ದ್ವೀಪರಾಷ್ಟ್ರ ತೈವಾನ್‌ನಲ್ಲಿ 7.4 ತೀವ್ರತೆಯ ಭಾರೀ ಭೂಕಂಪ: ಜಪಾನ್‌ನಲ್ಲಿ ಸುನಾಮಿ ಅಲರ್ಟ್‌

By Anusha KbFirst Published Apr 3, 2024, 6:58 AM IST
Highlights

ಇಂದು ಮುಂಜಾನೆ  ತೈವಾನ್‌ನಲ್ಲಿ ಭಾರೀ ಭೂಕಂಪ ಸಂಭವಿಸಿದೆ. ಇಂದು ಬೆಳಗ್ಗೆ ಅಲ್ಲಿನ ಸ್ಥಳೀಯ ಕಾಲಮಾನ 8 ಗಂಟೆಗೆ ಪೂರ್ವ ತೈವಾನ್‌ನಲ್ಲಿ 7.4 ತೀವ್ರತೆಯ ಭೂಕಂಪನ ಸಂಭವಿಸಿದೆ. ಈ ಭೂಕಂಪನದ ಹಿನ್ನೆಲೆಯಲ್ಲಿ ಪೂರ್ವ ತೈವಾನ್ ಹಾಗೂ ಜಪಾನ್ ದಕ್ಷಿಣ ಭಾಗದಲ್ಲಿ ಸುನಾಮಿ ಅಲರ್ಟ್‌ ಘೋಷಿಸಲಾಗಿದೆ. 

ಟೋಕಿಯೋ: ಇಂದು ಮುಂಜಾನೆ  ತೈವಾನ್‌ನಲ್ಲಿ ಭಾರೀ ಭೂಕಂಪ ಸಂಭವಿಸಿದೆ. ಇಂದು ಬೆಳಗ್ಗೆ ಅಲ್ಲಿನ ಸ್ಥಳೀಯ ಕಾಲಮಾನ 8 ಗಂಟೆಗೆ ಪೂರ್ವ ತೈವಾನ್‌ನಲ್ಲಿ 7.4 ತೀವ್ರತೆಯ ಭೂಕಂಪನ ಸಂಭವಿಸಿದೆ. ಈ ಭೂಕಂಪನದ ಹಿನ್ನೆಲೆಯಲ್ಲಿ ಪೂರ್ವ ತೈವಾನ್ ಹಾಗೂ ಜಪಾನ್ ದಕ್ಷಿಣ ಭಾಗದಲ್ಲಿ ಸುನಾಮಿ ಅಲರ್ಟ್‌ ಘೋಷಿಸಲಾಗಿದೆ. 

ಭೂಕಂಪವು 7.4 ರ ತೀವ್ರತೆಯನ್ನು ಹೊಂದಿದ್ದು, ಅದರ ಕೇಂದ್ರ ಬಿಂದುವು ತೈವಾನ್‌ನ ಹುವಾಲಿಯನ್ ಸಿಟಿಯಿಂದ ದಕ್ಷಿಣಕ್ಕೆ 18 ಕಿಲೋಮೀಟರ್ (11 ಮೈಲಿ) ದೂರದಲ್ಲಿ 34.8 ಕಿಮೀ ಆಳದಲ್ಲಿದೆ ಎಂದು ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ (USGS)ಹೇಳಿದೆ.  ಹಾಗೆಯೇ ಜಪಾನ್‌ನ ಹವಾಮಾನ ಏಜೆನ್ಸಿಯೂ ಈ ಭೂಕಂಪನದ ತೀವ್ರತೆ 7.5 ಇತ್ತು ಎಂದು ದಾಖಲಿಸಿದೆ. ಭೂಮಿ ಕಂಪನದ ಹಿನ್ನೆಲೆಯಲ್ಲಿ ಮಿಯಾಕೊಜಿಮಾ ದ್ವೀಪ ಸೇರಿದಂತೆ ದೂರದ ಜಪಾನಿನ ದ್ವೀಪಗಳಲ್ಲಿ ಮೂರು ಮೀಟರ್ (10 ಅಡಿ) ಎತ್ತರದ ಸುನಾಮಿ ಅಲೆಗಳು ಶೀಘ್ರದಲ್ಲೇ ಅಪ್ಪಳಿಸಬಹುದು ಎಂದು ನಿರೀಕ್ಷಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ.

ಇಸ್ರೇಲ್ ಬಳಿಕ ತೈವಾನ್‌ನಿಂದಲೂ ಭಾರತದ ಕಾರ್ಮಿಕರಿಗೆ ಬೇಡಿಕೆ: 1 ಲಕ್ಷ ಕೆಲಸಗಾರರ ನೇಮಕಕ್ಕೆ ನಿರ್ಧಾರ

ಜಪಾನ್ ರಾಷ್ಟ್ರೀಯ ಮಾಧ್ಯಮ ಎನ್‌ಹೆಚ್‌ಕೆ ಈ ಬಗ್ಗೆ ವರದಿ ಮಾಡಿದ್ದು, ಸುನಾಮಿ ಅಪ್ಪಳಿಸುತ್ತಿದ್ದು, ದಯವಿಟ್ಟು ಕೂಡಲೇ ಸಮುದ್ರ ಬದಿ ಇರುವವರು ಸ್ಥಳಾಂತರಗೊಳ್ಳುವಂತೆ ಅದು ತನ್ನ ವರದಿಯಲ್ಲಿ ಜನರಿಗೆ ಮನವಿ ಮಾಡಿದೆ.ಎನ್‌ಹೆಚ್‌ಕೆಯ ಲೈವ್ ದೃಶ್ಯಾವಳಿಗಳಲ್ಲಿ ಜಪಾನ್‌ನ ನಹಾ ಸೇರಿದಂತೆ ಓಕಿನಾವಾ ಪ್ರದೇಶದ ಬಂದರುಗಳಿಂದ ಹಡಗುಗಳು ಸಮುದ್ರಕ್ಕೆ ಹೋಗುತ್ತಿರುವ ಹಡಗುಗಳನ್ನು ತೋರಿಸಲಾಗಿದೆ. ತೈವಾನ್ ದ್ವೀಪವು ಎರಡು ಟೆಕ್ಟೋನಿಕ್ ಪ್ಲೇಟ್‌ಗಳ ಜಂಕ್ಷನ್‌ನ ಬಳಿ ಇರುವುದರಿಂದ ತೈವಾನ್‌ನಲ್ಲಿ ಭೂಕಂಪನ ಸಾಮಾನ್ಯ ಎನಿಸಿದೆ. ಅದು ನಿಯಮಿತವಾಗಿ ಭೂಕಂಪಗಳಿಗೆ ಒಳಗಾಗುತ್ತಿರುತ್ತದೆ. 

ಸೆಪ್ಟೆಂಬರ್ 1999 ರಲ್ಲಿ ತೈವಾನ್‌ನಲ್ಲಿ 7.6 ಪ್ರಮಾಣದ ಭೂಕಂಪನವು ಸಂಭವಿಸಿತ್ತು. ದ್ವೀಪ ರಾಷ್ಟ್ರದ ಇತಿಹಾಸದಲ್ಲಿಯೇ ಅತ್ಯಂತ ಭೀಕರವಾದ ನೈಸರ್ಗಿಕ ವಿಕೋಪ ಎನಿಸಿದ ಈ ಭೂಕಂಪನದಲ್ಲಿ  ಸುಮಾರು 2,400 ಜನರು ಸಾವನ್ನಪ್ಪಿದ್ದರು. ಹಾಗೆಯೇ ಜಪಾನ್‌ನಲ್ಲಿ ಪ್ರತಿ ವರ್ಷ 1500 ಬಾರಿ ಭೂಮಿ ಕಂಪಿಸಿದ ಅನುಭವವಾಗುತ್ತದೆ.

ಭಾರತೀಯ ಪ್ರವಾಸಿಗರಿಗೆ ಸಿಹಿ ಸುದ್ದಿ: ಈ ದೇಶಕ್ಕೆ ಹೋಗಲು ಇನ್ಮುಂದೆ ವೀಸಾನೇ ಬೇಕಿಲ್ಲ!

click me!