
Tech Desk: ಚೆಚೆನ್ ಗಣರಾಜ್ಯದ ಮುಖ್ಯಸ್ಥ ರಂಜಾನ್ ಕದಿರೊವ್ ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್ ಸಿಇಒ ವಿಶ್ವದ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್‌ಗೆ ತಿರುಗೇಟು ನೀಡಿದ್ದಾರೆ. ಉಕ್ರೇನ್ ಮೇಲಿನ ರಷ್ಯಾ ಯುದ್ಧವನ್ನು(Russia Ukraine war) ಖಂಡಿಸುತ್ತಲೇ ಬಂದಿರುವ ಎಲಾನ್ ಮಸ್ಕ್(Elon Musk) ಇತ್ತೀಚೆಗೆ ನೇರ ಚಾಲೆಂಜ್ ಹಾಕಿ ಗಮನಸೆಳೆದಿದ್ದರು. ನಾನು ಈ ಮೂಲಕ ವ್ಲಾದಿಮಿರ್ ಪುಟಿನ್‌ಗೆ ಒಂದೇ ಯುದ್ಧಕ್ಕೆ ಸವಾಲು ಹಾಕುತ್ತೇನೆ ಎಂದು ಟ್ವೀಟ್ ಮಾಡಿದ್ದರು. ಈ ಹೇಳಿಕೆಗೆ ಕದಿರೊವ್ ತಿರುಗೇಟು ನೀಡಿದ್ದು ಎಲಾನ್ ಮಸ್ಕ ಟ್ವೀಟ್ ಮೂಲಕ ಇದನ್ನು ಹಂಚಿಕೊಂಡಿದ್ದಾರೆ.
ಚೆಚೆನ್ ಗಣರಾಜ್ಯದ ಮುಖ್ಯಸ್ಥ ರಂಜಾನ್ ಕದಿರೊವ್ ಟೆಲಿಗ್ರಾಮ್ ಪೋಸ್ಟ್‌ನ ಸ್ಕ್ರೀನ್‌ಶಾಟನ್ನು ಹಂಚಿಕೊಂಡಿರುವ ಎಲಾನ್ ಮಸ್ಕ್ ತಮ್ಮ ಟ್ವಿಟರ್ ಹೆಸರನ್ನು ಎಲೋನಾ ಮಸ್ಕ್ (Elona Musk) ಎಂದು ಬದಲಾಯಿಸಿದ್ದಾರೆ. ರಂಜಾನ್ ಕದಿರೊವ್ ಮಸ್ಕ್‌ಗೆ ತಮ್ಮನ್ನು ತಾವು ಪುಟಿನ್‌ನೊಂದಿಗೆ ಹೋಲಿಸಿಕೊಳ್ಳಬೇಡಿ ಎಂದಿದ್ದಾರೆ.
ಇದನ್ನೂ ಓದಿ: Elon Musk vs Putin ಚಾಲೆಂಜ್ ಗೆದ್ದವರಿಗೆ ಉಕ್ರೇನ್, ರಷ್ಯಾ ಅಧ್ಯಕ್ಷ ಪುಟಿನ್‌ಗೆ ನೇರ ಸವಾಲು ಹಾಕಿದ ಎಲಾನ್ ಮಸ್ಕ್!
ಉಕ್ರೇನ್ ಪರ ನಿಂತಿರುವ ಎಲಾನ್ ಮಸ್ಕ್ ಈಗಾಗಲೇ ಸ್ಟಾರ್‌ಲಿಂಕ್ ಸೇರಿದಂತೆ ಹಲವು ನೆರವು ಘೋಷಿಸಿದ್ದಾರೆ. ಇತ್ತೀಚೆಗೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್‌ಗೆ ಚಾಲೆಂಜ್ ಮಾಡಿ, ನನ್ನ ಚಾಲೆಂಜ್ ಗೆದ್ದವರಿಗೆ ಉಕ್ರೇನ್ ಎಂದು ಎಲಾನ್ ಮಸ್ಕ್ ಟ್ವೀಟ್ ಮಾಡಿದ್ದರು.
“ನೀವು ಬಾಕ್ಸಿಂಗ್ ರಿಂಗ್‌ನ ಕೆಂಪು ಪಕ್ಷದಲ್ಲಿದ್ದೀರಾ, ಉದ್ಯಮಿ ಮತ್ತು ಟ್ವಿಟರ್ ಬಳಕೆದಾರರಾಗಿದ್ದೀರಾ; ಮತ್ತು ಪುಟಿನ್, ನೀಲಿ ಬಣ್ಣದ ಪಕ್ಷಕ್ಕೆ, ವಿಶ್ವ ರಾಜಕಾರಣಿ ಮತ್ತು ತಂತ್ರಜ್ಞ, ಯಾರು ಪಶ್ಚಿಮ ದೇಶಗಳಲ್ಲಿ ಮತ್ತು ಅಮೆರಿಕಾದಲ್ಲಿ ವಿಸ್ಮಯವನ್ನು ಉಂಟುಮಾಡುತ್ತಾರೆ? ವ್ಲಾಡಿಮಿರ್ ವ್ಲಾಡಿಮಿರೊವಿಚ್ ಅವರು ಹೆಚ್ಚು ದುರ್ಬಲ ಎದುರಾಳಿಯಾದ ನಿಮ್ಮನ್ನು ಸೋಲಿಸಿದಾಗ ಅವರು ಕ್ರೀಡಾಹೀನರಾಗಿ ಕಾಣುತ್ತಾರೆ, ”ಎಂದು ಕದಿರೊವ್ ಮಸ್ಕರನ್ನು ಲೇವಡಿ ಮಾಡಿದ್ದಾರೆ. ವ್ಲಾಡಿಮಿರೊವಿಚ್ ಎಂಬುದು ಪುಟಿನ್ ಅವರ ಮಧ್ಯದ ಹೆಸರು.
ಅವರು ಮಸ್ಕರನ್ನು "ಸೌಮ್ಯ ಎಲೋನಾ" ಎಂದು ಉಲ್ಲೇಖಿಸಿದ್ದು ಚೆಚೆನ್ ರಿಪಬ್ಲಿಕ್ ಕೇಂದ್ರಗಳಲ್ಲಿ ತರಬೇತಿಯನ್ನು ಪಡೆಯುವುದರಿಂದ ಪುಟಿನ್ ಅವರೊಂದಿಗೆ ಸ್ಪರ್ಧಿಸಬಹುದು ಎಂದು ಹೇಳಿದ್ದಾರೆ. ರಷ್ಯಾದ ವಿಶೇಷ ಪಡೆಗಳ ವಿಶ್ವವಿದ್ಯಾನಿಲಯದಲ್ಲಿ ಮಸ್ಕ್ ಬಂದೂಕು ತರಬೇತಿಗೆ ಒಳಗಾಗುವಂತೆ ಅವರು ಸೂಚಿಸಿದ್ದಾರೆ.
ಹೋರಾಟದ ತರಬೇತಿಗಾಗಿ ಅಖ್ಮತ್ ಫೈಟ್ ಕ್ಲಬ್, ಗ್ರೋಜ್ನಿ ಚೆಚೆನ್ ಸ್ಟೇಟ್ ಟೆಲಿವಿಷನ್ ಮತ್ತು ರೇಡಿಯೊ ಬ್ರಾಡ್‌ಕಾಸ್ಟಿಂಗ್ ಕಂಪನಿ ಸಾಮಾಜಿಕ ನೆಟ್‌ವರ್ಕ್ ಖಾತೆಗಳನ್ನು ಮೇಲ್ವಿಚಾರಣೆ ಮಾಡುವುದು ಮತ್ತು ನವೀಕರಿಸುವುದು ಹೇಗೆ ಎಂದು ತಿಳಿಯುವಂತೆ ಕದಿರೊವ್ ಹೇಳಿದ್ದಾರೆ.
ಇದನ್ನೂ ಓದಿ: Musk vs Putin ಅಮೆರಿಕ ಗಗನಯಾತ್ರಿಗಳನ್ನು ಭೂಮಿಗೆ ಕರೆತರಲ್ಲ ಎಂದ ರಷ್ಯಾ ಎಚ್ಚರಿಕೆಗೆ ಮಸ್ಕ್ ತಿರುಗೇಟು!
"ನೀನೀವು ಚೆಚೆನ್ ಗಣರಾಜ್ಯದಿಂದ ಸಂಪೂರ್ಣವಾಗಿ ವಿಭಿನ್ನ ವ್ಯಕ್ತಿ ಎಲೋನಾಗೆ ಹಿಂತಿರುಗುತ್ತೀರಿ,ಅಂದರೆ ಎಲೋನ್" ಎಂದು ಪೋಸ್ಟ್‌ನಲ್ಲಿ ಹೇಳಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಎಲಾನ ಮಸ್ಕ್, “ಆಫರ್‌ಗಾಗಿ ಧನ್ಯವಾದಗಳು, ಆದರೆ ಅಂತಹ ಅತ್ಯುತ್ತಮ ತರಬೇತಿಯು ನನಗೆ ಅತೀ ಹೆಚ್ಚಿನ (Too Much) ಪ್ರಯೋಜನವನ್ನು ನೀಡುತ್ತದೆ. ಅವನು ಜಗಳವಾಡಲು ಹೆದರಿದರೆ, ನಾನು ನನ್ನ ಎಡಗೈಯನ್ನು ಬಳಸಲು ಒಪ್ಪುತ್ತೇನೆ ಮತ್ತು ನಾನು ಎಡಗೈ ( left-handed) ಕೂಡ ಅಲ್ಲ. ಎಲೋನಾ" ಎಂದು ಟ್ವೀಟ್ ಮಾಡಿದ್ದಾರೆ.
ಅವರ ಟ್ವಿಟ್ಟರ್ ಸಂಭಾಷಣೆಯ ನಂತರ ಟ್ವೀಟರ್‌ನಲ್ಲಿ ಮೀಮ್‌ಗಳು ಮತ್ತು ತಮಾಷೆಯ ಪ್ರತಿಕ್ರಿಯೆಗಳು ಕಾಮೆಂಟ್‌ಗಳು ಹರಿದು ಬಂದಿವೆ . "ನಿಮ್ಮ ಟ್ವಿಟರ್ ಪ್ರೊಫೈಲ್ ಹೆಸರನ್ನು ಕೆಲವು ದಿನಗಳವರೆಗೆ ಎಲೋನಾ ಎಂದು ಬದಲಾಯಿಸಿ" ಎಂದು ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. 78 ಮಿಲಿಯನ್ ಫಾಲೋವರ್ಸ್ ಹೊಂದಿರುವ ಮಸ್ಕ್ ತಮ್ಮ ಟ್ವಿಟ್ಟರ್ ಹೆಸರನ್ನು ಎಲೋನಾ ಮಸ್ಕ್ ಎಂದು ಬದಲಾಯಿಸಿಕೊಂಡಿದ್ದು ನೆಟ್ಟಿಗರಿಗೆ ಅಚ್ಚರಿ ಮೂಡಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ