ಟ್ವಿಟರ್‌ನಲ್ಲಿ ಇನ್ನು ವಾಯ್ಸ್ ಡೈರೆಕ್ಟ್ ಮೆಸೇಜ್! ಹೇಗೆ ಗೊತ್ತಾ..?

By Suvarna News  |  First Published Feb 18, 2021, 2:20 PM IST

ಭಾರತ, ಜಪಾನ್ ಮತ್ತು ಬ್ರೆಜಿಲ್ ದೇಶಗಳಲ್ಲಿ ಟ್ವಿಟರ್ ವಾಯ್ಸ್ ಡೈರೆಕ್ಟ್ ಮೆಸೆಜ್ ಫೀಚರ್ ಪರಿಚಯಿಸಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಕಂಪನಿ, ಹಂತ ಹಂತವಾಗಿ ಈ ಸೇವಯೆನ್ನು ಪೂರ್ತಿಯಾಗಿ ಪರಿಚಯಿಸಲಾಗುವುದು ಎಂದು ಹೇಳಿಕೊಂಡಿದೆ. ಈ ಹೊಸ ಫೀಚರ್‌ನೊಂದಿಗೆ ಬಳಕೆದಾರರಿಗೆ ತಮ್ಮ ಅಭಿಪ್ರಾಯವನ್ನು ಇನ್ನಷ್ಟು ಪ್ರಭಾವಶಾಲಿಯಾಗಿ ವ್ಯಕ್ತಪಡಿಸಲು ಟ್ವಿಟರ್ ವೇದಿಕೆಯನ್ನು ಒದಗಿಸಿದಂತಾಗಿದೆ.


ಕಳೆದ ವಾರ ಪೂರ್ತಿ ಭಾರತ ಸರ್ಕಾರ ಮತ್ತು ಟ್ವಿಟರ್ ‌ಮಧ್ಯೆ ನಡೆದ ಜಟಾಪಟಿಯೇ ಹೆಚ್ಚು ಸದ್ದು ಮಾಡಿತ್ತು. ಈ ವಾರ ಟ್ವಿಟರ್ ತನ್ನ ಬಳಕೆದಾರರಿಗೆ ಖುಷಿಯ ಸುದ್ದಿಯೊಂದನ್ನು ಷೇರ್ ಮಾಡಿಕೊಂಡಿದೆ. ಇನ್ನು ಮುಂದೆ ಟ್ವಿಟರ್‌ನಲ್ಲಿ ಬಳಕೆದಾರರು ವಾಯ್ಸ್ ಡೈರೆಕ್ಟ್ ಮೆಸೆಜ್‌(ಧ್ವನಿ ನೇರ ಸಂದೇಶ)ಗಳನ್ನು ಕಳುಹಿಸಬಹುದಾಗಿದೆ.

ಭಾರತದಲ್ಲಿ ಫೆ.17ರಂದು  ಬುಧವಾರ ಈ ವಾಯ್ಸ್ ಡೈರೆಕ್ಟ್ ಮೆಸೆಜ್ ಫೀಚರ್ ಅನ್ನು ಟ್ವಿಟರ್ ಆರಂಭಿಸಿದೆ. , test, test: Starting today, you'll be able to record and send voice messages in DMs  PS. The experiment will be rolled out in phases ಎಂದು ಹೇಳಿದೆ. ಹಂತ ಹಂತವಾಗಿ ಈ ಸೇವೆಯೂ ಗ್ರಾಹಕರಿಗೆ ದೊರೆಯಲಿದೆ.

Tap to resize

Latest Videos

undefined

ಬಾಯಿಗೆ ಬಂದು ಬಿದ್ದ ಲಡ್ಡು!, Koo ಆಪ್ ಸೇರಲು ಜನರು Queue

ಭಾರತ ಮಾತ್ರವಲ್ಲದೇ ಜಪಾನ್ ಮತ್ತು ಬ್ರೆಜಿಲ್‌ ದೇಶಗಳ ಬಳಕೆದಾರರಿಗೂ ಈ ಸೇವೆಯನ್ನು ಟ್ವಿಟರ್ ಒದಗಿಸಿದೆ. ಕಳೆದ ವರ್ಷವೇ ಟ್ವಿಟರ್ ವಾಯ್ಸ್ ಡೈರೆಕ್ಟ್ ಮೆಸೆಜ್ ಸೇವೆಯನ್ನು ಒದಗಿಸುವ ಬಗ್ಗೆ ಘೋಷಣೆ ಮಾಡಿತ್ತು. ಸದ್ಯಕ್ಕೆ ಈ ಹೊಸ ಪ್ಲ್ಯಾನ್ ಅನ್ನು ಪ್ರಯೋಗಾತ್ಮಕವಾಗಿದೆ ಎಂದು ಟ್ವಿಟರ್ ಹೇಳಿಕೊಂಡಿದೆ. ಮುಂದಿನ ದಿನಗಳಲ್ಲಿ ಈ ಸೇವೆಯೂ ಟ್ವಿಟರ್ ಬಳಕೆದಾರರಿಗೆ ಸಂಪೂರ್ಣವಾಗಿ ದೊರೆಯುವುದನ್ನು ನಾವು ನಿರೀಕ್ಷಿಸಬಹುದು.  ಅಂದ ಹಾಗೆ, ಭಾರತದಲ್ಲಿ ಇದು ಐಒಎಸ್ ಮತ್ತು ಆಂಡ್ರಾಯ್ಡ್ ಬಳಕೆದಾರರಿಗೆ ಲಭ್ಯವಿದೆ.

ಮೊದಲೇ ಹೇಳಿದಂತೆ ಟ್ವಿಟರ್ ತನ್ನ ಈ ಸೇವೆಯನ್ನು ಟ್ವೀಟ್ ಮಾಡುವ ಮೂಲಕವೇ ಘೋಷಣೆ ಮಾಡಿದ್ದು, ಈ ಹೊಸ ಫೀಚರ್ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ತೋರಿಸುವ ವಿಡಿಯೋವನ್ನು ಪೋಸ್ಟ್ ಮಾಡಿದೆ. ಕೊನೆಗೆ ಈ ಫೀಚರ್ ಅನ್ನು ಹಂತ ಹಂತವಾಗಿ ವಿಸ್ತರಿಸಲಾಗುವುದು ಎಂದು ಹೇಳಿಕೊಂಡಿದೆ.

249 ರೂ. Vi ಪ್ಲ್ಯಾನ್‌: ರಾತ್ರಿ 12ರಿಂದ ಬೆಳಗಿನ 6ರ ತನಕ ಹೈ ಸ್ಪೀಡ್ ಇಂಟರ್ನೆಟ್ ಬಳಸಿ

ಟ್ವೀಟ್ ಮಾಡಲಾಗಿರುವ ವಿಡಿಯೋದಲ್ಲಿನ ಮಾಹಿತಿ ಪ್ರಕಾರ, ಮೆಸೆಜ್ ಬಾಕ್ಸ್‌ನ ಬಲ ಬದಿಯಲ್ಲಿರುವ ಸಣ್ಣ ಐಕಾನ್ ಬಳಸಿಕೊಂಡು ಬಳಕೆದಾರರು ವಾಯ್ಸ್ ಡೈರೆಕ್ಟ್ ಮೆಸೆಜ್ ರೆಕಾರ್ಡ್ ಮಾಡಿಕೊಂಡು ಕಳಿಸಬಹುದು. ಈ ವಾಯ್ಸ್ ಡೈರೆಕ್ಟ್ ಮೆಸೆಜ್ ಅವಧಿ ಕೂಡ 140 ಸೆಕೆಂಡ್‌ ಮಿತಿಗೊಳಪಟ್ಟಿದೆ. ಹಾಗೆಯೇ, ಈ ವಾಯ್ಸ್ ಮೆಸೆಜ್ ಕಳುಹಿಸುವ ಮೊದಲು  ರಿವಿವ್ಯೂ ಆಯ್ಕೆಯನ್ನು ಟ್ವಿಟರ್ ನೀಡಿದೆ. ಈ ಫೀಚರ್ ಸದ್ಯಕ್ಕೆ ಟ್ವಿಟರ್ ಮೊಬೈಲ್ ಆಪ್‌ನಲ್ಲಿ ಮಾತ್ರವೇ ಲಭ್ಯವಿದೆ. ವೆಬ್‌ಸೈಟ್‌ನಲ್ಲಿ ಈ ಫೀಚರ್ ಇಲ್ಲ. ಅಂದರೆ, ಮೊಬೈಲ್‌ನಲ್ಲಿ ಟ್ವಿಟರ್ ಆಪ್ ಬಳಸುವವರು ಮಾತ್ರ ಈ ವಾಯ್ಸ್ ಡೈರೆಕ್ಟ್ ಮೆಸೆಜ್ ಕಳುಹಿಸಲು ಸಾಧ್ಯವಾಗುತ್ತದೆ.

ಜನರಿಗೆ ಹೊಸ ರೀತಿಯಲ್ಲಿ ತಮ್ಮ ಅನಿಸಿಕೆಗಳನ್ನು ಅಭಿವ್ಯಕ್ತಿಗೊಳಿಸಲು ಈ ವಾಯ್ಸ್ ಮೆಸೆಜ್ ಅವಕಾಶ ಕಲ್ಪಿಸಿಕೊಡುತ್ತದೆ ಎಂಬುದು ಟ್ವಿಟರ್‌ನ ಅಭಿಪ್ರಾಯವಾಗಿದೆ. ಯಾರೊಬ್ಬರ ಧ್ವನಿಯನ್ನು ಕೇಳುವ ಮೂಲಕ ನಿರ್ಮಿಸಲಾದ ಸೂಕ್ಷ್ಮ ವ್ಯತ್ಯಾಸಗಳು, ಭಾವನೆ ಮತ್ತು ಅನುಭೂತಿಯ ಮೂಲಕ ಸಂಪರ್ಕ ಸಾಧಿಸಲು ಅವರಿಗೆ ಸಹಾಯ ಮಾಡುತ್ತದೆ ಎಂದು ಟ್ವಿಟರ್ ಭಾವಿಸುತ್ತದೆ.

ಲೆನೆವೋ ಟ್ಯಾಬ್ ಪಿ11 ಪ್ರೊ ಟ್ಯಾಬ್ಲೆಟ್ ಬಿಡುಗಡೆ, ಭರಪೂರ ಫೀಚರ್‌ಗಳು

ವಿಶ್ವದ ಪ್ರಭಾವಿ ಮೈಕ್ರೊಬ್ಲಾಗಿಂಗ್ ತಾಣವಾಗಿರುವ ಟ್ವಿಟರ್ ಅತ್ಯಂತ ಪ್ರಭಾವಶಾಲಿ ಸಾಮಾಜಿಕ ಜಾಲತಾಣವಾಗಿದೆ. ಜಗತ್ತಿನಲ್ಲಿ ನಡೆಯುವ ವಿದ್ಯಮಾನಗಳನ್ನು ತಿಳಿಯಲು ಈ ಟ್ವಿಟರ್ ಸಹಾಯಕವಾಗಿದೆ. ಭಾರತದಲ್ಲಿ ಟ್ವಿಟರ್ ಬಳಕೆದಾರರು ಪ್ರಮಾಣವೂ ಹೆಚ್ಚಿದೆ.

ಟ್ವಿಟರ್‌ನಲ್ಲಿ ಧ್ವನಿ ಡೈರೆಕ್ಟ್ ಮೆಸೆಜ್‌ಗಳನ್ನು ಕಳುಹಿಸುವುದು ಇದೀಗ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಮಾತ್ರ ಲಭ್ಯವಾಗುತ್ತಿದೆ. ಆದರೆ ಬಳಕೆದಾರರು ವೆಬ್ ಬ್ರೌಸರ್ ಮೂಲಕವೂ ಅವರು ಸ್ವೀಕರಿಸುವ ಸಂದೇಶಗಳನ್ನು ಕೇಳಬಹುದು. ಈ ಹೊಸ ಫೀಚರ್ ಬಳಕೆದಾರರಿಗೆ ತಮ್ಮನ್ನು ತಾವು ವ್ಯಕ್ತಪಡಿಸಲು ಹೆಚ್ಚಿನ ಮಾರ್ಗಗಳನ್ನು ನೀಡುತ್ತದೆ ಮತ್ತು ಕಥೆ ಹೇಳುವವರಿಗೂ ಮತ್ತು ಕೇಳುಗರಿಗೆ ಹೆಚ್ಚು ಮಾನವಿಕ ಅನುಭವವನ್ನು ನೀಡುತ್ತದೆ ಎಂಬುದು ಟ್ವಿಟರ್ ಅಭಿಪ್ರಾಯವಾಗಿದೆ.

ಕಳೆದ ವರ್ಷ ಜೂನ್‌ನಲ್ಲಿ ಟ್ವಿಟರ್ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಧ್ವನಿ ಟ್ವೀಟ್‌ಗಳೊಂದಿಗೆ ಮೊದಲ ಬಾರಿಗೆ ಆಡಿಯೋ ಸಂದೇಶ ಕಳುಹಿಸುವ ಫೀಚರ್ ಅನ್ನು ಪರಿಚಯಿಸಿತ್ತು. ಪಠ್ಯದೊಂದಿಗೆ ಅಥವಾ ಇಲ್ಲದೆ ಧ್ವನಿ ಟಿಪ್ಪಣಿಗಳನ್ನು ಟ್ವೀಟ್‌ಗಳಾಗಿ ಕಳುಹಿಸಲು ಇದು ಬಳಕೆದಾರರನ್ನು ಅನುಮತಿಸುತ್ತದೆ. ಈಗಾಗಲೇ ವಾಟ್ಸಾಪ್, ಮೆಸೆಂಜರ್ ಮತ್ತು ಇನ್ಸ್‌ಟಾಗ್ರಾಮ್‌ನಂಥ ಸಾಮಾಜಿಕ ಜಾಲತಾಣಗಳು ಈ ವಾಯ್ಸ್ ಮೆಸೆಜ್ ಸೇವೆಯನ್ನು ಬಳಕೆದಾರರಿಗೆ ನೀಡುತ್ತಿವೆ ಮತ್ತು ಟ್ವಿಟರ್ ಈಗ ಈ ಸೇವೆಯನ್ನು ಆರಂಭಿಸುತ್ತಿದೆ.

click me!