ಪಾಸ್‌ಪೋರ್ಟ್‌ಗೆ ಅಗತ್ಯ ದಾಖಲೆ ನೀಡಲು ಡಿಜಿಲಾಕರ್ ಸಾಕು!

By Suvarna NewsFirst Published Feb 22, 2021, 12:31 PM IST
Highlights

ಕೇಂದ್ರ ಸರ್ಕಾರ ಅಭಿವೃದ್ಧಿಪಡಿಸಿರುವ ಡಿಜಿಲಾಕರ್ ಆ್ಯಪ್ ಹಲವು ರೀತಿಯಲ್ಲಿ ನೆರವು ಒದಗಿಸುತ್ತದೆ. ನಿಮ್ಮೆಲ್ಲ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಸೇವ್ ಮಾಡಿಟ್ಟುಕೊಳ್ಳಲು ಅಧಿಕೃತೆಯನ್ನು ಒದಗಿಸುತ್ತದೆ. ಇದೀಗ ನೀವು ಪಾಸ್‌ಪೋರ್ಟ್‌ಗೆ ಅಪ್ಲೈ ಮಾಡಿದ್ದರೆ ಡಿಜಿಲಾಕರ್‌ನಲ್ಲಿರುವ ನಿಮ್ಮ ಅಧಿಕೃತ ದಾಖಲೆಗಳ ಲಿಂಕ್ ಒದಗಿಸಬಹುದಾಗಿದೆ. ಅಂದರೆ, ಪಾಸ್‌ಪೋರ್ಟ್ ಸೇವೆಗಳಿಗೆ ಈ ಡಿಜಿಲಾಕರ್ ಸಪೋರ್ಟ್ ಮಾಡುತ್ತದೆ.

ಪಾಸ್‌ಪೋರ್ಟ್ ಪಡೆಯುವ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ಇನ್ನಷ್ಟು ಸರಳಗೊಳಿಸುವ ಕೆಲಸವನ್ನು ಮಾಡಿದೆ. ಅಧಿಕೃತ ಮುದ್ರೆಯೊಂದಿಗ ಸರ್ಕಾರಿ ದಾಖಲೆ ಪತ್ರಗಳನ್ನು ಸೇವ್ ಮಾಡಿಟ್ಟುಕೊಳ್ಳಲು ಅವಕಾಶ ಕಲ್ಪಿಸುವ ಡಿಜಿಲಾಕರ್ ಆಪ್‌ ಈಗ ಪಾಸ್‌ಪೋರ್ಟ್ ಪಡೆಯಲು ನೆರವು ಒದಗಿಸಲಿದೆ. ಈ ಆಪ್‌ನಲ್ಲಿರುವ ದಾಖಲೆಗಳನ್ನು ಪಾಸ್‌ಪೋರ್ಟ್ ಡೆಯಲು ಪರಿಗಣಿಸಬಹುದಾಗಿದೆ.

ಈ ಬಗ್ಗೆ ಮಾತನಾಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಿ ಮುರಳೀಧರನ್ ಅವರು, ದೇಶದಲ್ಲಿ ಪಾಸ್‌ಪೋರ್ಟ್ ಸೇವೆಗಳನ್ನು ನೀಡುವ ಸಂಬಂಧ ಪಾಸ್‌ಪೋರ್ಟ್ ಸೇವಾ ಪ್ರೋಗ್ರಾಮ್‌ನಲ್ಲಿ ಸಾಕಷ್ಟು ಬದಲಾವಣೆಗಳ ತರಲಾಗಿದೆ ಎಂದು ತಿಳಿಸಿದ್ದಾರೆ.

ಸರ್ಕಾರಿ ನಿರ್ಮಿತ ‘ಸಂದೇಶ್’ ಆಪ್ ಲಾಂಚ್, ಇದು ದೇಶಿ ವಾಟ್ಸಾಪ್!

ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಲು ಇಚ್ಛಿಸುವವರು ಡಿಜಿಲಾಕರ್‌ನಲ್ಲಿ ಅಪ್‌ಲೋಡ್ ಮಾಡಲಾಗಿರುವ ದಾಖಲೆ ಪತ್ರಗಳ ಲಿಂಕ್ ಅನ್ನು ಈ ಹೊಸ ಯೋಜನೆಯಡಿ ಒದಗಿಸಬಹುದು. ಪಾಸ್‌ಪೋರ್ಟ್ ಸೇವೆಗಳಿಗೆ ಅಗತ್ಯವಾದ ವಿವಿಧ ದಾಖಲೆಗಳನ್ನು ಡಿಜಿಲಾಕರ್ ಮೂಲಕ ಪೇಪರ್‌ಲೆಸ್ ಮೋಡ್‌ನಲ್ಲಿ ಸಲ್ಲಿಸಲು ಇದು ನಾಗರಿಕರಿಗೆ ಅನುವು ಮಾಡಿಕೊಡುತ್ತದೆ. ಈ ಪ್ರಕ್ರಿಯೆ ಮೂಲಕ ಡಿಜಿಟಲ್ ಆಗಿ ದಾಖಲೆಗಳನ್ನು ಒದಗಿಸಲು ಸಾಧ್ಯವಾಗುವುದರಿಂದಾಗಿ ಅರ್ಜಿದಾರರು ಮೂಲ ದಾಖಲೆಗಳನ್ನೇನೂ ಕೊಂಡೊಯ್ಯಬೇಕಾದ ಅಗತ್ಯ ಬೀಳುವುದಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ ಎಂದು ಹಲವು ಸುದ್ದಿ ಜಾಲತಾಣಗಳು ವರದಿ ಮಾಡಿವೆ.

ಮುಂಬರುವ ಪಾಸ್‌ಪೋರ್ಟ್ ಸೇವಾ ಪ್ರೋಗ್ರಾಮ್ ವಿ2.0ದಲ್ಲಿ  ಆರ್ಟಿಫಿಶಿಯಲ್ ಇಂಟೆಲೆಜಿನ್ಸ್(ಎಐ), ಮಷಿನ್ ಲರ್ನಿಂಗ್, ಚಾಟ್ ಬಾಟ್, ಅನಲಿಟಿಕ್ಸ್, ರೊಬೋಟಿಕ್ಸ್ ಪ್ರಾಸೆಸ್ ಆಟೋಮೇಷನ್(ಆರ್‌ಪಿಎ) ಇತ್ಯಾದಿ ನೂತನ ತಂತ್ರಜ್ಞಾನಗಳನ್ನು ಬಳಸಿಕೊಳ್ಳಲಾಗುತ್ತಿದೆ. ಈ ಎಲ್ಲ ತಾಂತ್ರಿಕ ನೆರವು ಪಾಸ್‌ಪೋರ್ಟ್ ವಿತರಣೆಯ ಕೆಲಸವನ್ನು ಸರಾಗಗೊಳಿಸುವ ಅನುಭವವನ್ನು ನಾಗರಿಕರು ಪಡೆಯಲಿದ್ದಾರೆಂದು ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಡಿಜಿಲಾಕರ್‌ನ ಒದಗಿಸುವ ಹಲವು ದಾಖಲೆಗಳಿಗೆ ಪಾಸ್‌ಪೋರ್ಟ್ ಕೂಡ ಸೇರಿಸುವ   ಬಗ್ಗೆ ನಾವು ಕೆಲಸ ಮಾಡುತ್ತಿದ್ದೇವೆ. ಇದು ಸಾಧ್ಯವಾದರೆ, ನಾಗರಿಕರು ತಮ್ಮ ಪಾಸ್‌ಪೋರ್ಟ್ ಅನ್ನು ಎಲ್ಲೆಂದರಲ್ಲಿ ಯಾವುದೇ ಸಮಯದಲ್ಲಿ ಪಡೆದುಕೊಳ್ಳಲು ಸಾಧ್ಯವಾಗಲಿದೆ ಎಂದು ಸಚಿವ ಮುರಳೀಧರನ್ ಅವರು ಅಭಿಪ್ರಾಯಪಟ್ಟಿದ್ದಾರೆ.
ಡಿಜಿಲಾಕರ್ ಡಿಜಿಟಲ್ ರೀತಿಯಲ್ಲಿ ದಾಖಲೆಗಳು, ಪ್ರಮಾಣಪತ್ರಗಳ ವಿತರಣೆ ಮತ್ತು ಪರಿಶೀಲನೆಗೊಳಪಡಿಸುವ ಒಂದು ವೇದಿಕೆಯಾಗಿದ್ದು, ಇದರಿಂದಾಗಿ ಭೌತಿಕ ದಾಖಲೆಗಳ ಬಳಕೆಯನ್ನು ತಪ್ಪಿಸಲು ಸಹಾಯಕವಾಗುತ್ತದೆ.

ಒಮ್ಮೆ ಡಿಜಿಲಾಕರ್‌ನಲ್ಲಿ ಪಾಸ್‌ಪೋರ್ಟ್ ಅಪ್‌ಲೋಡ್ ಮಾಡಲು ಸಾಧ್ಯವಾದರೆ ಯಾವುದೇ ಸ್ಥಳದಿಂದ ದಾಖಲೆಗಳನ್ನು ಪಡೆಯಲು ಅಧಿಕೃತ ವ್ಯಕ್ತಿಗೆ ಸಾಧ್ಯವಾಗಲಿದೆ. ಒಂದೊಮ್ಮೆ ಪಾಸ್‌ಪೋರ್ಟ್ ಕಳೆದು ಹೋದಾಗ ಈ ಸೌಲಭ್ಯ ಹೆಚ್ಚು ಸಹಾಯಕ್ಕೆ ಬರಲಿದೆ ಎಂದು ಅವರು ತಿಳಿಸಿದ್ದಾರೆ.

ಟ್ವಿಟರ್‌ನಲ್ಲಿ ಇನ್ನು ವಾಯ್ಸ್ ಡೈರೆಕ್ಟ್ ಮೆಸೇಜ್! ಹೇಗೆ ಗೊತ್ತಾ..?

ಪಾಸ್‌ಪೋರ್ಟ್ ಅಪ್ಲಿಕೇಷನ್ ಪ್ರಕ್ರಿಯೆಯನ್ನು ಕಾಗದರಹಿತಗೊಳಿಸುವ ನಿಟ್ಟಿನಲ್ಲಿ ನಾಗರಿಕರು ಡಿಜಿಲಾಕರ್ ಸೌಲಭ್ಯವನ್ನು ಬಳಸುವುದನ್ನು ಉತ್ತೇಜಿಸುತ್ತೇನೆ. ಇದರಿಂದ ಬಹಳಷ್ಟು ಸಹಾಯಕವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಜನರ ಅನುಕೂಲಕ್ಕಾಗಿ ಸರ್ಕಾರವು ವಿದೇಶಗಳಲ್ಲಿನ 150 ಭಾರತೀಯ ಕಾರ್ಯಾಚರಣೆಗಳು ಮತ್ತು ಹುದ್ದೆಗಳನ್ನು ಪಾಸ್‌ಪೋರ್ಟ್ ಸೇವಾ ಯೋಜನೆಗೆ ಸಂಯೋಜಿಸಿದೆ. ಪಾಸ್‌ಪೋರ್ಟ್ ಸೇವಾ ಯೋಜನೆಯ ಮೂಲಕ ಸುಮಾರು 7 ಕೋಟಿ ಪಾಸ್‌ಪೋರ್ಟ್‌ಗಳನ್ನು ನೀಡಲಾಗಿದೆ.

ಭೌತಿಕ ಡ್ರೈವಿಂಗ್ ಲೈಸೆನ್ಸ್‌ಗೆ ಪರ್ಯಾಯವಾಗಿ ಡಿಜಿಲಾಕರ್ ದಾಖಲೆಯನ್ನು ಬಳಸಿಕೊಳ್ಳುವುದನ್ನು 2019ರ ಸೆಪ್ಟೆಂಬರ್ ಅಧಿಕೃತಗೊಳಿಸಲಾಯಿತು. ಒರಿಜನಲ್ ಡಿಎಲ್ ಬದಲಿಗೆ ಬಳೆಕದಾರರು ಈ ಡಿಜಿಲಾಕರ್ ಆಪ್‌ನಲ್ಲಿ ಸೇವ್ ಮಾಡಲಾದ ಅಧಿಕೃತ ದಾಖಲೆಯನ್ನು ತೋರಿಸಲು ಅವಕಾಶ ಕಲ್ಪಿಸಲಾಯಿತು. ಇದೀಗ ಈ ಸೇವೆಗಳ ಸಾಲಿಗೆ ಪಾಸ್‌ಪೋರ್ಟ್ ಕೂಡ ಸೇರಿಸಲಾಗುತ್ತಿದೆ. ಮೇಲಿಂದ ಮೇಲೆ ವಿದೇಶಗಳಿಗೆ ಪ್ರವಾಸ ಮಾಡುವವರು ಪಾಸ್‌ಪೋರ್ಟ್ ಸಂಬಂಧ ಯಾವುದೇ ಸಮಸ್ಯೆಗೆ ಈ  ಡಿಜಿಲಾಕರ್ ಅನ್ನು ಪರ್ಯಾಯವಾಗಿ ಬಳಸಿಕೊಳ್ಳಬಹುದಾಗಿದೆ.

249 ರೂ. Vi ಪ್ಲ್ಯಾನ್‌: ರಾತ್ರಿ 12ರಿಂದ ಬೆಳಗಿನ 6ರ ತನಕ ಹೈ ಸ್ಪೀಡ್ ಇಂಟರ್ನೆಟ್ ಬಳಸಿ

click me!