ಕಚತೀವು ಮುಗಿದ ಅಧ್ಯಾಯ, ಲಂಕಾ-ಭಾರತ ಜಂಟಿಯಾಗಿ ಸಮಸ್ಯೆ ಇತ್ಯರ್ಥ; ಶ್ರೀಲಂಕಾ ಸರ್ಕಾರದ ಸ್ಪಷ್ಟನೆ!

By Suvarna NewsFirst Published Apr 1, 2024, 10:22 PM IST
Highlights

ಭಾರತದಲ್ಲಿ ಕಚತೀವು ದ್ವೀಪ ವಿವಾದ ಜೋರಾಗುತ್ತಿದ್ದಂತೆ ಶ್ರೀಲಂಕಾ ಸರ್ಕಾರದ ಏಷ್ಯಾನೆಟ್ ನ್ಯೂಸ್‌ಗೆ ಈ ಕುರಿತು ಪ್ರತಿಕ್ರಿಯೆ ನೀಡಿದೆ. ಭಾರತ ಹಾಗೂ ಶ್ರೀಲಂಕಾದ ಬುದ್ಧವಂತರು ಈ ಸಮಸ್ಯೆ ಬಗೆಹರಿಸಿದ್ದಾರೆ. ಇದೀಗ ಕಚತೀವು ಮುಗಿದ ಅಧ್ಯಾಯ ಎಂದಿದ್ದಾರೆ. 

ನವದೆಹಲಿ(ಏ.01) ಭಾರತದಲ್ಲೀಗ ಕಚತೀವು ದ್ವೀಪದ ಕಾವು ಹೆಚ್ಚಾಗಿದೆ. ಲೋಕಸಭಾ ಚುನಾವಣೆ ಹೊತ್ತಲ್ಲಿ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಆರ್‌ಟಿಐ ಮೂಲಕ ಪಡೆದ ಮಾಹಿತಿ ಬಹಿರಂಗಪಡಿಸುವ ಮೂಲಕ ಕಾಂಗ್ರೆಸ್ ಹಾಗೂ ಡಿಎಂಕೆಗೆ ತೀವ್ರ ಹಿನ್ನಡೆ ತಂದಿದ್ದಾರೆ. ಅಂದಿನ ಕಾಂಗ್ರೆಸ್ ಸರ್ಕಾರ ತಮ್ಮ ಹಿತಾಸಕ್ತಿಗಾಗಿ ಕಚ್ಚತೀವು ದ್ವೀಪವನ್ನು ಶ್ರೀಲಂಕಾಗೆ ನೀಡಲಾಗಿದೆ ಅನ್ನೋ ಬಾಂಬ್ ಇದೀಗ ಕೋಲಾಹಲ ಸೃಷ್ಟಿಸಿದೆ. ಪ್ರಧಾನಿ ನರೇಂದ್ರ ಮೋದಿ, ವಿದೇಶಾಂಗ ಸಚಿವ ಎಸ್ ಜೈಶಂಕರ್ ಈ ಕುರಿತು ಕಾಂಗ್ರೆಸ್ ಹಾಗೂ ಡಿಎಂಕೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಕಾವು ಏರುತ್ತಿದ್ದಂತೆ ಇದೀಗ ಶ್ರೀಲಂಕಾ ಸರ್ಕಾರ ಏಷ್ಯಾನೆಟ್ ನ್ಯೂಸ್‌ಗೆ ಈ ಕುರಿತು ಪ್ರತಿಕ್ರಿಯೆ ನೀಡಿದೆ. ಇದು ಮುಗಿದ ಅಧ್ಯಾಯ ಎಂದಿದ್ದಾರೆ. ಇಷ್ಟೇ ಅಲ್ಲ ಭಾರತ ಹಾಗೂ ಶ್ರೀಲಂಕಾ ಈ ಕುರಿತು ಎಲ್ಲಾ ಕಾನೂನು ಪ್ರಕ್ರಿಯೆ ಮುಗಿಸಿದೆ. ಬುದ್ಧಿವಂತರು ಸಹಿ ಹಾಕಿ ದ್ವೀಪ ಹಸ್ತಾಂತರಿಸಲಾಗಿದೆ ಎಂದಿದ್ದಾರೆ.

1974ರಲ್ಲಿ ಐತಿಹಾಸಿಕ ಸಾಕ್ಷ್ಯಗಳನ್ನು ಆಧರಿಸಿ ಭಾರತ ಹಾಗೂ ಶ್ರೀಲಂಕಾ ಸಹಿ ಹಾಕಿದೆ. ನೀತಿ ರೂಪಿಸಿ ದ್ವೀಪವನ್ನು ಹಸ್ತಾಂತರಿಸಲಾಗಿದೆ. ಇದೀಗ ಈ ದ್ವೀಪದ ಕುರಿತು ಎದ್ದಿರುವ ವಿವಾದಕ್ಕೆ ಪ್ರತಿಕ್ರಿಯಿಸವುದು ಸೂಕ್ತವಲ್ಲ. ಭಾರತ ಹಾಗೂ ಶ್ರೀಲಂಕಾ ಎರಡೂ ದೇಶದಲ್ಲಿ ಚುನಾವಣೆ ಸಮೀಪದಲ್ಲಿದೆ. ಹೀಗಾಗಿ ಸಂದರ್ಭದಲ್ಲಿ ಪ್ರತಿಕ್ರೆಯ ಉಚಿತವಲ್ಲ ಎಂದು ಶ್ರೀಲಂಕಾ ಸರ್ಕಾರ ಏಷ್ಯಾನೆಟ್ ನ್ಯೂಸ್‌ಗೆ ಹೇಳಿದೆ.

ಭಾರತ ಈ ದ್ವೀಪವನ್ನು ಮರಳಿ ಪಡೆಯಲು ಪ್ರಯತ್ನಿಸುತ್ತಿದೆ ಎಂದು ತಮಿಳುನಾಡು ಬಿಜೆಪಿ ರಾಜ್ಯಧ್ಯಕ್ಷ ಅಣ್ಣಾಮಲೈ ಹೇಳಿದ್ದಾರೆ. ಈ ಕುರಿತು ಬಿಜೆಪಿ ವಿದೇಶಾಂಗ ಸಚಿವ ಎಸ್ ಜೈಶಂಕರ್‌ಗೆ ಮನವಿ ಪತ್ರ ನೀಡಿದೆ. ಈ ಬೆಳವಣಿಗೆ ಬೆನ್ನಲ್ಲೇ ಶ್ರೀಲಂಕಾ ವಿವಾದ ತಿಳಿಸಿಗೊಳಿಸಿ ಭಾರತ ಗಾಳಕ್ಕೆ ಸಿಲುಕದಂತೆ ಕಚ್ಚತೀವು ದ್ವೀಪ ರಕ್ಷಿಸಲು ಮುಂದಾಗಿದೆ.

ಅಣ್ಣಾಮಲೈ ಆರ್‌ಟಿಐ ಮಾಹಿತಿ ಬಹಿರಂಗ ಪಡಿಸಿದ ಬೆನ್ನಲ್ಲೇ ಪ್ರಧಾನಿ ಮೋದಿ ಮಾರ್ಚ್ 31ರಂದು ಈ ಕುರಿತು ಕಾಂಗ್ರೆಸ್‌ನ್ನು ತರಾಟೆಗೆ ತೆಗೆದುಕೊಂಡಿದ್ದರು. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಈ ದ್ವೀಪವನ್ನು ಶ್ರೀಲಂಕಾಗೆ ನೀಡಿದ್ದಾರೆ. ದೇಶದ ಹಿತಾಸಕ್ತಿಗಿಂತ ಕಾಂಗ್ರೆಸ್ ಪಕ್ಷಕ್ಕೆ ತಮ್ಮ ಸ್ವಂತ ಹಿತಾಸಕ್ತಿಯೇ ಮುಖ್ಯ ಎಂದು ಮೋದಿ ಹೇಳಿದ್ದರು.

ಇಂದು(ಏಪ್ರಿಲ್ 1) ಪ್ರತಿಕ್ರಿಯಿಸಿರುವ ಎಸ್ ಜೈಶಂಕರ್, ಅಂದಿನ ಕಾಂಗ್ರೆಸ್ ಸರ್ಕಾರ ಭಾರತದ ಮೀನುಗಾರರ ಹಕ್ಕನ್ನು ಕಸಿದಿದ್ದಾರೆ. ಕಚತೀವು ದ್ವೀಪವನ್ನು ಶ್ರೀಲಂಕಾಗೆ ನೀಡುವ ಮೂಲಕ ಭಾರತದ ಹಿತಾಸಕ್ತಿಗೆ ದ್ರೋಹ ಮಾಡಿದ್ದಾರೆ ಎಂದಿದ್ದಾರೆ. ಇತ್ತ ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ದ ಕಚ್ಚತೀವು ಅಸ್ತ್ರ ಬಳಸಿದ್ದಾರೆ. ಇದೇ ವೇಳೆ ಕಾಂಗ್ರೆಸ್ 2015ರಲ್ಲಿ ಬಾಂಗ್ಲಾದೇಶ ಜೊತೆ ಪ್ರಧಾನಿ ಮೋದಿ ಮಾಡಿಕೊಂಡಿರುವ ಒಪ್ಪಂದ ಉಲ್ಲೇಖಿಸಿ ತಿರುಗೇಟು ನೀಡಿದ್ದಾರೆ. 

ಕಚ್ಚತೀವು ದ್ವೀಪ ಶ್ರೀಲಂಕಾಗೆ ನೀಡಿ ಭಾರತಕ್ಕೆ ದ್ರೋಹ ಬಗೆದ ಕಾಂಗ್ರೆಸ್, ಬಿಜೆಪಿ ಸುದ್ದಿಗೋಷ್ಠಿ!

click me!