
ಬೀಜಿಂಗ್: ಕೋವಿಡ್‌ನಿಂದ ನಲುಗುತ್ತಿರುವ ಚೀನಾದ ಆರ್ಥಿಕ ಪ್ರಗತಿ ದರ 2022ರಲ್ಲಿ ಶೇ.3ಕ್ಕೆ ಕುಸಿತ ಕಂಡಿದೆ. ಇದು ಕಳೆದ 50 ವರ್ಷಗಳಲ್ಲೇ ಚೀನಾ ದಾಖಲಿಸಿದ 2ನೇ ಅತ್ಯಂತ ಕನಿಷ್ಠ ಪ್ರಗತಿ ದರವಾಗಿದೆ. 1974ರಲ್ಲಿ ಚೀನಾ ಕೇವಲ ಶೇ.2.3 ಜಿಡಿಪಿ ದಾಖಲಿಸಿದ್ದು ಸಾರ್ವಕಾಲಿಕ ಕನಿಷ್ಠ ಎನ್ನಿಸಿದೆ. ಚೀನಾದ ರಾಷ್ಟ್ರೀಯ ಸಾಂಖ್ಯಿಕ ಬ್ಯೂರೋ ಬಿಡುಗಡೆ ಮಾಡಿರುವ ವರದಿ ಅನ್ವಯ ಡಿ.31ಕ್ಕೆ ಕೊನೆಗೊಂಡ ವರ್ಷದಲ್ಲಿ ಚೀನಾ ಕೇವಲ ಶೇ.3ರಷ್ಟುಜಿಡಿಪಿ ಸಾಧಿಸಿದೆ. 2021ರಲ್ಲಿ ದೇಶದ ಒಟ್ಟು ಜಿಡಿಪಿ 17.94 ಲಕ್ಷ ಕೋಟಿ ಡಾಲರ್‌ಗಳಷ್ಟಿದ್ದರೆ, 2022ರಲ್ಲಿ ಅದು 17.94 ಲಕ್ಷ ಕೋಟಿ ಡಾಲರ್‌ಗೆ ಕುಸಿದಿದೆ. ಒಟ್ಟಾರೆ ಆರ್ಥಿಕ ಪ್ರಗತಿ ಸ್ಥಿರವಾಗಿದ್ದರೂ, ಆರ್ಥಿಕ ಪುನಶ್ಚೇತನಕ್ಕೆ ಅಗತ್ಯವಾದ ಅಡಿಪಾಯ ಇನ್ನೂ ಅಸ್ಥಿರವಾಗಿಯೇ ಇದೆ ಎಂದು ವರದಿ ಹೇಳಿದೆ.
ಡಿ.31ಕ್ಕೆ ಕೊನೆಗೊಂಡ ಕೊನೆಯ ತ್ರೈಮಾಸಿಕದಲ್ಲಿ ಶೇ.2.9ರಷ್ಟು ಜಿಡಿಪಿ ದಾಖಲಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಜಿಡಿಪಿ ದರ ಶೇ.3.9ರಷ್ಟಿತ್ತು.
ಕಾರಣ ಏನು?:
ಕೋವಿಡ್ ವಿಷಯದಲ್ಲಿ ಶೂನ್ಯ ಸಹಿಷ್ಣು ನೀತಿ ಪಾಲಿಸಿದ್ದು, ಕೋವಿಡ್ ನಿರ್ಬಂಧಗಳಿಂದಾಗಿ ಆರ್ಥಿಕತೆಗೆ ಬಿದ್ದ ಪೆಟ್ಟು, ರಿಯಲ್ ಎಸ್ಟೇಟ್ ವಲಯಕ್ಕೆ ಬಿದ್ದಿರುವ ದೊಡ್ಡ ಪೆಟ್ಟು ಮತ್ತು ದೈತ್ಯ ಕಂಪನಿಗಳ ಮೇಲೆ ಸರ್ಕಾರ ಕೈಗೊಂಡ ಕ್ರಮಗಳು ಆರ್ಥಿಕ ಪ್ರಗತಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ ಎಂದು ಹೇಳಲಾಗಿದೆ.
ಜನಸಂಖ್ಯೆ 70 ವರ್ಷದಲ್ಲೇ ಮೊದಲ ಬಾರಿ ಚೀನಾದಲ್ಲಿ ಇಳಿಕೆ
35 ದಿನದಲ್ಲಿ 60,000 ಸಾವು, ಈ ತಿಂಗಳಲ್ಲಿ ಬೀಜಿಂಗ್ ಸಂಪೂರ್ಣ ನಿವಾಸಿಗಳಿಗೆ ಕೋವಿಡ್ ಸೋಂಕು!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ