WhatsApp New features: ಈಗ ನೀವು ವಾಟ್ಸಾಪ್‌ ಸಂದೇಶಗಳಿಗೆ ಸಮಯ ನಿಗದಿಪಡಿಸಬಹುದು ಹೇಗೆ ಗೊತ್ತಾ..?

By Suvarna News  |  First Published Dec 11, 2021, 7:45 PM IST
  • ವಾಟ್ಸಾಪ್‌ನಲ್ಲಿ ಬಂದಿದೆ ಹೊಸ ಫಿಚರ್‌
  • ವಾಟ್ಸಾಪ್‌ ಸಂದೇಶಗಳಿಗೆ ಇನ್ನು ನೀವು ಸಮಯ ಫಿಕ್ಸ್‌ ಮಾಡಬಹುದು
  • ಮೊದಲೇ ಟೈಪ್‌ ಮಾಡಿ ಬೇಕೆನಿಸಿದಾಗ ಕಳುಹಿಸಬಹುದು.
     

ನವದೆಹಲಿ(ಡಿ.11): ವಾಟ್ಸಾಪ್‌ ಮತ್ತೆ ಮತ್ತೆ ತನ್ನ ಫೀಚರ್‌ಗಳಲ್ಲಿ ಹೊಸತನ ತರುತ್ತಿದೆ. ಈಗ ನೀವು ನಿಮ್ಮ ಸಂದೇಶಗಳಿಗೆ ಮೊದಲೇ ಸಮಯ ನಿಗದಿಪಡಿಸಬಹುದಾಗಿದೆ. ಗೆಳೆಯರ ಹುಟ್ಟಿದ ಹಬ್ಬವಿದೆ. ಆದರೆ ರಾತ್ರಿ 12 ಗಂಟೆಗೆ ಸಂದೇಶ ಕಳುಹಿಸಲು ನಿದ್ದೆಯಿಂದ ಏಳಬೇಕು ವಿಶ್‌ ಮಾಡದಿದ್ರೆ ಬೇಜಾರಾಗುತ್ತೆ.  ನಿದ್ರೆಗೆಡೋದು ಯಾರು ನಾಳೆ ಬೆಳಗ್ಗೆ ವಿಶ್‌ ಮಾಡೋಣ  ಅಂತೆಲ್ಲಾ ನೀವು ನಿಮ್ಮ ಗೆಳೆಯರ ಆತ್ಮೀಯರ ಹುಟ್ಟು ಹಬ್ಬವಿರುವಾಗ ಯೋಚಿಸುವುದು ಸಾಮಾನ್ಯ. ಕೆಲವರು ನಿದ್ದೆಗೆಟ್ಟೆ ತಮ್ಮ ಪ್ರತಿಪಾತ್ರರಿಗೆ ಮೆಸೇಜ್‌ ಮಾಡ್ತಾರೆ ಕಾಲ್‌ ಮಾಡ್ತಾರೆ. ಆದರೆ ವಾಟ್ಸಾಪ್‌ನ ಈ ಹೊಸ ಫೀಚರ್‌ ನಿಮ್ಮೆಲ್ಲ ಸಮಸ್ಯೆಗಳಿಗೆ ಪರಿಹಾರ ನೀಡಲಿದೆ.

ಹೌದು ನಾಳೆ ಅಥವಾ ಇನ್ಯಾವುದೋ ಸಮಯಕ್ಕೆ ಮೆಸೇಜ್ ಮಾಡಲು ಬಯಸಿದ್ದು, ಆ ಸಮಯದಲ್ಲಿ ಇನ್ನೆಲ್ಲೋ ನೆಟ್‌ವರ್ಕ್‌ ಇಲ್ಲದ ಸ್ಥಳಗಳಿಗೆ ಹೋಗಿ ಸಂದೇಶ ಕಳುಹಿಸಲು ಸಾಧ್ಯವಾಗದಂತಹ ಪರಿಸ್ಥಿತಿ ಇರುವುದನ್ನು ನೀವು ಮೊದಲೇ ತಿಳಿದಿದ್ದರೆ ವಾಟ್ಸಾಪ್‌ನ ಈ ಹೊಸ ಫೀಚರ್‌ ನಿಮ್ಮ ಸಮಸ್ಯೆಗೆ ಪರಿಹಾರ ನೀಡಲಿದೆ. ಈ ಸವಲತ್ತುಗಳನ್ನು ನೀವು ಬಳಸಿಕೊಳ್ಳಬೇಕಾದರೆ ನೀವು ಇನ್ನೊಂದು ಆಪ್‌ ಅನ್ನು ಡೌನ್‌ಲೋಡ್‌ ಮಾಡಿಕೊಳ್ಳಬೇಕು. ವಾಟ್ಸಾಪ್‌ ಜೊತೆ ಟೈ ಅಪ್‌ ಆಗಿರುವಂತಹ ಆಪ್‌ ಮೂಲಕ ನೀವು ಈ ಫೀಚರ್‌ನ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಈ ಹೊಸ ಫೀಚರ್‌ಗೆ ಗ್ರಾಹಕರು ಈಗಾಗಲೇ ತುಂಬಾ ಬೇಡಿಕೆ ಇರಿಸಿದ್ದರು.  ಆಂಡ್ರಾಯ್ಡ್‌ (Android) ಮತ್ತು iOSನಲ್ಲಿ  ಈ ಸಂದೇಶ ವೈಶಿಷ್ಟ್ಯವನ್ನು ಬಳಸಿಕೊಳ್ಳಬಹುದು. (SKEDit)ಸ್ಕೆಡ್‌ಇಟ್‌ ಹೆಸರಿನ Android ಸಾಫ್ಟ್‌ವೇರ್ ಅಂತಹ ಒಂದು ಅಪ್ಲಿಕೇಶನ್ ಆಗಿದೆ. ಇದು ಐಫೋನ್‌ನಲ್ಲಿ (iPhone)ನಲ್ಲಿ ವಾಟ್ಸಾಪ್‌(WhatsApp)ಸಂದೇಶಗಳನ್ನು ನಿಗದಿಪಡಿಸುತ್ತದೆ. 

Tap to resize

Latest Videos

undefined

WhatsApp community features; ಇದರಿಂದ ಸರಳವಾಗಲಿದೆ Group Talks

ಆದರೆ ಐಒಎಸ್ ಬಳಕೆದಾರರಿಗೆ ಈ ಸಾಫ್ಟ್‌ವೇರ್ ಬಳಸಲು ಸಾಧ್ಯವಿಲ್ಲ. ಹಾಗಂತ ಚಿಂತೆ ಮಾಡಬೇಕಾದ ಅಗತ್ಯವಿಲ್ಲ ಅದಕ್ಕೂ ಪರಿಹಾವಿದೆ. ಸಿರಿ ಶಾರ್ಟ್‌ಕಟ್‌ ಅಪ್ಲಿಕೇಶನ್‌ ಅನ್ನು ಐಒಎಸ್ ಬಳಕೆದಾರರು ಡೌನ್‌ಲೋಡ್ ಮಾಡಿ ಮತ್ತು ಅದನ್ನು ನಿಮ್ಮ ಐಫೋನ್‌ನಲ್ಲಿ ತೆರೆಯಬೇಕು.  ಆಟೋಮೇಷನ್ ಟ್ಯಾಬ್‌ಗೆ ಹೋಗಿ. ಪ್ಲಸ್ ಚಿಹ್ನೆಯನ್ನು ಟ್ಯಾಪ್ ಮಾಡುವ ಮೂಲಕ ಪರ್ಸನಲ್‌ ಅಟೋಮೇಷನ್‌(personal automation) ಅನ್ನು  ರಚಿಸಿ. ನಂತರ ನೀವು ಸಂದೇಶ ಕಳುಹಿಸಬೇಕಾದ ದಿನಾಂಕ ಹಾಗೂ ಸಮಯವನ್ನು ನಿಗದಿಪಡಿಸಿ, ನಂತರ ಆಪ್‌ನಲ್ಲಿರುವ ಆಡ್‌ ಆಕ್ಷನ್‌( Add Action ) ಟ್ಯಾಪ್‌ ಮಾಡಿ ಅಲ್ಲಿ ಸರ್ಚ್‌ ಬಾರ್‌ನಲ್ಲಿ ಟೆಕ್ಸ್‌ ಟೈಪ್‌ ಮಾಡಿ ಲಿಸ್ಟ್ ಆಪ್‌ ಆಕ್ಷನ್‌ಗಳನ್ನು(list of actions) ಹುಡುಕಿ ನಂತರ ಕೆಳಗೆ ಸಂದೇಶ ಕಳುಹಿಸುವ ಜಾಗದಲ್ಲಿ ಪ್ಲಸ್‌ ಚಿಹ್ನೆಯನ್ನು ಟ್ಯಾಪ್‌ ಮಾಡಿ  ವಾಟ್ಸಾಪ್‌ನ್ನು ಹುಡುಕಿ ಅಲ್ಲಿ ನೀವು ಕಳುಹಿಸಬೇಕಾಗಿರುವ ಸಂದೇಶವನ್ನು ಟೈಪ್‌ ಮಾಡಿ ನೀಮ್ಮ ಸಂದೇಶ ಸ್ವೀಕರಿಸುವವರನ್ನು ಆಯ್ಕೆ ಮಾಡಿದರೆ ಅಲ್ಲಿಗೆ ನಿಮ್ಮ ಸಂದೇಶ ನೀವು ನಿಗದಿಪಡಿಸಿದ ಸಮಯಕ್ಕೆ ಹೋಗಲಿದೆ. 

ಬೆಂಗಳೂರು: WhatsApp ಹ್ಯಾಕ್‌ ಮಾಡಿ ಹಣ ಎಗರಿಸುತ್ತಿದ್ದ ವಿದೇಶಿಗನ ಬಂಧನ

ವಾಟ್ಸಾಪ್‌ ಅವೇ (WhatsApp Away) ಸಂದೇಶದ ಲಕ್ಷಣಗಳು( messages feature) ವಾಟ್ಸಾಪ್‌ನ ನ "ಯುಸಿಂಗ್ ಅವೇ ಮೆಸೇಜಸ್‌ಗಳು ವಾಟ್ಸಾಪ್‌ನ ಬ್ಯುಸಿನೆಸ್‌ ಆಕೌಂಟ್‌ಗೆ ಖಾತೆಗಳಿಗೆ ಮಾತ್ರ ಲಭ್ಯವಿರುತ್ತದೆ. ಇದನ್ನು ನಿರ್ದಿಷ್ಟ ಸಮಯದಲ್ಲಿ ಸಂದೇಶ ಕಳುಹಿಸಲು ಬಳಸಬಹುದು. ಅದನ್ನು ಬಳಸುವ ರೀತಿ ಇಲ್ಲಿದೆ.

ಹಂತ 1
ವಾಟ್ಸಾಪ್‌ಗೆ ಹೋಗಿ ಮೋರ್‌ ಆಪ್ಷನ್‌ ಅನ್ನು ಆಯ್ಕೆ ಮಾಡಿ

ಹಂತ 2
ಬ್ಯುಸಿನೆಸ್‌ ಟೂಲ್‌ನ ಕೆಳಗೆ ಅವೇ ಮೆಸೇಜಸ್‌ ಆಯ್ಕೆ ಮಾಡಿ

ಹಂತ 3 ಸೆಂಡ್‌ ಅವೇ ಮೆಸೇಜಸ್‌ ಅನ್ನು ಕ್ಲಿಕ್‌ ಮಾಡಿ ನಂತರ ಮೆಸೇಜ್‌ ಮೇಲೆ ಟ್ಯಾಪ್‌ ಮಾಡಿ ನೀವು ತಿಳಿಸಬೇಕಾದ ಸಂದೇಶವನ್ನು ಬರೆಯಿರಿ

ಹಂತ 4 ನಂತರ ಒಕೆ ಕ್ಲಿಕ್‌ ಮಾಡಿ ಅದನ್ನು ಶೆಡ್ಯೂಲ್ ಮಾಡಿ ನೀವು ಇಲ್ಲಿ ಯಾವಾಗಲೂ( Always) ಕಸ್ಟಮ್‌ ಶೆಡ್ಯೂಲ್‌(Custom schedule) ಹಾಗೂ ವ್ಯವಹಾರದ ಸಮಯದ ಹೊರತಾಗಿ ಶೆಡ್ಯೂಲ್‌ (outside of business hours under the schedule) ಮುಂತಾದ ಆಯ್ಕೆಗಳಿವೆ. 

ಹಂತ 5 ಇಲ್ಲಿ ನಿಮಗೆ ಪ್ರತಿಯೊಬ್ಬರಿಗೂ( Everyone), ಅಡ್ರೆಸ್‌ ಬುಕ್‌ನಲ್ಲಿರುವ ಪ್ರತಿಯೊಬ್ಬರಿಗೂ ಇಲ್ಲ(Everyone Not in Address Book), ಹಾಗೂ ಇವರ ಹೊರತಾಗಿ ಪ್ರತಿಯೊಬ್ಬರು(Everyone Except) ಹಾಗೂ ಕೇವಲ ಇವರಿಗೆ ಮಾತ್ರ( Only Send to.) ಮುಂತಾದ ಆಯ್ಕೆಗಳಿವೆ. 

ಮತ್ತು ಇವುಗಳನ್ನು ಸೇವ್ ಮಾಡಬೇಕು. ಹೀಗೆ ಮಾಡುವ ಮೂಲಕ ನೀವು ಸಂದೇಶಗಳನ್ನು ಮೊದಲೇ ಬರೆದು ಯಾವಾಗ ಬೇಕು ಆಗ ಕಳುಹಿಸಬಹುದು. ಹೀಗೆ ಸೆಟ್‌ ಮಾಡಿಟ್ಟಲ್ಲಿ ನಿಮಗೆ ಮರೆತು ಹೋಗುವ ಸಮಸ್ಯೆಯೂ ಇರದು. 

click me!