ಆಸ್ಪ್ರೇಲಿಯಾದಲ್ಲಿ ಮತ್ತೊಂದು ಹಿಂದೂ ದೇವಾಲಯದ ಮೇಲೆ ಖಲಿಸ್ತಾನ ಪರ ಹಾಗೂ ಭಾರತ ವಿರೋಧಿ ಬರಹಗಳನ್ನು ಗೀಚಲಾಗಿದೆ. ವಿಕ್ಟೋರಿಯಾದ ಕ್ಯಾರಂಡೌನ್ಸ್‌ನಲ್ಲಿರುವ ಐತಿಹಾಸಿಕ ಶಿವ ವಿಷ್ಣು ದೇವಸ್ಥಾನವನ್ನು ಖಲಿಸ್ತಾನಿಗಳು ವಿರೂಪಗೊಳಿಸಿದ್ದಾರೆ.
ಮೆಲ್ಬರ್ನ್: ಆಸ್ಪ್ರೇಲಿಯಾದಲ್ಲಿ ಮತ್ತೊಂದು ಹಿಂದೂ ದೇವಾಲಯದ ಮೇಲೆ ಖಲಿಸ್ತಾನ ಪರ ಹಾಗೂ ಭಾರತ ವಿರೋಧಿ ಬರಹಗಳನ್ನು ಗೀಚಲಾಗಿದೆ. ವಿಕ್ಟೋರಿಯಾದ ಕ್ಯಾರಂಡೌನ್ಸ್‌ನಲ್ಲಿರುವ ಐತಿಹಾಸಿಕ ಶಿವ ವಿಷ್ಣು ದೇವಸ್ಥಾನವನ್ನು ಖಲಿಸ್ತಾನಿಗಳು ವಿರೂಪಗೊಳಿಸಿದ್ದಾರೆ. ಪೊಂಗಲ್ ಹಿನ್ನೆಲೆ ಭಕ್ತರು ದೇವಾಲಯಕ್ಕೆ ತೆರಳಿದಾಗ ಕೃತ್ಯ ಬೆಳಕಿಗೆ ಬಂದಿದ್ದು ಘಟನೆ ಕುರಿತು ಮಂಗಳವಾರ ಮಾಧ್ಯಮಗಳು ವರದಿ ಮಾಡಿವೆ. ಜ.12 ರಂದು ಇಂತದೇ ಕೃತ್ಯವನ್ನು ಮೆಲ್ಬರ್ನ್‌ನ ಸ್ವಾಮಿನಾರಾಯಣ ದೇವಾಲಯದಲ್ಲಿ ಎಸಗಲಾಗಿತ್ತು. ಒಂದೇ ವಾರದ ಅಂತರದಲ್ಲಿ ನಡೆದ ಎರಡನೇ ಘಟನೆ ಇದಾಗಿದ್ದು ಇದನ್ನು ಇಲ್ಲಿನ ಹಿಂದೂಗಳು ತೀವ್ರವಾಗಿ ಖಂಡಿಸಿದ್ದಾರೆ.
Khalistan ಪ್ರತ್ಯೇಕತಾವಾದಿ ನಾಯಕನ ಮೇಲೆ Red Corner ಮನವಿ ತಿರಸ್ಕರಿಸಿದ Interpol
ವಿದ್ಯಾರ್ಥಿನಿಯರ ವಿಡಿಯೋ ಲೀಕ್ ಕೇಸ್ ಹಿಂದೆ ಖಲಿಸ್ತಾನ್? ಪ್ರತಿಭಟನೆ ನಿಲ್ಲಿಸಲು ಕೆನಡಾದಿಂದ ಬೆದರಿಕೆ ಕರೆ!