ಹಸೀನಾ ರಾಜೀನಾಮೆ ಬಳಿಕ ಈಗ ಬಾಂಗ್ಲಾದೇಶ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರಿಂದಲೂ ಪದತ್ಯಾಗ

By Anusha Kb  |  First Published Aug 10, 2024, 4:24 PM IST

ಶೇಕ್ ಹಸೀನಾ ಬಾಂಗ್ಲಾದೇಶ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ದೇಶ ತೊರೆದ ಬೆನ್ನಲೇ ಈಗ ಬಾಂಗ್ಲಾದೇಶದ ಸುಪ್ರೀಂಕೋರ್ಟ್ ನ್ಯಾಯಾಧೀಶರು ಕೂಡ ತಮ್ಮ ಹುದ್ದೆಗ ರಾಜೀನಾಮೆ ನೀಡಿ ಪದತ್ಯಾಗ ಮಾಡಿದ್ದಾರೆ. 


ಢಾಕಾ:  ಶೇಕ್ ಹಸೀನಾ ಬಾಂಗ್ಲಾದೇಶ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ದೇಶ ತೊರೆದ ಬೆನ್ನಲೇ ಈಗ ಬಾಂಗ್ಲಾದೇಶದ ಸುಪ್ರೀಂಕೋರ್ಟ್ ನ್ಯಾಯಾಧೀಶರು ಕೂಡ ತಮ್ಮ ಹುದ್ದೆಗ ರಾಜೀನಾಮೆ ನೀಡಿ ಪದತ್ಯಾಗ ಮಾಡಿದ್ದಾರೆ. ಬಾಂಗ್ಲಾದೇಶ ಸುಪ್ರೀಂಕೋರ್ಟ್ ಸುತ್ತಲೂ  ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳ ಒತ್ತಡ ತೀವ್ರವಾದ ಹಿನ್ನೆಲೆಯಲ್ಲಿ ಮುಖ್ಯ ನ್ಯಾಯಾಧೀಶ ಓಬಿದುಲಾ ಹಸನ್ ಅವರು ರಾಜೀನಾಮೆ ನೀಡಿದ್ದಾರೆ ಎಂದು ಬಾಂಗ್ಲಾದೇಶದ ಮಾಧ್ಯಮವಾದ ಜಮುನಾ ಟಿವಿ ವರದಿ ಮಾಡಿದೆ. 

ಬಾಂಗ್ಲಾದೇಶದಲ್ಲಿ ಮೀಸಲಾತಿಗೆ ಆಗ್ರಹಿಸಿ ವಿದ್ಯಾರ್ಥಿ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಪರಿಣಾಮ ಶೇಖ್ ಹಸೀನಾ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ದೇಶ ತೊರೆದ ಬೆನ್ನಲೇ ಈಗ ಅಲ್ಲಿನ ಸುಪ್ರೀಂಕೋರ್ಟ್ ನ್ಯಾಯಾಧೀಶರನ್ನು ಕೂಡ ವಿದ್ಯಾರ್ಥಿ ಪ್ರತಿಭಟನಾಕಾರರು ಹುದ್ದೆಯಿಂದ ಕೆಳಗಿಳಿಸಿದ್ದಾರೆ. ಬಾಂಗ್ಲಾದೇಶದ ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್ ಅವರೊಂದಿಗೆ ಚರ್ಚಿಸಿದ ನಂತರ ಸುಪ್ರೀಂಕೋರ್ಟ್‌ ನ್ಯಾಯಾಧೀಶರಾದ 65 ವರ್ಷದ ಒಬಿದುಲ್ಲಾ ಹಸನ್ ರಾಜೀನಾಮೆ ನೀಡಿದ್ದಾರೆ ಎಂದು ಢಾಕಾ ಟ್ರಿಬ್ಯೂನ್ ವರದಿ ಮಾಡಿದೆ. 

Tap to resize

Latest Videos

undefined

ರಫೇಲ್‌ ರಕ್ಷಣೆಯಲ್ಲಿ ಭಾರತಕ್ಕೆ ಬಂದಿದ್ದ ಶೇಕ್ ಹಸೀನಾ: ರಾಜೀನಾಮೆ ಬಳಿಕ ಬಾಂಗ್ಲಾದಲ್ಲಿ ಹಿಂಸೆಗೆ 110 ಬಲಿ

ಬಾಂಗ್ಲಾದೇಶ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರಾದ ಒಬಿದುಲ್ಲಾ ಹಸನ್ ಸುಪ್ರೀಂಕೋರ್ಟ್‌ನ ಎರಡು ವಿಭಾಗಗಳ ಎಲ್ಲಾ ನ್ಯಾಯಾಧೀಶರನ್ನು ಸೇರಿಸಿ ಪೂರ್ಣ ಕೋರ್ಟ್ ಮೀಟಿಂಗ್ ಕರೆದಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ಈ ರೀತಿಯ ಪೂರ್ಣ ಕೋರ್ಟ್ ಮೀಟಿಂಗ್ ನ್ಯಾಯಾಂಗದ ದಂಗೆಯಾಗಿದ್ದು,  ಇದನ್ನು ವಿರೋಧಿಸಿ ಹೈಕೋರ್ಟ್ ಆವರಣಕ್ಕೆ ಮುತ್ತಿಗೆ  ಹಾಕುವುದಾಗಿ ವಿದ್ಯಾರ್ಥಿಗಳು ಘೋಷಣೆ ಮಾಡಿದರು.  ವಿದ್ಯಾರ್ಥಿಗಳ ಈ ಬೆದರಿಕೆ ಹಿನ್ನೆಲೆಯಲ್ಲಿ  ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶ ಒಬೆದುಲ್ಲಾ ಹಸನ್ ತಾವು ಕರೆದಿದ್ದ ನ್ಯಾಯಾಧೀಶರ ಪ್ರತಿಭಟನೆಯನ್ನು ಮುಂದೂಡಿಕೆ ಮಾಡಿದ್ದರು. ಇದಾದ ಸ್ವಲ್ಪ ಹೊತ್ತಿನಲ್ಲಿ ಅವರು ತಾವು ಪದತ್ಯಾಗ ಮಾಡುವುದಾಗಿ ಘೋಷಣೆ ಮಾಡಿದರು. 

ಅಮ್ಮನ ಜೀವ ಉಳಿಸಿದ್ದಕ್ಕೆ ಧನ್ಯವಾದಗಳು: ಮೋದಿ ಸರ್ಕಾರಕ್ಕೆ ಶೇಕ್ ಹಸೀನಾ ಪುತ್ರನ ಕೃತಜ್ಞತೆ

ಕಳೆದ ವರ್ಷ ಬಾಂಗ್ಲಾದೇಶದ ಸುಪ್ರೀಂಕೋರ್ಟ್ ನ್ಯಾಯಾಧೀಶರಾಗಿ ಹಸನ್ ಅಧಿಕಾರ ಸ್ವೀಕರಿಸಿದ್ದರು. ನಿರ್ಗಮಿತ ಪ್ರಧಾನಿ ಶೇಕ್ ಹಸೀನಾ ಆಪ್ತರೆಂದೇ ಗುರುತಿಸಿಕೊಂಡಿದ್ದರು.  ಆದರೆ ಹಿಂಸಾಚಾರಕ್ಕೆ ತಿರುಗಿದ್ದ ವಿದ್ಯಾರ್ಥಿಗಳ ಪ್ರತಿಭಟನೆಯಿಂದಾಗಿ ಶೇಕ್ ಹಸೀನಾ ರಾಜೀನಾಮೆ ನೀಡಿ ದೇಶ ತೊರೆಯಬೇಕಾಗಿ ಬಂತು. ಇದಾದ ನಂತರ ನಡೆದ ಹಿಂಸಾಚಾರದಲ್ಲಿ ಅವಾಮಿ ಲೀಗ್ ಕಾರ್ಯಕರ್ತರು, ನಾಯಕರು, ಪೊಲೀಸರನ್ನು ಗುರಿಯಾಗಿಸಿ ದಾಳಿ ನಡೆದಿದ್ದು,  450ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರ ಯೂನಿಯನ್ ಕೂಡ ಪ್ರತಿಭಟನೆ ನಡೆಸುತ್ತಿದ್ದು, ನಮ್ಮ ಸುರಕ್ಷತೆಯ ಭರವಸೆ ಸಿಗುವವರೆಗೂ ಕರ್ತವ್ಯಕ್ಕೆ ಹಾಜರಾಗುವುದಿಲ್ಲ ಎಂದು ಆಗ್ರಹಿಸಿದ್ದಾರೆ. 

ಇತ್ತ ಬ್ರಿಟನ್‌ಗೆ ರಾಜಾಶ್ರಯ ಬೇಡಿ ಹೋಗುವುದಾಗಿ ಹೇಳಿ ಭಾರತಕ್ಕೆ ಆಗಮಿಸಿರುವ ಶೇಕ್ ಹಸೀನಾ ಈಗ ನವದೆಹಲಿಯಲ್ಲಿ ಭಾರಿ ಭದ್ರತೆಯಲ್ಲಿ ಸುರಕ್ಷಿತವಾಗಿದ್ದಾರೆ. ಹಸೀನಾ ಇತ್ತ ಆಗಮಿಸುತ್ತಿದ್ದಂತೆ ಮತಾಂಧರು ದೇಶದಲ್ಲಿ ಹಿಂದೂ ಸಮುದಾಯದ ಮೇಲೆ ದಾಳಿ ನಡೆಸಿದ್ದು, ಅವರ ಧಾರ್ಮಿಕ ಕೇಂದ್ರಗಳು ದೇವಾಲಯಗಳ ಮೇಲೆ ದಾಳಿ ನಡೆಸಿ ಕ್ರೌರ್ಯ ಮೆರೆದಿದ್ದಾರೆ. ಇದರಿಂದ ಬಾಂಗ್ಲಾದಲ್ಲಿರುವ ಹಿಂದೂ ಸಮುದಾಯ ತೀವ್ರ ಆತಂಕದಲ್ಲಿದೆ. 

ಶೇಖ್ ಹಸೀನಾ ರಾಜೀನಾಮೆಗೆ ಕಾರಣ ಇದೇ ನಾಹಿದ್ ಇಸ್ಲಾಂ, ಯಾರು ಈ ವಿದ್ಯಾರ್ಥಿ ಸಂಘಟನೆಯ ನಾಯಕ?

click me!