Coronavirus: ಬ್ರಿಟನ್‌ನಲ್ಲಿ ಎಲ್ಲ ನಿರ್ಬಂಧ ತೆರವು: ಮಾಸ್ಕ್‌ ಬೇಕಿಲ್ಲ, ವರ್ಕ್ ಫ್ರಂ ಹೋಂ ಇಲ್ಲ

By Kannadaprabha NewsFirst Published Jan 21, 2022, 4:30 AM IST
Highlights

*   ಸೋಂಕು ನಿಯಂತ್ರಣಕ್ಕೆ ಬಂದಿದೆ: ಪ್ರಧಾನಿ
*   ಕೊರೋನಾದಿಂದ ಈಗ ಸಾಮಾನ್ಯ ಶೀತದಂತೆ ಆಗಿರುವುದು
*   ಬೂಸ್ಟರ್‌ ಡೋಸ್‌ನಿಂದಾಗಿ ಸೋಂಕು ಸಾಕಷ್ಟು ನಿಯಂತ್ರಣ

ಲಂಡನ್‌(ಜ.21):  ವಿಶ್ವಾದ್ಯಂತ(World) ಕೊರೋನಾ(Coronavirus) ವೈರಸ್ಸಿನ ರೂಪಾಂತರಿ ತಳಿ ಒಮಿಕ್ರೋನ್‌(Omicron) ಅಬ್ಬರಿಸುತ್ತಿರುವ ನಡುವೆಯೇ, ರೂಪಾಂತರಿಯಿಂದ ನಲುಗಿದ್ದ ಬ್ರಿಟನ್‌ನಲ್ಲಿ(Britain) ಸೋಂಕು ಇಳಿಮುಖವಾಗುತ್ತಿದೆ. ಹೀಗಾಗಿ ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಅವರು ಮುಂದಿನ ಗುರುವಾರದಿಂದ ಕಡ್ಡಾಯವಾಗಿ ಮಾಸ್ಕ್‌ ಧರಿಸುವುದು ಸೇರಿದಂತೆ ಸೋಂಕು ನಿಯಂತ್ರಣಕ್ಕೆ ಕೈಗೊಳ್ಳಲಾಗಿದ್ದ ಹೆಚ್ಚುವರಿ ನಿರ್ಬಂಧದ ಕ್ರಮಗಳನ್ನು ತೆಗೆದುಹಾಕಲು ನಿರ್ಧರಿಸಿದ್ದಾರೆ.

ಬ್ರಿಟನ್‌ನಲ್ಲಿ ಒಮಿಕ್ರೋನ್‌ ಸೋಂಕು ನಿಯಂತ್ರಣಕ್ಕೆ ಬರುತ್ತಿದ್ದು, ನಿತ್ಯ 2 ಲಕ್ಷದಷ್ಟು ದಾಖಲಾಗುತ್ತಿದ್ದ ಪ್ರಕರಣಗಳು ಈಗ ಸರಾಸರಿ 90 ಸಾವಿರದ ಆಸುಪಾಸಿಗೆ ಇಳಿದಿವೆ. ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಪ್ರಕಾರ, ಮುಂದಿನ ದಿನಗಳಲ್ಲಿ ಮನೆಯಿಂದಲೇ ಕೆಲಸ (Work From Home) ಮಾಡಬೇಕು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸಂಚರಿಸಲು ಕಡ್ಡಾಯವಾಗಿ ಕೋವಿಡ್‌ ಲಸಿಕೆ(Vaccine) ಪ್ರಮಾಣಪತ್ರ ಹೊಂದಿರಬೇಕು ಎಂಬ ನಿಯಮಗಳನ್ನು ಹಿಂಪಡೆಯಲಾಗುತ್ತದೆ. ಜೊತೆಗೆ ಎಲ್ಲಾ ಸ್ಥಳಗಳಲ್ಲೂ ಜನರು ಮುಖಕ್ಕೆ ಮಾಸ್ಕ್‌(Mask) ಮತ್ತು ಶಾಲೆಗಳಲ್ಲಿ(Schools) ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕೆಂಬ ಕ್ರಮಗಳನ್ನು ರದ್ದುಗೊಳಿಸಲಾಗುತ್ತದೆ. ಆದರೆ, ‘ಹೆಚ್ಚು ಜನನಿಬಿಡ ಪ್ರದೇಶಗಳಿಗೆ ಹೋದಾಗ ಜನರು, ಮಾಸ್ಕ್‌ ಧರಿಸಬೇಕು. ಆದಾಗ್ಯೂ ಮಾಸ್ಕ್‌ ಧರಿಸದವರ ವಿರುದ್ಧ ಯಾವುದೇ ಕ್ರಿಮಿನಲ್‌ ಪ್ರಕರಣ ದಾಖಲಿಸಿಕೊಳ್ಳಲಾಗದು’ ಎಂದಿದ್ದಾರೆ.

Boris Johnson: ಬ್ರಿಟನ್‌ ಪ್ರಧಾನಿಯ ಗುಂಡು ಪುರಾಣ: ಬಯಲಾದದ್ದು ಹೇಗೆ?

ಕೋವಿಡ್‌ ಬೂಸ್ಟರ್‌ ಡೋಸ್‌(Booster Dose) ಅಭಿಯಾನಕ್ಕೆ ಜನರು ಸ್ಪಂದಿಸಿದ್ದರಿಂದ ಸೋಂಕು ನಿಯಂತ್ರಣದಲ್ಲಿದೆ. ಆಸ್ಪತ್ರೆಯ ಐಸಿಯುನಲ್ಲಿ ದಾಖಲಾಗುವವರ ಪ್ರಮಾಣ ಅತ್ಯಂತ ಕಡಿಮೆಯಿದ್ದು, ಇಳಿಮುಖವಾಗುತ್ತಿದೆ. ಹೀಗಾಗಿ ಮುಂದಿನ ಗುರುವಾರದಿಂದ ಕನಿಷ್ಠ ಕೋವಿಡ್‌ ನಿರ್ಬಂಧಗಳು ಮಾತ್ರ ಜಾರಿಯಲ್ಲಿರಲಿವೆ. ಆದರೆ ಕೋವಿಡ್‌ ಪಾಸಿಟಿವ್‌ ಇದ್ದವರು ಸ್ವತಃ ಐಸೋಲೇಶನ್‌ಗೆ ಒಳಗಾಗಬೇಕು ಎಂಬ ನಿಯಮವನ್ನು ಮುಂದುವರೆಸಲಾಗುವುದು. ಆದರೆ ಐಸೋಲೇಶನ್‌ ಅವಧಿಯನ್ನು ಒಂದು ವಾರದಿಂದ ಐದು ದಿನಕ್ಕೆ ಇಳಿಕೆ ಮಾಡಲಾಗಿದೆ ಎಂದು ಬ್ರಿಟನ್‌ ಪ್ರಧಾನಿ ಹೇಳಿದ್ದಾರೆ.

ಕೋವಿಡ್‌ ಈಗ ಎಂಡೆಮಿಕ್‌ ಆಗಿದೆ

ಸಾರ್ವತ್ರಿಕ ಮಹಾಮಾರಿ ಕೊರೋನಾ ವೈರಸ್‌ ಇದೀಗ ಎಂಡೆಮಿಕ್‌ (ಸೀಮಿತ ಸೋಂಕು) ಆಗಿದೆ. ಹೀಗಾಗಿ ಕೋವಿಡ್‌ ನಿಯಮ ಉಲ್ಲಂಘನೆ ವಿರುದ್ಧ ಇನ್ನು ಕಾನೂನು ಕ್ರಮ ಕೈಗೊಳ್ಳುವುದಿಲ್ಲ. ಮುಂದಿನ ಗುರುವಾರದಿಂದ ಎಲ್ಲ ನಿರ್ಬಂಧಗಳನ್ನು ತೆಗೆಯಲಾಗುತ್ತದೆ ಅಂತ ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌(Boris Johnson) ತಿಳಿಸಿದ್ದಾರೆ. 

UK PM Race: ಜಾನ್ಸನ್‌ಗೆ ಕಂಟಕವಾದ ಗುಂಡು ಪಾರ್ಟಿ, ಬ್ರಿಟನ್‌ ಪ್ರಧಾನಿ ರೇಸಲ್ಲಿ ಇನ್ಫಿ ಮೂರ್ತಿ ಅಳಿಯ ರಿಷಿ!

ಏಕೆ ನಿರ್ಬಂಧ ರದ್ದು?

- ನಿತ್ಯ 2 ಲಕ್ಷದಷ್ಟು ಬರುತ್ತಿದ್ದ ಕೇಸ್‌ ಈಗ 90 ಸಾವಿರಕ್ಕೆ ಇಳಿಕೆ
- ಕೋವಿಡ್‌ ಈಗ ಎಂಡೆಮಿಕ್‌ ಆಗಿದೆ ಎಂದು ತಜ್ಞರ ಹೇಳಿಕೆ
- ಬೂಸ್ಟರ್‌ ಡೋಸ್‌ನಿಂದಾಗಿ ಸೋಂಕು ಸಾಕಷ್ಟು ನಿಯಂತ್ರಣ
- ಆಸ್ಪತ್ರೆ, ಐಸಿಯುಗೆ ಸೇರುವವರ ಸಂಖ್ಯೆ ಗಣನೀಯ ಇಳಿಕೆ
- ಕೊರೋನಾದಿಂದ ಈಗ ಸಾಮಾನ್ಯ ಶೀತದಂತೆ ಆಗಿರುವುದು

ಬ್ರಿಟನ್‌ನಲ್ಲಿ ಒಂದೇ ದಿನ ದಾಖಲೆಯ ಕೇಸ್‌! ತೀವ್ರತೆಗೆ ಬ್ರಿಟನ್‌ ತತ್ತರ

ಲಂಡನ್‌: ಅತ್ಯಂತ ವೇಗವಾಗಿ ಹಬ್ಬುವ ರೂಪಾಂತರಿ ಪ್ರಭೇದ ಒಮಿಕ್ರೋನ್‌ನಿಂದ (Omicron) ತತ್ತರಿಸಿರುವ ಬ್ರಿಟನ್‌ನಲ್ಲಿ (Britain) ಬುಧವಾರ ಕೋವಿಡ್‌ (Covid) ಸೋಂಕಿನ ಸಂಖ್ಯೆ 1 ಲಕ್ಷ ದಾಟಿತ್ತು.  ಕಳೆದ ಕೆಲ ದಿನಗಳಿಂದ 90 ಸಾವಿರಕ್ಕಿಂತ ಹೆಚ್ಚು ದೈನಂದಿನ ಕೋವಿಡ್‌ ಕೇಸ್‌ಗಳು ಪತ್ತೆಯಾಗುತ್ತಿರುವ ದೇಶದಲ್ಲಿ ಡಿ.23 ರಂದು ಬರೋಬ್ಬರಿ 1,06,122 ಮಂದಿಗೆ ಸೋಂಕು ಕಾಣಿಸಿಕೊಂಡಿತ್ತು. ಇದೇ ವೇಳೆ ಸುಮಾರು 140 ಜನರು ಮೃತರಾಗಿದ್ದರು.
ಕಳೆದ ವರ್ಷದ ಜೂನ್‌ನಲ್ಲಿ 2ನೇ ಅಲೆಯ ವೇಳೆ ಗರಿಷ್ಠ 64 ಸಾವಿರ ಕೇಸ್‌ಗಳು (Case) ಪತ್ತೆಯಾಗಿದ್ದವು. ಹೀಗಾಗಿ ಇದು 2ನೇ ಅಲೆಯ ವೇಳೆ ಪತ್ತೆಯಾಗಿದ್ದ ಗರಿಷ್ಠ ಕೊರೋನಾ (Corona) ಕೇಸ್‌ಗಳಿಗಿಂತಲೂ ದುಪ್ಪಟ್ಟು ಕೇಸ್‌ ಆಗಿದೆ. 
 

click me!