PhonePe ಮೂಲಕ ಪಾವತಿಸಬಹುದು ಬಾಡಿಗೆ; ಪಡೆಯಿರಿ ರಿವಾರ್ಡ್!

By Suvarna News  |  First Published Jul 29, 2021, 11:24 PM IST
  • ಫೋನ್‌ಪೇ ಮೂಲಕ ಬಾಡಿಗೆ ಕೂಡ ಪಾವತಿಸಲು ಸಾಧ್ಯವಿದೆ
  • 4 ಸರಳ ಹಂತದ ಮೂಲಕ ಬಾಡಿಗೆ ಪಾವತಿ ಸಾಧ್ಯ
  • ಬಡ್ಡಿ ರಹಿತ ಕ್ರೆಡಿಟ್‌ ಅವಧಿ ಜೊತೆಗೆ ರಿವಾರ್ಡ್

ಬೆಂಗಳೂರು(ಜು.29): ಫೋನ್‌ಪೇ ಭಾರತದ ಪ್ರಮುಖ ಡಿಜಿಟಲ್ ಪೇಮೆಂಟ್‌ ವೇದಿಕೆಯಾಗಿದೆ. ಫೋನ್‌ಪೇ ಬಳಸಿ, ನೀವು ಹಣವನ್ನು ಕಳುಹಿಸಬಹುದು ಅಥವಾ ಸ್ವೀಕರಿಸಬಹುದು, ಹತ್ತಿರದ ಅಂಗಡಿಗಳಲ್ಲಿ ಪಾವತಿಸಬಹುದು, ಬಿಲ್‌ಗಳನ್ನು ಪಾವತಿಸಬಹುದು, ಚಿನ್ನವನ್ನು ಖರೀದಿಸಬಹುದು ಮತ್ತು ಮ್ಯೂಚುಯಲ್ ಫಂಡ್ ಮತ್ತು ವಿಮೆಯಲ್ಲಿ ಹೂಡಿಕೆ ಮಾಡಬಹುದು. ಇದೀಗ ಹೊಸ ಫೀಚರ್ಸ್ ಸೇರಿಕೊಂಡಿದೆ. ಫೋನ್‌ಪೇ ಮೂಲಕ ಬಾಡಿಗೆ ಕೂಡ ಪಾವತಿಸಲು ಸಾಧ್ಯವಿದೆ. 

ಫ್ಲಿಪ್‌ಕಾರ್ಟ್ ಕ್ಯಾಶ್ ಆನ್ ಡೆಲಿವರಿ ಮತ್ತಷ್ಟು ಸುಲಭ; ಫೋನ್‌ಪೇಯಿಂದ QR Code ಸ್ಕ್ಯಾನ್!

Tap to resize

Latest Videos

undefined

ಫೋನ್‌ಪೇ ಆ್ಯಪ್‌ ನಲ್ಲಿ ನಿಮ್ಮ ಕ್ರೆಡಿಟ್‌ ಕಾರ್ಡ್‌ ಬಳಸಿ ಕೆಲವೇ ಸೆಕೆಂಡುಗಳಲ್ಲಿ  ಬಾಡಿಗೆಯನ್ನೂ ಪಾವತಿಸಬಹುದು. ಫೋನ್‌ಪೇ ಯಲ್ಲಿ ನಿಮ್ಮ ಕ್ರೆಡಿಟ್‌ ಕಾರ್ಡ್‌ ಬಳಸಿ ಬಾಡಿಗೆ ಪಾವತಿಸುವುದರಿಂದ ಹಲವು ಪ್ರಯೋಜನಗಳಿವೆ. ನೀವು 45 ದಿನಗಳ ಬಡ್ಡಿ ರಹಿತ ಕ್ರೆಡಿಟ್‌ ಅವಧಿಯನ್ನು ಪಡೆಯಬಹುದು ಮತ್ತು ನಿಮ್ಮ ಕ್ರೆಡಿಟ್‌ ಕಾರ್ಡ್‌ ಮೇಲೆ ರಿವಾರ್ಡ್‌  ಪಡೆಯಬಹುದಾಗಿದೆ. 

ಕೆಲವು ಸರಳ ಹಂತಗಳ ಮೂಲಕ ನಿಮ್ಮ ಬಾಡಿಗೆ ಪಾವತಿಸುವುದು ಹೇಗೆ ಎಂದು ಇಲ್ಲಿದೆ
ಹಂತ 1: ಫೋನ್‌ಪೇ ಆ್ಯಪ್‌  ತೆರೆಯಿರಿ ಮತ್ತು ಹೋಂ ಪುಟದಲ್ಲಿ “ರೀಚಾರ್ಜ್‌ ಮಾಡಿ & ಬಿಲ್‌ ಪಾವತಿಸಿ” ವಿಭಾಗದಲ್ಲಿ ಬಾಡಿಗೆ ಪಾವತಿಸಿ ಐಕಾನ್‌ ಮೇಲೆ ಕ್ಲಿಕ್‌ ಮಾಡಿ.

ಹಂತ 2: ಬಾಡಿಗೆ ಮೊತ್ತ ಮತ್ತು ಪ್ರಾಪರ್ಟಿಯ ಹೆಸರನ್ನು ನಮೂದಿಸಿ.

ಹಂತ 3:  ಕಟ್ಟಡ ಮಾಲೀಕರ ಬ್ಯಾಂಕ್‌ ಖಾತೆ ಸಂಖ್ಯೆ/UPI ಐಡಿ ಅಥವಾ ಫೋನ್‌ಪೇ ನೋಂದಾಯಿತ ಮೊಬೈಲ್‌ ಸಂಖ್ಯೆಯನ್ನು ನಮೂದಿಸಿ (ಕಟ್ಟಡ ಮಾಲೀಕರ ಫೋನ್‌ಪೇ ಖಾತೆ ಸ್ವಯಂ ಚಾಲಿತವಾಗಿ ತೋರಿಸುತ್ತದೆ) 

PhonePeಯಿಂದ ಭಾರತದ ಮೊದಲ ಆಟೋ ಟಾಪ್ ಅಪ್ ವ್ಯಾಲೆಟ್ ಬಿಡುಗಡೆ!

ಹಂತ 4: ಕ್ರೆಡಿಟ್‌ ಕಾರ್ಡ್‌, ಡೆಬಿಟ್‌ ಕಾರ್ಡ್‌ ಅಥವಾ UPI  - ಇವುಗಳಲ್ಲಿ ನಿಮ್ಮ ಆದ್ಯತೆಯ ಮೋಡ್‌ ಅನ್ನು ಆಯ್ಕೆ ಮಾಡಿ ಪೇಮೆಂಟ್‌ ಮಾಡಿ

click me!