Japan Earthquake ಜಪಾನ್ ರಾಜಧಾನಿ ಟೋಕಿಯೋ ಬಳಿ ಭಾರಿ ಪ್ರಮಾಣದ ಭೂಕಂಪ, ಸುನಾಮಿ ಎಚ್ಚರಿಕೆ!

By Suvarna News  |  First Published Mar 16, 2022, 8:42 PM IST

ಜಪಾನ್ ರಾಜಧಾನಿ ಟೋಕಿಯೋ ಬಳಿ ಭೂಕಂಪ

7.3ರ ತೀವ್ರತೆಯ ಭೂಕಂಪ ದಾಖಲು

ಸುನಾಮಿ ಎಚ್ಚರಿಕೆ ನೀಡಿದ ಸರ್ಕಾರ


ಟೋಕಿಯೋ, ಜಪಾನ್ (ಮಾ. 16): ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಭಾರತ) (National Center for Seismology (India).) ಪ್ರಕಾರ ಬುಧವಾರ ರಾತ್ರಿ ಜಪಾನ್‌ನ ಟೋಕಿಯೊ ಬಳಿ 7.3 ತೀವ್ರತೆಯ ಭೂಕಂಪ ವರದಿಯಾಗಿದೆ. ಭೂಕಂಪದ ಕೇಂದ್ರಬಿಂದು ಜಪಾನ್‌ನ ಟೋಕಿಯೊದಿಂದ 297 ಕಿಮೀ ಈಶಾನ್ಯಕ್ಕೆ (NE) ಎಂದು ಸಂಸ್ಥೆ ತಿಳಿಸಿದೆ. 

ರಾತ್ರಿ 8 ಗಂಟೆಯ ಸುಮಾರಿಗೆ ಭೂಕಂಪ ಸಂಭವಿಸಿದ್ದು, ಭೂಮಿಯ ಮೇಲ್ಮೈಯಿಂದ ಸಾಕಷ್ಟು ಕಿಲೋಮೀಟರ್ ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ವರದಿಯಾಗಿದೆ. ಇದರ ಬೆನ್ನಲ್ಲಿಯೇ ಜಪಾನ್‌ನ ಹವಾಮಾನ ಸಂಸ್ಥೆ (Japan Meteorological Agency )  ಸುನಾಮಿ ಎಚ್ಚರಿಕೆಯನ್ನೂ ನೀಡಿದೆ. ಭೂಕಂಪದ ಪ್ರಮಾಣಕ್ಕೆ 2 ಮಿಲಿಯನ್ ಮನೆಗಳು ವಿದ್ಯುತ್ ಕಳೆದುಕೊಂಡಿದೆ ಎಂದು ಸರ್ಕಾರ ತಿಳಿಸಿದೆ.

ಭೂಕಂಪವು ಫುಕುಶಿಮಾ ಪ್ರದೇಶದ ಕರಾವಳಿಯಲ್ಲಿ 60 ಕಿಲೋಮೀಟರ್ ಆಳದಲ್ಲಿ ಕೇಂದ್ರೀಕೃತವಾಗಿತ್ತು ಮತ್ತು ರಾತ್ರಿ 11:36 ಕ್ಕೆ ಅಪ್ಪಳಿಸಿದ ಸ್ವಲ್ಪ ಸಮಯದ ನಂತರ ಈಶಾನ್ಯ ಕರಾವಳಿಯ ಕೆಲವು ಭಾಗಗಳಿಗೆ ಒಂದು ಮೀಟರ್‌ನ ಸುನಾಮಿ ಅಲೆಗಳ ಎಚ್ಚರಿಕೆಯನ್ನೂ ನೀಡಲಾಗಿದೆ.

Earthquake of Magnitude:7.1, Occurred on 16-03-2022, 20:06:36 IST, Lat: 37.82 & Long: 141.64, Depth: 81 Km ,Location: 297km NE of Tokyo, Japan for more information download the BhooKamp App https://t.co/11HkPWkSH1 pic.twitter.com/kNbnyU88AX

— National Center for Seismology (@NCS_Earthquake)


ಈ ಪ್ರದೇಶವು ಉತ್ತರ ಜಪಾನ್‌ನ ಭಾಗವಾಗಿದೆ, ಇದು 11 ವರ್ಷಗಳ ಹಿಂದೆ ಮಾರಣಾಂತಿಕ 9.0 ಭೂಕಂಪ ಮತ್ತು ಸುನಾಮಿಯಿಂದ ಧ್ವಂಸಗೊಂಡಿತ್ತು. ಅದಲ್ಲದೆ, ಪರಮಾಣು ಸ್ಥಾವರಕ್ಕೂ ಇದರಿಂದ ಹಾನಿಯಾಗಿತ್ತು. ಮಾರ್ಚ್ ನಲ್ಲಿ ಈ ದುರಂತದ 11ನೇ ವರ್ಷದ ವಾರ್ಷಿಕೋತ್ಸವವನ್ನು ಆಚರಿಸಿದ ಕೆಲವೇ ದಿನಗಳಲ್ಲಿ ಮತ್ತೊಮ್ಮೆ ಭೂಕಂಪ ಸಂಭವಿಸಿದೆ.

Tap to resize

Latest Videos

Earthquake in Uttarakhand: ದೇವಭೂಮಿಯಲ್ಲಿ ಭೂಕಂಪ, ರಿಕ್ಟರ್‌ ಮಾಪಕದಲ್ಲಿ 4.1ರಷ್ಟು ತೀವ್ರತೆ ದಾಖಲು!
ಮಿಯಾಗಿ ಮತ್ತು ಫುಕುಶಿಮಾ ಪ್ರಾಂತ್ಯಗಳ ಭಾಗಗಳಲ್ಲಿ ಒಂದು ಮೀಟರ್ (3-ಅಡಿ) ವರೆಗೆ ಸಮುದ್ರದ ತೆರೆಯು ಮೇಲೆ ಏಳಬಹುದು ಎಂದು ಸಂಸ್ಥೆಯು ಸುನಾಮಿ ಸಲಹೆಯನ್ನು ನೀಡಿದೆ. ಜಪಾನ್ ನ ರಾಷ್ಟ್ರೀಯ ದೂರದರ್ಶನ ಎನ್ ಎಚ್ ಕೆ ಈಗಾಗಲೇ ಸುನಾಮಿ ಈಗಾಗಲೇ ಕೆಲವು ಪ್ರದೇಶಗಳನ್ನು ತಲುಪಿರಬಹುದು ಎಂದು ಹೇಳಿದೆ.

Earthquake: ವಿಜಯಪುರದಲ್ಲಿ ಭೂಕಂಪನ, 2.9 ರಷ್ಟು ತೀವ್ರತೆ ದಾಖಲು, ಬೆಚ್ಚಿಬಿದ್ದ ಜನತೆ..!
2011 ರ ಭೂಕಂಪ ಮತ್ತು ಸುನಾಮಿಯ ನಂತರ ಅನೇಕ ಸಮಸ್ಯೆಗಳನ್ನು ಅನುಭವಿಸಿದ ಫುಕುಶಿಮಾ ಡೈಚಿ (Fukushima Daiichi nuclear plant) ಪರಮಾಣು ಸ್ಥಾವರವನ್ನು ನಿರ್ವಹಿಸುವ ಟೋಕಿಯೊ ಎಲೆಕ್ಟ್ರಿಕ್ ಪವರ್ ಕಂಪನಿ ಹೋಲ್ಡಿಂಗ್ಸ್ ನ (Tokyo Electric Power Company Holdings) ಕಾರ್ಮಿಕರು ಈಗಿನ ಭೂಕಂಪದಿಂದಾಗಿ ಉಂಟಾಗಿರುವ ಹಾನಿಯ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಟೋಕಿಯೊ ಸೇರಿದಂತೆ ಪೂರ್ವ ಜಪಾನ್‌ನ ದೊಡ್ಡ ಭಾಗಗಳಲ್ಲಿ ಭೂಕಂಪ ಸಂಭವಿಸಿದ್ದು, ಕಟ್ಟಡಗಳು ಕೆಲ ಕ್ಷಣಗಳ ಕಾಲ ಕಂಪಿಸಿದೆ. ಈವರೆಗೂ ಯಾವುದೇ ಪ್ರಾಣಹಾನಿಯಾಗಿರು ಬಗ್ಗೆ ವರದಿಯಾಗಿಲ್ಲ.

click me!