9/11 ಉಗ್ರ ದಾಳಿಯ 20ನೇ ವರ್ಷಾಚರಣೆ ದಿನ ತಾಲಿಬಾನ್ ಸಚಿವರ ಪ್ರಮಾಣ ವಚನ!

By Suvarna NewsFirst Published Sep 9, 2021, 8:35 PM IST
Highlights
  • ಸೆಪ್ಟೆಂಬರ್ 11, 2001ರಲ್ಲಿ ಅಮೆರಿಕ ಮೇಲೆ ನಡೆದ ಉಗ್ರ ದಾಳಿ
  • ಅಮೆರಿಕ ಗಗನ ಚುಂಬಿ ಕಟ್ಟದ ಮೇಲೆ ದಾಳಿಗೆ 20 ವರ್ಷ
  • ಸೆ.11ಕ್ಕೆ ಉಗ್ರ ದಾಳಿಗೆ 20 ವರ್ಷ, ಇದೇ ದಿನ ತಾಲಿಬಾನ್ ಉಗ್ರರ ಪ್ರಮಾಣ ವಚನ
     

ಕಾಬೂಲ್(ಸೆ.09): ರಕ್ತ ಪಾತ, ಕ್ರೌರ್ಯ, ಗುಂಡಿನ ಸುರಿಮಳೆ ಬಳಿಕ ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರು ಸರ್ಕಾರ ರಚಿಸಿದ್ದಾರೆ. 17 ಮೋಸ್ಟ್ ವಾಂಟೆಂಡ್ ಸೇರಿ 33ಕ್ಕೂ ಉಗ್ರರು ಸಚಿವರಾಗಿ ಬಡ್ತಿ ಪಡೆದಿದ್ದಾರೆ. ಇದೀಗ ಈ ಸಚಿವರ ಪ್ರಮಾಣ ವಚನ ಸಮಾರಂಭಕ್ಕೆ ಮುಹೂರ್ತ ಫಿಕ್ಸ್ ಮಾಡಿದ್ದಾರೆ. ಆಲ್ ಖೈದಾ ಉಗ್ರರು ಅಮೆರಿಕ ದಾಳಿ ಮಾಡಿದ ಸೆಪ್ಟೆಂಬರ್ 11ರ ದಿನಾಂಕದಂದೇ  ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಸಲು ತಾಲಿಬಾನ್ ಉಗ್ರರು ನಿರ್ಧರಿಸಿದ್ದಾರೆ.

ಬಾಂಬ್ ಹಾಕಿದವರೇ ನಾಯಕರು , ಬುದ್ಧ ಪ್ರತಿಮೆ ಧ್ವಂಸ ಮಾಡಿದವನು ಪ್ರಧಾನಿ..! ಇದು ತಾಲಿಬಾನ್ ಸರ್ಕಾರ

ಅಮೆರಿಕ ಗಗನ ಚುಂಬಿ ಕಟ್ಟದ ಮೇಲಿನ ದಾಳಿಗೆ ಇದೇ ಸೆಪ್ಟೆಂಬರ್ 11ಕ್ಕೆ 20 ವರ್ಷ ತುಂಬಲಿದೆ. ಅಮೆರಿಕ ಇತಿಹಾಸದಲ್ಲಿ ಹಾಗೂ ವಿಶ್ವ ಎದುರಿಸಿದ ಅತೀ ದೊಡ್ಡ ಭಯೋತ್ಪಾದಕ ದಾಳಿ ಇದಾಗಿತ್ತು. ಇದೇ ದಿನವನ್ನು ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಬಳಸಿಕೊಳ್ಳಲು ತಾಲಿಬಾನ್ ಉಗ್ರರು ನಿರ್ಧರಿಸಿದ್ದಾರೆ.

ಪ್ರಮಾಣ ವಚನ ಸ್ವೀಕಾರ ಸಮಾರಂಭ ಆಮಂತ್ರಣವನ್ನು ಪಾಕಿಸ್ತಾನ, ಚೀನಾಗೆ ತಾಲಿಬಾನ್ ಉಗ್ರರು ನೀಡಿದ್ದಾರೆ ಎಂದು ಅಮೆರಿಕ ಹೇಳಿದೆ. ಉಗ್ರರ ಸರ್ಕಾರ ರಚನೆ ಹಿಂದೆ ಪಾಕಿಸ್ತಾನದ ಕೈವಾಡವಿದೆ. ಆಫ್ಘಾನಿಸ್ತಾನದಲ್ಲಿ ಚುನಾಯಿತ ಸರ್ಕಾರವನ್ನು ಕಿತ್ತೆಸೆದು, ಬಂದೂಕಿನ ದಾಳಿ ಮೂಲಕ ತಾಲಿಬಾನ್ ಉಗ್ರರು ಆಫ್ಘಾನಿಸ್ತಾನ ಕೈವಶ ಮಾಡಿದ್ದಾರೆ.

ತಾಲಿ​ಬಾ​ನ್‌ಗೆ ಚೀನಾ 230 ಕೋಟಿ ನೆರ​ವು!

ಆಫ್ಘಾನಿಸ್ತಾನದಿಂದ ಅಮೆರಿಕ ಸೇನೆ ವಾಪಸ್ ಪಡೆಯುವ ಮೂಲಕ ತಾಲಿಬಾನ್ ಆಟ್ಟಾಹಾಸ ಆರಂಭಗೊಂಡಿತು. ಇದು ಅಮೆರಿಕ ಮಾಡಿದ ಅತೀ ದೊಡ್ಡ ತಪ್ಪು ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಇದೀಗ ಅಮೆರಿಕ ಎದುರಿಸಿದ ಕರಾಳ ದಿನದಂತೆ ತಾಲಿಬಾನ್ ಉಗ್ರರು ಸಂಭ್ರಮಾಚರಣೆಗೆ ಮುಂದಾಗಿದ್ದಾರೆ.  

click me!