ಬೆಂಗಳೂರು ಸ್ಟಾರ್ಟಪ್‌ನಿಂದ ಯುರೋಪ್‌ ಸೇನೆಗೆ ಬ್ಯಾಟರಿ!

Published : May 16, 2022, 06:36 AM IST
ಬೆಂಗಳೂರು ಸ್ಟಾರ್ಟಪ್‌ನಿಂದ ಯುರೋಪ್‌ ಸೇನೆಗೆ ಬ್ಯಾಟರಿ!

ಸಾರಾಂಶ

* ಮೇಡ್‌ ಇನ್‌ ಇಂಡಿಯಾ ಬ್ಯಾಟರಿಗೆ ಜಾಗತಿಕ ಮಾನ್ಯತೆ * ಬೆಂಗಳೂರು ಸ್ಟಾರ್ಟಪ್‌ನಿಂದ ಯುರೋಪ್‌ ಸೇನೆಗೆ ಬ್ಯಾಟರಿ * ಬೆಂಗಳೂರು ಮೂಲದ ಪ್ರವೇಗ್‌ ಎಂಬ ಸ್ಟಾರ್ಟಪ್‌ ಕಂಪನಿ

ನವದೆಹಲಿ(ಮೇ.16): ಬೆಂಗಳೂರು ಮೂಲದ ಪ್ರವೇಗ್‌ ಎಂಬ ಸ್ಟಾರ್ಟಪ್‌ ಕಂಪನಿಯು ಯುರೋಪಿಯನ್‌ ದೇಶಗಳ ಸಶಸ್ತ್ರ ಪಡೆಗಳಿಗೆ ಬ್ಯಾಟರಿ ಪೂರೈಕೆ ಮಾಡುವ ಟೆಂಡರ್‌ ಗೆದ್ದುಕೊಂಡಿದೆ. ತನ್ಮೂಲಕ ಮೇಡ್‌ ಇನ್‌ ಇಂಡಿಯಾ ಬ್ಯಾಟರಿಗಳಿಗೆ ಜಾಗತಿಕ ಮಾನ್ಯತೆ ದೊರೆತಂತಾಗಿದೆ.

ಎಂ2ಎಂ ಫ್ಯಾಕ್ಟರಿ ಅಂಡ್‌ ಎಎಂಜಿ ಪ್ರೋ ಕಂಪನಿಗಳು ಯುರೋಪಿಯನ್‌ ದೇಶಗಳ ಸಶಸ್ತ್ರ ಪಡೆಗಳಿಗೆ ದೊಡ್ಡ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳನ್ನು ಹಾಗೂ ಇನ್ನಿತರ ಇಂಧನ ಸಂಬಂಧಿ ಉಪಕರಣಗಳನ್ನು ಪೂರೈಸುತ್ತವೆ. ಆರ್ಮರ್‌, ಡೆಫ್ಕಾನ್‌, ಕ್ಯಾಸಿಯೋ, ಮ್ಯಾಗ್ನಮ್‌, ಲೆದರ್‌ಮನ್‌ ಮುಂತಾದ 90 ಪ್ರಸಿದ್ಧ ಬ್ರ್ಯಾಂಡ್‌ಗಳನ್ನು ಈ ಕಂಪನಿಗಳು ಜಂಟಿಯಾಗಿ ಹೊಂದಿವೆ. ಈ ಕಂಪನಿಗಳು ಈಗ ಪ್ರವೇಗ್‌ ಜೊತೆಗೂಡಿ ತಮ್ಮ ಉತ್ಪನ್ನಗಳಿಗೆ ಬೇಕಾದ ಬ್ಯಾಟರಿಗಳನ್ನು ಭಾರತದಲ್ಲಿ ತಯಾರಿಸಲಿವೆ. ತನ್ಮೂಲಕ ಪ್ರವೇಗ್‌ ಕಂಪನಿಯ ಬ್ಯಾಟರಿಗಳು ಯುರೋಪಿಯನ್‌ ದೇಶಗಳ ಸೇನಾಪಡೆಗೆ ಸೇರ್ಪಡೆಯಾಗಲಿವೆ.

ಈ ಬ್ಯಾಟರಿಗಳನ್ನು ಭಾರತದಲ್ಲೇ ರೂಪಿಸಿ, ವಿನ್ಯಾಸಗೊಳಿಸಿ, ಉತ್ಪಾದಿಸಲಾಗುತ್ತಿದೆ. ಇವುಗಳನ್ನು ವಿದೇಶದ ಸೇನೆಗಳಿಗೆ ಪೂರೈಸುವುದು ಭಾರತದ ರಕ್ಷಣಾ ಉತ್ಪಾದನೆ ಹಾಗೂ ರಫ್ತಿಗೆ ಸಂಬಂಧಿಸಿದಂತೆ ದೊಡ್ಡ ಸಾಧನೆಯಾಗಿದೆ. ಕೆಲ ವರ್ಷಗಳ ಹಿಂದೆ ಇಂತಹ ಬೆಳವಣಿಗೆಯನ್ನು ಊಹಿಸಲೂ ಸಾಧ್ಯವಿರಲಿಲ್ಲ ಎಂದು ಪ್ರವೇಗ್‌ ಕಂಪನಿ ಹೇಳಿಕೊಂಡಿದೆ.

ಪ್ರವೇಗ್‌ನ ಪ್ರಸಿದ್ಧ ಫೀಲ್ಡ್‌ ಪ್ಯಾಕ್‌ ಎಂಬ ಬ್ಯಾಟರಿಗಳು 60 ಮ್ಯಾಕ್‌ಬುಕ್‌ಗಳನ್ನು ಚಾಜ್‌ರ್‍ ಮಾಡುವಷ್ಟುವಿದ್ಯುತ್ತನ್ನು ಶೇಖರಿಸಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿವೆ. ಇವು ಹಗುರವಾದ ವಾಟರ್‌ಪ್ರೂಫ್‌ ಬ್ಯಾಟರಿಗಳಾಗಿದ್ದು, ಸೇನಾಪಡೆಗಳಲ್ಲಿ ಬಹಳ ಪ್ರಯೋಜನಕ್ಕೆ ಬರಲಿವೆ ಎಂದು ಹೇಳಲಾಗಿದೆ.

ಮೇಡ್‌ ಇನ್‌ ಇಂಡಿಯಾ ಪ್ರಥಮ ವಿಮಾನ ಹಾರಾಟ

ಜಗತ್ತಿನಲ್ಲಿ ಈವರೆಗೆ ಬೋಯಿಂಗ್‌ ಹಾಗೂ ಏರ್‌ಬಸ್‌ನಂಥ ಜಾಗತಿಕ ಕಂಪನಿಗಳು ಮಾತ್ರ ಪ್ರಯಾಣಿಕ ವಿಮಾನಗಳನ್ನು ಉತ್ಪಾದನೆ ಮಾಡುತ್ತಿದ್ದವು. ಈ ಸಾಲಿಗೆ ಈಗ ಬೆಂಗಳೂರು ಮೂಲದ ಎಚ್‌ಎಎಲ್‌ ಕೂಡ ಸೇರಿದೆ. ಎಚ್‌ಎಎಲ್‌ ನಿರ್ಮಿತ ಮೊಟ್ಟಮೊದಲ ಸ್ವದೇಶಿ ನಿರ್ಮಿತ ಪ್ರಯಾಣಿಕ ವಾಣಿಜ್ಯ ವಿಮಾನವು ಮಂಗಳವಾರ ಅಸ್ಸಾಮಿನ ದಿಬ್ರುಗಢದಿಂದ ಅರುಣಾಚಲ ಪ್ರದೇಶದ ಪಾಸೀಘಾಟ್‌ಗೆ ಹಾರಾಟ ಆರಂಭಿಸಿದೆ.

ಈ ಮೂಲಕ ವಿಮಾನ ಉತ್ಪಾದನೆಯಲ್ಲಿ ಭಾರತ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದೆ. ಏರ್‌ ಇಂಡಿಯಾದ ಅಂಗಸಂಸ್ಥೆಯಾದ ಅಲಯನ್ಸ್‌ ಏರ್‌ ಸಂಸ್ಥೆಯು ಎಚ್‌ಎಎಲ್‌ನಿಂದ ಈ ವಿಮಾನ ಲೀಸ್‌ಗೆ ಪಡೆದುಕೊಂಡಿದೆ.

ಕೇಂದ್ರ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮೊದಲ ಮೇಡ್‌-ಇನ್‌-ಇಂಡಿಯಾ ‘ಡಾರ್ನಿಯರ್‌ 228’ ವಾಣಿಜ್ಯ ವಿಮಾನದ ಹಾರಾಟಕ್ಕೆ ಮಂಗಳವಾರ ಚಾಲನೆ ನೀಡಿದರು. ಸಿಂಧಿಯಾ, ಕೇಂದ್ರ ಸಚಿವ ಕಿರಣ್‌ ರಿಜಿಜು ಹಾಗೂ ಹಿರಿಯ ಅಧಿಕಾರಿಗಳು ವಿಮಾನದಲ್ಲಿ ಮಂಗಳವಾರ ಪ್ರಯಾಣಿಸಿದರು.

ಈ ವಿಮಾನವು 17 ಸೀಟುಗಳನ್ನು ಹೊಂದಿದ್ದು, ಹವಾನಿಯಂತ್ರಿತ ಕ್ಯಾಬಿನ್‌ ಹೊಂದಿದೆ. ವಿಮಾನವು ಹಗಲು ಮತ್ತು ರಾತ್ರಿ ಕಾರ್ಯಾಚರಣೆ ನಡೆಸಲು ಸಮರ್ಥವಾಗಿದೆ. ಈ ವಿಮಾನ ಈಶಾನ್ಯ ಭಾರತದ ಗುಡ್ಡಗಾಡು ಪ್ರದೇಶದಲ್ಲಿ ಸಂಪರ್ಕವನ್ನು ಸುಗಮಗೊಳಿಸಲಿದೆ.

ಉಡಾನ್‌ ಯೋಜನೆ ಅಡಿ ಏ.18ರಿಂದ ನಿಯಮಿತ ವಿಮಾನದ ಕಾರ್ಯಾಚರಣೆಗಳು ಆರಂಭವಾಗಲಿವೆ. ನಂತರ ಈ ವಿಮಾನದ ಕಾರಾರ‍ಯಚರಣೆಯನ್ನು ಅರುಣಾಚಲದ ಇನ್ನಷ್ಟುಭಾಗಗಳಿಗೆ ವಿಸ್ತರಿಸಲಾಗುತ್ತದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಚಾಲನೆಯಲ್ಲಿದ್ದಾಗಲೇ ಪ್ರಜ್ಞೆ ಕಳೆದುಕೊಂಡ ಚಾಲಕ: ವಿಮಾನ ಟೇಕಾಫ್‌ದಂತೆ ಮೇಲೇರಿದ ಮರ್ಸಿಡಿಸ್: ವೀಡಿಯೋ
ಮದ್ಯಪ್ರಿಯರಿಗೆ ಶಾಕ್.. ಮಧ್ಯಾಹ್ನ 2 ರಿಂದ 5 ರವರೆಗೆ ಮದ್ಯ ಮಾರಾಟ ಬಂದ್: ಏನಿದು ಥಾಯ್‌ ವಿಚಿತ್ರ ನಿಯಮ!