26 ಲಕ್ಷ ಮೌಲ್ಯದ ಐಷಾರಾಮಿ ಬ್ಯಾಗ್‌ನೊಂದಿಗೆ ಕಾಣಿಸಿಕೊಂಡ ಉಗ್ರ ಯಹ್ಯಾ ಸಿನ್ವರ್ ಪತ್ನಿ

Published : Oct 21, 2024, 11:19 AM IST
26 ಲಕ್ಷ ಮೌಲ್ಯದ ಐಷಾರಾಮಿ ಬ್ಯಾಗ್‌ನೊಂದಿಗೆ ಕಾಣಿಸಿಕೊಂಡ ಉಗ್ರ ಯಹ್ಯಾ ಸಿನ್ವರ್ ಪತ್ನಿ

ಸಾರಾಂಶ

ಕಳೆದ ವಾರವಷ್ಟೇ ದಕ್ಷಿಣ ಗಾಜಾದಲ್ಲಿ ಹತ್ಯೆಯಾದ ಹಮಾಸ್‌ನ ನೂತನ ಮುಖ್ಯಸ್ಥ ಯಹ್ಯಾ ಸಿನ್ವರ್‌ನ ಪತ್ನಿ ಐಷಾರಾಮಿ ಬ್ರಾಂಡ್ ಆದ ಹರ್ಮಿಸ್ ಬಿರ್ಕಿನ್‌ ಬ್ಯಾಗ್‌ ಹಿಡಿದುಕೊಂಡು ಓಡಾಡುತ್ತಿರುವ ವೀಡಿಯೋವೊಂದು ವೈರಲ್ ಆಗಿದೆ. 

ಕಳೆದ ವಾರವಷ್ಟೇ ದಕ್ಷಿಣ ಗಾಜಾದಲ್ಲಿ ಹತ್ಯೆಯಾದ ಹಮಾಸ್‌ನ ನೂತನ ಮುಖ್ಯಸ್ಥ ಯಹ್ಯಾ ಸಿನ್ವರ್‌ನ ಪತ್ನಿ ಐಷಾರಾಮಿ ಬ್ರಾಂಡ್ ಆದ ಹರ್ಮಿಸ್ ಬಿರ್ಕಿನ್‌ ಬ್ಯಾಗ್‌ ಹಿಡಿದುಕೊಂಡು ಓಡಾಡುತ್ತಿರುವ ವೀಡಿಯೋವೊಂದು ವೈರಲ್ ಆಗಿದೆ. ಇಸ್ರೇಲ್‌ನ ಅಧಿಕೃತ ಟ್ವಿಟ್ಟರ್ ಖಾತೆಯೂ ವೀಡಿಯೋದ ಸ್ಕ್ರಿನ್‌ಶಾಟ್‌ನ್ನು ಶೇರ್‌ ಮಾಡಿದ್ದು, ಉಗ್ರ ಸಂಘಟನೆಯ ನಾಯಕನ ಐಷಾರಾಮಿ ಬದುಕಿನ ಮತ್ತೊಂದು ಮುಖವನ್ನು ಅನಾವರಣ ಮಾಡಿದೆ. 

ಈ ಬಗ್ಗೆ ಟ್ವಿಟ್ಟ ಮಾಡಿರುವ ಇಸ್ರೇಲ್ ಹೀಗೆ ಬರೆದುಕೊಂಡಿದೆ. ಹಮಾಸ್ ನಾಯಕ ಯಹ್ಯಾ ಸಿನ್ವರ್‌ನ ಪತ್ನಿ ಆಕ್ಟೋಬರ್‌7 ಮೊದಲು ರಾತ್ರಿ ಸುರಂಗದೊಳಗೆ ನುಸುಳುವ ವೇಳೆ ಫೋಟೋದಲ್ಲಿ ಸೆರೆ ಸಿಕ್ಕಿದ್ದಾರೆ. ಈ ವೇಳೆ ಈಕೆ 32 ಸಾವಿರ ಡಾಲರ್‌ನ ಅಂದರೆ 26 ಲಕ್ಷದ ಐಷಾರಾಮಿ ಹರ್ಮಿಸ್ ಬಿರ್ಕಿನ್ ಬ್ರಾಂಡ್‌ನ ಬ್ಯಾಗನ್ನು ಕೈಯಲ್ಲಿ,  ಹಿಡಿದುಕೊಂಡಿದ್ದರು.  ಗಾಜಾದ ಜನ ಹಮಾಸ್‌ನ ಕಿರುಕುಳದಿಂದಾಗಿ ಸಂಕಷ್ಟಪಡುತ್ತಿದ್ದರೆ ಹಮಾಸ್ ನಾಯಕ ಸಿನ್ವರ್ ಹಾಗೂ ಆತನ ಪತ್ನಿ ಕುಟುಂಬ ಯಾವುದೇ ನಾಚಿಕೆ ಇಲ್ಲದೇ ಐಷಾರಾಮಿ ಭೋಗದ ಜೀವನ ನಡೆಸುತ್ತಿದ್ದಾರೆ ಹಾಗೂ ಅಲ್ಲಿನ ಇತರ ಜನರನ್ನು ಸಾಯಲು ಕಳುಹಿಸುತ್ತಿದ್ದಾರೆ ಎಂದು ಇಸ್ರೇಲ್ ಎಕ್ಸ್‌ನಲ್ಲಿ ಬರೆದುಕೊಂಡಿದೆ. ಈ ಟ್ವಿಟನ್ನು ಎರಡು ಮಿಲಿಯನ್‌ಗೂ ಅಧಿಕ ಜನ ವೀಕ್ಷಣೆ ಮಾಡಿದ್ದಾರೆ.

1200 ಜನರ ಇಸ್ರೇಲಿಗಳ ಹತ್ಯೆಗೂ ಮುನ್ನ ಸುರಂಗ ಸೇರಿದ್ದ ಸಿನ್ವರ್‌; ಅಲ್ಲಿಂದಲೇ ಹತ್ಯೆ, ಕಿಡ್ನಾಪ್‌, ರೇಪ್‌ ವೀಕ್ಷಣೆ

ದಕ್ಷಿಣ ಗಾಜಾದಲ್ಲಿ ಕಳೆದ ವಾರವಷ್ಟೇ ಹಮಾಸ್ ನಾಯಕ ಯಹ್ಯಾ ಸಿನ್ವರ್‌ನನ್ನು ಇಸ್ರೇಲಿ ಪಡೆಗಳು ಹೊಡೆದುರುಳಿಸಿದ್ದವು. ಈತ ಕಳೆದ ವರ್ಷ ಸಾವಿರಾರು ಇಸ್ರೇಲಿಗರ ಸಾವಿಗೆ ಕಾರಣವಾದ ಆಕ್ಟೋಬರ್ 7ರ ದಾಳಿಯ ರೂವಾರಿಯಾಗಿದ್ದ. ಆತ ಆ ದಾಳಿ ನಡೆಯುವ ಗಂಟೆಗೂ ಮೊದಲು ತನ್ನ ಪತ್ನಿ ಹಾಗೂ ಮಕ್ಕಳ ಜೊತೆ ಈ ಸುರಂಗದೊಳಗೆ ಹೋಗುತ್ತಿರುವ ದೃಶ್ಯ ಇದಾಗಿದೆ. 

ಇಸ್ರೇಲ್ ಹಂಚಿಕೊಂಡಿರುವ ಈ ಚಿತ್ರದಲ್ಲಿ ಬ್ಯಾಗ್ ಹರ್ಮಿಸ್ ಬಿರ್ಕಿನ್ 40 ಬ್ಲ್ಯಾಕ್ ಟೋಗೊ ಗೋಲ್ಡ್ ಹಾರ್ಡ್‌ವೇರ್ ಆವೃತ್ತಿಯಂತೆಯೇ ಕಾಣುತ್ತಿದೆ. ಆದರೆ ಈ ವಿಚಾರದ ಬಗ್ಗೆ ಪ್ಯಾಲೇಸ್ತಿನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ದಕ್ಷಿಣ ಗಾಜಾ ನಗರವಾದ ರಫಾದಲ್ಲಿ ಇಸ್ರೇಲ್ ದಾಳಿಯಲ್ಲಿ ಸಿನ್ವಾರ್ ಸಾವಿನ ನಂತರ ಈ ದೃಶ್ಯಗಳನ್ನು ಇಸ್ರೇಲ್ ಬಿಡುಗಡೆ ಮಾಡಿದೆ. ಇಸ್ರೇಲ್‌ನ 828 ನೇ ಬ್ರಿಗೇಡ್ ಈ ಗುಪ್ತಚರ ಆಧಾರಿತ ದಾಳಿಗಳು ಮತ್ತು ಕಾರ್ಯಾಚರಣೆಗಳನ್ನು ನಡೆಸಿತು. 

ಇರಾನ್‌ ಮೇಲೆ ಭಾರೀ ದಾಳಿಗೆ ಇಸ್ರೇಲ್‌ ಸಿದ್ಧತೆ- ಸೋರಿಕೆಯಾದ ಅಮೆರಿಕದ 2 ರಹಸ್ಯ ದಾಖಲೆಗಳಿಂದ ಪತ್ತೆ

ಇಸ್ರೇಲಿ ಸೇನಾ ವಕ್ತಾರ ರಿಯರ್ ಅಡ್ಮಿರಲ್ ಡೇನಿಯಲ್ ಹಗರಿ ಅವರು ಹಮಾಸ್ ಅಡಗುತಾಣದಲ್ಲಿರುವ ಶೌಚಾಲಯಗಳು, ಶವರ್‌ಗಳು ಮತ್ತು ಅಡುಗೆಮನೆಯೊಂದಿಗೆ ಭೂಗತ ಕಾಂಪೌಂಡ್‌ನ ದೃಶ್ಯಗಳನ್ನು ತೋರಿಸಿದರು. ಅಲ್ಲಿ ಆಹಾರ, ನಗದು ಮತ್ತು ದಾಖಲೆಗಳು ಸಹ ಪತ್ತೆಯಾಗಿದ್ದವು. ಈ ಮಧ್ಯೆ ಯಹ್ಯಾ ಸಿನ್ವರ್ ಅವರು ಯುದ್ಧದಲ್ಲಿ ಹೋರಾಡುವ ಮೂಲಕ ವಿರೋಚಿತ ಸಾವು ಕಂಡರು ಎಂದು ಹಮಾಸ್ ಹೇಳಿದೆ. 

ಈ ವಾರದ ಆರಂಭದಲ್ಲಿನ ಡ್ರೋನ್ ದೃಶ್ಯಾವಳಿಯಲ್ಲಿ ಕಾಣಿಸುವಂತೆ ಸಿನ್ವರ್ ತನ್ನ ಕೊನೆಕ್ಷಣದಲ್ಲಿ ಗಂಭೀರವಾಗಿ ಗಾಯಗೊಂಡಿರುವುದು ಕಾಣಿಸುತ್ತಿದೆ. ಅಲ್ಲದೇ ಮರಣೊತ್ತರ ಪರೀಕ್ಷೆಯಲ್ಲಿ ತಲೆಗೆ ಗುಂಡು ತಗುಲಿ ಆತ ಸಾವನ್ನಪ್ಪಿರುವುದು ತಿಳಿದು ಬಂದಿದೆ. ಅಲ್ಲದೇ ಆತನ ಒಂದು ಬೆರಳು ತುಂಡಾಗಿರುವುದು ಕೂಡ ಕಂಡು ಬಂದಿದೆ. 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಪ್ರದರ್ಶನದ ವೇಳೆ ಝೂನಲ್ಲಿ ಆರೈಕೆ ಮಾಡ್ತಿದ್ದವರ ಮೇಲೆಯೇ ಕರಡಿ ಅಟ್ಯಾಕ್: ವೀಡಿಯೋ
ಆಕಾಶಕ್ಕೇ ಕನ್ನಡಿ ಹಾಕಿ ರಾತ್ರಿಗೆ ಗುಡ್‌ ಬೈ ಸಾಹಸ!