ಬಾಡಿಗೆ ಕಟ್ಟೋಕ್ಕಾಗಲ್ಲ ಅಂತ ಆಫೀಸ್‌ನಲ್ಲೇ ವಾಸ ಮಾಡಲು ಬಂದ ಯುವಕ

By Suvarna NewsFirst Published Mar 16, 2022, 4:27 PM IST
Highlights
  • ಕಡಿಮೆ ಸಂಬಳ ಏರಿದ ಜೀವನವೆಚ್ಚ
  • ಆಫೀಸ್‌ನಲ್ಲೇ ವಾಸ ಶುರು ಮಾಡಿದ ಯುವಕ
  • ಹೊರದಬ್ಬಿದ ಆಫೀಸ್‌ ಸಿಬ್ಬಂದಿ

ನ್ಯೂಯಾರ್ಕ್(ಮಾ.16): ಕಡಿಮೆ ಆದಾಯದಿಂದಾಗಿ ಮನೆ ಬಾಡಿಗೆ ಕಟ್ಟಲಾಗದು ಅಪಾರ್ಟ್‌ಮೆಂಟ್‌ನಲ್ಲಿ ವಾಸ ಮಾಡಲಾಗದು ಎಂದು ವ್ಯಕ್ತಿಯೊಬ್ಬ ಆಫೀಸ್‌ನ ಸಣ್ಣ ಕಾರ್ನರ್‌ನಲ್ಲೇ ವಾಸ ಮಾಡಲು ಆರಂಭಿಸಿದ ಘಟನೆಯೊಂದು ನಡೆದಿದ್ದು, ಆತ ಹೀಗೆ ವಾಸ ಮಾಡಲು ಆರಂಭಿಸಿದ ನಾಲ್ಕು ದಿನಗಳ ನಂತರ ಆತನ ಕಚೇರಿ ಸಿಬ್ಬಂದಿಯೇ ನಿನ್ನ ಗಂಟುಮೂಟೆ ತೆಗೆದುಕೊಂಡು ಹೋಗು ಎಂದು ಆತನನ್ನು ಆಫೀಸಿನಿಂದ ಹೊರಗೆ ದಬ್ಬಿದ್ದಾರೆ. ಸೈಮನ್‌ (Simon) ಎಂಬಾತನೇ ಹೀಗೆ ಕಚೇರಿಗೆ ತನ್ನ ವಾಸಸ್ಥಾನವನ್ನು ಶಿಫ್ಟ್ ಮಾಡಿದ ವ್ಯಕ್ತಿ.

ಪ್ರಪಂಚದಾದ್ಯಂತ ವಸತಿಯಿಂದ ಆರೋಗ್ಯ ರಕ್ಷಣೆಯವರೆಗೆ ಜೀವನ ವೆಚ್ಚ ತೀವ್ರವಾಗಿ ಏರುತ್ತಿದೆ. ತೈಲ ಬೆಲೆಯು ಹಣದುಬ್ಬರದ ಪ್ರಮುಖ ಚಾಲಕ ಎಂದು ತಜ್ಞರು ಹೇಳುತ್ತಾರೆ ಏಕೆಂದರೆ ಇದನ್ನು ಸರಕುಗಳನ್ನು ತಯಾರಿಸಲು ಮತ್ತು ವಿತರಿಸಲು ಬಳಸಲಾಗುತ್ತದೆ. ಏರುತ್ತಿರುವ ಬೆಲೆಗಳಿಂದ ಬೇಸತ್ತು, ಅಮೆರಿಕಾದಲ್ಲಿ ಉದ್ಯೋಗಿಯೊಬ್ಬರು ವಿಚಿತ್ರ ಪರಿಹಾರ ಕಂಡುಕೊಳ್ಳಲು ಹೋಗಿ ಕಿಕ್‌ಔಟ್ ಆಗಿದ್ದಾರೆ. ತನ್ನ ಕಡಿಮೆ ಆದಾಯದ ಕಾರಣದಿಂದಾಗಿ ಅಪಾರ್ಟ್ಮೆಂಟ್‌ನಲ್ಲಿ ವಾಸಿಸಲು ಸಾಧ್ಯವಿಲ್ಲ ಎಂದು ಹೇಳಿಕೊಂಡು, ಸೈಮನ್ ಎಂಬ ಉದ್ಯೋಗಿ ಸದ್ದಿಲ್ಲದೆ ತನ್ನ ಕಚೇರಿಯ ಸಣ್ಣ ಕಾರ್ನರ್‌ನಲ್ಲಿ ವಾಸಿಸಲು ಶುರು ಮಾಡಿದ್ದಾರೆ. ಅವರು ಇತ್ತೀಚೆಗೆ ತಮ್ಮ ಜೀವನದ ಈ ದುಸ್ಥಿತಿಯನ್ನು ಟಿಕ್‌ಟಾಕ್(TikTok) ವೀಡಿಯೊಗಳ ಮೂಲಕ ದಾಖಲಿಸಿದ್ದರು. ಇದು ಅವರು ತಮ್ಮ ಆಹಾರ ಮತ್ತು ಬಟ್ಟೆಗಳನ್ನು ಕಚೇರಿಯಲ್ಲಿ ಹೇಗೆ ಸಂಗ್ರಹಿಸಿಟ್ಟಿದ್ದರು ಎಂಬುದನ್ನು ತೋರಿಸುತ್ತದೆ.

Latest Videos

ವಾರಕ್ಕೆ ಮೂರು ಸಲ ಆಫೀಸಿಗೆ ಬನ್ನಿ; ಆ್ಯಪಲ್ ಇ-ಮೇಲ್!

ನನ್ನ ಹೊಸ ಅಪಾರ್ಟ್ಮೆಂಟ್ ಅನ್ನು ಪರಿಶೀಲಿಸಿ, ಎಂದು ಅವರು ತಮ್ಮ ವೀಡಿಯೊದಲ್ಲಿ ಹೇಳುತ್ತಾರೆ. ಈ ವಿಡಿಯೋ ವೈರಲ್ ಆಗಿದೆ ಮತ್ತು 12 ಮಿಲಿಯನ್‌ಗಿಂತಲೂ ಹೆಚ್ಚು ಬಾರಿ ವೀಕ್ಷಿಸಲ್ಪಟ್ಟಿದೆ. ನಾನು ನನ್ನ ಅಪಾರ್ಟ್ಮೆಂಟ್‌ನಿಂದ  ಕೆಲಸದ ಸ್ಥಳದಲ್ಲೇ ವಾಸ ಮಾಡಲು ಹೋಗುತ್ತಿದ್ದೇನೆ. ಮನೆ ಮಾಡಲು ಅವರು ನನಗೆ ಸಾಕಷ್ಟು ಸಂಬಳ ನೀಡುತ್ತಿಲ್ಲ. ಹಾಗಾಗಿ ಪ್ರತಿಭಟನೆಯ ಭಾಗವಾಗಿ, ನಾನು ನನ್ನ ಕೆಲಸದ ಸ್ಥಳದಲ್ಲೇ ಬದುಕುತ್ತೇನೆ. ನಾನು ಎಷ್ಟು ಸಮಯದವರೆಗೆ ಇಲ್ಲಿರಬಹುದು ಎಂದು  ನೋಡೋಣ ಎಂದು ಅವರು ವಿಡಿಯೋದಲ್ಲಿ ಹೇಳಿದ್ದಾರೆ. 

ಈ ವಿಡಿಯೋದಲ್ಲಿ ಅವರು ತಮ್ಮ ಕಚೇರಿಯ ಕಾರ್ನರ್‌ನಲ್ಲಿ (Corner) ತಾತ್ಕಾಲಿಕ ಮನೆಯನ್ನು ಸ್ಥಾಪಿಸುವುದನ್ನು ಮತ್ತು ಅನೇಕ ಬ್ಯಾಗ್‌ಗಳು ಮತ್ತು ಸೂಟ್‌ಕೇಸ್‌ಗಳಿಂದ (Shootcase) ತನ್ನ ವಸ್ತುಗಳನ್ನು ತೆಗೆದು ಹಾಕುವುದನ್ನು ತೋರಿಸುತ್ತದೆ. ಅಲ್ಲದೇ ಅವರು ವೀಕ್ಷಕರಿಗೆ ತಾವು ಎಲ್ಲೆಲ್ಲಿ ಏನೇನು ಇಡುತ್ತಿದ್ದೇನೆ ಎಂಬುದನ್ನು ತೋರಿಸಿದರು. ಸೆಕ್ಯುರಿಟಿ ಕ್ಯಾಮೆರಾಗಳಿಗೆ ಸಿಕ್ಕಿಬೀಳಲಿದ್ದೀರಿ ಎಂದು ಕಾಮೆಂಟ್ ಮಾಡಿದವರಿಗೆ ಪ್ರತಿಕ್ರಿಯಿಸಿದ ಅವರು ನಾನಿರುವ ಪ್ರದೇಶದಲ್ಲಿ ಕ್ಯಾಮರಾ (Camera)ಇಲ್ಲ ಎಂದರು. ಅಲ್ಲದೇ ಆಫೀಸ್‌ನಲ್ಲಿ ಹೇಗೆ ಸ್ನಾನ ಮಾಡುತ್ತೀರಿ ಎಂದು ಕೇಳಿದ್ದಕ್ಕೆ ತನ್ನ ಕಚೇರಿ ಇರುವ ಕಟ್ಟಡದಲ್ಲಿ ಎರಡು ಪುರುಷರ ಶವರ್‌ಗಳಿವೆ ಮತ್ತು ಬಳಸಲು ಉಚಿತವಾದ ಟವೆಲ್‌ಗಳಿವೆ ಎಂದು ಅವರು ಬಹಿರಂಗಪಡಿಸಿದರು.

ಆಫೀಸ್‌ನಿಂದ ಬಂದು ಈ ಕೆಲಸ ಮಾಡಿದ್ರೆ, ರಾತ್ರಿ ಆರಾಮ ಸಿಗುತ್ತೆ
 

ಅದಾಗ್ಯೂ ಈತನ ಈ ಸ್ಟಂಟ್ ಜಾಸ್ತಿ ದಿನ ಉಳಿದಿಲ್ಲ. ಇವರ ಈ ಕಚೇರಿ(office) ವಾಸದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್‌ ಆಗುತ್ತಿದ್ದಂತೆ ನಾಲ್ಕೇ ದಿನದಲ್ಲಿ ಅವರ ಕಚೇರಿಯ ಮಾನವ ಸಂಪನ್ಮೂಲ ಸಿಬ್ಬಂದಿ ಅವರನ್ನು ಕಚೇರಿಯಿಂದ ಹೊರ ಹಾಕಿದ್ದಾರೆ ಎಂಬುದನ್ನು ಅವರೇ ಮತ್ತೆ ಧೃಡಪಡಿಸಿದ್ದಾರೆ. ಇದು ನಾನು ಯೋಚಿಸಿದ್ದಕ್ಕಿಂತ ಬೇಗನೆ ಸಂಭವಿಸಿದೆ ಎಂದು ಅವರು ಹೇಳಿದ್ದಾರೆ. ಸೈಮನ್ ನಂತರ ತನ್ನ ಕೆಲಸದ ಸ್ಥಳದಲ್ಲಿ ತನ್ನ ಭವಿಷ್ಯದ ಬಗ್ಗೆ ಖಚಿತತೆ ಇಲ್ಲ ಎಂಬುದನ್ನು ಬಹಿರಂಗಪಡಿಸಿದನು. ನನ್ನ ಮತ್ತು ಕಂಪನಿಯ ನಡುವಿನ ಸಂಬಂಧವು ಹೇಗೆ ಕೊನೆಗೊಳ್ಳುತ್ತದೆ ಎಂದು ನನಗೆ ತಿಳಿದಿಲ್ಲ ಎಂದು ಅವರು ಹೇಳಿದರು. 

click me!