಿಕಿತ್ಸೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ. ತನ್ನದೇ ರಾಕೆಟ್‌ ಆಸ್ಪತ್ರೆಯ ಮೇಲೆ ಬಿದ್ದಿದ್ದರಿಂದ ಗಾಜಾದ ಬ್ಯಾಪಿಸ್ಟ್‌ ಆಸ್ಪತ್ರೆ ಕುಸಿದು ಬೀಳುವ ಅಪಾಯದಲ್ಲಿದೆ. ಪ್ರಸ್ತುತ ಆಸ್ಪತ್ರೆ ಅತ್ಯಂತ ಕನಿಷ್ಠ ಪ್ರಮಾಣದಲ್ಲಿ ಕೆಲಸ ಮಾಡುತ್ತಿದೆ.  ತನ್ನ ನಿಗದಿತ ಸಾಮರ್ಥ್ಯಕ್ಕಿಂತ 10 ಪಟ್ಟು ಕಡಿಮೆ ಸಾಮರ್ಥ್ಯದಲ್ಲಿ ಇದು ಕೆಲಸ ಮಾಡುತ್ತಿದೆ ಎಂದು ಎಂದು ವೈದ್ಯರು ತಿಳಿಸಿದ್ದಾರೆ. ಇಂಧನದ ಕೊರತೆಯು ವೈದ್ಯರಿಗೆ ಉಪಕರಣಗಳನ್ನು ನಿರ್ವಹಣೆ ಮಾಡುವುದು ಕಷ್ಟವಾಗಿದೆ. ವೈದ್ಯಕೀಯ ಸಾಮಗ್ರಿಗಳ ಗಂಭೀರ ಕೊರತೆ ಗಾಜಾದಲ್ಲಿ ಎದ್ದು ಕಾಣುತ್ತಿದೆ. ಒಂದು ಸಂದರ್ಭದಲ್ಲಿ, ವೈದ್ಯಕೀಯ ಸಾಮಗ್ರಿಗಳ ಕೊರತೆಯಿಂದಾಗಿ ಗಾಯಗಳಿಗೆ ಚಿಕಿತ್ಸೆ ನೀಡಲು ವೈದ್ಯರು ವಿನೆಗರ್ ಖರೀದಿಸಲು ಸ್ಥಳೀಯ ಮಾರುಕಟ್ಟೆಯಲ್ಲಿನ ಅಂಗಡಿಗೆ ಹೋಗಿದ್ದರು ಎನ್ನಲಾಗಿದೆ. ಗುರುವಾರ ಒಂದೇ ದಿನ ಗಾಜಾಪಟ್ಟಿಯಲ್ಲಿ 65 ಮಂದಿ ಸಾವು ಕಂಡಿದ್ದಾರೆ. ಇನ್ನೂ ಕೆಲವರು ಅವಶೇಷಗಳ ಅಡಿಯಲ್ಲಿ ಸಿಲುಕಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಏರಿಕೆಯಾಗಬಹುದು ಎನ್ನಲಾಗಿದೆ.



ಕಳೆದೊಂದು ದಶಕದಲ್ಲಿ ನಮ್ಮ ಏರ್‌ಫೋರ್ಸ್‌ ಇಂಥ ದಾಳಿ ನಡೆಸಿಲ್ಲ: ಇನ್ನೊಂದೆಡೆ ಇಸ್ರೇಲ್‌ ಕೂಡ ನಾವು ಗಾಜಾದ ಮೇಲೆ ಘಾತಕವಾಗಿ ದಾಳಿ ನಡೆಸುತ್ತಿರುವುದನ್ನು ಒಪ್ಪಿಕೊಂಡಿದ್ದಾರೆ. ಇಸ್ರೇಲ್‌ ಸೇನೆಯ ಅಧಿಕೃತ ವಕ್ತಾರ ಡೇನಿಯಲ್‌ ಹಾಗೇರಿ, ಕಳೆದ ಒಂದು ದಶಕದಲ್ಲಿ ಗಾಜಾದ ಮೇಲೆ ಇಸ್ರೇಲ್‌ನ ಏರ್‌ಪೋರ್ಸ್‌ ಇಷ್ಟು ದೊಡ್ಡ ದಾಳಿ ಮಾಡುತ್ತಿರುವುದು ಇದೇ ಮೊದಲು. ಇಡೀ ಯುದ್ಧದ ಕುರಿತಾದ ಅಪ್‌ಡೇಟ್‌ ನೀಡುತ್ತಿರುವ ಹಾಗೇರಿ,  ಇಸ್ರೇಲ್‌ನ ಗುಪ್ತಚರ ಇಲಾಖೆಯ ಸಹಯೋಗದೊಂದಿಗೆ ಇಸ್ರೇಲ್‌ನ ಏರ್‌ಫೋರ್ಸ್‌ ತನ್ನ ದಾಳಿಗಳನ್ನು ನಡೆಸುತ್ತಿದೆ ಎಂದು ತಿಳಿಸಿದ್ದಾರೆ.

ಪ್ಯಾಲೆಸ್ತೀನ್‌ಗೆ ಎಲ್ಲಾ ಮಾನವೀಯ ನೆರವು: ಪ್ಯಾಲೆಸ್ತೀನ್‌ ಅಧ್ಯಕ್ಷರಿಗೆ ಕರೆ ಮಾಡಿದ ಮೋದಿ

ಯುಎನ್‌ಆರ್‌ಡಬ್ಲ್ಯುಎ, ಪ್ಯಾಲೆಸ್ಟೈನ್ ನಿರಾಶ್ರಿತರ ಸಂಸ್ಥೆಯು ಗಾಜಾದಲ್ಲಿ ಇನ್ನೂ ಇಬ್ಬರು ಸಹೋದ್ಯೋಗಿಗಳು ಕೊಲ್ಲಲ್ಪಟ್ಟಿದ್ದಾರೆ ಎಂದು ಹೇಳಿದೆ. ಯುದ್ಧ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೂ ಯುಎನ್‌ಆರ್‌ಡಬ್ಲ್ಯುಎದ 16 ಮಂದಿ ಸಾವು ಕಂಡಿದ್ದಾರೆ. UNRWA ಅಂತರಾಷ್ಟ್ರೀಯ ಮಾನವೀಯ ಕಾನೂನಿಗೆ ಬದ್ಧವಾಗಿರಲು ಪ್ರತಿಪಾದಿಸುವುದನ್ನು ಮುಂದುವರೆಸಿದೆ. UN ಸಿಬ್ಬಂದಿ ಮತ್ತು ನಾಗರಿಕರನ್ನು ಎಲ್ಲಾ ಸಮಯದಲ್ಲೂ ರಕ್ಷಿಸಬೇಕು" ಎಂದು ತನ್ನ ಪೋಸ್ಟ್‌ನಲ್ಲಿ ತಿಳಿಸಿದೆ.

ಇಸ್ರೇಲ್‌ ಸೈನಿಕರು 24 ಗಂಟೆಯೂ ನಮ್ಮನ್ನು ರಕ್ಷಿಸುತ್ತಿದ್ದಾರೆ: ಇಸ್ರೇಲ್‌ ಕನ್ನಡಿಗರು

click me!