20 ಗಂಟೆ ಫ್ರಿಡ್ಜ್‌ನಲ್ಲಿ ಅಡಗಿ ಭೂಕುಸಿತದಿಂದ ಪಾರಾದ 11 ವರ್ಷದ ಬಾಲಕ

Published : Apr 22, 2022, 01:06 PM IST
20 ಗಂಟೆ ಫ್ರಿಡ್ಜ್‌ನಲ್ಲಿ ಅಡಗಿ ಭೂಕುಸಿತದಿಂದ ಪಾರಾದ 11 ವರ್ಷದ ಬಾಲಕ

ಸಾರಾಂಶ

ಭೂಕುಸಿತದಿಂದ ಪಾರಾದ 11 ವರ್ಷದ ಬಾಲಕ 20 ಗಂಟೆ ಫ್ರಿಡ್ಜ್‌ನಲ್ಲಿ ಅಡಗಿ ಜೀವ ಉಳಿಸಿಕೊಂಡ ಫಿಲಿಪೈನ್ಸ್‌ನ ಬೇಬೇ ಸಿಟಿಯಲ್ಲಿ ಘಟನೆ

ವೈರಲ್ ನ್ಯೂಸ್: ಫಿಲಿಪ್ಪೀನ್ಸ್ (Philippine)ನಲ್ಲಿ ಸಂಭವಿಸಿದ ಭೂಕುಸಿತದಲ್ಲಿ 11 ವರ್ಷದ ಬಾಲಕನೊಬ್ಬ ಇಡೀ ದಿನ ರೆಫ್ರಿಜರೇಟರ್‌ ನಲ್ಲಿ (refrigerator) ಆಶ್ರಯ ಪಡೆದು ಪವಾಡ ಸದೃಶ ರೀತಿಯಲ್ಲಿ ಬದುಕುಳಿದ ಘಟನೆ ವರದಿಯಾಗಿದೆ. ಶುಕ್ರವಾರದಂದು ಫಿಲಿಪೈನ್ಸ್‌ನ ಬೇಬೇ ಸಿಟಿಯಲ್ಲಿ ಸಿಜೆ ಜಾಸ್ಮೆ (CJ Jasme) ಎಂದು ಗುರುತಿಸಲಾದ ಫಿಲಿಪಿನೋ ಹುಡುಗ ತನ್ನ ಕುಟುಂಬದೊಂದಿಗೆ ಮನೆಯಲ್ಲಿದ್ದಾಗ ಭೂ ಕುಸಿತ ಸಂಭವಿಸಿದೆ. ಉಷ್ಣವಲಯದ ಚಂಡಮಾರುತ ಮೆಗಿ  ಪರಿಣಾಮ ಉಂಟಾದ ಭೂಕುಸಿತದಿಂದ ಪ್ರಚೋದಿತವಾದ ಮಣ್ಣಿನ ಭಾರೀ ಪ್ರವಾಹವು ಬಾಲಕನ ಮನೆಗೆ ನುಗ್ಗಿದೆ. ಈ ವೇಳೆ ಹುಡುಗ ತ್ವರಿತವಾಗಿ ರೆಫ್ರಿಜರೇಟರ್ ಒಳಗೆ ಅಡಗಿಕೊಂಡು ಅದನ್ನು ಚಂಡಮಾರುತದಿಂದ ಪಾರು ಮಾಡಬಲ್ಲ ಆಶ್ರಯತಾಣವಾಗಿ ಪರಿವರ್ತಿಸಿದನು. ಈ ಬಾಲಕ ರೆಫ್ರಿಜರೇಟರ್‌  ಒಳಗೆ 20 ಗಂಟೆಗಳ ಕಾಲ ಕಳೆದರು.

ಸ್ಥಳೀಯ ಸುದ್ದಿ ವಾಹಿನಿ 24 ಓರಸ್‌ ವರದಿಯ ಪ್ರಕಾರ, ಬಾರಂಗೇ ಕಂಟಗ್ನೋಸ್‌ನಲ್ಲಿ (Barangay Kantagno)ರಕ್ಷಣಾ ಕಾರ್ಯಾಚರಣೆಯ ಸಮಯದಲ್ಲಿ ಸಿ ಜೆ ಹ್ಯಾಸ್ಮೆ (C J Hasme) ಎಂದು ಗುರುತಿಸಲಾದ ಹುಡುಗ ರೆಫ್ರಿಜರೇಟರ್‌ನಲ್ಲಿ ಮಲಗಿರುವುದನ್ನು ಅಧಿಕಾರಿಗಳು ಕಂಡುಕೊಂಡರು. ಈ ಭೂಕುಸಿತ ದುರಂತದಲ್ಲಿ ಬಾಲಕನ ಕಾಲು ಮುರಿದಿದೆ ಆದರೆ ಅವನು ಪ್ರಜ್ಞಾವಸ್ಥೆಯಲ್ಲಿ ಇದ್ದಿದ್ದು, ನಿಜವಾಗಿಯೂ ಸಂಪೂರ್ಣ ಪವಾಡವೇ ಸರಿ ಎಂದು ಹೇಳಲಾಗುತ್ತಿದೆ. ಘಟನೆಯ ಫೋಟೋಗಳು ಮತ್ತು ವೀಡಿಯೋಗಳಲ್ಲಿ ಜಾಸ್ಮೆ ಬಾಗಿಲು ಸೆಲ್ಫ್‌ಗಳನ್ನು ತೆಗೆದುಹಾಕಿರುವ ಡಬಲ್-ಡೋರ್ ಫ್ರಿಜ್‌ನ ಒಳಗೆ ಮಲಗಿರುವುದನ್ನು ತೋರಿಸುತ್ತದೆ. ಆಳವಾದ ಕೆಸರಿನಲ್ಲಿ ಫ್ರಿಡ್ಜ್‌ ಒಳಗೆ ಮಲಗಿ ರಾತ್ರಿ ಕಳೆದ ಅವನನ್ನು ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡು ಹೋಗಲಾಗಿದೆ.

 

ರಕ್ಷಿಸಲ್ಪಟ್ಟ ನಂತರ ರಕ್ಷಣಾ ತಂಡಕ್ಕೆ ಬಾಲಕ ಮೊದಲು ಹೇಳಿದ್ದು ನನಗೆ ಹಸಿವಾಗಿದೆ ಎಂಬುದಾಗಿ ಎಂದು ರಕ್ಷಣಾ ತಂಡ ಹೇಳಿದೆ. ಅವರ ಕುಟುಂಬ ಮತ್ತು ಸ್ನೇಹಿತರು ಎಲ್ಲಿದ್ದಾರೆ ಎಂದು ಕೇಳಿದಾಗ, ನಾನು ಒಬ್ಬನೇ ಉಳಿದಿದ್ದೇನೆ, ನನ್ನೊಂದಿಗೆ ಯಾರೂ ಇಲ್ಲ ಎಂದು ಬಾಲಕ ಹೇಳಿದ್ದಾನೆ ಎಂದು ತಿಳಿದು ಬಂದಿದೆ. ನಂತರ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿ ಮುರಿದ ಕಾಲನ್ನು ಸರಿಪಡಿಸಲು ಶಸ್ತ್ರಚಿಕಿತ್ಸೆಗೆ (surgery)ಒಳಪಡಿಸಲಾಯಿತು.

ನೀರಲ್ಲಿ ಬಿದ್ದ ಬಾಲಕನ ರಕ್ಷಣೆಗೆ ಉಟ್ಟ ಸೀರೆ ಬಿಚ್ಚಿ ಕೊಟ್ಟಮಹಿಳೆ

ಸದ್ಯ ಬಾಲಕನ ಸ್ಥಿತಿ ಸ್ಥಿರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದಾಗ್ಯೂ, ಹುಡುಗನ ತಾಯಿ ಮತ್ತು ಕಿರಿಯ ಸಹೋದರ ಕಾಣೆಯಾಗಿದ್ದಾರೆ ಮತ್ತು ಅವನ ತಂದೆ ಈ ಭೂಕುಸಿತ ಸಂಭವಿಸುವುದಕ್ಕೂ ದಿನ ಮೊದಲು ನಡೆದ ಮತ್ತೊಂದು ಭೂಕುಸಿತದಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. 11 ವರ್ಷದ ಬಾಲಕ ಸಿಜೆ ಅವರ 13 ವರ್ಷದ ಸಹೋದರ ದುರಂತದಿಂದ ಪಾರಾಗಿದ್ದಾರೆ ಎಂದು ನಂಬಲಾಗಿದೆ.

ಪ್ರಪಾತಕ್ಕೆ ಸ್ಕಿಡ್‌ ಆದ ಬಸ್‌, 22 ಮಂದಿ ಪವಾಡಸದೃಶ ಪಾರು!
 

2020ರಲ್ಲಿ ಬಸ್‌ ಚಾಲನೆ ಮಾಡುತ್ತಿರುವಾಗಲೇ ಚಾಲಕನಿಗೆ ಹೃದಯಾಘಾತ ಉಂಟಾಗಿ, ಅದರಲ್ಲಿದ್ದ 9 ಜನ ಪ್ರಯಾಣಿಕರು ಪವಾಡಸದೃಶ ರೀತಿಯಲ್ಲಿ ಅಪಾಯದಿಂದ ಪಾರಾಗಿರುವ ಘಟನೆ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ನಡೆದಿದೆ. ಬೃಹನ್ಮುಂಬೈ ಎಲೆಕ್ಟ್ರಿಕ್‌ ಸಪ್ಲೈ ಆ್ಯಂಡ್‌ ಟ್ರಾನ್ಸ್‌ಪೋರ್ಟ್‌ (ಬಿಇಎಸ್‌ಟಿ) ಸಂಸ್ಥೆಯ ಬಸ್‌ ಮುಂಬೈನ ಚೆಂಬೂರಿನಿಂದ ಟಾಟಾ ಪವರ್‌ ಹೌಸ್‌ ಕಡೆಗೆ ಹೊರಟಿತ್ತು. ಈ ವೇಳೆ ಚಾಲಕ ಹೃದಯಾಘಾತಕ್ಕೆ ತುತ್ತಾಗಿದ್ದರಿಂದ ಬಸ್‌ ನಿಯಂತ್ರಣ ತಪ್ಪಿ ಟ್ರಾಫಿಕ್‌ ಸಿಗ್ನಲ್‌ ಪೋಸ್ಟ್‌ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಬಸ್‌ನಲ್ಲಿ ಪೊಲೀಸ್‌ ಸಿಬ್ಬಂದಿ ಸೇರಿದಂತೆ 9 ಜನ ಪ್ರಯಾಣಿಕರಿದ್ದು, ಅದೃಷ್ಟವಶಾತ್‌ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಆಕಾಶಕ್ಕೇ ಕನ್ನಡಿ ಹಾಕಿ ರಾತ್ರಿಗೆ ಗುಡ್‌ ಬೈ ಸಾಹಸ!
PUBG ಗೇಮ್​ನಿಂದ 6ನೇ ಮಗುವಿನತ್ತ ಪಯಣ: ಅಕ್ರಮವಾಗಿ ಭಾರತಕ್ಕೆ ಬಂದಿದ್ದಾಕೆ ಮತ್ತೊಮ್ಮೆ ಗರ್ಭಿಣಿ!