ದೇಹಕ್ಕೆ ಬೆಂಕಿ ಹಚ್ಚಿ 100 ಮೀಟರ್ ಓಟ, 2 ವಿಶ್ವದಾಖಲೆ ನಿರ್ಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ!

By Suvarna NewsFirst Published Jul 1, 2023, 6:10 PM IST
Highlights

ದೇಹಕ್ಕೆ ಬೆಂಕಿ ಹಚ್ಚಿಕೊಂಡು, ಆಮ್ಲಜನಕವಿಲ್ಲದೆ 100 ಮೀಟರ್ ಓಟವನ್ನು ಕೇವಲ 17 ಸೆಕೆಂಡ್‌ಗಳಲ್ಲಿ ಗುರಿ ತಲುಪಲಾಗಿದೆ. ಈ ಮೂಲಕ ಎರಡೆರಡು ವಿಶ್ವದಾಖಲೆ ನಿರ್ಮಿಸಲಾಗಿದೆ. ಈ ಕುರಿತು ರೋಚಕ ಹಾಗೂ ಭಯಾನಕ ವಿವರ ಇಲ್ಲಿದೆ.

ಫ್ರಾನ್ಸ್(ಜು.01) ಫ್ರಾನ್ಸ್‌ನ ಹಲವು ಭಾಗದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಗಲಭೆಕೋರರು ಸಿಕ್ಕ ಸಿಕ್ಕ ವಾಹನಗಳಿಗೆ, ಕಟ್ಟಡಗಳಿಗೆ ಬೆಂಕಿ ಹಚ್ಚುತ್ತಿದ್ದಾರೆ. ಆದರೆ ಇದೇ ಫ್ರಾನ್ಸ್‌ನಲ್ಲಿ ಅಗ್ನಿಶಾಮಕದಳದ ಸಿಬ್ಬಂದಿ ತನ್ನ ದೇಹಕ್ಕೆ ಬೆಂಕಿ ಹಚ್ಚಿಕೊಂಡು 100 ಮೀಟರ್ ಓಟವನ್ನು 17 ಸೆಕೆಂಡ್‌ಗಳಲ್ಲಿ ಪೂರೈಸಿ ವಿಶ್ವದಾಖಲೆ ನಿರ್ಮಿಸಿದ್ದಾರೆ. 39 ವರ್ಷದ ಜೋನಾಥನ್ ವೆರೋ ಎರಡು ಸಾಧನೆ ಮಾಡಿದ್ದಾರೆ. ಒಂದು ಆಮ್ಲಜನಕವಿಲ್ಲದೆ 100 ಮೀಟರ್ ಓಟವನ್ನು 17 ಸೆಕೆಂಡ್‌ಗಳಲ್ಲಿ ಪೂರೈಸಿದ್ದಾರೆ. ಇದರ ಜೊತೆಗೆ ದೇಹಕ್ಕೆ ಬೆಂಕಿ ಹಚ್ಚಿ 272.52 ಮೀಟರ್ ದೂರವನ್ನು ವೇಗವಾಗಿ ಓಡಿದ್ದಾರೆ. ದೆಹ ಸುಡುವಿಕೆ ಮೂಲಕ ಓಟ ಪೂರೈಸಿದ ದಾಖಲೆಯೂ ಜೋನಾಥನ್ ಹೆಸರಿಗೆ ಬರೆಯಿಸಿಕೊಂಡಿದ್ದಾರೆ.

ಜೋನಾಥನ್ ವೃತ್ತಿಪರ ಸ್ಟಂಟ್‌ಮ್ಯಾನ್. ಬಾಲ್ಯದಿಂದಲೂ ಬೆಂಕಿಯೊಂದಿಗೆ ಆಟವಾಡುತ್ತಲೇ ಬೆಳೆದಿದ್ದಾನೆ. ತನ್ನ ಇಷ್ಟ ಹಾಗೂ ಆಸಕ್ತಿಯ ಕ್ಷೇತ್ರವಾಗಿರುವ ಅಗ್ನಿಶಾಮಕದಳದಲ್ಲಿ ಹಲವು ಸಂದಿಗ್ಧ ಸಂದರ್ಭದಲ್ಲಿ ಜೋನಾಥನ್ ಜಾಣ್ಮೆ ಪ್ರಯೋಗಿಸಿದ್ದಾನೆ. ಹಲವು ಕ್ಲಿಷ್ಟಕರ ಘಟನೆಯನ್ನು ಎದುರಿಸಿದ್ದಾನೆ. ಇನ್ನು ಹಲವು ಬೆಂಕಿಯ ಶೋಗಳಲ್ಲಿ ಪಾಲ್ಗೊಂಡು ಬೆಂಕಿ ಜೊತೆ ಸರಸವಾಡಿ ಎಲ್ಲರನ್ನೂ ಚಕಿತಗೊಳಿಸಿದ್ದಾನೆ. ಬಾಯಲ್ಲಿ ಬೆಂಕಿ ಇಟ್ಟುಕೊಂಡು ಉಗುಳುವುದು, ಮಾನವ ಜ್ಯೋತಿಯಾಗಿ ಪರಿವರ್ತಿಸುವುದು ಸೇರಿದಂತೆ ಹಲವು ಅಪಾಯಕಾರಿ ಸ್ಟಂಟ್‌ಗಳನ್ನು ಜೋನಾಥನ್ ಮಾಡಿದ್ದಾನೆ. ಇದೀಗ 100 ಮೀಟರ್ ಓಟವನ್ನು ಬೆಂಕಿಜೊತೆಯಲ್ಲಿ ಓಡಿ ಗಿನ್ನಿಸೆ ದಾಖಲೆ ಪುಟ ಸೇರಿಕೊಂಡಿದ್ದಾನೆ.

ಹೈ ಹೀಲ್ಸ್‌ ಧರಿಸಿ 12.28 ಸೆಕೆಂಡ್‌ನಲ್ಲಿ 100 ಮೀಟರ್ ಓಡಿದ ಯುವಕನಿಗೆ ಗಿನ್ನೆಸ್ ಗರಿ

ಅತ್ಯಂತ ಅಪಾಯಕಾರಿ ಸ್ಟಂಟ್ ಮೂಲಕ ವಿಶ್ವದಾಖಲೆ ನಿರ್ಮಿಸಿದ ಜೋನಾಥನ್ ತನ್ನ ಸಾಧನೆ ಕುರಿತು ಸಂತಸ ವ್ಯಕ್ತಪಡಿಸಿದ್ದಾರೆ. ಇಷ್ಟೇ ಅಲ್ಲ ಬೆಂಕಿ ಹಚ್ಚಿಕೊಂಡು 100 ಮೀಟರ್ ಓಟದ ಅಪಾಯಾಕಾರಿ ಸ್ಟಂಟ್ ನನಗೆ ಅತ್ಯಂತ ತೃಪ್ತಿದಾಯಕಾಗಿದೆ. ಇದರಲ್ಲಿ ಹಲವು ಅರ್ಥಗಳಿವೆ. ನಾನು ಅಗ್ನಿಶಾಮಕದಳದ ಸಿಬ್ಬಂಧಿ. ನನಗೆ ಅಗ್ನಿಶಾಮಕದಲ್ಲಿ ನೀಡಿರುವ ತರಬೇತಿ, ಪರಿಸ್ಥಿತಿಗಳನ್ನು ಎದುರಿಸಿದ ರೀತಿಯಿಂದಲೇ ಕಲಿಯುತ್ತಾ ಬೆಳೆದಿದ್ದೇನೆ. ಇದೀಗ ಈ ಸಾಧನೆ ಮಾಡಲು ಸಾಧ್ಯವಾಗಿರುವುದು ಅತೀವ ಸಂತಸ ತಂದಿದೆ ಎಂದು ಜೋನಾಥನ್ ಹೇಳಿದ್ದಾರೆ.

ಗಿನ್ನಿಸ್ ವಿಶ್ವ ದಾಖಲೆ ಪುಟ ಸೇರಿದ ಪ್ರಧಾನಿ ಮೋದಿ ಅಂತಾರಾಷ್ಟ್ರೀಯ ಯೋಗದಿನಾಚರಣೆ!

ಈ ಕುರಿತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ವಿಡಿಯೋಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೃದಯ ಸಮಸ್ಯೆ ಇರುವ ವ್ಯಕ್ತಿಗಳು ಈ ವಿಡಿಯೋ ನೋಡಬೇಡಿ. ಅತ್ಯಂತ ಅಪಾಯಕಾರಿ ಸ್ಟಂಟ್ ಇದಾಗಿದೆ. ಶುಭಾಶಯಗಳು ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ. ಅತ್ಯಂತ ಅಪಾಯಕಾರಿ ಸ್ಟಂಟ್ ಮೂಲಕ ಜಗತನ್ನೇ ಚಕಿತಗೊಳಿಸಿದ್ದೀರಿ. ನೀವು ಅಗ್ನಿಶಾಮಕ ದಳ ಸಿಬ್ಬಂದಿ ಅನ್ನೋದು ಮತ್ತೊಂದು ಹೆಮ್ಮೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

 

New record: The fastest full body burn 100 m sprint without oxygen - 17 seconds by Jonathan Vero (France)

Jonathan also set the record for the farthest distance ran in full body burn during this attempt at 272.25 metres! 🔥 pic.twitter.com/J0QJsPNkPf

— Guinness World Records (@GWR)

 

ಆದರೆ ಮತ್ತೆ ಕೆಲವರು ಈ ಅಪಾಯಕಾರಿ ಸ್ಟಂಟ್ ಯಾಕೆ? ಇದರಿಂದ ಆಗಿರುವ ಪ್ರಯೋಜನವೇನು? ಇವೆಲ್ಲಾ ದಾಖಲೆ ಹೇಗಾಗುತ್ತದೆ. ಈ ರೀತಿ ತಲೆ ಬುಡವಿಲ್ಲದೆ ದಾಖಲೆ ಮಾಡಲು ಅವಕಾಶ ನೀಡುವುದೇಕೆ ಎಂದು ಕೆಲವರು ಪ್ರಶ್ನಿಸಿದ್ದಾರೆ.
 

click me!