ಇರಾನ್‌ನಲ್ಲಿ ವಿರೋಧಿ ಹಿಜಾಬ್ ಹೋರಾಟಕ್ಕೆ 75 ಬಲಿ: ಇರಾನ್ ಅಧ್ಯಕ್ಷ ಆಡಳಿತ ಅಂತ್ಯಕ್ಕೆ ಕರೆ

By Anusha KbFirst Published Sep 27, 2022, 2:54 PM IST
Highlights

ಭಾರತದಲ್ಲಿ ಮುಸ್ಲಿಂ ಸಮುದಾಯ ಹಿಜಾಬ್ ಬೇಕು ಎಂದು ಪ್ರತಿಭಟನೆ ನಡೆಸುತ್ತಿದ್ದರೆ, ಅತ್ತ ಸಂಪೂರ್ಣ ಮುಸ್ಲಿಂ ರಾಷ್ಟ್ರವಾಗಿರುವ ಇರಾನ್‌ನಲ್ಲಿ ಹಿಜಾಬ್ ವಿರುದ್ಧ ಉಗ್ರ ಹೋರಾಟ ನಡೆಯುತ್ತಿದೆ. ಈ ಹೋರಾಟ ಸದ್ಯಕ್ಕೆ ಶಾಂತಗೊಳ್ಳುವ ಯಾವುದೇ ಲಕ್ಷಣಗಳಿಲ್ಲ.

ತೆಹ್ರಾನ್: ಭಾರತದಲ್ಲಿ ಮುಸ್ಲಿಂ ಸಮುದಾಯ ಹಿಜಾಬ್ ಬೇಕು ಎಂದು ಪ್ರತಿಭಟನೆ ನಡೆಸುತ್ತಿದ್ದರೆ, ಅತ್ತ ಸಂಪೂರ್ಣ ಮುಸ್ಲಿಂ ರಾಷ್ಟ್ರವಾಗಿರುವ ಇರಾನ್‌ನಲ್ಲಿ ಹಿಜಾಬ್ ವಿರುದ್ಧ ಉಗ್ರ ಹೋರಾಟ ನಡೆಯುತ್ತಿದೆ. ಈ ಹೋರಾಟ ಸದ್ಯಕ್ಕೆ ಶಾಂತಗೊಳ್ಳುವ ಯಾವುದೇ ಲಕ್ಷಣಗಳಿಲ್ಲ. ಇರಾನ್‌ನಲ್ಲಿ ಹಿಜಾಬ್ ಹೋರಾಟಕ್ಕೆ ಇದುವರೆಗೆ 75 ಜನ ಬಲಿಯಾಗಿದ್ದಾರೆ. ಈ ಮಧ್ಯೆ ಇರಾನ್‌ನ ಹಿಜಾಬ್ ವಿರೋಧಿ ಹೋರಾಟಗಾರರು, ತಮ್ಮ ಪ್ರತಿಭಟನೆ ವೇಳೆ ಸರ್ವಾಧಿಕಾರಿಗೆ ಸಾವು ಎಂಬ ಪ್ಲೇಕಾರ್ಡ್ ಹಿಡಿದು ಘೋಷಣೆ ಕೂಗುತ್ತಿದ್ದಾರೆ. ಹಿಜಾಬ್ ಸರಿಯಾಗಿ ಧರಿಸಿಲ್ಲ ಎಂದು ಬಂಧನಕ್ಕೊಳಗಾಗಿದ್ದ ಯುವತಿ ಮಹ್ಸಾ ಅಮಿನಿ ಪೊಲೀಸ್ ಕಸ್ಡಡಿಯಲ್ಲಿರುವಾಗಲೇ ಪ್ರಾಣ ಬಿಟ್ಟಿದ್ದಳು. ಇದು ಇರಾನ್‌ನಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. 

ಮಹ್ಸಾ ಅಮಿನಿ (Mahasa Amini) ಸಾವಿಗೀಡಾಗಿ 10 ದಿನಗಳೇ ಕಾಳೆದಿದ್ದು, ಆಕೆಯ ಸಾವಿನಿಂದ ಆರಂಭವಾದ ಈ ಹೋರಾಟ ಇರಾನ್‌ನ ಬೀದಿ ಬೀದಿಯನ್ನು ಆವರಿಸಿದ್ದು, ಸರ್ವಾಧಿಕಾರಿ ಆಡಳಿತಕ್ಕೆ ಬಿಸಿ ಮುಟ್ಟಿಸಿದೆ. ಇರಾನ್‌ನ ಇಡೀ ಮಹಿಳಾ ಶಕ್ತಿ ಹೋರಾಟಕ್ಕಾಗಿ ಬೀದಿಗಿಳಿದಿದ್ದು, ಇರಾನ್‌ ಸರ್ವೋಚ್ಚ ನಾಯಕ (supreme leader) ಸರ್ವಾಧಿಕಾರಿ ಅಯತೊಲ್ಲಾ ಅಲಿ ಖಮೇನಿ (Ayatollah Ali Khamenei) ಆಡಳಿತವನ್ನು ಕೊನೆಗೊಳಿಸಲು ಆಗ್ರಹಿಸುತ್ತಿದ್ದಾರೆ. 

Iran Anti Hijab Protest: ಕೂದಲು ಕತ್ತರಿಸಿಕೊಂಡು ಸಹೋದರನ ಸಮಾಧಿ ಮೇಲೆ ಎಸೆದ ಮಹಿಳೆ


ಈ ಹೋರಾಟದಲ್ಲಿ ಇದುವರೆಗೆ 75ಕ್ಕೂ ಹೆಚ್ಚು ಜನ ಪೊಲೀಸರ ಗುಂಡಿಗೆ ಬಲಿಯಾಗಿದ್ದಾರೆ ಎಂದು ಪ್ರತಿಭಟನಾಕಾರರು ಹೇಳುತ್ತಿದ್ದಾರೆ. ಇರಾನ್‌ನ ರಾಜಧಾನಿ ತೆಹ್ರಾನ್‌ನಲ್ಲಿ ಡೆತ್ ಟು ಡಿಕ್ಟೇಟರ್ ಕೂಗು ಜೋರಾಗಿ ಕೇಳಿ ಬರುತ್ತಿದೆ. ಮೂರು ದಶಕಗಳಿಂದ ಇರಾನ್ ಅನ್ನು ಆಳುತ್ತಿರುವ ಸರ್ವಾಧಿಕಾರಿ ಅಯತೊಲ್ಲಾ ಅಲಿ ಖಮೇನಿ ಆಡಳಿತದ ಅಂತ್ಯಕ್ಕೆ ಪ್ರತಿಭಟನಾಕಾರರು ಆಗ್ರಹಿಸುತ್ತಿದ್ದಾರೆ. 

ಮಹ್ಸಾ ಅಮಿನಿ ಸಾವಿನ ನಂತರ ತೀವ್ರಗೊಂಡ ಈ ಹೋರಾಟ ಈಗ 46 ಇರಾನಿ ನಗರಗಳು  ಸೇರದಂತೆ ಪಟ್ಟಣ ಹಳ್ಳಿ ಹಳ್ಳಿಗಳನ್ನು ತಲುಪಿದೆ. ಸೆಪ್ಟೆಂಬರ್ 17 ರಂದು ಪ್ರತಿಭಟನೆ ಆರಂಭವಾದಗಿನಿಂದ ಇದುವರೆಗೆ ಪೊಲೀಸರು ಸೇರಿದಂತೆ 75ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಅಲ್ಲಿನ ಅಧಿಕಾರಿಗಳ ಅಧಿಕೃತ ಹೇಳಿಕೆ ಪ್ರಕಾರ ಸಾವಿಗಿಡಾದವರು ಕೇವಲ 13 ಮಂದಿ ಮಾತ್ರ. ಅಲ್ಲದೇ ಬಂಧಿಸಲ್ಪಟ್ಟವರು 1,200 ಮಂದಿ.

ಇಂಗ್ಲೆಂಡ್‌ Hindu Temple ಹೊರಗೆ ‘ಅಲ್ಲಾಹು ಅಕ್ಬರ್‌’ ಕೂಗಿದ ಪ್ರತಿಭಟನಾಕಾರರು

ಈ ನಡುವೆ ಇರಾನ್ ಸರ್ಕಾರ, ಇತ್ತೀಚಿನ ಈ ಹೋರಾಟವು ವಿದೇಶಗಳ ಕಟ್ಟುಕತೆ ಎಂದು ಬಣ್ಣಿಸಿದೆ. ಈ ನಡುವೆ ಸರ್ಕಾರವನ್ನು ಬೆಂಬಲಿಸಿ ಕೆಲವರು ಬೀದಿಗಳಲ್ಲಿ ಮೆರವಣಿಗೆ ಮಾಡುತ್ತಿದ್ದಾರೆ. ಅವರು ಅಮೆರಿಕಾ ಪ್ರೇರಿತಾ ಹೋರಾಟಗಾರರು ಧರ್ಮದ ವಿರುದ್ಧ ಹೋರಾಡುತ್ತಿದ್ದಾರೆ ಎಂದು ಮಹಿಳೆಯರ ಈ ಹೋರಾಟವನ್ನು ಬಣ್ಣಿಸಿದ್ದಾರೆ. ಅಲ್ಲದೇ ಈ ನಡುವೆ ಸಾಮಾಜಿಕ ಜಾಲತಾಣಗಳಾದ ಇನ್ಸ್ಟಾಗ್ರಾಮ್, ಲಿಂಕ್ಡಿನ್, ವಾಟ್ಸಾಪ್ ಮುಂತಾದವುಗಳನ್ನು ನಿರ್ಬಂಧಿಸಲು ಸರ್ಕಾರ ಮುಂದಾಗಿದೆ. ಈ ಮೂಲಕ ಸಾಮಾಜಿಕ ಜಾಲತಾಣದ ಮೂಲಕ ವಿದೇಶಗಳಿಗೆ ತಮ್ಮ ಹೋರಾಟವನ್ನು ಹಂಚಿಕೊಳ್ಳುವ ಪ್ರತಿಭಟನಾಕಾರರ ನಡೆಗೆ ತಡೆ ಹೇರಿದೆ.

ಇನ್ನು ಈ ಪ್ರತಿಭಟನೆ ವೇಳೆ  ಮರಣ ಹೊಂದಿದ ಎಂದು ಹೇಳಲಾದ ಜಾವದ್‌ ಹೇಯ್ದಾರಿ ಅಂತ್ಯಕ್ರಿಯೆಯ (Final Rites) ವೇಳೆ, ಮೃತಪಟ್ಟ ವ್ಯಕ್ತಿಯ ಸಮಾಧಿ ಬಳಿ ಸಹೋದರಿ ತನ್ನ ಕೂದಲನ್ನು (Hair) ಕತ್ತರಿಸಿಕೊಂಡಿದ್ದಳು. ಆ ಕತ್ತರಿಸಿಕೊಂಡ ಕೂದಲನ್ನು ಸಮಾಧಿಯ (Grave) ಮೇಲೆ ಹಾಕಿದ್ದಳು. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು. 
 

click me!