ಅಮೆಜಾನ್, ಫ್ಲಿಪ್‌ಕಾರ್ಟ್‌ಗೆ ಮತ್ತೊಂದು ಹಿನ್ನಡೆ, CCI ತನಿಖೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾ!

By Suvarna News  |  First Published Jul 23, 2021, 8:10 PM IST
  • ಇ-ಕಾಮರ್ಸ್ ದಿಗ್ಗಜರಿಗೆ ಶಾಕ್ ನೀಡಿದ ಕರ್ನಾಟಕ ಹೈಕೋರ್ಟ್
  • CCI ತನಿಖೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಕೋರ್ಟ್

ಬೆಂಗಳೂರು(ಜು.23): ಇ ಕಾಮರ್ಸ್ ದಿಗ್ಗಜರಾದ ಅಮೆಜಾನ್(AMZN.O) ಹಾಗೂ ವಾಲ್‌ಮಾರ್ಟ್ ಮಾಲೀಕತ್ವದ ಫ್ಲಿಪ್‌ಕಾರ್ಟ್‌(WMT.N) ಕಾನೂನು ಹೋರಾಟಕ್ಕೆ ಹಿನ್ನಡೆಯಾಗಿದೆ. ಭಾರತದ ಸ್ಪರ್ಧಾತ್ಮಕ ಆಯೋಗ(CCI) ಆದೇಶಿಸಿದ್ದ ತನಿಖೆ ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯನ್ನು, ಕರ್ನಾಟಕ ಹೈಕೋರ್ಟ್‌ನ ವಿಭಾಗೀಯ ಪೀಠ ರದ್ದುಗೊಳಿಸಿದೆ.

ಅಮೇಜಾನ್‌ಗೆ ಬುದ್ಧಿ ಕಲಿಸಿದ ಕನ್ನಡಿಗರು, ಭೇಷ್ ಎಂದ ಮಾಜಿ ಮುಖ್ಯಮಂತ್ರಿ!

ಅಮೆರಿಕ ಇ ಕಾಮರ್ಸ್ ಸಂಸ್ಥೆಗಳು ಆಯ್ದ ಮಾರಾಟಗಾರರಿಗೆ ತಮ್ಮ ಪ್ಲಾಟ್‌ಫಾರ್ಮ್‌ನಲ್ಲಿ ಅವಕಾಶ ನೀಡಿ, ವಹಿವಾಟು ಸ್ಪರ್ಧೆಯನ್ನು ನಿಗ್ರಹಿಸುವ ವ್ಯಾಪಾರ ಅಭ್ಯಾಸಗಳಿಗೆ ಬಳಸಿಕೊಂಡಿವೆ ಎಂದು ಇಟ್ಟಿಗೆ ಮತ್ತು ಚಿಲ್ಲರೆ ವ್ಯಾಪರಿಗಳ ಒಕ್ಕೂಟ ಆರೋಪಿಸಿತ್ತು. ಈ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿದ CCI ಕಳೆದ ವರ್ಷ ಅಮೆಜಾನ್, ಫ್ಲಿಪ್‌ಕಾರ್ಟ್ ಮೇಲೆ ತನಿಖೆ ಆದೇಶಿಸಿತ್ತು.

Tap to resize

Latest Videos

undefined

CCI ಆದೇಶವನ್ನು ಕರ್ನಾಟಕ ಹೈಕೋರ್ಟ್‌ನಲ್ಲಿ ಇ ಕಾಮರ್ಸ್ ದಿಗ್ಗಜರು ಪ್ರಶ್ನಿಸಿತ್ತು. ಸಿಸಿಐ ತನಿಖೆಗೆ ಆದೇಶಿಸಲು ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ವಾದಿಸಿತ್ತು. ಪರಿಣಾಣ ಈ ಕುರಿತ ತನಿಖೆ ಒಂದು ವರ್ಷಕ್ಕೂ ಹೆಚ್ಚು ಕಾಲ ಸ್ಥಗಿತಗೊಂಡಿತ್ತು. ಜೂನ್ ತಿಂಗಳಲ್ಲಿ ತನಿಖೆ ಮುಂದುವರಿಸಲು ಅವಕಾಶ ನೀಡಿದ ಕೋರ್ಟ್, ಇದೀಗ ಅಮೆಜಾನ್ ಹಾಗೂ ಫ್ಲಿಪ್‌ಕಾರ್ಟ್ ತನಿಖೆ ಪ್ರಶ್ನಿಸಿದ್ದ ಅರ್ಜಿಯನ್ನೇ ವಜಾಗೊಳಿಸಿದೆ.

ಫ್ಲಿಪ್‌ಕಾರ್ಟ್, ಅಮೆಜಾನ್‌ ಶಾಪಿಂಗ್‌ಗೆ ಅವಕಾಶ : ಇದು ಸಣ್ಣವರ ಅನ್ನಕ್ಕೆ ಕಲ್ಲು'

ಹೈಕೋರ್ಚ್ ಅರ್ಜಿ ವಜಾಗೊಳಿಸಿರುವ ಕುರಿತು ಪ್ರತಿಕ್ರಿಯೆ ನೀಡಲು ಫ್ಲಿಪ್‌ಕಾರ್ಟ್ ಹಾಗೂ ಅಮೆಜಾನ್ ನಿರಾಕರಿಸಿದೆ. ನ್ಯಾಲಾಯದ ಆದೇಶವನ್ನು ಪರಿಶೀಲಿಸುವುದಾಗಿ ಹೇಳಿದೆ. ಆದರೆ ಈ ತೀರ್ಪನ್ನು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವ ಸಾಧ್ಯತೆಯಿದೆ. 

click me!