*ಡ್ರೋನ್ ಡೆಲಿವರಿ ಸೇವೆ ಆರಂಭಿಸಲಿರುವ ಸ್ಪೈಸ್‌ಜೆಟ್
*ಆರಂಭದಲ್ಲಿ 10 ಜಿಲ್ಲೆಗಳ 150 ಕ್ಕೂ ಹೆಚ್ಚು ಸ್ಥಳಗಳಿಗೆ ಡೆಲಿವರಿ
*ಡ್ರೋನ್‌ಗಳಿಗಾಗಿ ಥ್ರೊಟಲ್ ಏರೋಸ್ಪೇಸ್‌ನೊಂದಿಗೆ ಒಪ್ಪಂದ!
*ಕಳೆದ ವರ್ಷ್ DGCA ಒಪ್ಪಿಗೆ ಪಡೆದಿದ್ದ ಕಂಪನಿ
ನವದೆಹಲಿ(ಡಿ. 12): ಪ್ರತಿಷ್ಟಿತ ವಿಮಾನಯಾನ ಕಂಪನಿ ಸ್ಪೈಸ್‌ಜೆಟ್ (SpiceJet) ಶೀಘ್ರದಲ್ಲೇ ವೈದ್ಯಕೀಯ ಮತ್ತು ಅಗತ್ಯ ಪೂರೈಕೆಗಳಿಗಾಗಿ ಡ್ರೋನ್ ವಿತರಣಾ ಸೇವೆಗಳನ್ನು (Drone Delivery) ಪರಿಚಯಿಸಲಿದೆ ಎಂದು ಕಂಪನಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಜಯ್ ಸಿಂಗ್ ಶನಿವಾರ ಹೇಳಿದ್ದಾರೆ. ತನ್ನ ಲಾಜಿಸ್ಟೀಕ್ ಪ್ಲಾಟ್‌ಫಾರ್ಮ್ 'SpiceXpres' ಸೇವೆಗಳನ್ನು ವಿಸ್ತರಿಸಲು ಮತ್ತು ಗ್ರಾಹಕರಿಗೆ ಉತ್ತಮ ಸೇವೆ ನೀಡಲು ಡ್ರೋನ್ ವಿತರಣಾ ಸೇವೆಯನ್ನು ಪರಿಚಯಿಸಲಗಾಗುತ್ತಿದೆ ಎಂದು ಕಂಪನಿ ತಿಳಿಸಿದೆ.
0-5 ಕೆಜಿ, 5-10 ಕೆಜಿ ಮತ್ತು 10-25 ಕೆಜಿ ಸೇರಿದಂತೆ ವಿವಿಧ ಪೇಲೋಡ್‌ಗಳ ಕಸ್ಟಮೈಸ್ ಮಾಡಿದ ಡ್ರೋನ್‌ಗಳನ್ನು ಪರಿಚಯಿಸಲು ಕಂಪನಿ ಪ್ಲಾನ್ ಮಾಡಿದೆ. ಹಾಗಾಗಿ ಲಾಜಿಸ್ಟಿಕ್ಸ್ ಕೇಕ್ಷತ್ರದಲ್ಲಿ ಇದು ಗಣನೀಯ ಬದಲಾವಣೆ ತರುವ ಸಾಧ್ಯತೆಗಳಿವೆ. ಡೆಲಿವರಿ ಕ್ಷೇತ್ರದಲ್ಲಿ ಡ್ರೋನ್ ಅಳವಡಿಕೆಯಿಂದ ಗ್ರಾಹಕರಿಗೆ ಸರಿಯಾಸ ಸಮಯದಲ್ಲಿ ಡೆಲಿವರಿ ನೀಡಲು ಸಾಧ್ಯವಾಗಲಿದೆ.
ಸ್ಪೈಸ್‌ಜೆಟ್ ಈ ಯೋಜನೆಯ ಆರಂಭಿಕ ಹಂತದಲ್ಲಿ ಕೇವಲ ವಿತರಕರು ಮತ್ತು ಫುಲ್‌ಫಿಲ್‌ಮೆಂಟ್ ಕೇಂದ್ರಗಳಿಗೆ ಡೆಲಿವರಿ ಮಾಡಲಿದೆ. ಭವಿಷ್ಯದಲ್ಲಿ ಗ್ರಾಹಕರ ಮನೆಗಳಿಗೆ ನೇರವಾಗಿ ಡೆಲಿವರಿ ಮಾಡುವುದಾಗಿ ಕಂಪನಿ ತಿಳಿಸಿದೆ.
undefined
ಆರಂಭದಲ್ಲಿ 10 ಜಿಲ್ಲೆಗಳ 150 ಕ್ಕೂ ಹೆಚ್ಚು ಸ್ಥಳಗಳಿಗೆ ಡೆಲಿವರಿ!
ಗಮನಾರ್ಹವಾಗಿ, ಸ್ಪೈಸ್‌ಎಕ್ಸ್‌ಪ್ರೆಸ್ ಲಸಿಕೆಗಳು, ಜೀವ ಉಳಿಸುವ ಔಷಧಗಳು ಮತ್ತು ಇತರ ಅಗತ್ಯ ಸರಕುಗಳನ್ನು ದೇಶದುದ್ದಕ್ಕೂ ಡಿಲಿವರಿ ಮಾಡಲಿದ್ದು ಸಾಂಪ್ರದಾಯಿಕ ಸಾರಿಗೆ ವಿಧಾನಗಳಿಂದ ತಲುಪಲು ಕಷ್ಟವಾಗುವ ಸ್ಥಳಗಳಿಗೂ ತಲುಪಲಿದೆ. ಇದಲ್ಲದೆ, ಅದರ ಡ್ರೋನ್ ವ್ಯವಹಾರಕ್ಕಾಗಿ ಏರ್‌ಲೈನ್‌ನ ಆರಂಭಿಕ ಹಂತವಾಗಿ 10 ಜಿಲ್ಲೆಗಳ 150 ಕ್ಕೂ ಹೆಚ್ಚು ಸ್ಥಳಗಳಿಗೆ ತಿಂಗಳಿಗೆ 25,000 ಕ್ಕೂ ಹೆಚ್ಚು ವಿತರಣೆಗಳನ್ನು ಸಾಧಿಸುವ ಗುರಿ ಹೊಂದಿದೆ.
Drones are the future of aviation technology, especially because of their range of services and extensive network
Spice Xpress introduces India's first airlines to lead this innovation! Mela will be open to public from 11:00-18:00 hrs on 11 Dec pic.twitter.com/mrTe4GvFix
ಕಳೆದ ವರ್ಷ, ಸ್ಪೈಸ್‌ಎಕ್ಸ್‌ಪ್ರೆಸ್ ರಿಮೋಟ್ ಪೈಲಟ್ ವಿಮಾನಗಳ ಪ್ರಾಯೋಗಿಕ ಬಿಯಾಂಡ್ ವಿಷುಯಲ್ ಲೈನ್ ಆಫ್ ಸೈಟ್ (BVLOS) ಕಾರ್ಯಾಚರಣೆಗಳನ್ನು ನಡೆಸಲು ಡಿಜಿಸಿಎಗೆ (DGCA) ಪ್ರಸ್ತಾವನೆಯನ್ನು ಸಲ್ಲಿಸಿ ಡಿಜಿಸಿಎ ಒಪ್ಪಿಗೆ ಪಡೆದುಕೊಂಡಿತ್ತು. "BVLOS ಪ್ರಯೋಗ ಮೌಲ್ಯಮಾಪನ ಮತ್ತು ಮಾನಿಟರಿಂಗ್ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ, ಸ್ಪೈಸ್‌ಎಕ್ಸ್‌ಪ್ರೆಸ್‌ಗೆ ಮೇ 2020 ರಲ್ಲಿ ಪ್ರಾಯೋಗಿಕ BVLOS ಡ್ರೋನ್ ಪ್ರಯೋಗಗಳನ್ನು ನಡೆಸಲು ನಿಯಂತ್ರಕರಿಂದ ಅಧಿಕೃಯ ಅನುಮತಿಯನ್ನು ನೀಡಲಾಯಿತು. BVLOS ಪ್ರಯೋಗ ಮೌಲ್ಯಮಾಪನ ಮತ್ತು ಮಾನಿಟರಿಂಗ್ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ಥ್ರೊಟಲ್ ಏರೋಸ್ಪೇಸ್ 100 ಗಂಟೆಗಳ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ" ಎಂದು ಏರ್‌ಲೈನ್ ತಿಳಿಸಿದೆ.
ಹೈ-ಎಂಡ್ ಡ್ರೋನ್‌ಗಳಿಗಾಗಿ ಥ್ರೊಟಲ್ ಏರೋಸ್ಪೇಸ್‌ನೊಂದಿಗೆ ಒಪ್ಪಂದ!
ಇದು 50 ಕ್ಕೂ ಹೆಚ್ಚು ಕಸ್ಟಮೈಸ್ ಮಾಡಿದ ಹೈ-ಎಂಡ್ ಡ್ರೋನ್‌ಗಳಿಗಾಗಿ ಥ್ರೊಟಲ್ ಏರೋಸ್ಪೇಸ್‌ನೊಂದಿಗೆ (Throttle Aerospace) ಒಪ್ಪಂದ ಹೊಂದಿದ್ದು 'Aeologic' ಡ್ರೋನ್ ಸಾಫ್ಟ್‌ವೇರ್ ಮ್ಯಾನೆಜ್‌ಮೆಂಟ್ ಒದಗಿಸಲಿದೆ. "ನಮ್ಮ ಡ್ರೋನ್ ವಿತರಣಾ ಸೇವೆಗಳನ್ನು ಶೀಘ್ರದಲ್ಲೇ ಪರಿಚಯಿಸಲಿದ್ದೇವೆ. ಲಾಜಿಸ್ಟಿಕ್ಸ್ ಮಾರುಕಟ್ಟೆಯಲ್ಲಿ ಡ್ರೋನ್‌ಗಳನ್ನು ಸೇರಿಸುವ ಮೂಲಕ, ಸ್ಪೈಸ್‌ಜೆಟ್‌ನ ಲಾಜಿಸ್ಟಿಕ್ಸ್ ವಿಭಾಗವಾದ ಸ್ಪೈಸ್‌ಎಕ್ಸ್‌ಪ್ರೆಸ್ ಬೃಹತ್ ತಾಂತ್ರಿಕ ಪ್ರಗತಿಯನ್ನು ಸಾಧಿಸಲಿದೆ. ಇದು ಭಾರತದಲ್ಲಿ ವೇಗದ ಮತ್ತು ಅಗ್ಗದ ಲಾಜಿಸ್ಟಿಕ್ಸ್‌ಗಾಗಿ ಸೇವೆಯನ್ನು ನೀಡಲಿದೆ" ಎಂದು ಗ್ವಾಲಿಯರ್ ಡ್ರೋನ್ ಮೇಳದಲ್ಲಿ ಸ್ಪೈಸ್‌ಜೆಟ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಜಯ್ ಸಿಂಗ್ ಹೇಳಿದ್ದಾರೆ.
ISRO Agreement With Oppo: ನ್ಯಾವಿಗೇಷನ್ ಸೇವೆಗಾಗಿ ಚೀನಾ ಸಂಸ್ಥೆಯೊಂದಿಗೆ ಇಸ್ರೋ ಒಪ್ಪಂದ!
"ಈ ಬೆಳವಣಿಗೆಯಿಂದ ಲಾಜಿಸ್ಟಿಕ್ಸ್ ವ್ಯವಹಾರದಲ್ಲಿ ಸಂಪೂರ್ಣ ಬದಲಾವಣೆಯಾಗಲಿದೆ. ಜತೆಗ ಆದರೆ ಅಂತಿಮವಾಗಿ ಗ್ರಾಹಕರಿಗೆ ಉತ್ತಮ ಅನುಭವವನ್ನು ನೀಡುತ್ತದೆ. ಡ್ರೋನ್‌ಗಳು ಲಾಜಿಸ್ಟಿಕ್ಸ್ ವ್ಯವಹಾರಕ್ಕೆ ಪ್ರವೇಶಿಸುವುದರೊಂದಿಗೆ, ವೇಗವಾಗಿ ಬೆಳೆಯುತ್ತಿರುವ ಇ-ಕಾಮರ್ಸ್ ಉದ್ಯಮವು ದೇಶದ ದೂರದ ಮೂಲೆಗಳನ್ನು ಪ್ರವೇಶಿಸಲು ಸಾಧ್ಯವಾಗುತ್ತದೆ" ಎಂದು ಅಜಯ್ ಹೇಳಿದ್ದಾರೆ.