ಮಗಳ ಗೆಳತಿ ಜೊತೆ ಹಸೆಮಣೆ ಏರಿದ 66 ವರ್ಷದ ಸ್ಪೋರ್ಟ್ಸ್ ಟಿವಿ ನಿರೂಪಕ

Published : Jun 28, 2023, 07:45 PM ISTUpdated : Jun 28, 2023, 07:46 PM IST
ಮಗಳ ಗೆಳತಿ ಜೊತೆ ಹಸೆಮಣೆ ಏರಿದ 66 ವರ್ಷದ ಸ್ಪೋರ್ಟ್ಸ್ ಟಿವಿ ನಿರೂಪಕ

ಸಾರಾಂಶ

ಸ್ಕೈ ಸ್ಪೋರ್ಟ್ಸ್‌ನ ಟಿವಿಯ ಮಾಜಿ ಉದ್ಯೋಗಿ ಕ್ರೀಡಾ ನಿರೂಪಕ 66 ವರ್ಷದ ಪಂಡಿತ್ ರಿಚರ್ಡ್ ಕೀ ತನ್ನ ಮಗಳ ವಯಸ್ಸಿನ ಮಗಳ ಗೆಳತಿಯೂ ಆದ ತನಗಿಂತ 30 ವರ್ಷದ ಹುಡುಗಿ ಜೊತೆ ಹಸೆಮಣೆ ಏರಿದ್ದಾರೆ

ಬ್ರಿಟನ್: ಸ್ಕೈ ಸ್ಪೋರ್ಟ್ಸ್‌ನ ಟಿವಿಯ ಮಾಜಿ ಉದ್ಯೋಗಿ ಕ್ರೀಡಾ ನಿರೂಪಕ 66 ವರ್ಷದ ಪಂಡಿತ್ ರಿಚರ್ಡ್ ಕೀ ತನ್ನ ಮಗಳ ವಯಸ್ಸಿನ ಮಗಳ ಗೆಳತಿಯೂ ಆದ ತನಗಿಂತ 30 ವರ್ಷದ ಹುಡುಗಿ ಜೊತೆ ಹಸೆಮಣೆ ಏರಿದ್ದಾರೆ. ಈ ಮೂಲಕ ತಮ್ಮ ಹಿಂದಿನ ಮಾಜಿ ಪತ್ನಿ ಜೊತೆಗಿನ  34 ವರ್ಷದ ಬಾಂಧವ್ಯಕ್ಕೆ ಸಂಪೂರ್ಣ ಎಳ್ಳುನೀರು ಬಿಟ್ಟಿದ್ದಾರೆ. ತನ್ನ ಪುತ್ರಿ ಜೆಮ್ಮಳಾ ಗೆಳತಿ ಲೂಸಿ ರೋಸ್ ಜೊತೆ  ತಮ್ಮ ಆತ್ಮೀಯರ ಸಮ್ಮುಖದಲ್ಲಿ ಪಂಡಿತ್ ರಿಚರ್ಡ್ ಹಸೆಮಣೆ ಏರಿದ್ದಾರೆ. ಈ ಮದುವೆಯಲ್ಲಿ ಪುತ್ರಿ ಜೆಮ್ಮಾ ಭಾಗವಹಿಸಿರಲಿಲ್ಲ ಎಂದು ತಿಳಿದು  ಬಂದಿದೆ. 

ಮಗಳ ಗೆಳತಿಯ ಜೊತೆ ಸಂಬಂಧ ಇರುವ ಕಾರಣಕ್ಕೆ ಪಂಡಿತ್ ರಿಚರ್ಡ್, ತನ್ನ ಪತ್ನಿ ಜೂಲಿಯಾಳನ್ನು 2016ರಲ್ಲಿ ತೊರೆದಿದ್ದರು ಎಂದು ಸುದ್ದಿಯಾಗಿತ್ತು. ಆಗ ಮಗಳ ಗೆಳತಿಯನ್ನೇ ಅಪ್ಪ ಪ್ರೇಮಿಸುತ್ತಿದ್ದಾನೆ ಎಂದು ಸುದ್ದಿಯಾಗಿತ್ತು. ಅದರಂತೆ ಈಗ ಮಗಳ ಗೆಳತಿಯ ಜೊತೆ ರಿಚರ್ಡ್ ಹಸೆಮಣೆ ಏರಿದ್ದಾರೆ. ಅದೇ ಸಂದರ್ಭದಲ್ಲಿ ರಿಚರ್ಡ್ ಮೊದಲ ಪತ್ನಿ ಜೂಲಿಯಾ ಥೈರಾಯ್ಡ್‌ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಅದೇ ವೇಳೆ ಪತಿ ರಿಚರ್ಡ್‌ ಮಗಳ ಗೆಳತಿಯ ಜೊತೆ  ಆಫೇರ್ ಶುರು ಮಾಡಿಕೊಂಡಿದ್ದರು  ಎಂಬ ಆರೋಪ ಕೇಳಿ ಬಂದಿತ್ತು. ಬೆಂಕಿ ಇಲ್ಲದೇ ಹೊಗೆ ಬರುವುದಿಲ್ಲ ಎಂಬ ಗಾದೆಯಂತೆ ಆ ಆರೋಪ ಇಂದು ನಿಜವಾಗಿದೆ. ಜೂನ್ 24 ರಂದು ಮಗಳ ಪ್ರಾಯದ ಯುವತಿ ಜೊತೆ ರಿಚರ್ಡ್ ಹಸೆಮಣೆ ಏರಿದ್ದಾರೆ. ಇವರ ಮದ್ವೆಯಲ್ಲಿ ಭಾಗವಹಿಸಿದ ಅತಿಥಿಗಳು ಮದುವೆಯ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. 

ಬೆಂಗಳೂರು: ಡ್ರಗ್ಸ್‌ ಪೆಡ್ಲರ್‌ ಜತೆ ಅನೈತಿಕ ಸಂಬಂಧ ಪ್ರಶ್ನಿಸಿದ್ದಕ್ಕೆ ಹಲ್ಲೆ, ಪತ್ನಿ ವಿರುದ್ಧ ಚಿತ್ರ ನಿರ್ಮಾಪಕನ ದೂರು

ಫೋಟೋದಲ್ಲಿ ಪ್ರಸ್ತುತ ಬಿ ಇನ್ ಫುಟ್‌ಬಾಲ್ ಸ್ಪೋಟ್ಸ್‌ನ ನಿರೂಪಕನಾಗಿರುವ ಪಂಡಿತ್ ರಿಚರ್ಡ್ ಹಾಗೂ ವೃತ್ತಿಯಲ್ಲಿ ವಕೀಲೆಯಾಗಿರುವ ಲೂಸಿ ರೋಸ್‌ ಮದುವೆ ಧಿರಿಸಿನಲ್ಲಿದ್ದಾರೆ.  ಆದರೆ ಪಂಡಿತ್ ರಿಚರ್ಡ್ ಈ ವಿವಾಹದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಯಾವುದೇ ಕಾಮೆಂಟ್ ಮಾಡಿಲ್ಲ, ಅಲ್ಲದೇ ಈ ವಿವಾಹದಲ್ಲಿ ಮಗಳು ಜೆಮ್ಮಾ ಕೂಡ ಭಾಗವಹಿಸಿಲ್ಲ. 

ತನ್ನ ಗೆಳತಿಯೊಂದಿಗೆ ತಂದೆ ಸಂಬಂಧ ಹೊಂದಿರುವುದು ತಿಳಿದು ಹೋದ ನಂತರ ಜೆಮ್ಮಾ ಹಾಗೂ ತಾಯಿ ಜೂಲಿಯಾ ಅಪ್ಪನಿಂದ ಅಂತರ ಕಾಯ್ದಕೊಂಡಿದ್ದರು. ಅಲ್ಲದೇ ಮೊದಲೇ ಮದ್ಯಕ್ಕೆ ದಾಸಿಯಾಗಿದ್ದ ಜೆಮ್ಮಾಗೆ ಅಪ್ಪನ ಈ ಸಂಬಂಧ ಮದ್ಯಕ್ಕೆ ಮತ್ತಷ್ಟು ದಾಸಿಯಾಗುವಂತೆ ಮಾಡಿತ್ತು. ಅಪ್ಪನ ಈ ಸಂಬಂಧದಿಂದ ಆಕ್ರೋಶಗೊಂಡಿದ್ದ ಜೆಮ್ಮಾ ತನ್ನ ಮಾಜಿ ಗೆಳತಿಗೆ ನಿಂದನೀಯ ಸಂದೇಶಗಳನ್ನು ಕಳುಹಿಸಿ ಜೈಲಿಗೆ ಹೋಗುವಂತೆ ಮಾಡಿತ್ತು. ಆದರೆ ನಂತರ ಈ ಪ್ರಕರಣವನ್ನು ಕೈ ಬಿಡಲಾಗಿತ್ತು. ರಿಚರ್ಡ್‌ ಮಾಜಿ ಪತ್ನಿ ಜೂಲಿಯಾ ತಮ್ಮ ಮದುವೆಯ 34 ವರ್ಷಗಳ ನಂತರ  ಪತಿಯ 7 ವರ್ಷಗಳ ನಿರಂತರ ವ್ಯಭಿಚಾರ ಹಾಗೂ ಮಗಳ ಪ್ರಾಯದ ಹುಡುಗಿಯ ಜೊತೆ ಸಂಬಂಧ ಇರುವುದು ಕಂಡು ಬಂದ ನಂತರ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. 

ಪುತ್ರಿ ಜೆಮ್ಮಾ ಕೂಡ ಆಕೆ ನನ್ನಿಂದ ನನ್ನ ಅಪ್ಪನನ್ನು ಕಿತ್ತುಕೊಂಡಳು ಎಂದು ಅತ್ತುಕೊಂಡಿದ್ದಳು, ಆಕೆ ನಮ್ಮ ಕುಟುಂಬವನ್ನು ಹೀಗೆ ನಾಶ ಮಾಡಬಹುದು ಎಂದು ನಾವು ಊಹಿಸಿಯೂ ಇರಲಿಲ್ಲ ಎಂದು ರಿಚರ್ಡ್ ಪತ್ನಿ ಜೂಲಿಯಾ ಹೇಳಿಕೊಂಡಿದ್ದರು. 

ಓದಿಸಿ ಎಸ್‌ಡಿಎಂ ಮಾಡಿದ ಗಂಡನನ್ನೇ ಜೈಲಿಗಕಿದ್ಲಾ ನ್ಯಾಯಾಧೀಶೆ : ಏನಿದು ಪ್ರಕರಣ?

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಟ್ರಂಪ್‌ ತೆರಿಗೆ ಶಾಕ್‌ಗೆ ಚೀನಾ ದಾಖಲೆಯ ತಿರುಗೇಟು
ಮೋದಿ ರೀತಿ ರೈತರಿಗೆ ಟ್ರಂಪ್‌ ಹಣ ವರ್ಗಾವಣೆ