ಅಮೆರಿಕದಲ್ಲೂ ರಾಹುಲ್‌ ಟ್ರಕ್‌ ರೈಡ್‌: ಭಾರತೀಯ ಮೂಲದ ಚಾಲಕನ ಲಾರಿಯಲ್ಲಿ ಸಿಧು ಮೂಸೇವಾಲಾ ಹಾಡು ಕೇಳಿ ಎಂಜಾಯ್‌!

By Kannadaprabha News  |  First Published Jun 14, 2023, 11:11 AM IST

ಅಮೆರಿಕದಲ್ಲಿ ಟ್ರಕ್‌ಗಳನ್ನು ಚಾಲಕರ ಸುರಕ್ಷತೆ ದೃಷ್ಟಿಕೋನ ಇಟ್ಟುಕೊಂಡು ನಿರ್ಮಿಸಲಾಗಿರುತ್ತದೆ, ಆದರೆ ಭಾರತದಲ್ಲಿ ಹಾಗಿಲ್ಲ ಎಂದು ರಾಹುಲ್‌ ಗಾಂಧಿ ಹೇಳಿದರು. 


ವಾಷಿಂಗ್ಟನ್‌ (ಜೂನ್ 14, 2023): ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ತಮ್ಮ ಇತ್ತೀಚಿನ ಅಮೆರಿಕ ಪ್ರವಾಸದ ವೇಳೆ ವಾಷಿಂಗ್ಟನ್‌ ಹಾಗೂ ನ್ಯೂಯಾಕ್‌ ನಡುವೆ 190 ಕಿ.ಮೀ ದೂರವನ್ನು ಟ್ರಕ್‌ನಲ್ಲಿ ಪ್ರಯಾಣಿಸಿದರು. ಈ ವೇಳೆ ಭಾರತ ಮೂಲದ ಟ್ರಕ್‌ ಚಾಲಕ ತಲ್ಜಿಂದರ್‌ ಸಿಂಗ್‌ ಜೊತೆ ಮಾತುಕತೆ ನಡೆಸಿ ಉಭಯ ಕುಶಲೋಪರಿ ವಿಚಾರಿಸಿದರು.

ಈ ವೇಳೆ ರಾಹುಲ್‌ ಅಮೆರಿಕ ಟ್ರಕ್‌ ಚಾಲಕರು ಎದುರಿಸುತ್ತಿರುವ ಸವಾಲುಗಳು, ಅಮೆರಿಕ ಹಾಗೂ ಭಾರತದಲ್ಲಿ ಟ್ರಕ್‌ ಉದ್ಯಮದ ಬಗ್ಗೆ ಚರ್ಚೆ ನಡೆಸಿದರು. ಅಮೆರಿಕದಲ್ಲಿ ಟ್ರಕ್‌ಗಳನ್ನು ಚಾಲಕರ ಸುರಕ್ಷತೆ ದೃಷ್ಟಿಕೋನ ಇಟ್ಟುಕೊಂಡು ನಿರ್ಮಿಸಲಾಗಿರುತ್ತದೆ, ಆದರೆ ಭಾರತದಲ್ಲಿ ಹಾಗಿಲ್ಲ ಎಂದರು. 

Tap to resize

Latest Videos

ಇದನ್ನು ಓದಿ: ಟ್ರಕ್‌ನಲ್ಲಿ ರಾಹುಲ್‌ ಗಾಂಧಿ ಪ್ರಯಾಣ: ಕಾಂಗ್ರೆಸ್‌ ಸರ್ಕಾರ ಬಂದ್ರೆ ಲಾರಿ ಚಾಲಕರ ಸಮಸ್ಯೆ ಬಗೆಹರಿಸುವ ಭರವಸೆ

ಪ್ರಯಾಣದ ವೇಳೆ ಪಂಜಾಬಿನ ಸಿಧು ಮೂಸೇವಾಲಾ ಅವರ ಹಾಡನ್ನು ಆಲಿಸಿ ಕೊನೆಗೆ ಹೋಟೆಲಿನಲ್ಲಿ ಆಹಾರ ತಿಂದು ಪ್ರಯಾಣ ಮುಗಿಸಿದರು. ಕಳೆದ ತಿಂಗಳು ದೆಹಲಿ ಹಾಗೂ ಚಂಡೀಗಢ ಮಧ್ಯದಲ್ಲೂ ಟ್ರಕ್‌ ಮೂಲಕ ಸಂಚರಿಸಿದ್ದರು.

ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಅವರು ತಾವು ಇತ್ತೀಚೆಗೆ ಟ್ರಕ್‌ನಲ್ಲಿ ದಿಲ್ಲಿಯಿಂದ ಚಂಡೀಗಢಕ್ಕೆ ಪ್ರಯಾಣಿಸಿದ ವಿಡಿಯೋವನ್ನು ತಮ್ಮ ಟ್ವಿಟ್ಟರ್‌ ಖಾತೆ ಹಾಗೂ ಯೂಟ್ಯೂಬ್‌ನಲ್ಲಿ ಶೇರ್‌ ಮಾಡಿದ್ದರು. ‘6 ಗಂಟೆಗಳ ಈ ಟ್ರಕ್‌ ಯಾತ್ರ ಅತ್ಯದ್ಭುತವಾಗಿತ್ತು. ಅಲ್ಲದೆ ಕುತೂಹಲಕರ ಸಂವಾದವು ಟ್ರಕ್‌ ಚಾಲಕ ಪ್ರೇಮ್‌ ರಜಪೂತ್‌ ಹಾಗೂ ಕ್ಲೀನರ್‌ ರಾಕೇಶ್‌ ಜತೆ ಈ ವೇಳೆ ನಡೆಯಿತು. ಪ್ರಯಾಣದಲ್ಲಿ 6 ತಾಸು ಕಳೆದಿದ್ದೇ ಗೊತ್ತಾಗಲಿಲ್ಲ’ ಎಂದು ರಾಹುಲ್‌ ಗಾಂಧಿ ಹೇಳಿದ್ದರು.

ಇದನ್ನೂ ಓದಿ: ರಾಹುಲ್‌ ಗಾಂಧಿಗೆ ಸಿಕ್ತು ಸಾಮಾನ್ಯ ಪಾಸ್‌ಪೋರ್ಟ್‌: 10 ವರ್ಷದ ಬದಲು 3 ವರ್ಷಕ್ಕೆ ಮಾತ್ರ ಅನುಮತಿ!

“ಆರು ಗಂಟೆಗಳ ದೆಹಲಿ-ಚಂಡೀಗಢ ಪ್ರಯಾಣದಲ್ಲಿ ಟ್ರಕ್ ಡ್ರೈವರ್‌ಗಳೊಂದಿಗೆ ಆಸಕ್ತಿದಾಯಕ ಸಂಭಾಷಣೆ! 24 ಗಂಟೆಗಳ ಕಾಲ ರಸ್ತೆಯಲ್ಲಿ ಕಳೆಯುವ ಅವರು ಭಾರತದ ಮೂಲೆ ಮೂಲೆಯನ್ನು ಒಂದುಗೂಡಿಸುತ್ತಾರೆ’’ ಎಂದೂ ರಾಹುಲ್‌ ಗಾಂಧಿ ಈ ವೇಳೆ ಹೇಳಿದ್ದರು. 

ಇದನ್ನೂ ಓದಿ: ಕೊನೆಗೂ ರಾಹುಲ್‌ ಗಾಂಧಿಗೆ ಸಿಕ್ತು ಸಾಮಾನ್ಯ ಪಾಸ್‌ಪೋರ್ಟ್: ಇಂದು ಅಮೆರಿಕ ಪ್ರವಾಸಕ್ಕೆ 'ಕೈ' ನಾಯಕ

click me!