ಸಂಕಷ್ಟದ ನಡುವೆ ಉದ್ಯೋಗಿಗಳಿಗೆ ವಿಪ್ರೋ ಬಂಪರ್ ಕೊಡುಗೆ; ಶೇ.80 ರಷ್ಟು ವೇತನ ಹೆಚ್ಚಳ!

By Suvarna News  |  First Published Jun 18, 2021, 5:59 PM IST
  • ಕೊರೋನಾ ಸಂಕಷ್ಟದ ನಡುವೆ ಉದ್ಯೋಗಿಗಳಿಗೆ ಬಂಪರ್ ಕೊಡುಗೆ
  • ಶೇಕಡಾ 80 ರಷ್ಟು ವೇತನ ಹೆಚ್ಚಳಕ್ಕೆ ವಿಪ್ರೋ ನಿರ್ಧಾರ
  • ಮಹತ್ವದ ನಿರ್ಧಾರ ಪ್ರಕಟಿಸಿದ ವಿಪ್ರೋ

ನವದೆಹಲಿ(ಜೂ.18): ಕೊರೋನಾ ವೈರಸ್ ಸಂಕಷ್ಟದ ನಡುವೆ ಉದ್ಯೋಗ ಕಡಿತ, ವೇತನ ಕಡಿತ ಸೇರಿದಂತೆ ಹಲವು ಸಂಕಷ್ಟವನ್ನು ನೌಕರರು ಎದುರಿಸುತ್ತಿದ್ದಾರೆ. ಇದರ ನಡುವೆ ಐಟಿ ದಿಗ್ಗದ ವಿಪ್ರೋ ತನ್ನ ಉದ್ಯೋಗಿಗಳಿಗೆ ಬಂಪರ್ ಕೊಡುಗೆ ನೀಡಿದೆ. ವಿಪ್ರೋ ನೌಕಕರಿಗೆ ಶೇಕಡಾ 80 ರಷ್ಟು ವೇತನ ಹೆಚ್ಚಳ ಮಾಡಲು ನಿರ್ಧರಿಸಿದೆ.

ವೇತನ, ತುಟ್ಟಿ ಭತ್ಯೆ ಹೆಚ್ಚಳ: ಸರ್ಕಾರಿ ನೌಕರರಿಗೆ ಉ.ಪ್ರ ಸರ್ಕಾರದಿಂದ ಬಂಪರ್ ಕೊಡುಗೆ!.

Tap to resize

Latest Videos

undefined

ಅರ್ಹ ಉದ್ಯೋಗಿಗಳಿಗೆ ವಿಪ್ರೋ ವೇತನ ಹೆಚ್ಚಳ ಮಾಡುತ್ತಿದೆ. ಹೆಚ್ಚಳ ಮಾಡಿದ ವೇತನ ಸೆಪ್ಟೆಂಬರ್ ತಿಂಗಳಿನಿಂದ ಉದ್ಯೋಗಿಗಳ ಕೈಸೇರಲಿದೆ. ವಿಶೇಷ ಅಂದರೆ ಈ ವರ್ಷ ವಿಪ್ರೋ ತನ್ನ ಉದ್ಯೋಗಿಗಳಿಗೆ 2ನೇ ಬಾರಿಗೆ ವೇತನ ಹೆಚ್ಚಳ ಮಾಡುತ್ತಿದೆ. ಬರೋಬ್ಬರಿ ಶೇಕಡಾ 80 ರಷ್ಟು ವೇತನ ಹೆಚ್ಚಳ ಮಾಡುತ್ತಿದೆ.

ಕೊರೋನಾ ಆರ್ಭಟ ಮಧ್ಯೆಯೂ ಐಟಿ ಉದ್ಯೋಗಿಗಳಿಗೆ ಗುಡ್‌ ನ್ಯೂಸ್, ಡಬಲ್ ಹೈಕ್!

2021ರ ಆರಂಭದಲ್ಲಿ ಟಾಟಾ ಕೆನ್ಸಲ್ಟೆನ್ಸಿ ಉದ್ಯೋಗಿಗಳಿಗೆ ವೇತನ ಹೆಚ್ಚಳ ಘೋಷಿಸಿತ್ತು. ಈ ಮೂಲಕ ಕೊರೋನಾ ಸಂಕಷ್ಟದ ನಡುವೆ ಭರ್ಜರಿ ವೇತನ ಹೆಚ್ಚಳ ಮಾಡಿ ಮಹತ್ವ ನಿರ್ಧಾರ ಪ್ರಕಟಿಸಿತ್ತು. ಹೆಚ್‌ಸಿಎಲ್ ಕಳೆದ ವರ್ಷ ಸ್ಯಾಲರಿ ಹೆಚ್ಚಳ ಮಾಡಿತ್ತು. ಇನ್ನು ಟೆಕ್ ಮಹೀಂದ್ರ ಈ ವರ್ಷದ ಆರಂಭದಲ್ಲಿ ನೌಕಕರಿಗೆ ಸ್ಯಾಲರಿ ಹೆಚ್ಚಳ ಮಾಡಿತ್ತು.

click me!