ತಾತನ ಭರ್ಜರಿ ಕೊಡುಗೆ: ಹುಟ್ಟಿದ ಎರಡೇ ದಿನಕ್ಕೆ ಕೋಟ್ಯಾಧಿಪತಿಯಾದ ಮಗು

By Anusha Kb  |  First Published Jun 28, 2023, 5:14 PM IST

ಹುಟ್ಟುತಲ್ಲೇ ಮಗುವೊಂದು ಕೋಟ್ಯಾಧಿಪತಿಯಾಗಿದೆ. ಮಗುವಿನ ಅಜ್ಜ ತನ್ನ ಮೊಮ್ಮಗಳು ಹುಟ್ಟಿದ ಎರಡೇ ದಿನಕ್ಕೆ ಆಕೆಗೆ ಕೋಟ್ಯಾಂತರ ಮೊತ್ತದ ಮನೆ ಹಾಗೂ ಹಣವನ್ನು 
ಉಡುಗೊರೆ ನೀಡಿದ್ದು, ಇದರಿಂದ ತಾಯಿ ಹಾಲಷ್ಟೇ ಕುಡಿಯಲು ಶಕ್ತಳಾಗಿರುವ ಮೊಮ್ಮಗಳೀಗ ಕೋಟ್ಯಾಧಿಪತಿಯಾಗಿದ್ದಾಳೆ.


ಹುಟ್ಟುತಲ್ಲೇ ಮಗುವೊಂದು ಕೋಟ್ಯಾಧಿಪತಿಯಾಗಿದೆ. ಮಗುವಿನ ಅಜ್ಜ ತನ್ನ ಮೊಮ್ಮಗಳು ಹುಟ್ಟಿದ ಎರಡೇ ದಿನಕ್ಕೆ ಆಕೆಗೆ ಕೋಟ್ಯಾಂತರ ಮೊತ್ತದ ಮನೆ ಹಾಗೂ ಹಣವನ್ನು 
ಉಡುಗೊರೆ ನೀಡಿದ್ದು, ಇದರಿಂದ ತಾಯಿ ಹಾಲಷ್ಟೇ ಕುಡಿಯಲು ಶಕ್ತಳಾಗಿರುವ ಮೊಮ್ಮಗಳೀಗ ಕೋಟ್ಯಾಧಿಪತಿಯಾಗಿದ್ದಾಳೆ. ಹುಟ್ಟುತ್ತಾ ಚಿನ್ನದ ಚಮಚ ಇರಿಸಿಕೊಂಡೆ ಹುಟ್ಟಿದ್ದಾರೆ ಎಂದು ಅತೀ ಶ್ರೀಮಂತರ ಕುಡಿಗಳ ಬಗ್ಗೆ ಜನ ಮಾತನಾಡುವುದನ್ನು ನೀವು ಕೇಳಿರಬಹುದು. ಅದೇ ರೀತಿ ಇಲ್ಲಿ ಶತಕೋಟ್ಯಾಧಿಪತಿಯೊಬ್ಬರಿಗೆ ಮೊಮ್ಮಗಳು ಜನಿಸಿದ್ದು, ಮೊಮ್ಮಗಳು ಜನಿಸಿದ ಖುಷಿಯಲ್ಲಿ ಅಜ್ಜ ಆಕೆಗೆ ಮನೆ ಹಾಗೂ ಹಣವನ್ನು ಉಡುಗೊರೆ ನೀಡಿದ್ದು, ಇದರಿಂದ ಮಗು ಹುಟ್ಟಿದ ಎರಡೇ ದಿನಕ್ಕೆ ಕೋಟ್ಯಾಧಿಪತಿಯಾಗಿದ್ದಾಳೆ. ಈ ಸ್ಟೋರಿ ಈಗ ಇಂಟರ್‌ನೆಟ್‌ನಲ್ಲಿ ಸಂಚಲನ ಸೃಷ್ಟಿಸಿದೆ. 

ಬ್ರಿಟನ್‌ ಮೂಲದ ಕೋಟ್ಯಾಧಿಪತಿ ಆಗಿರುವ ಬ್ಯಾರಿ ಡ್ರೆವಿಟ್-ಬಾರ್ಲೋ( Barrie Drewitt-Barlow) ಎಂಬುವವರೇ ತಮ್ಮ ಮೊಮ್ಮಗಳಿಗೆ ಆಸ್ತಿ ಮನೆ ದಾನ ಮಾಡಿದವರು. ಇವರ ಪುತ್ರಿ 21 ವರ್ಷದ ಸ್ಯಾಫ್ರಾನ್ ಡ್ರೆವಿಟ್-ಬಾರ್ಲೋ ಶನಿವಾರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.  ಈ ವಿಚಾರ ತಿಳಿಯುತ್ತಿದ್ದಂತೆ ಫುಲ್ ಖುಷ್ ಆದ ಬ್ಯಾರಿ ಡ್ರೆವಿಟ್ ಇನ್ಸ್ಟಾಗ್ರಾಮ್‌ನಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ನನ್ನ ಹುಡುಗಿ ಇಂದು ತನ್ನದೇ ಅವಳದ್ದೇ ಆದ ಹುಡುಗಿಯನ್ನು  ಹೊಂದಿದ್ದಾಳೆ.  ಕಳೆದರೆಡು ವಾರಗಳು ಬಹಳ ಆಘಾತಕಾರಿಯಾಗಿದ್ದವು. ಆದರೂ ಅಂತಿಮವಾಗಿ ನನ್ನ ಹೊಸ ರಾಜಕುಮಾರಿ ಬಂದಳು.  36 ವಾರ ಮತ್ತು 3 ದಿನಗಳಲ್ಲಿ ಜನಿಸಿದ ಮರೀನಾ ಡ್ರೆವಿಟ್-ಬಾರ್ಲೋ-ಟಕರ್ ಅವರನ್ನು ನಿಮ್ಮೆಲ್ಲರಿಗೂ ಪರಿಚಯಿಸಲು ನಾನು ಬಯಸುತ್ತೇನೆ ಎಂದು ಅವರು ಮಗುವಿನ ಫೋಟೋ ಶೇರ್ ಮಾಡಿ ಬರೆದುಕೊಂಡಿದ್ದರು. 

Tap to resize

Latest Videos

9 ವರ್ಷದ ಈತ ವಿಶ್ವದ ಶ್ರೀಮಂತ ಬಾಲಕ.. ಈತನ ಲೈಫ್‌ಸ್ಟೈಲ್ ನೋಡಿದ್ರೆ ಬೆರಗಾಗ್ತೀರಾ..!

ಈ ಪುಟ್ಟ ರಾಜಕುಮಾರಿ ತಮ್ಮ ಕುಟುಂಬಕ್ಕೆ ಸೇರ್ಪಡೆಯಾಗಿದ್ದಕ್ಕೆ  ಸಫ್ರಾನ್ ಡ್ರೆವಿಟ್ ಬಾರ್ಲೋ (Saffron Drewitt-Barlow)ಮತ್ತು ಕಾನರ್ ಟಕರ್ (Conor Tucker) ಹೆಮ್ಮೆಪಡದಿರಲು ಸಾಧ್ಯವಿಲ್ಲ ಎಂದು ಅವರು ಬರೆದಿದ್ದಾರೆ. ಈ ಬಗ್ಗೆ ದಿ ಸನ್‌ ಜೊತೆ ಮಾತನಾಡಿದ  ಬ್ಯಾರಿ ಡ್ರೆವಿಟ್-ಬಾರ್ಲೋ, ನಾನು ಪುತ್ರಿ ಸಫ್ರಾನ್ ಹಾಗೂ ಆಕೆಯ ಪತಿ ಕಾನರ್ ಬಗ್ಗೆ ತುಂಬಾ ಹೆಮ್ಮೆಪಡುತ್ತೇನೆ. ಅವರು ತುಂಬಾ ಚೆನ್ನಾಗಿ ಹೊಂದಾಣಿಕೆಯಾಗಿದ್ದಾರೆ. ಈಗ ನಾನು ಹಾಳು ಮಾಡಲು ಇನ್ನೊಬ್ಬ ರಾಜಕುಮಾರಿಯನ್ನು ಹೊಂದಿದ್ದೇನೆ ಮತ್ತು ನಾನು ಕಾಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇದೇ ವೇಳೆ  ಅವರು ಮೊಮ್ಮಗಳಿಗೆ ಹೊಸ ಮನೆಯನ್ನು ಖರೀದಿಸಿದ್ದು, ಅದರ ಒಳಾಂಗಣ ವಿನ್ಯಾಸವನ್ನು ಸಂಪೂರ್ಣವಾಗಿ ನವೀಕರಿಸಲು ವಿನ್ಯಾಸಗಾರರಿಗೆ ಸೂಚಿಸಿದ್ದಾರೆ. 

ಯಾರೂ ಈ ಬ್ಯಾರಿ ಡ್ರೆವಿಟ್-ಬಾರ್ಲೋ

52 ವರ್ಷದ ಬ್ಯಾರಿ ಡ್ರೆವಿಟ್-ಬಾರ್ಲೋ ಬ್ರಿಟನ್‌ನ ಮೊದಲ ಸಲಿಂಗಿ ತಂದೆ. ಬ್ಯಾರಿ ಡ್ರೆವಿಟ್-ಬಾರ್ಲೋ ಹಾಗೂ ಆತನ ಮಾಜಿ ಪತಿ (ಸಂಗಾತಿ) ಬ್ರಿಟನ್‌ನ ಮೊದಲ ಸಲಿಂಗಿ ಪೋಷಕರೆನಿಸಿಕೊಂಡಿದ್ದರು. ಇವರಿಬ್ಬರು 1999ರಲ್ಲಿ ಸಫ್ರನ್‌ ಹಾಗೂ ಆಸ್ಪೆನ್ ಎಂಬ ಅವಳಿ ಮಕ್ಕಳಿಗೆ ಪೋಷಕರಾಗಿದ್ದರು. ಬಾಡಿಗೆ ತಾಯ್ತನದ ಮೂಲಕ ಈ ಜೋಡಿ ಈ ಅವಳಿ ಮಕ್ಕಳ ಪೋಷಕರಾಗಿದ್ದರು. ಆರು ಮಕ್ಕಳ ತಂದೆಯಾದ ಬಳಿಕ ಈ ಜೋಡಿ 2019ರಲ್ಲಿ ದೂರವಾದರು. ಇದಾದ ನಂತರ ಬ್ಯಾರಿ ಡ್ರೆವಿಟ್-ಬಾರ್ಲೋ ತನ್ನ ಹೊಸ ಸಂಗಾತಿ ಸ್ಕಾಟ್ ಹಚಿನ್ಸನ್ ನನ್ನು ಮದುವೆಯಾದರು. ಈ ದಾಂಪತ್ಯದಲ್ಲಿ 2020ರಲ್ಲಿ ವ್ಯಾಲೆಂಟಿನಾ ಎಂಬ ಮಗಳು ಜನಿಸಿದ್ದಾಳೆ. ಆದಾದ ನಂತರ ಇದೇ ಜೋಡಿ ರೋಮಿಯೋ ಎಂಬ ಮತ್ತೊಂದು ಮಗುವಿಗೆ ತಂದೆಯಾಗಿದ್ದಾರೆ. ಮ್ಯಾಂಚೆಸ್ಟರ್‌ನ ಈ ಶತಕೋಟ್ಯಾಧಿಪತಿಗೆ ಈಗ ಒಟ್ಟು 8 ಮಕ್ಕಳಿದ್ದಾರೆ. ಸ್ಕಾಟ್ ಮತ್ತು ಬ್ಯಾರಿ 10 ಮಿಲಿಯನ್ ಮೌಲ್ಯದ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ.

click me!