
ನವದೆಹಲಿ(ಜೂ.14) ಭಾರತದಲ್ಲಿ ಇತ್ತೀಚೆಗೆ ಕೊಳವೆ ಬಾವಿಗೆ ಬಿದ್ದ ಮಗು ರಕ್ಷಿಸಲು ಸತತ ಕಾರ್ಯಾಚರಣೆ ನಡೆಸಿದರೂ ವ್ಯರ್ಥವಾದ ಘಟನೆಗಳು ನಡೆದಿದೆ. ಕೊಳವೆ ಬಾವಿಗೆ ಬಿದ್ದ ಮಗುವಿನ ರಕ್ಷಣಾಕಾರ್ಯಾಚರಣೆ ಅತ್ಯಂತ ದುರ್ಗಮ. ಇಷ್ಟೇ ಅಲ್ಲ ಸುದೀರ್ಘ ಸಮಯದ ಅವಶ್ಯಕತೆ ಇದೆ. ಹೀಗಾಗಿ ಬದುಕುವ ಸಾಧ್ಯತೆಯೂ ಕಡಿಮೆ. ಇತ್ತೀಚೆಗೆ ಭಾರತದಲ್ಲಿ ನಡೆದ ಸರಣಿ ಕೊಳವೆ ಬಾವಿ ಪ್ರಕರಣದ ನಡುವೆ ಹಳೇ ವಿಡಿಯೋ ಮತ್ತೆ ವೈರಲ್ ಆಗಿದೆ. ಕೊಳವೆ ಬಾವಿಗೆ ಬಿದ್ದ ಮಗು ರಕ್ಷಿಸಲು ಸ್ವಯಂ ಪ್ರೇರಿತವಾಗಿ 17ರ ಯುವತಿ ಮುಂದೆ ಬಂದು ರಕ್ಷಿಸಿದ ಘಟನೆ ವಿಡಿಯೋ ಭಾರಿ ಸದ್ದು ಮಾಡುತ್ತಿದೆ.
ಈ ವಿಡಿಯೋದಲ್ಲಿ ಕೊಳವೆ ಬಾವಿಗೆ ಬಿದ್ದ ಮಗುವಿನ ರಕ್ಷಣಾ ಕಾರ್ಯಾಚರಣೆ ಇದೆ. ಮಗುವಿನ ಪೋಷಕರು ನೋವು, ಆತಂಕ ತಡೆಯಲು ಸಾಧ್ಯವಾಗದೆ ಕುಸಿದು ಕುಳಿತಿದ್ದಾರೆ. ಸ್ಥಳೀಯರು, ರಕ್ಷಣಾ ತಂಡ, ಪೊಲೀಸರು ಸ್ಥಳಕ್ಕೆ ಠಿಕಾಣಿ ಹೊಡಿದ್ದಾರೆ. ಮಗುವಿನ ರಕ್ಷಣೆಗೆ ಎಲ್ಲಾ ರೀತಿಯಲ್ಲೂ ಪ್ರಯತ್ನ ನಡೆಸಲಾಗುತ್ತಿದೆ. ರಕ್ಷಣಾ ತಂಡಗಳು ಕೆಲ ಪ್ರಯತ್ನ ಮಾಡಿದೆ. ಆದರೆ ಸಾಧ್ಯವಾಗಿಲ್ಲ.
ಸತತ 55 ಗಂಟೆ ಕಾರ್ಯಾಚರಣೆ, ಬದುಕಲಿಲ್ಲ 300 ಅಡಿ ಕೊಳವೆ ಬಾವಿಗೆ ಬಿದ್ದ ಪುಟ್ಟ ಕಂದಮ್ಮ!
ಇತ್ತ ಜೆಸಿಬಿ ಮೂಲಕ ಮಣ್ಣು ತೆಗೆದು ರಕ್ಷಣೆ ಮಾಡುವ ಕಾರ್ಯವನ್ನೂ ಆರಂಭಿಸಲಾಗಿತ್ತು. ಆದರೆ ಜೆಸಿಬಿ ಮೂಲಕ ಮಣ್ಣು ತೆಗೆದು ಮಗು ಸಿಲುಕಿಕೊಂಡಿರುವ ಸ್ಥಳ ತಲುಪಲು ಸುದೀರ್ಘ ಸಮಯ ಬೇಕಿದೆ. ಇದರಿಂದ ಮಗುವಿನ ಪ್ರಾಣಕ್ಕೂ ಅಪಾಯ ಹೆಚ್ಚು. ಇತ್ತ ರಕ್ಷಣಾ ತಂಡದ ಒಂದೊಂದೆ ಪ್ರಯತ್ನಗಳು ವಿಫಲವಾಗತೊಡಗಿತು. ಈ ವೇಳೆ ಯುವತಿಯೊಬ್ಬಳು ಸ್ವಯಂಪ್ರೇರಿತವಾಗಿ ಮಗುವಿನ ರಕ್ಷಣೆ ಮುಂದಾಗಿದ್ದಾಳೆ.
ರಕ್ಷಣಾ ತಂಡ ಕೂಡ ಯುವತಿಗೆ ನೆರವು ನೀಡಿದೆ. ಯುವತಿಯನ್ನು ಹಗ್ಗದ ಮೂಲಕ ಕಟ್ಟಿ ತಲೆಕೆಳಗಾಗಿ ಕೊಳವೆ ಬಾವಿಯೊಳಕ್ಕೆ ಇಳಿಸಲಾಯಿತು. ಮೊದಲ ಪ್ರಯತ್ನ ಕೈಗೂಡಲಿಲ್ಲ. ಕಾರಣ ಯುವತಿಗೆ ಆಳಕ್ಕಿಳಿಯುತ್ತಿದ್ದಂತೆ ಆಮ್ಮಜನಕ ಕೊರತೆ ಎದುರಾಗಿದೆ. ಹೀಗಾಗಿ ರಕ್ಷಣಾ ತಂಡ ಯುವತಿಯನ್ನು ಮೇಲಕ್ಕಿತ್ತಿದ್ದಾರೆ. ಬಳಿಕ ಕೆಲ ಹೊತ್ತು ಸಾವರಿಕೊಂಡು ಮತ್ತೆ ಯುವತಿಯನ್ನು ಕೊಳವೆ ಬಾವಿಯೊಳಕ್ಕೆ ಬಿಡಲಾಗಿದೆ.
ಬೋರ್‌ವೆಲ್‌ಗೆ ಬಿದ್ದು 104 ಗಂಟೆ ಬಳಿಕವೂ ಸಾವು ಗೆದ್ದ ಬಾಲಕ!
ಮಗು ಸಿಲುಕಿಕೊಂಡ ಆಳಕ್ಕೆ ಇಳಿದ ಯುವತಿ, ಕೈಗಳಿಂದ ಮಗುವನ್ನು ಹಿಡಿದಿದ್ದಾಳೆ. ಇತ್ತ ರಕ್ಷಣಾ ತಂಡಗಳು ಯುವತಿಯನ್ನು ಹಗ್ಗದ ಸಹಾಯದಿಂದ ಮೇಲಕ್ಕೆತ್ತಿದ್ದಾರೆ. ಯುವತಿ ಕೊಳವೆ ಬಾವಿಯಿಂದ ಮಗುವನ್ನ ಹಿಡಿದುಕೊಂಡ ಮೇಲಕ್ಕೆ ಬರುತ್ತಿದ್ದಂತೆ ಹರ್ಷೋದ್ಘಾರ ಜೋರಾಗಿದೆ. ಪೋಷಕರು ಕಣ್ಮೀರಾಗಿದ್ದಾರೆ. ಮಗುವನ್ನು ಬಿಗಿದಪ್ಪಿ ಕಣ್ಣಿರಿಟ್ಟಿದ್ದಾರೆ. ಇದೇ ವೇಳೆ ಯುವತಿ ಧೈರ್ಯ ಹಾಗೂ ಸಾಹಸವನ್ನು ಕೊಂಡಾಡಿದ್ದಾರೆ.
ಈ ವಿಡಿಯೋ ರೊಮಾನಿಯಾ ದೇಶದ್ದು ಎನ್ನಲಾಗುತ್ತಿದೆ. ಆದರೆ ಹಲವೆಡೆ ಈ ವಿಡಿಯೋ ರಷ್ಯಾದ ರಕ್ಷಣಾ ಕಾರ್ಯಾಚರಣೆ ಎಂದು ಹೇಳಲಾಗುತ್ತಿದೆ. ಆದರೆ ಈ ಪ್ರಯತ್ನ ಇದೀಗ ಭಾರತದಲ್ಲಿ ವೈರಲ್ ಆಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ