Asianet Suvarna News Asianet Suvarna News

Earthquake in Uttarakhand: ದೇವಭೂಮಿಯಲ್ಲಿ ಭೂಕಂಪ, ರಿಕ್ಟರ್‌ ಮಾಪಕದಲ್ಲಿ 4.1ರಷ್ಟು ತೀವ್ರತೆ ದಾಖಲು!

* ಅತ್ತ ಚುನಾವಣೆಯ ಕಾವು, ಇತ್ತ ಭೂಕಂಪಕ್ಕೆ ನಡುಗಿದ ಉತ್ತರಾಖಂಡ್

* ರಿಕ್ಟರ್‌ ಮಾಪಕದಲ್ಲಿ 4.1ರಷ್ಟು ತೀವ್ರತೆ ದಾಖಲು

* ಉತ್ತರಕಾಶಿಯಲ್ಲಿ 39 ಕಿಮೀ ಪೂರ್ವಕ್ಕೆ ಸಂಭವಿಸಿದ ಈ ಭೂಕಂಪ

4 1 Magnitude Earthquake Hits Uttarakhand Uttarkashi pod
Author
Bangalore, First Published Feb 12, 2022, 9:21 AM IST

ಡೆಹ್ರಾಡೂನ್(ಫೆ.12): ಉತ್ತರಾಖಂಡದಲ್ಲಿ ಇಂದು ಬೆಳಗ್ಗೆ ಭೂಕಂಪನದ ಅನುಭವವಾಗಿದೆ. ಸುದ್ದಿ ಸಂಸ್ಥೆ ANI ಪ್ರಕಾರ, ಉತ್ತರಕಾಶಿಯಲ್ಲಿ 39 ಕಿಮೀ ಪೂರ್ವಕ್ಕೆ ಸಂಭವಿಸಿದ ಈ ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 4.1 ದಾಖಲಾಗಿದೆ. ಬೆಳಗ್ಗೆ 5:03ಕ್ಕೆ ಈ ಭೂಕಂಪ ಸಂಭವಿಸಿದೆ. ಕಂಪನದ ಅನುಭವವಾದ ನಂತರ ಜನರು ಭಯಭೀತರಾಗಿದ್ದಾರೆ. ವ್ಯಾಪಾರಿಗಳು ಮತ್ತು ಗ್ರಾಮಸ್ಥರು ತಮ್ಮ ಕಟ್ಟಡ ಮತ್ತು ಮನೆಗಳಿಂದ ಹೊರಬಂದಿದ್ದಾರೆ.

ಉತ್ತರಾಖಂಡವನ್ನು ಭೂಕಂಪದ ಅಪಾಯವಿರುವ ಪ್ರದೇಶ ಪರಿಗಣಿಸಲಾಗಿದೆ. ಇಲ್ಲಿ ಆಗಾಗ್ಗೆ ಭೂಕಂಪನದ ಅನುಭವವಾಗುತ್ತದೆ. ಭೂಕಂಪನದ ರಾಷ್ಟ್ರೀಯ ಕೇಂದ್ರದ ಪ್ರಕಾರ, ಭೂಕಂಪದ ಕೇಂದ್ರಬಿಂದು 28 ಕಿಮೀ ಆಳದಲ್ಲಿರುವ ತೆಹ್ರಿ ಗರ್ವಾಲ್‌ನಲ್ಲಿತ್ತು. ಜಿಲ್ಲಾ ಕೇಂದ್ರ ಭಟವಾಡಿ, ದುಂಡಾ, ಪುರೋಳ, ಮೋರಿ ಸೇರಿದಂತೆ ಉತ್ತರಕಾಶಿಯಲ್ಲಿ ಭೂಕಂಪನದ ಅನುಭವವಾಗಿದೆ. ಅದೇ ಸಮಯದಲ್ಲಿ, ಭೂಕಂಪದಿಂದ ಜಿಲ್ಲೆಯಲ್ಲಿ ಯಾವುದೇ ಹಾನಿಯಾದ ವರದಿಯಾಗಿಲ್ಲ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ ದೇವೇಂದ್ರ ಪಟ್ವಾಲ್ ತಿಳಿಸಿದ್ದಾರೆ. ಉತ್ತರಕಾಶಿಯಲ್ಲಿ ಭೂಕಂಪನದ ಅನುಭವವಾಗುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಹಲವು ಬಾರಿ ಇಲ್ಲಿ ಭೂಕಂಪ ಸಂಭವಿಸಿತ್ತು.

ಭೂಕಂಪಗಳು ಏಕೆ ಸಂಭವಿಸುತ್ತವೆ?

ಹಿಮಾಲಯ ಪ್ರದೇಶದಲ್ಲಿ ಇಂಡೋ-ಯುರೇಷಿಯನ್ ಪ್ಲೇಟ್ನ ಘರ್ಷಣೆಯಿಂದಾಗಿ, ಭೂಮಿಯ ಒಳಗಿನಿಂದ ಶಕ್ತಿಯು ಹೊರಬರುತ್ತದೆ. ಇದರಿಂದಾಗಿ ಭೂಕಂಪಗಳು ಸಹಜ. ಹಿಂದಿನ ದಾಖಲೆಗಳನ್ನು ಅವಲೋಕಿಸಿದರೆ, ಒಂದು ವರ್ಷದಲ್ಲಿ ಸುಮಾರು ಒಂಬತ್ತು ನಡುಕಗಳು ಸಂಭವಿಸಬಹುದು. ರಾಜ್ಯದ ಅತ್ಯಂತ ಸೂಕ್ಷ್ಮ ವಲಯ ಐದರಲ್ಲಿ ಈ ಭೂಕಂಪ ಸಂಭವಿಸಿದ್ದು, ಭೂಮಿಯಲ್ಲಿ ನಿರಂತರವಾಗಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವುದನ್ನು ಇದು ತೋರಿಸುತ್ತದೆ ಎನ್ನುತ್ತಾರೆ ವಾಡಿಯಾ ಇನ್‌ಸ್ಟಿಟ್ಯೂಟ್ ಆಫ್ ಹಿಮಾಲಯನ್ ಜಿಯಾಲಜಿಯ ಹಿರಿಯ ವಿಜ್ಞಾನಿ ಡಾ.ಸುಶೀಲ್ ಕುಮಾರ್. ಹಿಂದಿನ ದಾಖಲೆಗಳನ್ನು ಗಮನಿಸಿದರೆ, ಅತಿ ಹೆಚ್ಚು ಭೂಕಂಪಗಳು ಅತ್ಯಂತ ದುರ್ಬಲ ಜಿಲ್ಲೆಗಳಲ್ಲಿ ದಾಖಲಾಗಿವೆ.

ಭೂಕಂಪ ಸಂಭವಿಸಿದರೆ ಏನು ಮಾಡಬೇಕು?

* ಭೂಕಂಪನವಾದರೆ, ತೆರೆದ ಮೈದಾನಕ್ಕೆ ಬನ್ನಿ.

* ಯಾವುದೇ ಕಟ್ಟಡದ ಬಳಿ ನಿಲ್ಲಬೇಡಿ.

* ಲಿಫ್ಟ್ ಬಳಸಬೇಡಿ, ಮೆಟ್ಟಿಲುಗಳನ್ನು ಬಳಸಿ.

Follow Us:
Download App:
  • android
  • ios