ಕರ್ನಾಟಕದಲ್ಲಿ ಚೀನಾ ಹವಾಲಾ ವಂಚನೆ ಪ್ರಕರಣ; ಸ್ಕಿಲ್ ಗೇಮ್ಸ್ ನಿಯಂತ್ರಿಸಲು ಆಗ್ರಹ!

Published : Jun 17, 2021, 09:41 PM IST
ಕರ್ನಾಟಕದಲ್ಲಿ ಚೀನಾ ಹವಾಲಾ ವಂಚನೆ ಪ್ರಕರಣ; ಸ್ಕಿಲ್ ಗೇಮ್ಸ್ ನಿಯಂತ್ರಿಸಲು ಆಗ್ರಹ!

ಸಾರಾಂಶ

ವಂಚನೆ ತಪ್ಪಿಸಲು, ನಾಗರಿಕ ಸಮಾಜ ರಕ್ಷಿಸಲು ಸ್ಕಿಲ್ ಗೇಮ್ಸ್ ನಿಯಂತ್ರಿಸಲು ಆಗ್ರಹ! ಆನ್‌ಲೈನ್ ಗೇಮ್, ಆ್ಯಪ್ ಮೂಲಕ 290 ಕೋಟಿ ರೂಪಾಯಿ ವಂಚನೆ ಕರ್ನಾಟಕದ CID ಸೈಬರ್ ಪೊಲೀಸರ ಕಾರ್ಯಾಚರಣೆಯಲ್ಲಿ ಪತ್ತೆ  

ಬೆಂಗಳೂರು(ಜೂ.17): ಬರೋಬ್ಬರಿ 290 ಕೋಟಿ ರೂ.ಗಳ ಹವಾಲಾ ಹಾಗೂ ಹಣದ ದುರುಪಯೋಗದ ಹಗರಣ ಪತ್ತೆ ಮಾಡುವಲ್ಲಿ ಕರ್ನಾಟಕದ ಸಿಐಡಿ ಯಶಸ್ವಿಯಾಗಿದೆ. ಇದರ ಬೆನ್ನಲ್ಲೇ ಆನ್‌ಲೈನ್ ಗೇಮ್ಸ್, ಸ್ಕಿಲ್ ಗೇಮ್ಸ್, ಆ್ಯಪ್ ಮೂಲಕ ನಡೆಯುತ್ತಿರುವ ವಂಚನೆ ಜಾಲವನ್ನು ನಿಯಂತ್ರಿಸಲು ಆಗ್ರಹ ಹೆಚ್ಚಾಗಿದೆ. ಇದೀಗ  ದಿ ಆನ್ ಲೈನ್ ರಮ್ಮಿ ಫೆಡರೇಷನ್, ಕರ್ನಾಟಕ ಸಿಐಡಿ ಸೈಬರ್ ಪೊಲೀಸ್ ವಿಭಾಗಕ್ಕೆ  ಈ ಕುರಿತು ವಿಶೇಷ ಮನವಿ ಮಾಡಿದೆ.

ಅಕ್ರಮ ಆನ್‌ಲೈನ್‌ ಗೇಮ್‌ ನಿಷೇಧಕ್ಕೆ ಶೀಘ್ರ ಕಾನೂನು!

ಕರ್ನಾಟಕ ಪೊಲೀಸರು ಬಿಡುಗಡೆ ಮಾಡಿದ ಮಾಹಿತಿಯ ಅನ್ವಯ ಈ ಹಗರಣವು ಜನರನ್ನು ಮೋಸಗೊಳಿಸಲು ವಂಚನೆಯ ಹೂಡಿಕೆ ಯೋಜನೆ, ಆನ್ ಲೈನ್ ಗೇಮ್  ಇತ್ಯಾದಿ  ಮಾರ್ಗಗಳನ್ನು ಕಂಡುಕೊಂಡಿದ್ದರು. ಇದಕ್ಕೆ ಚೀನಾದ ಸಂಪರ್ಕವೂ ಇದೆ ಎನ್ನಲಾಗಿದೆ. ಹೀಗಾಗಿ ಈ ಕುರಿತು ಕಟ್ಟು ನಿಟ್ಟಿನ ಕ್ರಮ ಆಗತ್ಯ ಎಂದು ರಮ್ಮಿ ಫೆಡರೇಷನ್ ಹೇಳಿದೆ.

ಆನ್‌ಲೈನ್ ಗೇಮ್ಸ್ ನಿಯಂತ್ರಸಲು ಕಟ್ಟುನಿಟ್ಟಿನ ಹಾಗೂ ಪರಿಣಾಮಕಾರಿ ನಿಯಮದ ಅಗತ್ಯವಿದೆ. ಕ್ರೀಡಾಸಕ್ತರನ್ನು ಆಹ್ವಾನಿಸಿ ಕೋಟಿ ಕೋಟಿ ರೂಪಾಯಿ ವಂಚನೆ ನಡೆಯುತ್ತಿದೆ. ಎಸ್ಎಸ್ಎಲ್ ಎನ್ಕ್ರಿಪ್ಟೆಡ್ ಡೇಟಾ ರಕ್ಷಣೆ, ತಂತ್ರಜ್ಞಾನ ಮತ್ತು ಆರ್ಟಿಫೀಶಿಯಲ್ ಇಂಟೆಲಿಜೆನ್ಸಿ ಅನುಷ್ಠಾನದ ಮೂಲಕ ರಮ್ಮಿ ಸಂಸ್ಥೆ ಜವಾಬ್ದಾರಿಯುತ ಆಟವನ್ನು ದೃಢಪಡಿಸುವಲ್ಲಿ ಮುಂಚೂಣಿಯಲ್ಲಿದೆ. ಆದರೆ ಇತರ ವಂಚನೆ ಜಾಲಗಳ ಪ್ರವೇಶದಿಂದ ಅಮಾಯಕರು ಹಣ ಕಳೆದುಕೊಳ್ಳುತ್ತಿದ್ದಾರೆ ಎಂದು ಫೆಡರೇಶನ್ ಹೇಳಿದೆ. 

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

Elon Musk’s Bold Forecast: ಪವರ್ ಪಾಯಿಂಟ್: 20 ವರ್ಷ ಬಳಿಕ ನೀವು ಬೇಕಿದ್ದರೆ ಕೆಲಸ ಮಾಡಬಹುದು! -ಎಲಾನ್ ಮಸ್ಕ್
ವ್ಯಾಟ್ಸಾಪ್‌ಗೆ ಠಕ್ಕರ್, ಚಾಟ್‌ಜಿಪಿಟಿಯಿಂದ ಗ್ರೂಪ್ ಚಾಟ್ ಫೀಚರ್ ಲಾಂಚ್, ಬಳಕೆ ಹೇಗೆ?