WhatsApp Privacy: ಗೌಪ್ಯತೆ ಕಾಪಾಡಲು ವಾಟ್ಸಪ್‌ ಹೊಸ ಅಪ್ಡೇಟ್ಸ: ಥರ್ಡ್‌ ಪಾರ್ಟಿ ಆ್ಯಪ್‌ಗಳಿಗಿಲ್ಲ ಪ್ರವೇಶ!

By Suvarna News  |  First Published Dec 13, 2021, 3:01 PM IST

*Third Party Appಯಿಂದ ಲಾಸ್ಟ್‌ ಸೀನ್‌ ಹೈಡ್‌!
*ಬಳಕೆದಾರರ ಗೌಪ್ಯತೆ ಕಾಪಡಲು ವಾಟ್ಸಪ್‌ ಹೊಸ ಅಪ್ಡೇಟ್ಸ್‌
*ಇನ್ನುಮುಂದೆ ನಿಮ್ಮ ವಾಟ್ಸಪ್ ಚಟುವಟಿಕೆಗಳ ಇನ್ನೂ ಸೇಫ್!‌


ನವದೆಹಲಿ(ಡಿ. 13): ಮೆಟಾ-ಫೇಸ್‌ಬುಕ್ (Meta) ಒಡೆತನದ ಮೇಸೆಂಜಿಗ್‌ ಪ್ಲಾಟ್‌ಫಾರ್ಮ್ ವಾಟ್ಸಪ್‌ (WhatsApp) ಜನರು ಸಂದೇಶ ಕಳುಹಿಸಲು ಹೆಚ್ಚಾಗಿ ಬಳಸುವ  ಆ್ಯಪ್‌ಗಳಲ್ಲೊಂದು. ಆದರೆ ಆಗಾಗ ವಾಟ್ಸಪ್‌ ಬಳಕೆದಾರರು ಆ್ಯಪ್‌ನಲ್ಲಿ ಪ್ರೈವಸಿ ಬಗ್ಗೆ ತಕರಾರು ಎತ್ತಿದ್ದುಂಟು. ಈ ಬೆನ್ನಲ್ಲೇ ವಾಟ್ಸಪ್‌ ತನ್ನ ಗೌಪ್ಯತಾ ನೀತಿಗಳನ್ನು (Privacy Policy) ಬಲಪಡಿಸಲು ಹಲವು ಕ್ರಮಗಳನ್ನು ಈಗಾಗಲೇ ಕೈಗೊಂಡಿದೆ. ಈಗ ಪಟ್ಟಿಗೆ ಸೇರ್ಪಡೆ ಎಂಬಂತೆ ವಾಟ್ಸಪ್‌ ಲಾಸ್ಟ್‌ ಸೀನ್‌ ಸ್ಟೇಟಸ್‌ (Last Seen Status) ಥರ್ಡ್‌ ಪಾರ್ಟಿ ಆ್ಯಪ್‌ಗಳಿಗೂ ಲಭ್ಯವಾಗದಂತಹ ಅಪ್‌ಡೇಟ್‌ಗಳನ್ನು ಬಿಡುಗಡೆ ಮಾಡಿದೆ.

ವಾಟ್ಸಪ್ ಕಳೆದ ಕೆಲವು ದಿನಗಳಲ್ಲಿ ತನ್ನ ಅಪ್ಲಿಕೇಶನ್‌ಗೆ ಹೊಸ ಗೌಪ್ಯತೆ ಅಪ್ಡೇಟ್‌ಗಳನ್ನು ಸೇರಿಸಿದೆ. ಇದರಿಂದ ನಿಮ್ಮ
 ಆನಲೈನ್‌ ಸ್ಟೇಟಸ್‌ ಕದ್ದು ನೋಡುವವರ ಬಗ್ಗೆ ಚಿಂತಿಸದೆ ಚಾಟ್ ಮಾಡಬಹುದು. ಚಾಟ್ ಅಪ್ಲಿಕೇಶನ್ ಈಗಾಗಲೇ ಬಳಕೆದಾರರಿಗೆ ತಮ್ಮ ಲಾಸ್ಟ್‌ ಸೀನ್‌ ಸ್ಟೇಟಸ್ ಮತ್ತು ಆನ್‌ಲೈನ್ ಚಟುವಟಿಕೆಗಳನ್ನು ಎಲ್ಲರಿಂದ ಅಥವಾ ಸಂಪರ್ಕ ಪಟ್ಟಿಯಲ್ಲಿಲ್ಲದ ಜನರಿಂದ ಮರೆಮಾಡಲು ಆಯ್ಕೆಯನ್ನು ನೀಡುತ್ತದೆ. ಆದರೆ ನಿಮ್ಮ ವಾಟ್ಸಪ್ ಚಟುವಟಿಕೆಗಳನ್ನು ನೋಡಬಲ್ಲ ಕೆಲವು ಥರ್ಡ್‌ ಪಾರ್ಟಿ  ಅಪ್ಲಿಕೇಶನ್‌ಗಳಿವೆ (Third Party Application). ಇವುಗಳ ಬಳಕೆಯಿಂದ ನಿಮ್ಮ ಲಾಸ್ಟ್‌ ಸೀನ ಹೈಡ್‌ ಆಗಿದ್ದರೂ ಅದನ್ನು ನೋಡಬಹುದಾಗಿತ್ತು. ಆದರೆ ಹೊಸ ಗೌಪ್ಯತೆ ಕ್ರಮಗಳು ಇಂಥಹ  ಆ್ಯಪ್‌ಗಳಿಗೂ ಕಡಿವಾಣ ಹಾಕಿದೆ.

Tap to resize

Latest Videos

undefined

ಇದನ್ನು ಓದಿSocial Media Hacking: ನಿಮ್ಮ ಸೋಷಿಯಲ್‌ ಮೀಡಿಯಾ ಖಾತೆ ಸೇಫಾಗಿಡಲು ಇಲ್ಲಿವೆ ಸರಳ ಸೂತ್ರಗಳು!

ಈ ಬಗ್ಗೆ WABetaInfo ಮಾಹಿತಿ ನೀಡಿದ್ದು ಇದು ವಾಟ್ಸಪ್‌ ಕಂಪನಿಯಿಂದ ಪಡೆದ ಇಮೇಲ್ ಪ್ರತಿಕ್ರಿಯೆಯ ಪ್ರತಿಯೊಂದನ್ನು ಹಂಚಿಕೊಂಡಿದೆ. ಹೊಸ ಗೌಪ್ಯತೆ ವೈಶಿಷ್ಟ್ಯಗಳು ಬಿಸಿನೆಸ್‌ ಅಕೌಂಟ್‌ ಸೇರಿದಂತೆ  ಈಗ ಎಲ್ಲಾ ವಾಟ್ಸಪ್ ಸಂಪರ್ಕಗಳಿಗೆ ಅನ್ವಯವಾಗಲಿದೆ ಎಂದು ಇಮೇಲ್ ನಲ್ಲಿ ತಿಳಿಸಲಾಗಿದೆ.

ಹಾಗಾದರೆ ಈ ಗೌಪ್ಯತೆ ಕ್ರಮದಿಂದಾಗುವ ಬದಲಾವಣೆಗಳೇನು?

ವಾಟ್ಸಪ್ ಬಳಕೆದಾರರ ಲಾಸ್ಟ್‌ ಸೀನ್ ಮತ್ತು ಆನ್‌ಲೈನ್ ಚಟುವಟಿಕೆಗಳನ್ನು ಟ್ರ್ಯಾಕ್ ಮಾಡುವ ಹಲವಾರು ಅಪ್ಲಿಕೇಶನ್‌ಗಳಿವೆ.  ನೀವು ಲಾಸ್ಟ್‌ ಸೀನ್‌ ಸೆಟ್ಟಿಂಗ್‌ನಲ್ಲಿ "Nobody" ಎಂಬ  ಆಯ್ಕೆಯನ್ನು ಸಕ್ರಿಯಗೊಳಿಸಿದ್ದರೂ ಸಹ ಈ ಅಪ್ಲಿಕೇಶನ್‌ಗಳು ನಿಮ್ಮ ಚಟುವಟಿಕೆಗಳನ್ನು ಟ್ರ್ಯಾಕ್ ಮಾಡುವುದಲ್ಲದೆ, ನಿಮ್ಮ ಮೇಲೆ ಕಣ್ಗಾವಲು ಇರಿಸಲು ಬಯಸುವ ಯಾರಿಗಾದರೂ  ಸಹಾಯ ಮಾಡುತ್ತವೆ. ಆದರೆ ಇನ್ನುಮುಂದೆ ಹೀಗೆ ಮಾಡಲು ಹೊಸ ಅಪ್‌ಡೇಟ್ಗಳು ಅವಕಾಶ ನೀಡುವುದಿಲ್ಲ.

ಇದನ್ನು ಓದಿ: Largest Smartphone Brand: ಭಾರತದಲ್ಲಿ ಶಾಓಮಿ ನಂ.1 : ಸ್ಯಾಮಸಂಗ್ ಹಿಂದಿಕ್ಕಿ 2ನೇ ಸ್ಥಾನಕ್ಕೇರಿದ Realme!

ಇಂಥಹ ಅಪ್ಲಿಕೇಶನ್‌ಗಳು ನಿಮ್ಮ ಸಂಪರ್ಕ ಪಟ್ಟಿಯಲ್ಲಿಲ್ಲದಿದ್ದರೆ ಅಥವಾ ನಿಮ್ಮೊಂದಿಗೆ ಸಕ್ರಿಯ ಚಾಟ್ ಮಾಡದಿದ್ದರೆ ನಿಮ್ಮ ಲಾಸ್ಟ್‌ ಸೀನ್  ಅಥವಾ ಆನ್‌ಲೈನ್‌ ಸ್ಟೇಟಸ್‌ ಟ್ರ್ಯಾಕ್‌ ಮಾಡುವುದ ಅವುಗಳಿಗೆ ಕಷ್ಟಸಾಧ್ಯ. ವಾಟ್ಸಪ್‌ನಿಂದ ಪಡೆದ ಇ-ಮೇಲ್, ಆದಾಗ್ಯೂ, ಲಾಸ್ಟ್‌ ಸೀನ್‌ ಸೆಟ್ಟಿಂಗ್‌ನಲ್ಲಿನ "Everyone" ಸೆಟ್ಟಿಂಗ್ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. 

ಬೀಟಾ ಬಳಕೆದಾರರಿಗೆ ಲಭ್ಯವಿದೆ ಹೊಸ ಫೀಚರ್!

"My Contacts Except" ಗೌಪ್ಯತೆ ಸೆಟ್ಟಿಂಗ್ ಅನ್ನು ಸಕ್ರಿಯಗೊಳಿಸಿದಾಗ, ನೀವು ಯಾವುದಾದರೂ ಖಾತೆಯೊಂದಿಗೆ ಚಾಟ್ ಮಾಡಿಯೂ ನೀವು ಅವರ ಲಾಸ್ಟ್‌ ಸೀನ್ ನೋಡಲು ಸಾಧ್ಯವಿಲ್ಲ.  ಇದು ಸದ್ಯಕ್ಕೆ Android ಮತ್ತು iOS ಗಾಗಿ WhatsApp ನ ಕೆಲವು ಬೀಟಾ ಬಳಕೆದಾರರಿಗೆ ಲಭ್ಯವಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.  ಆದರೆ ಈ ಹೊಸ ಅಪ್‌ಡೇಟ್‌ಗಳು ಬೀಟಾ ಟೆಸ್ಟರ್‌ (Beta Tester) ಹೊರತುಪಡಿಸಿ ಇತರರ ಖಾತೆಗಳಲ್ಲಿ ಯಾವುದೇ ಬದಲಾವಣೆ ತರುವುದಿಲ್ಲ. ಇತ್ತಿಚೇಗೆ ವಾಟ್ಸಪ್‌ ವಾಯ್ಸ್‌ ರೇಕಾರ್ಡ್‌ ಸೇರಿದಂತೆ ತನ್ನ ಹಲವು ಸೇವೆಗಳಲ್ಲಿ ವಿಶೇಷತೆಗಳು ತರಲು ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಅಲ್ಲದೇ ಗೌಪ್ಯತಾ ನೀತಿಯನ್ನು ಸುಧಾರಿಸಿದೆ. 

click me!