
ಜಕಾರ್ತ: ಇಂಡೋನೇಷಿಯಾದಲ್ಲಿ ಮತ್ತೆ ಭೂಮಿ ಕಂಪಿಸಿದ ಅನುಭವ ಆಗಿದೆ. 7.0 ತೀವ್ರತೆಯಲ್ಲಿ ಭೂಮಿ ಕಂಪಿಸಿದ ಅನುಭವ ಆಗಿದೆ ಎಂದು ಹವಾಯ್‌ನಲ್ಲಿರುವ NWS ಪೆಸೀಫಿಕ್ ಸುನಾಮಿ ಎಚ್ಚರಿಕಾ ಕೇಂದ್ರ ತಿಳಿಸಿದೆ. ಭೂಕಂಪನ ಕೇಂದ್ರ ಬಿಂದುವಿನಿಂದ 300 ಕಿಲೋ ಮೀಟರ್ ದೂರದಲ್ಲಿ ಭೂಮಿ ಸುನಾಮಿ ಅಲೆ ಏಳುವ ಸಾಧ್ಯತೆ ಇದೆ ಎಂದು ಹವಾಯ್‌ನ ಸುನಾಮಿ ಎಚ್ಚರಿಕಾ ಕೇಂದ್ರ ತಿಳಿಸಿದೆ ಎಂಬ ಮಾಹಿತಿ ಇದೆ.
ಪೂರ್ವ ಇಂಡೋನೇಷ್ಯಾದಲ್ಲಿ ಇಂದು ಪ್ರಬಲ ಭೂಕಂಪ ಸಂಭವಿಸಿದ್ದು, ಯಾವುದೇ ಹಾನಿ ಸಂಭವಿಸಿಲ್ಲ ಮತ್ತು ಸುನಾಮಿ ಎಚ್ಚರಿಕೆಯನ್ನು (tsunami warning) ನೀಡಲಾಗಿಲ್ಲ. ಅಮೆರಿಕಾ ಭೌಗೋಳಿಕ ಸಮೀಕ್ಷೆ ಹೇಳುವಂತೆ ಈ ಭೂಕಂಪನದ ಕೇಂದ್ರ ಬಿಂದು ಉತ್ತರ ಮಲುಕು ಪ್ರಾಂತ್ಯದ ಟೊಬೆಲೊದಿಂದ ವಾಯುವ್ಯಕ್ಕೆ 150 ಕಿಲೋಮೀಟರ್‌ನಲ್ಲಿ ಕೇಂದ್ರೀಕೃತವಾಗಿರುವ 60 ಕಿಲೋಮೀಟರ್ ಆಳ ಸಮುದ್ರಲ್ಲಿ ಸಂಭವಿಸಿದೆ ಎಂದು ಯುಎಸ್ ಜಿಯೋಲಾಜಿಕಲ್ ಸರ್ವೆ ಹೇಳಿದೆ.
ದೆಹಲಿ ಸೇರಿದಂತೆ ಉತ್ತರ ಭಾರತದಲ್ಲಿ ಭೂಕಂಪನ, ಮತ್ತೆ ರಾಜಧಾನಿಯಲ್ಲಿ ಆತಂಕ!
ಆದರೆ ಭೂಕಂಪನದ ಹಿನ್ನೆಲೆಯಲ್ಲಿ ಇಂಡೋನೇಷ್ಯಾದ ಹವಾಮಾನ, ಹವಾಮಾನಶಾಸ್ತ್ರ (Meteorology) ಮತ್ತು ಭೂಭೌತಶಾಸ್ತ್ರ (Climatology) ಏಜೆನ್ಸಿಯಿಂದ ಯಾವುದೇ ಸುನಾಮಿ ಎಚ್ಚರಿಕೆ ನೀಡಲಾಗಿಲ್ಲ. ಈ ಭೂಕಂಪನದಿಂದ ಹೊನೊಲುಲುವಿನಲ್ಲಿರುವ (Honolulu) ಪೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರವು ಹತ್ತಿರದ ಇಂಡೋನೇಷ್ಯಾ ಕರಾವಳಿಗೆ ಸಂಭಾವ್ಯ ಅಪಾಯವಿದೆ ಎಂದು ಮೊದಲು ಸೂಚಿಸಿತ್ತು. ಆದರೆ ನಂತರದಲ್ಲಿ ಯಾವುದೇ ಅಪಾಯವಿಲ್ಲ ಎಂದು ಹೇಳಿದೆ.
ಇನ್ನು ಭೂಮಿ ಕಂಪಿಸಿದ ಅನುಭವವಾಗುತ್ತಿದ್ದಂತೆ ಅನೇಕರು ಮನೆಯಿಂದ ಹೆದರಿ ಹೊರಗೋಡಿ ಬಂದಿದ್ದಾರೆ. ಎಂದು ಟೊಬೆಲೊ ನಿವಾಸಿ ಪಿಯುಸ್ ಒಹೋಯಿವುತುನ್ ಹೇಳಿದ್ದಾರೆ. ಮನೆಯಲ್ಲಿದ್ದ ದೀಪಗಳು ಅಲುಗಾಡಲು ಆರಂಭವಾಗುತ್ತಿದ್ದಂತೆ, ನಾವು ಸೇರಿದಂತೆ ಮನೆಗಳ ಒಳಗಿದ್ದ ಜನರೆಲ್ಲಾ ಹೊರಗೋಡಿ ಬಂದಿದ್ದಾರೆ ಎಂದು ಅವರು ಹೇಳಿದ್ದಾರೆ.
ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಭೂಕಂಪನ: ಭೂಮಿಯಿಂದ ಬಂದ ಶಬ್ದಕ್ಕೆ ಮನೆಯಿಂದ ಹೊರಬಂದ ಜನ
ಇದಕ್ಕೂ ಕೆಲ ದಿನಗಳ ಹಿಂದೆ ಇಂಡೋನೇಷ್ಯಾದಲ್ಲಿ (Indonesia) 6.1 ತೀವ್ರತೆಯಲ್ಲಿ ಭೂಮಿ ಕಂಪಿಸಿದ ಅನುಭವವಾಗಿತ್ತು. ಆದರೆ ಯಾವುದೇ ಅನಾಹುತದ ವರದಿಯಾಗಿಲ್ಲ. ಇಂಡೋನೇಷ್ಯಾ, ವಿಶಾಲವಾದ ದ್ವೀಪ ಸಮೂಹವನ್ನು ಹೊಂದಿರುವ ದೇಶವಾಗಿದ್ದು, 270 ದಶಲಕ್ಷಕ್ಕೂ ಹೆಚ್ಚು ಜನರ ನೆಲೆಯಾಗಿದೆ. ಇದು ಪೆಸಿಫಿಕ್ ಜಲಾನಯನ ಪ್ರದೇಶದ ಸುತ್ತಲಿನ ಭೂಕಂಪನ ದೋಷಗಳ ರಿಂಗ್ ಆಫ್ ಫೈರ್ (Ring of Fire) ಆಗಿರುವುದರಿಂದ ಅಲ್ಲಿ ಆಗಾಗ ಭೂಕಂಪನ ಹಾಗೂ ಜ್ವಾಲಾಮುಖಿ ಸ್ಫೋಟಗಳಿಂದ ಆಗಾಗ ಹಾನಿಯಾಗುತ್ತಿರುತ್ತದೆ.
ಈ ಹಿಂದೆ ಇಲ್ಲಿ ಕಳೆದ ವರ್ಷ 2021ರ ನವಂಬರ್‌ನಲ್ಲಿ 5.6 ತೀವ್ರತೆಯ ಭೂಕಂಪನ ಸಂಭವಿಸಿತ್ತು. ಪಶ್ಚಿಮ ಜಾವಾದಲ್ಲಿ (West Java) ಸಂಭವಿಸಿದ ಈ ಭೂಕಂಪನದಲ್ಲಿ 331 ಜನರು ಪ್ರಾಣ ಬಿಟ್ಟಿದ್ದರು. 2018ರ ನಂತರ ನಡೆದ ಅತ್ಯಂತ ದೊಡ್ಡ ಭೂಕಂಪ ಅನಾಹುತ ಇದಾಗಿತ್ತು. 2018ರಲ್ಲಿ ಸುಲ್ವೇಸಿಯಲ್ಲಿ ಸಂಭವಿಸಿದ ಭೂಕಂಪನದಲ್ಲಿ 4,340 ಜನರು ಸಾವನ್ನಪ್ಪಿದ್ದರು. ಇದಕ್ಕೂ ಮೊದಲು 2004ರಲ್ಲಿ ಹಿಂದೂ ಮಹಾಸಾಗರದಲ್ಲಿ (Indian Ocean) ನಡೆದ ಸುನಾಮಿ ಅನಾಹುತದಲ್ಲಿ ಈ ಭಾಗದ 12 ದೇಶಗಳಲ್ಲಿ ಸುನಾಮಿ ಮರಣ ಮೃದಂಗ ಸೃಷ್ಟಿಸಿತ್ತು. ಸುಮಾರು 12 ದೇಶಗಳ 230,000 ಜನ ಪ್ರಾಣ ಕಳೆದುಕೊಂಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ