
ನ್ಯೂಯಾರ್ಕ್: ಅಲಸ್ಕಾ ಏರ್‌ಲೈನ್ಸ್ ಬೋಯಿಂಗ್ 737-9 ಮ್ಯಾಕ್ಸ್ ಹೆಸರಿನ ವಿಮಾನವೊಂದು ಟೇಕಾಫ್ ಆದ ಸ್ವಲ್ಪ ಹೊತ್ತಿನಲ್ಲೇ ವಿಮಾನದ ಬಾಗಿಲು ಹಠಾತ್ ಸ್ಫೋಟಗೊಂಡ ಆಘಾತಕಾರಿ ಘಟನೆ ನಡೆದಿದೆ. ಕೂಡಲೇ ವಿಮಾನವನ್ನು ತುರ್ತು ಲ್ಯಾಂಡಿಂಗ್ ಮಾಡಲಾಗಿದೆ. ಈ ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರು ಈ ಘಟನೆಯ ವೀಡಿಯೋ ಮಾಡಿದ್ದು, ಮಧ್ಯದ ಕ್ಯಾಬೀನ್ ಬಳಿ ಇರುವ ನಿರ್ಗಮನ ಬಾಗಿಲು ಸಂಪೂರ್ಣವಾಗಿ ವಿಮಾನದಿಂದ ಬೇರ್ಪಟ್ಟಿರುವುದು ಗೋಚರಿಸುತ್ತಿದೆ.
ಘಟನೆಗೆ ಸಂಬಂಧಿಸಿದಂತೆ ಅಲಸ್ಕಾ ಏರ್‌ಲೈನ್ಸ್ ಟ್ವಿಟ್ಟರ್‌ನಲ್ಲಿ ಮಾಹಿತಿ ನೀಡಿದೆ. ಪೋರ್ಟ್‌ಲ್ಯಾಂಡ್ ನಿಂದ ಕ್ಯಾಲಿಫೋರ್ನಿಯಾದ ಒಂಟರಿಯೋಗೆ ಹೊರಟಿದ್ದ AS1282 ವಿಮಾನದಲ್ಲಿ ಆಘಾತಕಾರಿ ಘಟನೆ ನಡೆದಿದ್ದು, ಕೂಡಲೇ ವಿಮಾನೂ ಪೋರ್ಟ್‌ಲ್ಯಾಂಡ್ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ. ಈ ವಿಮಾನದಲ್ಲಿ 6 ಸಿಬ್ಬಂದಿ ಹಾಗೂ 171 ಪ್ರಯಾಣಿಕರಿದ್ದರು. ಹೇಗೆ ಈ ಘಟನೆ ಸಂಭವಿಸಿತ್ತು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ಹೆಚ್ಚಿನ ಮಾಹಿತಿ ಮುಂದೆ ನೀಡಲಿದ್ದೇವೆ ಎಂದು ಅಲಸ್ಕಾ ಏರ್‌ಲೈನ್ಸ್ ಹೇಳಿದೆ.
ವಿಮಾನದಲ್ಲಿಯೇ ಗಂಡ-ಹೆಂಡತಿ ಜಗಳ, ಮ್ಯೂನಿಚ್‌ಗೆ ಹೋಗಬೇಕಿದ್ದ ವಿಮಾನ ದೆಹಲಿಯಲ್ಲಿ ತುರ್ತು ಲ್ಯಾಂಡಿಂಗ್!
ಘಟನೆಗೆ ಸಂಬಂಧಿಸಿದಂತೆ ಅಮೆರಿಕಾ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ (NTSB)ಯೂ ಕೂಡ ಟ್ವಿಟ್ಟರ್‌ನಲ್ಲಿ ಘಟನೆ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಮಾಹಿತಿ ನೀಡಿದೆ. ಘಟನೆ ನಡೆದ ವೇಳೆ ವಿಮಾನವೂ ಟೇಕಾಫ್ ಆಗಿ ಕೆಲ ನಿಮಿಷಗಳಷ್ಟೇ ಆಗಿದ್ದು ಈ ವಿಮಾನವೂ ಗರಿಷ್ಠ ಎತ್ತರವಾದ 16,325 ಅಡಿಯಲ್ಲಿ ಹಾರುತ್ತಿತ್ತು ಎಂದು ನೈಜ ಸಮಯದ ವಿಮಾನ ಚಲನೆಯ ಮಾನಿಟರ್ Flightradar24 ಹೇಳಿದೆ.
ಘಟನೆ ನಡೆದ ಈ 737 ಮ್ಯಾಕ್ಸ್ ವಿಮಾನವೂ ಅಲಸ್ಕಾ ಏರ್‌ಲೈನ್ಸ್‌ಗೆ 2023ರ ಅಕ್ಟೋಬರ್‌ನಲ್ಲಿ ಸೇರ್ಪಡೆಯಾಗಿತ್ತು. ಹಾಗೂ ನವೆಂಬರ್ 11ರಿಂದ ಅದು ವಾಣಿಜ್ಯ ಸೇವೆಯ ನೀಡಲು ಆರಂಭಿಸಿತ್ತು. ಅಂದಿನಿಂದ ಇಲ್ಲಿವರೆಗೆ ಒಟ್ಟು 145 ಬಾರಿ ಇದು ಹಾರಾಟ ನಡೆಸಿದೆ ಎಂದು Flightradar24 ವರದಿ ಮಾಡಿದೆ. 737-9 MAX ವಿಮಾನವೂ ರೆಕ್ಕೆಗಳ ಹಿಂಭಾಗದಲ್ಲಿ ಕ್ಯಾಬಿನ್ ನಿರ್ಗಮನ ಬಾಗಿಲನ್ನು ಹೊಂದಿದೆ.
Viral Video: ಕಿತ್ಕೊಂಡು ಬಂದ ಭೇದಿ, ವಿಮಾನ ಪೂರ್ತಿ ಮಲವಿಸರ್ಜನೆ ಮಾಡಿದ ಪ್ರಯಾಣಿಕ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ